Udayavni Special

ಐಪಿಎಲ್‌ 14ನೇ ಆವೃತ್ತಿ : ವಿಭಿನ್ನ , ವಿಶೇಷ, ವಿಸ್ಮಯ

Team Udayavani, Apr 8, 2021, 7:00 AM IST

ಐಪಿಎಲ್‌ -14 : ವಿಭಿನ್ನ , ವಿಶೇಷ, ವಿಸ್ಮಯ

ವಿಶ್ವದ ಶ್ರೀಮಂತ ಕ್ರಿಕೆಟ್‌ ಕೂಟವಾದ ಐಪಿಎಲ್‌ 14ನೇ ಆವೃತ್ತಿಯತ್ತ ಮುಖ ಮಾಡಿದೆ. ಕೊರೊನಾ ತೀವ್ರತೆಯ ನಡುವೆಯೂ ಎ. 9ರಿಂದ ಮೇ 30ರ ತನಕ ಭಾರತದ ಆತಿಥ್ಯದಲ್ಲೇ ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿ ಎಂದಿಗಿಂತ ವಿಭಿನ್ನ ಮಾದರಿಯಲ್ಲಿ ಕೂಟವನ್ನು ಆಯೋಜಿಸಲಾಗುತ್ತಿದೆ. ಜತೆಗೆ ವೀಕ್ಷಕರ ನಿರ್ಬಂಧವೂ ಮುಂದುವರಿಯಲಿದೆ. ಇದನ್ನೆಲ್ಲ ಒಳಗೊಂಡ ಸಮಗ್ರ ಮಾಹಿತಿ ಇಲ್ಲಿದೆ.

1. ಕೊರೊನಾ ನಡುವೆ ಭಾರತದಲ್ಲೇ ಕೂಟ
ಈ ಐಪಿಎಲ್‌ ಕೊರೊನಾ ಕಾಲಘಟ್ಟದ 2ನೇ ಪಂದ್ಯಾವಳಿ. ಕಳೆದ ವರ್ಷ ಕೂಟವನ್ನು ಸಂಪೂರ್ಣವಾಗಿ ಯುಎಇಯಲ್ಲಿ ಆಡ ಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ನಡೆಸುವ ದಿಟ್ಟ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ. ಇದ್ದಕ್ಕಿದ್ದಂತೆ ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಶುರುವಾಗಿರುವುದರಿಂದ ಇದೊಂದು ಸವಾಲಿನ ನಿರ್ಧಾರವೇ ಸರಿ. ಈ ಬಾರಿಯೂ ಕೂಟವನ್ನು ವಿದೇಶದಲ್ಲಿ ನಡೆಸುವುದಕ್ಕೆ ಫ್ರಾಂಚೈಸಿಗಳು ಸಿದ್ಧವಿರಲಿಲ್ಲ. ಬಿಸಿಸಿಐಗೂ ಇದು ಲಾಭಕರವಲ್ಲ. ಯುಎಇ, ಶ್ರೀಲಂಕಾದಂತಹ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿ 50 ಕಿ.ಮೀ. ಅಂತರದಲ್ಲಿ ವಿಶ್ವದರ್ಜೆಯ ಮೈದಾನಗಳಿಲ್ಲ. ಇವೆಲ್ಲವೂ ದೇಶದ ಪ್ರಮುಖ ನಗರಗಳಲ್ಲಿ ಹಂಚಿಹೋಗಿವೆ. ಕೊರೊನಾ ಇರುವಾಗಲೂ ಬಿಸಿಸಿಐ ಅತ್ಯುತ್ತಮವಾಗಿ ಯೋಜನೆ ಮಾಡಿ, ಆಯ್ದ 6ನಗರಗಳಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಿದೆ.

2. ಆತಿಥೇಯ ನೆಲದಲ್ಲಿ ಪಂದ್ಯಗಳಿಲ್ಲ!
ಈ ಬಾರಿಯ ಐಪಿಎಲ್‌ ಭಾರತದ ಕೇವಲ 6 ತಾಣಗಳಲ್ಲಿ ನಡೆಯಲಿದೆ. ಇದರಲ್ಲಿ 5 ತಾಣಗಳು ಫ್ರಾಂಚೈಸಿಗಳ ನಂಟನ್ನು ಹೊಂದಿವೆ. ಬೆಂಗಳೂರು, ಹೊಸದಿಲ್ಲಿ, ಮುಂಬಯಿ, ಚೆನ್ನೈ ಮತ್ತು ಕೋಲ್ಕತಾ. ಹೆಚ್ಚುವರಿ ತಾಣವಾದ ಅಹ್ಮದಾಬಾದ್‌ಗೆ ಸಂಬಂಧಿಸಿದ ಯಾವುದೇ ಫ್ರಾಂಚೈಸಿ ಇಲ್ಲ. ಹಾಗೆಯೇ ಹೈದರಾಬಾದ್‌, ರಾಜಸ್ಥಾನ್‌ (ಜೈಪುರ) ಮತ್ತು ಪಂಜಾಬ್‌ (ಮೊಹಾಲಿ) ಫ್ರಾಂಚೈಸಿಗಳಿಗೆ ಸಂಬಂಧಿಸಿದ ಯಾವ ತಾಣಗಳಿಗೂ ಆತಿಥ್ಯದ ಯೋಗವಿಲ್ಲ.
ತಂಡವೊಂದು ಗರಿಷ್ಠ ಮೂರು ಬಾರಿ ಮಾತ್ರ ವಿಮಾನಯಾನ ಮಾಡುವ ರೀತಿಯಲ್ಲಿ ವೇಳಾಪಟ್ಟಿಯನ್ನು ಆಯೋಜಿಸಲಾಗಿದೆ. ಯಾವುದೇ ತಂಡಕ್ಕೂ ತನ್ನದೇ ನೆಲದಲ್ಲಿ ಆಡುವ ಯೋಗವಿಲ್ಲ. ಎಲ್ಲ ಪಂದ್ಯಗಳೂ ತಟಸ್ಥ ತಾಣಗಳಲ್ಲಿ ನಡೆಯುವುದು ವಿಶೇಷ.

3. ಪ್ರೇಕ್ಷಕರಿಗೆ ಕೊರೊನಾ ನಿರ್ಬಂಧ!
ಐಪಿಎಲ್‌ ಕಿಕ್‌ ಇರುವುದೇ ಕಿಕ್ಕಿರಿದು ಜಮಾ ಯಿಸುವ ವೀಕ್ಷಕರಿಂದ. ಟಿ20ಯ ನಿಜವಾದ ಜೋಶ್‌ ಏರಬೇಕಾದರೆ ಪ್ರೇಕ್ಷಕರು ಅನಿವಾರ್ಯ. ಇದರಿಂದ ಆಟಗಾರರಿಗೂ ಹೊಸ ಸ್ಫೂರ್ತಿ. ಆದರೆ ಕೊರೊನಾ ಕಾರಣದಿಂದಾಗಿ ಈ ಸಲವೂ ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಭಾರತದಲ್ಲಿ ವೀಕ್ಷಕರನ್ನು ಹೊರಗಿರಿಸಿ ನಡೆಸುವ ಮೊದಲ ಐಪಿಎಲ್‌ ಪಂದ್ಯಾವಳಿ ಇದಾಗಿದೆ. ಅಷ್ಟರ ಮಟ್ಟಿಗೆ ಐಪಿಎಲ್‌ ಆಕರ್ಷಣೆ ಕಳೆಗುಂದಲಿದೆ. ಕಳೆದ ವರ್ಷ ಯುಎಇ ಕೂಟದ ವೇಳೆಯೂ ವೀಕ್ಷಕರಿಗೆ ನಿಷೇಧ ಹೇರಲಾಗಿತ್ತು. ಪ್ಲೇ ಆಫ್ ಪಂದ್ಯಗಳ ವೇಳೆ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ನೀಡುವ ಪ್ರಸ್ತಾವ ಆರಂಭದಲ್ಲಿತ್ತಾದರೂ ಕೊನೆಗೆ ಇದು ನನೆಗುದಿಗೆ ಬಿತ್ತು.

4. ಇನ್ನಿಂಗ್ಸ್‌ಗೆ 90 ನಿಮಿಷ ಗಡುವು
ಐಪಿಎಲ್‌ ಐಸಿಸಿ ವ್ಯಾಪ್ತಿಗೆ ಒಳಪಡದ ಪಂದ್ಯಾವಳಿಯಾದ್ದರಿಂದ ಇದಕ್ಕೆ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಮಳೆ ಇನ್ನಿತರ ಕಾರಣಗಳಿಂದ ಅಡಚಣೆಯಾದರೆ ಪಂದ್ಯ ಎಷ್ಟೇ ಹೊತ್ತಿನವರೆಗೂ ನಡೆಯಬಹುದು. ರಾತ್ರಿ ಒಂದು ಗಂಟೆಗೂ ಪಂದ್ಯ ಮುಗಿದ ನಿದರ್ಶನವಿದೆ.

ಆದರೆ ಈ ಬಾರಿ ಕಟ್ಟುನಿಟ್ಟಿನ ಸಮಯದ ಮಿತಿಯನ್ನು ವಿಧಿಸಲಾಗಿದೆ. ಒಂದು ತಂಡದ ಬ್ಯಾಟಿಂಗ್‌ 90 ನಿಮಿಷದಲ್ಲಿ ಮುಗಿಯಬೇಕು. ಅಂದರೆ 20 ಓವರ್‌ಗಳನ್ನು ಒಂದೂವರೆ ಗಂಟೆಯಲ್ಲಿ ಹಾಕಿ ಮುಗಿಸಲೇಬೇಕು. 85 ನಿಮಿಷ ಆಟಕ್ಕಾದರೆ, 5 ನಿಮಿಷ ವಿರಾಮ. ಹೀಗೆ ಎರಡು ಇನ್ನಿಂಗ್ಸ್‌ಗಳಿಂದ ಒಟ್ಟು ಹತ್ತು ನಿಮಿಷ ಉಳಿತಾಯವಾಗುತ್ತದೆ. ಪಂದ್ಯ ತಡವಾಗುವುದನ್ನು ತಪ್ಪಿಸಲು, ಬಿಸಿಸಿಐ ಈ ನಿರ್ಧಾರ ಮಾಡಿದೆ.

5.ಟಿ20 ವಿಶ್ವಕಪ್‌ಗೆ ಅತ್ಯುತ್ತಮ ಅಭ್ಯಾಸ
ಈ ಬಾರಿ ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲೇ ಟಿ20 ವಿಶ್ವಕಪ್‌ ನಡೆಯಲಿದೆ. ಆದ್ದರಿಂದ ವಿಶ್ವದ ಎಲ್ಲ ಪ್ರಮುಖ ತಂಡಗಳು ತಮ್ಮ ಆಟಗಾರರಿಗೆ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿವೆ. ಭಾರತದ ಪಿಚ್‌ಗಳ ಅಧ್ಯಯನ ಮಾಡಿ, ಅದಕ್ಕೆ ಪೂರ್ಣವಾಗಿ ಹೊಂದಿಕೊಳ್ಳಲು ಇದಕ್ಕಿಂತ ಅತ್ಯುತ್ತಮ ಅವಕಾಶ ವಿದೇಶಿಯ ರಿಗೆ ಸಿಗಲಾರದು. ಹೀಗಾಗಿ ಎಲ್ಲರೂ ಈ ಐಪಿಎಲ್‌ ಪಂದ್ಯಾವಳಿಯನ್ನು ಹೆಚ್ಚು ಗಂಭೀರ ವಾಗಿ ತೆಗೆದುಕೊಳ್ಳುವುದು ಖಂಡಿತ.

6.ಪಂದ್ಯದ ಸಮಯದಲ್ಲಿ ಬದಲಾವಣೆ
ಈ ಬಾರಿ ಐಪಿಎಲ್‌ ಪಂದ್ಯಗಳ ಸಮಯದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ. ಎರಡೂ ಪಂದ್ಯಗಳು ಅರ್ಧ ಗಂಟೆ ಬೇಗ ಆರಂಭವಾಗಲಿವೆ. ಅಪರಾಹ್ನದ ಪಂದ್ಯ 4 ಗಂಟೆ ಬದಲು 3.30ಕ್ಕೆ, ರಾತ್ರಿಯ ಪಂದ್ಯ 8 ಗಂಟೆ ಬದಲು
7.30ಕ್ಕೆ ಆರಂಭ ವಾಗುತ್ತದೆ.

7.ಟೀವಿ ವೀಕ್ಷಕರ ಸಂಖ್ಯೆ ಏರಿಕೆ
ಪ್ರೇಕ್ಷಕರಿಗೆ ನಿರ್ಬಂಧ ಇರುವುದರಿಂದ ಹೆಚ್ಚು ಲಾಭವಾಗುವುದು ಪ್ರಸಾರಕರಾದ ಸ್ಟಾರ್‌ ನ್ಪೋರ್ಟ್ಸ್ ನೆಟ್‌ವರ್ಕ್‌ಗೆ. ಕಳೆದ ವರ್ಷ ಎಲ್ಲರೂ ಮನೆಯಲ್ಲೇ ಕುಳಿತು ಪಂದ್ಯಗಳನ್ನು ಸವಿದು ದರಿಂದ ಟೀವಿ ವೀಕ್ಷಕರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿತ್ತು. ಹಾಗೆಯೇ ಜಾಹೀರಾತು ಆದಾಯವೂ. ಈ ಬಾರಿಯೂ ಇದು ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ.

8. ಹೆಚ್ಚುವರಿ ಆದಾಯ ಖೋತಾ
ಮೈದಾನಕ್ಕೆ ಪ್ರೇಕ್ಷಕರು ಹಾಜರಾಗದಿರು ವುದರಿಂದ ಪರೋಕ್ಷ ವಾಗಿ ಹಲವು ನಷ್ಟಗಳಾಗಲಿವೆ. ಪ್ರೇಕ್ಷಕರ ಟಿಕೆಟ್‌ ಹಣದ ಮೂಲಕ ಬರುವ ನೂರಾರು ಕೋಟಿ ರೂ. ಆದಾಯ ಕೈತಪ್ಪಲಿದೆ. ಆದರೆ ಈ ಪಂದ್ಯಗಳನ್ನೇ ನಂಬಿಕೊಂಡು ಬದುಕುವವರು ಅನೇಕರಿದ್ದಾರೆ.

ಪಂದ್ಯಗಳ ವೇಳೆ ಧ್ವಜ, ಟೀಶರ್ಟ್‌ ಮಾರುವವರು, ಬಣ್ಣ ಹಚ್ಚುವವರಿಗೆ ಕೆಲಸ ಇರುವುದಿಲ್ಲ. ಬಸ್‌, ಮೆಟ್ರೊ ನಿಲ್ದಾಣಗಳಿಗೆ ಭಾರೀ ಪ್ರಮಾಣದಲ್ಲಿ ಪ್ರಯಾಣಿಕರು ನುಗ್ಗಿ ಬರುವ ಪ್ರಶ್ನೆಯೇ ಇಲ್ಲ. ಹೊಟೇಲ್‌ಗ‌ಳಿಗೆ ವಹಿವಾಟು ತಪ್ಪಿ ಹೋಗುತ್ತದೆ. ಕ್ರೀಡಾಂಗಣಗಳಲ್ಲಿ ಊಟ, ತಿಂಡಿ ಮಾರು ವವರಿಗೆ ಅವಕಾಶವೇ ಇರುವುದಿಲ್ಲ.

ಟಾಪ್ ನ್ಯೂಸ್

ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ

ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಮದುವೆಗೆ ಪಾಸ್‌ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು

ಮದುವೆಗೆ ಪಾಸ್‌ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

200ನೇ ಪಂದ್ಯದಲ್ಲಿ ಧೋನಿಗೆ ಗೆಲುವಿನ ಗಿಫ್ಟ್‌

200ನೇ ಪಂದ್ಯದಲ್ಲಿ ಧೋನಿಗೆ ಗೆಲುವಿನ ಗಿಫ್ಟ್‌

ಬೆಂಕಿಯಲ್ಲಿ ಅರಳಿದ ಹೂವು: ಬಡತನ, ಕಷ್ಟಗಳ ಮಧ್ಯೆ ಸಾಧನೆ ಮಾಡಿದ ಚೇತನ್ ಸಕಾರಿಯಾ

ಬೆಂಕಿಯಲ್ಲಿ ಅರಳಿದ ಹೂವು: ಬಡತನ, ಕಷ್ಟಗಳ ಮಧ್ಯೆ ಸಾಧನೆ ಮಾಡಿದ ಚೇತನ್ ಸಕಾರಿಯಾ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ

ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಮದುವೆಗೆ ಪಾಸ್‌ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು

ಮದುವೆಗೆ ಪಾಸ್‌ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.