
ಶಿವಮೊಗ್ಗದ ಅಭಿಮಾನಿಯ ಚಿತ್ರಕಲೆಯನ್ನು ಶ್ಲಾಘಿಸಿದ ಎಬಿ ಡಿವಿಲಿಯರ್ಸ್
Team Udayavani, May 3, 2021, 12:22 PM IST

ಮಣಿಪಾಲ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಭಾರತದಲ್ಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರಲ್ಲಿ ಓರ್ವ. Mr.360 ಎಂದೇ ಖ್ಯಾತರಾಗಿರುವ ಎಬಿ ಡಿವಿಲಿಯರ್ಸ್ ಅವರ ಒಂದು ಪೋಸ್ಟ್ ಈಗ ಬಹಳಷ್ಟು ಮೆಚ್ಚುಗೆ ಪಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಚಿತ್ರ ಕಲಾವಿದೆ ಸುಮನಾ ಅವರು ಪೆನ್ಸಿಲ್ ನಲ್ಲಿ ಎಬಿ ಡಿವಿಲಿಯರ್ಸ್ ರ ಚಿತ್ರವೊಂದನ್ನು ಬಿಡಿಸಿ ಅದರ ಒಂದು ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್’ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಡಿವಿಲಿಯರ್ಸ್ ಅವರು “Very special , thank you” ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್’ನ ಸ್ಟೋರಿಯಲ್ಲಿ ‘ಭಾರತದಲ್ಲಿ ಅದ್ಭುತ ಕಲಾವಿದರಿದ್ದಾರೆ’ ಎಂದು ಬರೆದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಯೋಧರಿಗೆ ಗೌರವ: ನೀಲಿ ಜೆರ್ಸಿಯಲ್ಲಿ ಆಡಲಿದ್ದಾರೆ ವಿರಾಟ್ ಹುಡುಗರು
ಮಿಲಿಯನ್’ಗಳಷ್ಟು ಫಾಲೋವರ್ಸ್ ಹೊಂದಿರುವ ಡಿವಿಲಿಯರ್ಸ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊ ಪ್ರಕಟಗೊಂಡ ಕಾರಣ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಶಿವಮೊಗ್ಗದ ಕಲಾವಿದೆ ಸುಮನಾ ಅವರ ಈ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
