Udayavni Special

ಯೋಗ ವಿಶ್ವ ವಿಸ್ತಾರ


Team Udayavani, Jun 21, 2020, 11:23 AM IST

ಯೋಗ ವಿಶ್ವ ವಿಸ್ತಾರ

ರವಿವಾರ (ಜೂ.21)ಅಂತಾರಾಷ್ಟ್ರೀಯ ಯೋಗ ದಿನ. ಐದು ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ವಿಶ್ವಕ್ಕೆ ಭಾರತದ ಕೊಡುಗೆ. 21ನೇ ಶತಮಾನದ ಹೈ ಫೈ ಯುಗದಲ್ಲಿ ಒತ್ತಡ ಸಾಮಾನ್ಯ. ಇಂಥ ಕಠಿನ ವಿಪ್ಲವದಲ್ಲಿ ಯೋಗಕ್ಕೆ ಮಹತ್ವ ಹೆಚ್ಚು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸೌಖ್ಯವನ್ನು ನೀಡುವ ಸಾಧನ.

ಜಗತ್ತಿಗೆ ಯೋಗವನ್ನು ಪರಿಚಯಿಸಿದ್ದು ಭಾರತೀಯರು ಎಂಬುದು ನಮ್ಮ ಹೆಮ್ಮೆ. ಸುಮಾರು 6,000 ವರ್ಷಗಳ ಸುದೀರ್ಘ‌ವಾದ ಪರಂಪರೆಯ ಯೋಗವು ದೈಹಿಕ ಮತ್ತು ಮನೋಲ್ಲಾಸಕ್ಕೆ ಪೂರಕ. ಯೋಗಾಭ್ಯಾಸದಿಂದ ನಾವು ಮನಸ್ಸು ಮತ್ತು ದೇಹವನ್ನು ಸಮತೋಲನ ಹಾಗೂ ಕ್ಷೇಮದ ಏಕಸೂತ್ರದಲ್ಲಿ ತರಲು ಸಾಧ್ಯ.

ಜೂ.21ರಂದೇ ಯೋಗ ದಿನಾಚರಣೆ ಏಕೆ ಎಂಬುದೊಂದು ಪ್ರಶ್ನೆ. ಈ ದಿನ ವರ್ಷದ ಅತಿ ದೀರ್ಘ‌ ಹಗಲಿನ ದಿನ. ದಕ್ಷಿಣಾಯಣ ಆರಂಭವಾಗುವ ದಿನವಿದು. ದಕ್ಷಿಣಾಯಣವು ಆಧ್ಯಾತ್ಮಿಕ ಸಂಬಂಧಿ ಅಭ್ಯಾಸಗಳಿಗೆ ಪೂರಕವಾದ ಸಮಯ ಎನ್ನಲಾಗುತ್ತದೆ.

ಯೋಗ ಚಿಕಿತ್ಸೆಗೆ ಬೇಡಿಕೆ ವೃದ್ಧಿ
ಯೋಗ ಇಂದು ಸಾಗರ ದಾಟಿ ಬೆಳೆದಿದೆ. ಹಲವು ರಾಷ್ಟ್ರಗಳು ಯೋಗದ ಮಹತ್ವ ಅರಿತಿವೆ. ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೆ ನೀಡುವ ಚಿಕಿತ್ಸೆ ಇದು. ಇದರಿಂದ ಅಡ್ಡ ಪರಿಣಾಮಗಳ ಭಯವಿಲ್ಲ. ಹಾಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರತ್ತ ಮನಸ್ಸು ಮಾಡುತ್ತಿದ್ದಾರೆ.

ಮಾನವನ ಸಂರಚನಾತ್ಮಕ ವ್ಯವಸ್ಥೆಗಳಾದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿಗಳ ಜತೆಗೆ ಸಾಮರಸ್ಯ ಸೃಷ್ಟಿಸುವುದೇ ಪ್ರಕೃತಿ ಚಿಕಿತ್ಸೆ ಅಥವಾ ಯೋಗ ಚಿಕಿತ್ಸೆ. ಆರೋಗ್ಯ ವೃದ್ಧಿಸಲು, ರೋಗರುಜಿನಗಳನ್ನು ತಡೆಗಟ್ಟಲು ಮತ್ತು ಶಮನಗೊಳಿಸಲು, ಆರೋಗ್ಯವಂತ ಬದುಕು ಪಡೆಯಲು ಈ ಚಿಕಿತ್ಸಾ ಪದ್ಧತಿ ಸಹಾಯಕ. ಯೋಗ ಶಿಕ್ಷಕರಿಗೆ, ಚಿಕಿತ್ಸಕರಿಗೆ ಇಂದು ಭಾರೀ ಬೇಡಿಕೆ ಇದೆ.

ಯೋಗ ಚಿಕಿತ್ಸೆಯ ಲಾಭಗಳು
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯಲ್ಲಿ ಹಲವು ಕಾಯಿಲೆಗಳಿಗೆ ಪರಿಹಾರವಿದೆ. ಪ್ರಮುಖವಾಗಿ ಚರ್ಮದ ಅಲರ್ಜಿ, ಅಸ್ತಮಾ, ರಕ್ತಹೀನತೆ, ಆತಂಕ, ಖನ್ನತೆ, ಹೊಟ್ಟೆಯುಬ್ಬರ, ಬೊಜ್ಜು, ಅಧಿಕ ಮತ್ತು ಕಡಿಮೆ ರಕ್ತದೊತ್ತಡ, ಜಠರದ ಉರಿ, ಮಧುಮೇಹ, ಪಾರ್ಶ್ವವಾಯು, ಸೋರಿಯಾಸಿಸ್‌, ಅಸ್ಥಿ ಸಂಧಿವಾತ, ಸಂಧಿವಾತ, ಗರ್ಭದ ಸ್ಪಾಂಡಿಲೋಸಿಸ್‌, ಮಲಬದ್ಧತೆ, ಚರ್ಮದ ಉರಿಯೂತ, ಅಧಿಕ ಆಮ್ಲಿಯತೆ, ಸೊಂಟ ನೋವು, ನಿದ್ರಾಹೀನತೆ, ಬೆನ್ನು ನೋವು, ಪಿಸಿಒಡಿ, ಮುಟ್ಟಿನ ತೊಂದರೆ, ಬಂಜೆತನ, ಮೈಗ್ರೇನ್‌ ತಲೆನೋವು, ಥೈರಾಯ್ಡ, ರಕ್ತನಾಳಗಳ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುತ್ತಾರೆ ಪರಿಣತರು.

ಆನ್‌ಲೈನ್‌ ಯೋಗ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಯೋಗ ಹೆಚ್ಚು ಮಹತ್ವ ಪಡೆಯುತ್ತಿದೆ. ಹಲವು ಯೋಗ ಕೇಂದ್ರಗಳು, ಯೋಗ ಶಿಕ್ಷಕರು ಆನ್‌ಲೈನ್‌ ಮೂಲಕ ಯೋಗ ತರಗತಿ ನಡೆಸುತ್ತಿದ್ದಾರೆ. ಈ ಮೂಲಕ ದೇಶ-ವಿದೇಶಗಳಿಂದ ಶಿಕ್ಷಣಾರ್ಥಿಗಳು ಯೋಗ ಕಲಿಯಲಾರಂಭಿಸಿದ್ದಾರೆ. ಕೊರೊನಾ ವೈರಸ್‌ ಹರಡುವಿಕೆಗೆ ಕಡಿವಾಣ ಹಾಕಲು ಜಾರಿಗೊಳಿಸಲಾದ ಲಾಕ್‌ಡೌನ್‌ನ ಬಳಿಕ ಈ ಆನ್‌ಲೈನ್‌ ಯೋಗ ತರಗತಿಗಳು ಮತ್ತಷ್ಟು ಜನಪ್ರಿಯತೆಯನ್ನು ಪಡೆದಿವೆ.

ಆದರೆ ಪರಿಣತ ಯೋಗ ತಜ್ಞರು ಯೋಗ ಕಲಿಕೆಯ ಈ ಆಧುನಿಕ ವಿಧಾನವನ್ನು ಒಪ್ಪುವುದಿಲ್ಲ. ಯೋಗ ಕೇವಲ ದೈಹಿಕ ಕಸರತ್ತಾಗಿರದೆ ಅತ್ಯಂತ ಸೂಕ್ಷ್ಮ ಚಿಕಿತ್ಸಾ ಮತ್ತು ಅಭ್ಯಾಸ ಕ್ರಮವಾಗಿರುವುದರಿಂದ ಆನ್‌ಲೈನ್‌ ತರಗತಿಗಳ ಮೂಲಕ ಯೋಗಾಸನ, ಮುದ್ರೆ, ಧ್ಯಾನಗಳ ಕಲಿಕೆ ಅಷ್ಟು ಸಮಂಜಸವಲ್ಲ. ಮಾತ್ರವಲ್ಲದೆ ಯೋಗ ವಿಜ್ಞಾನದ ಅಡಿಪಾಯಕ್ಕೆ ಸಂಚಕಾರ ತಂದೊಡ್ಡೀತು ಎಂಬ ಆತಂಕ ಅವರದ್ದು.

ಪ್ರಾಣಾಯಾಮವನ್ನು ಅಭ್ಯಾಸ ಮಾಡುವಾಗ ಉಸಿರಾಟದ ಏರಿಳಿತದ ಸಂದರ್ಭದಲ್ಲಿ ಪ್ರತಿ ಸೆಕೆಂಡಿಗೂ ಮಹತ್ವ ಇದೆ. ಯೋಗ ಗುರು ಅಥವಾ ಪರಿಣತರಿಲ್ಲದೆ ಆಸನ, ಮುದ್ರೆ ಗಳ ಕಲಿಕೆ ಸೂಕ್ತ ವಲ್ಲ ಎಂಬುದು ಯೋಗ ತಜ್ಞರ ಸ್ಪಷ್ಟ ನುಡಿ.

ಟಾಪ್ ನ್ಯೂಸ್

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kovid-yoga

ಕೋವಿಡ್‌ ವಿರುದ್ಧ ನಗರದಲ್ಲಿ ಯೋಗಾಯೋಗ

rogaa mukata

ಯೋಗ ಮಾಡಿ ರೋಗ ಮುಕ್ತರಾಗಿ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಈ ದೇಶಗಳಿಗೆ ಹೋಗುವುದು ಸುಲಭ

ಈ ದೇಶಗಳಿಗೆ ಹೋಗುವುದು ಸುಲಭ

ದೊಡ್ಡವರು ಪಡೆದಿದ್ದರಷ್ಟೇ ಮಕ್ಕಳಿಗೆ ಕೋವಿಡ್‌ ಲಸಿಕೆ

ದೊಡ್ಡವರು ಪಡೆದಿದ್ದರಷ್ಟೇ ಮಕ್ಕಳಿಗೆ ಕೋವಿಡ್‌ ಲಸಿಕೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.