Udayavni Special

ಪಥ್ಯದ ಪಾಲನೆ ಜತೆಗಿರಲಿ


Team Udayavani, Jun 21, 2020, 10:48 AM IST

ಪಥ್ಯದ ಪಾಲನೆ ಜತೆಗಿರಲಿ

ಆಯುರ್ವೇದ, ಯೋಗ ಒಂದು ಸಮಾನಾಂತರ ವಿಜ್ಞಾನ ಎನ್ನಬಹುದು. ಶರೀರ, ಮನಸ್ಸು ಮತ್ತು ಆತ್ಮ. ಈ ಮೂರೂ ಸೇರಿದಾಗ ಪರಿಪೂರ್ಣ ಮನುಷ್ಯನಾಗಲು ಸಾಧ್ಯ ಎಂಬುದು ಆಯುರ್ವೇದದ ಮೂಲಸಾರ. ಯೋಗವೂ ಇದನ್ನೇ ಪ್ರತಿಪಾದಿಸುತ್ತದೆ. ಆರೋಗ್ಯದ ದೃಷ್ಟಿ ಯಿಂದ ಹೇಳುವುದಾದಲ್ಲಿ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥವೇ ಆಯುರ್ವೇದ ಮತ್ತು ಯೋಗದ ತಿರುಳು. ಮಾನವ ಜೀವನದ ಪರಮೋ ದ್ದೇಶವಾಗಿರುವ ಮೋಕ್ಷವೇ ಇವೆರಡರ ಗುರಿ.

ಆಹಾರ ಪದ್ಧತಿಗಿದೆ ಸಾಮ್ಯತೆ
ಆಯುರ್ವೇದ ಮತ್ತು ಯೋಗ ವಿಜ್ಞಾನದಲ್ಲಿ ಆಹಾರ ಪದ್ಧತಿ ಒಂದೇ. ಆಯುರ್ವೇದದಲ್ಲಿ ಯಾವ ಆಹಾರಗಳು ವರ್ಜ್ಯ ಎಂದು ಹೇಳಲಾಗುತ್ತದೆಯೋ ಯೋಗಾಭ್ಯಾಸಿಗಳು ಅವುಗಳಿಂದ ದೂರವಿರಬೇಕು. ಚಿಕಿತ್ಸಾ ವ್ಯವಸ್ಥೆಯಲ್ಲಿಯೂ ಇವೆರಡರಲ್ಲೂ ಸಾಮ್ಯತೆ ಇದೆ. ಆಯುರ್ವೇದದಲ್ಲಿ ದಿನಚರ್ಯ, ಋತುಚರ್ಯ ಮತ್ತು ಸದ್ವಿತರ್ಯಗಳೆಂದು ಮೂರು ವಿಭಾಗಗಳಿವೆ. ದಿನಚರ್ಯದಲ್ಲಿ ಆಹಾರ ಸಹಿತ ದಿನಚರಿ ಬಗೆಗೆ ತಿಳಿಸಿದರೆ, ಋತುಚರ್ಯದಲ್ಲಿ ಯಾವ್ಯಾವ ಋತುಗಳಿಗೆ ಯಾವ ಆಹಾರ ಸೇವನೆ ಸೂಕ್ತ ಎಂದು ವಿವರಿಸಲಾಗಿದೆ. ಸದ್ವಿತcರ್ಯದಲ್ಲಿ ಮನುಷ್ಯನ ಆಚಾರ- ವಿಚಾರ, ಸಾಮಾಜಿಕ ಆರೋಗ್ಯದ ಬಗೆಗೆ ತಿಳಿಸಲಾಗಿದೆ.

ಯೋಗಾಸನ ಮತ್ತು ಪಥ್ಯ
ಇಡೀ ವಿಶ್ವವೇ ಕೋವಿಡ್ ವೈರಸ್‌ನಿಂದ ಕಂಗೆಟ್ಟಿರುವಾಗ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈನಿಟ್ಟಿನಲ್ಲಿ ಆಯುರ್ವೇದ ಔಷಧ ಕ್ರಮವನ್ನು ಪಾಲಿಸುತ್ತಿದ್ದಾರೆ.

ಇದರ ಜತೆ ಯಾವ್ಯಾವ ಆಸನ, ಭಂಗಿ, ಮುದ್ರೆಗಳಿಂದ ತಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಗೂಗಲ್‌ನಲ್ಲಿ ಜಾಲಾಡತೊಡಗಿದ್ದಾರೆ.

ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾದ ಯೋಗಾಸನಗಳನ್ನು ಅಭ್ಯಸಿಸುವ ಜತೆಯಲ್ಲಿ ನಾವು ಸೇವಿಸುವ ಆಹಾರದತ್ತಲೂ ಕೊಂಚ ಗಮನಹರಿಸಬೇಕು. “ಎಷ್ಟೋ ದಿನಗಳಿಂದ ಯೋಗಾಸನ, ಮುದ್ರೆ, ಧ್ಯಾನಗಳನ್ನು ಮಾಡುತ್ತಲೇ ಬಂದರೂ ಪ್ರತಿನಿತ್ಯ ಶೀತ, ಕೆಮ್ಮು, ಜ್ವರ ಕಾಡುತ್ತಿದೆ’ ಎಂದು ಅಳಲು ತೋಡಿಕೊಳ್ಳುವ ಅಧಿಕ ಮಂದಿ ನಮ್ಮ ನಡುವಿದ್ದಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ಧತಿ ಸರಿ ಇಲ್ಲದಿರುವುದು ಮತ್ತು ಕೆಲವು ಪಥ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು.
ನಿಮ್ಮ ಯಾವುದೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಸಂಬಂಧ ಆಯುರ್ವೇದ ಚಿಕಿತ್ಸೆ ಅಥವಾ ಯೋಗಾಸನದ ಮೊರೆ ಹೋಗಿದ್ದೀರಿ ಎಂದಾದರೆ ಅಲ್ಲಿ “ಪಥ್ಯ’ಕ್ಕೆ ಮಹತ್ವ ನೀಡಬೇಕು.

ಸಾತ್ವಿಕ ಆಹಾರ
ಅದು ಆಯುರ್ವೇದ ಇರಲಿ, ಯೋಗ ಇರಲಿ ಸಾತ್ವಿಕ ಆಹಾರ ಸೇವನೆ ಕಡ್ಡಾಯ. ಮಾಂಸಾ ಹಾರದಿಂದ ದೂರವಿದ್ದರೆ ಒಳ್ಳೆಯದು.  ವೈದ್ಯರು, ತಜ್ಞರು ಹೇಳುವ ಪಥ್ಯವನ್ನು ಪಾಲಿಸಲು ಸಾಧ್ಯ ವಿಲ್ಲ ಎಂದಾದರೆ ಈ ಚಿಕಿತ್ಸೆ ಅಥವಾ ಅಭ್ಯಾಸಗಳು ನಿಮಗೆ ನಿರೀಕ್ಷಿತ ಫ‌ಲ ಕೊಡಲಾರವು. ಕೇವಲ ದೇಹ ದಂಡನೆಯಿಂದ ಪರಿಪೂರ್ಣ ಆರೋಗ್ಯ ಸಾಧ್ಯವಿಲ್ಲ. ದೈಹಿಕ, ಮಾನಸಿಕವಾಗಿ ಸ್ವಸ್ಥವಾಗಿರಲು ಸೊಪ್ಪು, ಹಸಿ ತರಕಾರಿಗಳು, ಹಣ್ಣುಗಳು, ನೆನೆ ಹಾಕಿದ ಕಾಳುಗಳು, ಹಾಲು, ಶುಂಠಿ, ಅರಿಶಿನ, ತುಳಸಿ, ಕರಿಮೆಣಸು, ಕೊತ್ತಂಬರಿ ಮತ್ತಿತರ ಪದಾರ್ಥಗಳ ಸೇವನೆ ಹಿತಕಾರಿ. ಕಫ‌ ವರ್ಧನೆಗೆ ಪೂರಕವಾದ ಮೊಸರು, ಉದ್ದು ಮತ್ತು ಸುಲಭವಾಗಿ ಜೀರ್ಣವಾಗದ ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಫಾಸ್ಟ್‌ ಫ‌ುಡ್‌ ಸೇವನೆಯಿಂದ ದೂರ ಇದ್ದಷ್ಟೂ ಒಳಿತು.

ನೀವು ಯಾವ ಉದ್ದೇಶದಿಂದ ಯೋಗಾಸನದ ಮೊರೆ ಹೋಗಿದ್ದೀರಿ ಎಂಬುದನ್ನು ಅವಲಂಬಿಸಿ ಪಥ್ಯಗಳಿರು ತ್ತವೆ. ಯೋಗ ಗುರುಗಳ ಸಲಹೆಯಂತೆ ಪಥ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ ಬೇಗ ಪರಿಹಾರ ಸಾಧ್ಯ.

– ಡಾ| ಸತ್ಯನಾರಾಯಣ ಬಿ., ಪ್ರಾಂಶುಪಾಲರು, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kovid-yoga

ಕೋವಿಡ್‌ ವಿರುದ್ಧ ನಗರದಲ್ಲಿ ಯೋಗಾಯೋಗ

rogaa mukata

ಯೋಗ ಮಾಡಿ ರೋಗ ಮುಕ್ತರಾಗಿ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಈ ದೇಶಗಳಿಗೆ ಹೋಗುವುದು ಸುಲಭ

ಈ ದೇಶಗಳಿಗೆ ಹೋಗುವುದು ಸುಲಭ

ದೊಡ್ಡವರು ಪಡೆದಿದ್ದರಷ್ಟೇ ಮಕ್ಕಳಿಗೆ ಕೋವಿಡ್‌ ಲಸಿಕೆ

ದೊಡ್ಡವರು ಪಡೆದಿದ್ದರಷ್ಟೇ ಮಕ್ಕಳಿಗೆ ಕೋವಿಡ್‌ ಲಸಿಕೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.