ರಾಜಕಾರಣಿಗಳಿಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡುವುದು ಎಷ್ಟರಮಟ್ಟಿಗೆ ಸರಿ?: ಓದುಗರ ಉತ್ತರ

Team Udayavani, Aug 29, 2019, 1:31 PM IST

ಮಣಿಪಾಲ: ಮಂತ್ರಿಗಳು ಪ್ರವಾಸ ಮಾಡುವಾಗ ಝೀರೋ ಟ್ರಾಫಿಕ್‌ ಬಳಕೆ ಮಾಡುವುದರಿಂದ ಆಗಾಗ ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಝೀರೋ ಟ್ರಾಫಿಕ್‌ ಬಳಸುವದರಿಂದ ಜನರು ತೊಂದರೆ ಅನುಭವಿಸುತ್ತಾರೆ. ಹೀಗಾಗಿ ʼಉದಯವಾಣಿʼ ತನ್ನ ಓದುಗರಿಗೆ “ರಾಜಕಾರಣಿಗಳಿಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡುವುದು ಎಷ್ಟರಮಟ್ಟಿಗೆ ಸರಿ?” ಎಂಬ ಪ್ರಶ್ನೆ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಸುರೇಶ್‌ ಕುಮಾರ್:‌ ರಾಜಕಾರಣಿಗಳಿಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡಬಾರದು. ಇದರಿಂದಾಗಿ ವೈದ್ಯಕೀಯ ತುರ್ತು ಇದ್ದವರಿಗೆ ಕಷ್ಟವಾಗುತ್ತದೆ. ತೀರಾ ಅಗತ್ಯ ಪರಿಸ್ಥಿತಿಯಲ್ಲಿ ಬಳಸಬಹುದು. ನಾವು ಕಟ್ಟುವ ಟಾಕ್ಸ್‌ ನಿಂದ ಈ ರಾಜಕಾರಣಿಗಳು ಇಂತಹ ಅನುಕೂಲ ಅನುಭವಿಸುವುದು ತಪ್ಪು.

ಸೂರಜ್‌ ಬಿರಾದರ್:‌ ಸಂವಿಧಾನದ ಅಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಅಡಿಯಿಂದ, ಮುಡಿಯವರೆಗೆ ಸರ್ವರು ಸರಿ ಸಮಾನರು, ಸಮಾನತೆಯನ್ನು ಹೊಂದಿದವರಾಗಿದ್ದಾರೆ ಇಲ್ಲಿ ಯಾರು ಮೇಲಲ್ಲಾ, ಯಾರಿಲ್ಲಿ ಕೀಳಲ್ಲಾ ಅಂದ ಮೇಲೆ ಈ “ಜೀರೋ ಟ್ರಾಫಿಕ್” ಗೀಳಿನ ಅವಶ್ಯಕತೆ ಇರುವುದಿಲ್ಲ.

ಲಕ್ಷ್ಮೀಕಾಂತ ವಸಂತ್‌ ಕುಮಾರ್: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ,ಕೇಂದ್ರ ಗೃಹಸಚಿವರು,ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹ ಸಚಿವರಿಗೆ ಸಾಂವಿಧಾನಿಕ ಸೌಲಭ್ಯದಡಿ ಅವರ ಕರ್ತವ್ಯ ಮಾಡಲಿಕ್ಕೆ ಜೀರೊ ಟ್ರಾಫಿಕ್ ನೀಡುವುದು ಸರ್ವಸಮ್ಮತ.

ರೋಹಿಂದ್ರನಾಥ್‌ ಕೋಡಿಕಲ್:‌ ಜನರ ಸೇವೆಗಾಗಿ ಇರುವವರಿಗೆ , ಜನರಿಗೆ ತೊಂದರೆಯಾಗುತ್ತದೆ ಎಂಬ ಸತ್ಯ ಯಾಕೆ ಹೊಳೆಯುತ್ತಿಲ್ಲ? ಆಂಬುಲೆನ್ಸ್ ಮಾತ್ರ ಝೀರೋ ಟ್ರಾಫಿಕ್ ಅನ್ವಯ ಮಾಡಬೇಕು. ಸಮಯದಲ್ಲಿ ತಲಪಿ ಗುಡ್ಡ ಹಾಕುವುದು ಅಷ್ಟೇ ಇದೆ

ಮಂಜು ಶಿರಸಿ: ಅವಶ್ಯ ಹುದ್ದೆಗೆ ಅನಿವಾರ್ಯ ಸಮಯದಲ್ಲಿ ಕೊಡಬೇಕು. ಮುಖ್ಯಮಂತ್ರಿಗಳಿಗೆ ಕಡ್ಡಾಯವಾಗಿ ಕೊಡಬೇಕು. ಅವರ ಪ್ರತಿ ನಿಮಿಷ ಸಮಯವು ಅತ್ಯಂತ ಮಹತ್ವದ್ದು ಆಗಿರುತ್ತದೆ. ಅವರು ತಮ್ಮ ಸಂಪೂರ್ಣ ಸಮಯ ರಾಜ್ಯದ ಹಿತಾಸಕ್ತಿಗಾಗು ವ್ಯಯ ಮಾಡಬೇಕು.

ಮಂಜುನಾಥ್‌ ಎಸ್‌ ಎಂ ರಾಮ್:‌ ಝೀರೋ ಟ್ರಾಫಿಕ್ ಎನ್ನುವುದು ಇವರನ್ನು ಮಹಾರಾಜರ ಹಾಗೆ ಬಿಂಬಿಸಿಕೊಳ್ಳಲು ಬಳಸುವುದು ತಪ್ಪು. ಅತೀ ತ್ವರಿತ ಕಾರ್ಯಕ್ರಮ ಇದ್ದಾಗ ಮಾತ್ರ ನಿಗದಿತ ಹುದ್ದೆಗೆ ಮಾತ್ರ ಇದನ್ನು ಬಳಸಬೇಕು. ಮುಖ್ಯಮಂತ್ರಿಗಳೂ ಕೂಡಾ ಎಲ್ಲ ಸಮಯದಲ್ಲೂ ಇದನ್ನು ಬಳಸಬಾರದು. ನಾಡಿನ ಹಿತದೃಷ್ಟಿಯಿಂದ, ರಕ್ಷಣೆ ತೊಂದರೆ ಆಗಬಾರದು ಎಂಬುವವರಿಗೆ ಮಾತ್ರ ಈ ವ್ಯವಸ್ಥೆ ಒಳ್ಳೆಯದು. ಈ ವಿಚಾರದಲ್ಲಿ ಮನೋಹರ್ ಪರಿಕ್ಕರ್ ರವರನ್ನು ಆದರ್ಶವಾಗಿ ಸ್ವೀಕರಿಸಿದರೆ ಅಷ್ಟೇ ಸಾಕು

ವಿಜೇಂದ್ರ ಪೂಜಾರಿ: ಜನರಿಂದ ಆಯ್ಕೆಯಾದ ಓರ್ವ ರಾಜಕಾರಣಿಗೆ ಜನರ ಬಳಿ ಬರುವಾಗ ಹೆದರಿಕೆ ಯಾಕೆ? ಜನರಿಗೆ ಹೆದರೋದಾದರೆ ಆತ ರಾಜಕಾರಣಿ ಯಾಕಾಗಬೇಕು ? ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಗೆ ಹೊರತುಪಡಿಸಿ ಬೇರೆ ಯಾವೊಬ್ಬ ರಾಜಕಾರಣಿಗೂ ಝೀರೋ ಟ್ರಾಫಿಕ್ ಸೌಲಭ್ಯ ನೀಡಲೇ ಬಾರದು.

ಅನಂತ್‌ ಪ್ರಭು: ಮುಖ್ಯಮಂತ್ರಿಗೆ ಕೂಡ ಝೀರೋ ಟ್ರಾಫಿಕ್ ಅಗತ್ಯವಿಲ್ಲ . ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ನಾಯಕನೇ ಸೇವಕ.

ಬಸವನಗೌಡ ಪಾಟೀಲ್:‌ ತುರ್ತು ಸಂದರ್ಭಗಳಲ್ಲಿ ಮಾತ್ರ ಝೀರೋ ಟ್ರಾಫಿಕ್ ಕೊಡುವುದು ಸೂಕ್ತ. ಅದನ್ನು ಬಿಟ್ಟು ಸಾಮಾನ್ಯ ದಿನಗಳಲ್ಲಿ ಅವರಿಗೆ ಝೀರೋ ಟ್ರಾಫಿಕ್ ಕೊಡುವ ಅಗತ್ಯ ವಿಲ್ಲ. ಇದು ರಾಜಾತಿಥ್ಯ ದೇಶವಲ್ಲ. ಸಂವಿಧಾನಿಕ ದೇಶ ಇಲ್ಲಿ ಎಲ್ಲರೂ ಒಂದೇ

ಎಂ ಹರೀಶ್:‌ ಝೀರೋ ಟ್ರಾಫಿಕ್ ವ್ಯವಸ್ಥೆ ಕೊಟ್ಟರೆ, ಸಾಮಾನ್ಯ ಜನರ ಕಷ್ಟ ಹೇಗೆ ತಿಳಿಯುತ್ತದೆ…?

ವೆಂಕಟೇಶ್‌ ರಘುಪತಿ: ಅಚರಿಗೆ ಯಾಕೆ ಈ ಅನುಕೂಲ ಕೊಡಬೇಕು. ಅವರು ಜನರಿಂದ ಆಯ್ಕೆಯಾದವರು. ಹಾಗಾಗಿ ಜನರ ಮಧ್ಯೆಯೆ ಇರಬೇಕು. ಎಲ್ಲರಂತೆಯೇ ಅವರು ಕೂಡಾ ಟ್ರಾಫಿಕ್‌ ನಲ್ಲಿಯೇ ಬರಬೇಕು.

ವಾಸುದೇವ ಪ್ರಭು: ಆಂಬುಲೆನ್ಸ್‌ ನಂತಹ ತಯರ್ತು ಅಗತ್ಯ ಸೇವೆಗಳಿಗೆ ಮಾತ್ರ ಝೀರೋ ಟ್ರಾಫಿಕ್ ಕೊಡಬೇಕು.

ಶ್ಯಾಮಲಾ ರಾಜ್:‌ ಯಾಕೆ ಬೇಕು ಅವರಿಗೆ ಝೀರೋ ಟ್ರಾಫಿಕ್ ? ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಿ. ಅಷ್ಟು ಅವಸರ ಇದ್ದರೆ ಮನೆಯಿಂದ ಬೇಗ ಹೊರಡಿ.

ವಿನೋದ್‌ ಮಡಿಕೇರಿ: ಈ ವ್ಯವಸ್ಥೆ ಸರಿಯಲ್ಲ. ಪ್ರತಿಯೊಬ್ಬರಿಗೂ ಅವಸರ ಇದ್ದೇ ಇರುತ್ತೆ. ಅಂತ ಸಂದರ್ಭಗಳಲ್ಲಿ ಒಬ್ಬ ಮಂತ್ರಿ ಬರುತ್ತಾರೆ ಅಂತ ಅರ್ಧ ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸೂಕ್ತವಲ್ಲ.

ನಾಗರಾಜ ಬಿ ಆರ್: ಆಂಬುಲೆನ್ಸ್‌ ಬಿಟ್ಟು ಯಾರಿಗೂ ಬೇಡ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ