ಹುತಾತ್ಮ ಯೋಧರಿಗೆ ಅಕ್ಷರ ನಮನ; ಅಮರ್‌ ರಹೇ !

ಮತ್ತೆ ಹುಟ್ಟಿ ಬನ್ನಿ ಧೀರ ಯೋಧರೇ....ಜೈ ಜವಾನ್ !

Team Udayavani, Jun 20, 2020, 11:01 AM IST

ಹುತಾತ್ಮ ಯೋಧರಿಗೆ ಅಕ್ಷರ ನಮನ; ಅಮರ್‌ ರಹೇ !

ಗಾಲ್ವಾನ್‌ ಕಣಿವೆಯಲ್ಲಿ ವೀರಸ್ವರ್ಗ ಪಡೆದ ಗುರುದಾಸ್‌ ಪುರದ ಹೆಮ್ಮೆಯ ಸೈನಿಕ ನೈಬ್‌ ಸುಬೇದಾರ್‌ ಸತ್ನಾಮ್‌ ಸಿಂಗ್‌ ಅವರಿಗೆ ಕುಟುಂಬಸ್ಥರಿಂದ ಅಂತಿಮ ನಮನ.

ಭಾರತಾಂಬೆಯ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಓದುಗರು ಉದಯವಾಣಿ ಕರೆಗೆ ಸ್ಪಂದಿಸಿ ಕಳುಹಿಸಿದ ಆಯ್ದ ನುಡಿನಮನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ನಮ್ಮ ನೆಮ್ಮದಿಯ ನಿದ್ದೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಧರೇ ನಮ್ಮ ಆಯುಷ್ಯದ ರೂವಾರಿಗಳು. ಅಂತಹ ಯೋಧರಿಗೆ ಹಾಗೂ ಅವರ ಕುಟುಂಬದವರಿಗೂ ದೊಡ್ಡ ಸಲಾಂ.
-ವಾಣಿ, ಕಿನ್ನಿಗೋಳಿ

ಸೈನಿಕರು ಸರ್ವಸ್ವವನ್ನು ತ್ಯಾಗ ಮಾಡಿ ನಿಸ್ವಾರ್ಥ ಸೇವೆ ನೀಡಿ ಭಾರತ ಮಾತೆಯ ಒಡಲೊಳಗೆ ಸೇರಿದ ತಮಗೆ ನಮೋ ನಮಃ.
-ಮಾಲಿನಿ.ಕೆ.ರಾವ್‌,ಜಪ್ಪಿನಮೊಗರು

ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಮಡಿದ ವೀರ ಯೋಧರಿಗೆ ನಮಿಸೋಣ ಮತ್ತು ಅವರ ತ್ಯಾಗ ಬಲಿದಾನವನ್ನು ಸ್ಮರಿಸೋಣ.
-ನಾಗೇಶ್‌ ಸುವರ್ಣ, ಮೂಡುಕೊಣಾಜೆ ,ಮೂಡುಬಿದಿರೆ

ಭಾರತಾಂಬೆಯ ವೀರ ಕುವರರೇ ತಾಯ್ನಾಡನು ಹಗಲಿರುಳು ಪೊರೆಯಲುಅರಿಗಳ ಶಿರವ ತರಿದು ಧರೆಗುರುಳಿಸಿ ವೀರಸ್ವರ್ಗವನು ಪಡೆದ ತಮಗಿದೋ
ಭಾಷ್ಪಾಂಜಲಿ – ನಮನಾಂಜಲಿ
-ಉದಯ ಶೆಟ್ಟಿ, ಪಂಜಿಮಾರು

ತಾಯಿ ಭಾರತಾಂಬೆಯ ರಕ್ಷಣೆಗೆ, ಜೀವತೆತ್ತ ವೀರ ಪುತ್ರರೇ…. ಭಾಷ್ಪಂಜಾಲಿಯ ಧನ್ಯವಾದಗಳೊಂದಿಗೆ, ಮರೆಯಲಾರೆವು ಈ ಋಣದ ಹೊರೆ…
-ಪರೀಕ್ಷಿತ್‌ ಜೈನ್‌,  ಮೂಡುಬಿದಿರೆ

ಭಾರತಕ್ಕೆ ಭಾರತವೇ ಹೆಮ್ಮೆಪಟ್ಟಿದೆ ನಿಮ್ಮಂತಹ ಸುಪುತ್ರರನ್ನು ಪಡೆದದಕ್ಕಾಗಿ. ನಿಮ್ಮ ತ್ಯಾಗ ಬಲಿದಾನ ಖಂಡಿತ ವ್ಯರ್ಥವಾಗಲಾರದು ಎಂಬ ಭರವಸೆ ನಮಗೆ ಇದೆ.
-ಚಂದ್ರಿಕಾ ಎಂ. ಶೆಣೈ, ಕಾಸರಗೋಡು

ಹಗಲಿರುಳು ನಿದ್ದೆ ಬಿಟ್ಟು ಗಡಿ ಕಾಯುತ್ತಾ ನಮ್ಮನ್ನು ಇತರ ರಾಷ್ಟ್ರಗಳ ಶತ್ರುಗಳಿಂದ ರಕ್ಷಿಸುತ್ತಾ ಇರುತ್ತಾರೆ. ನಮ್ಮ ಸೈನಿಕರು ನಮಗಾಗಿ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಇವರಿಗೆ ನಮ್ಮೆಲ್ಲರ ಹೃತೂ³ರ್ವಕ ನಮನ.
ಆಶ್ರಿತಾ ರೈ, ತೊಕ್ಕೊಟ್ಟು

ಭಾರತಾಂಬೆಯ ಮಡಿಲು ಸೇರಿದ ವೀರಯೋಧರಿಗೆ ನಮನ ಸಲ್ಲಿಸಬೇಕಾಗಿದೆ. ಕೇವಲ ಶಾಂತಿಮಂತ್ರ, ಮೇಣದಬತ್ತಿ ಹಚ್ಚುವುದರಿಂದ ಹುತಾತ್ಮರುಗಳಿಗೆ ಶಾಂತಿ ಸಿಗುವುದಿಲ್ಲ. ಕಠಿನ ಕ್ರಮ ಕೈಗೊಳ್ಳಬೇಕು.
-ಸಂತೋಷ್‌ ಪಿ., ಅಳಿಯೂರು

ನಮ್ಮ ಹೆಮ್ಮೆಯ ಯೋಧರಿಗೆ ವೀರ ಸ್ವರ್ಗ ಪ್ರಾಪ್ತಿಯಾಗಲಿ. ದೇಶ ತಮ್ಮ ತ್ಯಾಗ ಬಲಿದಾನವನ್ನು ಯಾವತ್ತು ಮರೆಯು ವುದಿಲ್ಲ. ಮತ್ತೆ ಈ ದೇಶದ ರಕ್ಷಣೆಗಾಗಿ ತಾಯಿ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬನ್ನಿ.
-ರಂಜಿತ್‌ ಪೂಜಾರಿ , ಮುಕ್ಕ

ತಮ್ಮೆಲ್ಲ ಕನಸುಗಳನ್ನು ಭಾರತ ಮಾತೆಗೆ ಮೀಸಲಿಟ್ಟು, ತಾಯಿಯ ಮಡಿಲ ಲ್ಲಿರುವ ಕೋಟಿ ಜನಗಳ ರಕ್ಷಕರಾಗಿ ಶತ್ರುಗಳ ಸಂಚನ್ನು ಸದೆ ಬಡಿದು, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಪುತ್ರರಿಗೆ ವಂದನೆಗಳ ಸಲ್ಲಿಸುವೆವು.
-ಸುಶ್ಮಿತಾ ಆಚಾರ್ಯ,ಮಂಗಳೂರು

ತಮ್ಮ ಸುಖ ಸಂತೋಷಗಳನ್ನು ದೇಶದ ಗಡಿಯಲಿ ಕಂಡು ಕೊಳ್ಳುವರು. ನಮ್ಮ ದೇಶಕ್ಕಾಗಿ ಶತ್ರುಗಳನು ಸಂಹರಿಸಿ ತಮ್ಮ ಪ್ರಾಣವನು ಬಲಿಕೊಟ್ಟಿರುವರು. ಅಚ್ಚಳಿಯದೆ ಉಳಿದ ವೀರ ಸೈನಿಕರಿಗೆ ನಮನಗಳು.
-ರತನ್‌ ಕುಮಾರ್‌, ಹೊಸಂಗಡಿ, ಮಂಜೇಶ್ವರ

ತನುಮನವ ಭಾರತಾಂಬೆ ರಕ್ಷಣೆಗೆ ಮೀಸಲಿಟ್ಟು, ಕರ್ತವ್ಯ ಪಾಲನೆಯಲ್ಲಿ ತಮ್ಮ ಕುಟುಂಬ ಕಾಣುತ್ತಾರೆ. ದುಷ್ಟ ಬುದ್ಧಿಯ ಕಟುಕರ ಸದೆ ಬಡಿದು ಜನಗಳು ನೆಮ್ಮದಿಯಾಗಿ ಜೀವನ ನಡೆಸುವಂತೆ ಮಾಡಿರುವ ನಮ್ಮ ಮನದಲ್ಲಿ ನೆಲೆಸಿರುವ ಅಮರ ವೀರರಿಗೆ ಮನಃಪೂರ್ವಕ ನಮನ.
-ಯಶ್‌ಪಾಲ್‌, ಮಂಜೇಶ್ವರ.

ದೇಶಕ್ಕಾಗಿ ಜೀವ ಬಲಿದಾನ ಕೊಟ್ಟ ಎಲ್ಲ ಯೋಧರೇ, ನಿಮಗೆಲ್ಲ ಭಾರತೀಯರೆಲ್ಲರ ತುಂಬು ಹೃದಯದ ನಮನ ಗಳು. ಈ ವೀರ ಯೋಧರು ಕುಟುಂಬದವರೆಲ್ಲರನ್ನು ಬಿಟ್ಟು ದೇಶ ಸೇವೆಗೆ ಜೀವ ಅರ್ಪ ಣೆಗೈದ ಯೋಧರಿಗೆಲ್ಲ ಶ್ರದ್ದಾಂ ಜಲಿ ಅರ್ಪಿಸುತ್ತೇವೆ.
-ಸಂಜನಾ, ನೀರುಮಾರ್ಗ

ಮನವಿದು ಮರುಗುತಿದೆ, ಹೃದಯವು ಕರಗುತಿದೆ ವೇದನೆ ದಹಿಸುತಿದೆ, ತಾಪವು ಜ್ವಲಿಸುತಿದೆನಿಮ್ಮ ತ್ಯಾಗವು ಅಗಣಿತ, ನಿಮ್ಮ ಸೇವೆಯು ಅವಿರತವ ಅದೆಷ್ಟು ಹಿಂಸೆ ಪಟ್ಟಿರುವ ನಮಗಾಗಿ ಓ ಶಕ್ತಿಯೇ ನೀನು ನೀಡು ಅದಮ್ಯ ಶಾಂತಿ.
-ಮಮತಾ ಆಳ್ವಾ, ಮಂಗಳೂರು

“ಬದುಕು’ ಎಂಬ ಈ ಭೂಮಿಯಲ್ಲಿ “ಸೈನಿಕ’ ಎಂಬ ಪದವಿ ಪಡೆದು “ದೇಶದ’ ರಕ್ಷಣೆಗೆ ಜೀವವ ಸವೆದ ನೀವು ಸದಾ ಅಮರ ಅಜರಾಮರ.
-ರಕ್ಷಿತಾ, ಮಂಗಳೂರು.

ಭಾರತಾಂಬೆಯ ವೀರ ಮಕ್ಕಳಿಗೆ ಸಮಿಸೋಣ. ಅವರ ತ್ಯಾಗ ಬಲಿದಾನದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿ ಸೋಣ. ಷಡ್ಯಂತರಕ್ಕೆ ಬಲಿಯಾದರುನ ನಮ್ಮ ಯೋಧರು. ಪ್ರತ್ಯುತ್ತರವೊಂದನ್ನು ಕೊಟ್ಟು ಕುಡಿಯದೇ ಬಿಡರು ಚೀನಿಯರ ನೆತ್ತರು.
-ಅಭಿಷೇಕ್‌, ಬಜಪೆ

ಚೀನದ ಉದ್ಧಟತನಕ್ಕೆ ತಕ್ಕ ಉತ್ತರ ನೀಡಿದ ಭಾರತದ ಸಮರ್ಥ ಸೇನಾಒಡೆಯ ಬಗಗೆ ನಮಗೆ ಹೆಮ್ಮೆ ಇದೆ. ಹುತಾತ್ಮ ಯೊದರಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಜೈ ಜವಾನ್‌. ಎಲ್ಲಾ ಕಡೆ ಶಾಂತಿ ನೆಲೆಸಲಿ.
-ಪಿ. ಕೃಷ್ಣ ಭಟ್‌, ಬೋಂದೆಲ್‌

ವೀರ ಯೋಧರು ಗನ್‌ಗಳನ್ನು ಹಿಡಿದು ಯುದ್ಧ ಮಾಡಿದರೆ ನಾವು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ ಯುದ್ಧ ಮಾಡೋಣ. ವೀರ ಯೋಧರಿಗೆ ನನ್ನ ನಮನ.
-ವಿಶ್ವನಾಥ, ಅತ್ತಾವರ

ಸೈನಿಕರಿಗೆ ನಮ್ಮ ಒಂದು ಹನಿ ಕಣ್ಣೀರು, ಕ್ಷಣದ ಮೌನ ಉಳಿತಾಯದಲ್ಲೊಂದು ಕಾಸು, ಪ್ರಾರ್ಥನೆಯಲ್ಲೊಂದು ಪಾಲು ಹಾರೈಕೆಯಲ್ಲೊಂದು ಸಾಲು,ಹುತಾತ್ಮರಾದ ಹೆಮ್ಮೆಯ ಯೋಧರಿಗೊಂದು ಸಲಾಂ.
-ಅನಿತಾ, ಸಾಲೆತ್ತೂರು

ದೇಶವೇ ತನ್ನುಸಿರು ಎಂದು ಎದುರಾಳಿಗಳ ಹುಟ್ಟು ಅಡಗಿಸಿ, ತಮ್ಮ ಬಲದಲ್ಲಿ ಚೀನಿಗರನ್ನು ಚಿಂದಿ ಚಿತ್ರನ್ನ ಮಾಡಿ ದೇಶಕ್ಕಾಗಿ ವೀರ ಮರಣ ಹೊಂದಿದ, ಭಾರತ್‌ ಮಾತೆಯ ಮಕ್ಕಳಾದ ವೀರ ಸೈನಿಕರಿಗೆ ನಮೋನಮಃ
-ಚಂದ್ರಹಾಸ್‌ ಶೆಟ್ಟಿ, ಮಾಣಿ

ಭಾರತಮಾತೆಯ ರಕ್ಷಣೆಯಲ್ಲಿ ಹುತಾತ್ಮರಾದ ಯೋಧರ ಸುದ್ದಿ ನಿಜಕ್ಕೂ ದೇಶಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ. ದೇಶ ಕ್ಕೋಸ್ಕರ ರಕ್ತ ನೀಡಿರುವ ಮತ್ತು ನೀಡಲು ಸಿದ್ಧರಿರುವ ಸೈನಿಕರಿಗೆ ಸಲಾಂ.
-ಶಶಿಕಾಂತ್‌ ಆಚಾರ್ಯ, ಸಾಲಿಮಕ್ಕಿ

ಉಗ್ರರ ಸದೆ ಬಡಿಯಲು ಮುನ್ನುಗ್ಗಿ, ಜೀವ ಬಲಿದಾನಗೈದ ವೀರಯೋಧರೇ ನಿಮ್ಮ ಬಲಿದಾನ ವ್ಯರ್ಥವಾಗದು.ಹುತಾತ್ಮ ರಾದ ಸೇನಾನಿಗಳೇ ನಿಮಗಿದೋ ದೇಶಭಕ್ತಿಯ ನಮನಗಳು. ಮತ್ತೂಮ್ಮೆ ಹುಟ್ಟಿ ಬನ್ನಿ
-ಎಚ್‌. ಕೆ. ನಯನಾಡು

ನಮ್ಮ ಹೆಮ್ಮೆ ನಮ್ಮ ಯೋಧ ನಮ್ಮ ಕೀರ್ತಿ ನಮ್ಮ ಸಿಪಾಯಿ ನಮ್ಮ ರಕ್ಷಕ ನಮ್ಮ ಸೈನಿಕ ನಮ್ಮ ಪ್ರತೀಕ ಭಾರತೀಯ ಜವಾನ ನಿನಗಿದೋ ನಮ್ಮ ಕೋಟಿ ಕೋಟಿ ನಮನ
-ನಿವೇದಿತಾ ನಾಯಕ್‌, ಮಂಗಳೂರು

ನಮ್ಮ ನೆಚ್ಚಿನ ವೀರ ಯೋಧರೇ ನಿಜವಾಗಿಯೂ ಕಣ್ಣಿಗೆ ಕಾಣುವ ದೇವರು. ನಮ್ಮ ಕಷ್ಟ ಕಾಲದಲ್ಲಿ ಸ್ಪಂದಿಸಿ ಸಹಾಯ ಹಸ್ತ ನೀಡಿ ರಕ್ಷಿಸಲು ನೆರವಾಗುತ್ತಾರೆ. ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಲಭಿಸಲಿ. ನಮ್ಮನ್ನು ಕಾಯುವ ಸೈನಿಕರಿಗೆ ಸಲಾಂ.
-ಲತಾಪ್ರಭು, ಮಂಗಳೂರು

ಭಾರತ ಮಾತೆಯ ಗಡಿ ರಕ್ಷಣೆಯಲ್ಲಿ ಹುತಾತ್ಮರಾದ ವೀರಯೋಧರೇ ನಿಮಗಿದೋ ಹೆಮ್ಮೆಯ ಸಲಾಂ. ನಿಮ್ಮ ಈ ಸೇವೆಯನ್ನು ಭಾರತ ಮಾತೆಯ ಮಕ್ಕಳು ಇದನ್ನು ವ್ಯರ್ಥವಾಗಲು ಬಿಡುವುದಿಲ್ಲ.
-ಸುರೇಂದ್ರ ಜಿ. ಹೆಗ್ಡೆ, ಮೂಲ್ಕಿ

ಭಾರತಮಾತೆಯ ಓ ವೀರಪುತ್ರ ರತ್ನಗಳೇ,ಮತ್ತೂಮ್ಮೆ ಹುಟ್ಟಿಬನ್ನಿ ಈ ತಾಯ ಮಡಿಲಿಗೆ. ವ್ಯರ್ಥವಾಗಲು ಬಿಡೆವು ನಿಮ್ಮಿà ಬಲಿದಾನ ಕೊಡುಗೆ. ಪಣತೊಡುವೆವಿಂದೇ ಬಹಿಷ್ಕಾರ ಈ ಚೀನೀ ವಸ್ತುಗಳಿಗೆ.
-ಶುಭಲಕ್ಷ್ಮೀಶಿವಗಿರಿ, ಮಾಣಿ

ಬಂಧು ಬಳಗ ಎಲ್ಲವನ್ನೂ ತ್ಯಾಗ ಮಾಡಿ, ತನ್ನ ದೇಶಕ್ಕಾಗಿ ತಂತಿ, ಮೊಳೆ ಮರದ ತುಂಡು ಗಳಿಂದ ಹಿಂದೆಗೊಂಡು ತಮ್ಮ ಜೀವವನ್ನೇ ಮುಡಿ ಪಾಗಿಟ್ಟ ವೀರ ಯೋದರೆ ನಿಮಗಿದೋ ನಮನ.
-ಡಯಾನಾ ಡಿ’ಸೋಜಾ, ಬಂಟ್ವಾಳ

ಚಳಿ ಮಳೆ ಹವಾಮಾನದ ವೈಪರೀತ್ಯ ಗಳನ್ನು ಸಹಿಸಿಕೊಂಡು, ಸರ್ವ ಕುಟುಂಬ ವನ್ನು ಬಿಟ್ಟು ದೇಶ ರಕ್ಷಣೆಗೆ ಹೋದ ವೀರ ಸೈನಿಕರಿಗೆ ಎಷ್ಟು ಕೋಟಿ ನಮನ ಸಲ್ಲಿಸಿದರು‌ ಋಣವನ್ನು ತೀರಿಸಲು ಸಾಧ್ಯವಿಲ್ಲ.
-ಸುಶ್ಮಿತಾ ಅರ್ಕುಳ , ತುಪ್ಪೆಕಲ್‌

ಕೆಂಪು ರಾಷ್ಟ್ರದ ಸೈನಿಕರಿಗೆ ಬುದ್ಧಿ ಕಲಿಸಿ 40ಕ್ಕಿಂತ ಚೀನಿ ಸೈನಿಕರನ್ನು ಬಲಿ ಪಡೆದ ನಮ್ಮ ದೇಶದ ಯೋಧರಿಗೆ ನಮನ. ಅಂತಹ ವೀರ ಯೋಧರನ್ನು ದೇಶ ಸೇವೆಗೆ ಕಳುಹಿಸಿದ ಕುಟುಂಬಕ್ಕೂ ವಂದನೆಗಳು.
-ನೀನಾ ವಿ. ರಾವ್‌, ಮಾರ್ನಮಿಕಟ್ಟೆ

ಸಾವಿರ ಜನ ಬಂದರೂ, ಸಾವಿರ ಜನ ಹೋದರೂ, ಆ ಸಾವಿರ ಜನರಲ್ಲಿ ಕೋಟಿ ಪ್ರಜೆಗಳನ್ನು ರಕ್ಷಿಸಲು ತಮ್ಮ ಜೀವನವನ್ನು ಪಣಕ್ಕಿಡುವವರು ವೀರ ಸೈನಿಕರು. ದೇಶವನ್ನು ಕಾದು ಬಲಿಯಾದ ನಮ್ಮ ಸೈನಿಕರಿಗೆ ಸಲಾಂ.
-ಸ್ವಾತಿ ಡಿ.ಎಂ., ಕೊಣಾಜೆ

ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಸಾಹಸಿ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಮ್ಮ ಯೋಧರ ಕುಟುಂಬಕ್ಕೆ ಸರಕಾರ ಅವರ ಬಲಿದಾನಕ್ಕೆ ತಕ್ಕ ಪ್ರತಿಫ‌ಲ, ಕುಟುಂಬಕ್ಕೆ ಶಕ್ತಿ ನೀಡಲಿ. ನಮ್ಮ ವೀರ ಯೋಧರಿಗೆ ಸಲಾಂ.
-ಅಚ್ಯುತ, ಬಂಟ್ವಾಳ

ನಮ್ಮ ಯೋಧ‌ರ ಬಲಿದಾನಕ್ಕೆ ಬೆಲೆ ಕಟ್ಟಲು ಅಸಾಧ್ಯ. ಸಾವು ನೋವುಗಳು ಕಣ್ಣಿಗೆ ಕಟ್ಟುವಂತಿದ್ದರೂ ಮುನ್ನುಗ್ಗುವ ನಮ್ಮ ಸೈನಿಕರ ಸಾಹಸ ಮನೋಸ್ಥೈರ್ಯವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ.
-ಶ್ಯಾಮಸುಂದರ ಪಾಣಾಜೆ, ವಿಟ್ಲ

ಭಾರತದ ನಾಗರಿಕರಾಗಿ ನಾವು, ಚೀನೀ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಅದರ ಹುಟ್ಟಡಗಿಸಬಹುದಾಗಿದೆ.ಆಗ ಮಡಿದ ಸೇನಾನಿಗಳಿಗೆ ನಿಜವಾದ ಶ್ರದ್ಧಾಂಜಲಿ ಸಮರ್ಪಿ ಸಬಹುದು.
-ಸುದೀಪ್‌ ಶೆಟ್ಟಿ, ಪೇರಮೊಗ್ರು

ಗಾಳಿ, ಮಳೆ ಚಳಿಯನ್ನು ಲೆಕ್ಕಿಸದೇ ಹಿಮಗಿರಿಯ ಗಾಲ್ವಾನ್‌ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣಕೊಟ್ಟ ನಿಮ್ಮ ಬಲಿದಾನ ವ್ಯರ್ಥವಾಗದು. ಎದೆಯೊಡ್ಡಿ ಪ್ರಾಣ ಕೊಟ್ಟ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ.
-ಪೂರ್ಣಿಮಾ, ಪೆರ್ಲಂಪಾಡಿ

ದೇಶಕ್ಕಾಗಿ ಗಡಿಯಲಿ ನೆತ್ತರು ಹರಿಸಿ ಪ್ರಾಣವ ಬಿಟ್ಟರು ಭಾರತಾಂಬೆಯ ಹೆಮ್ಮೆಯ ಪುತ್ರರು, ಅವರೆಲ್ಲಾ ಸಂತೋಷಗಳ ಬದಿಗೊತ್ತಿ ನಮ್ಮೆಲ್ಲರ ರಕ್ಷಣೆಗೆ ಸಿದ್ದರಾದರು. ನನ್ನೆಲ್ಲ ನೆಚ್ಚಿನ ವೀರರಿಗೂ ನನ್ನದೊಂದು ಸಲಾಮ್‌.
-ಕಾವ್ಯಾ, ಮಲಾರಬೀಡು

ತನ್ನ ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಮರಣವನ್ನು ಹೊಂದಿದ ಧೀರ ಯೋಧರಿಗೆ ನನ್ನ ಹೃದಯಂತರಾಳದ ನಮನಗಳು
-ಮನಿಷಾ, ಮಂಗಳೂರು

ದೇಶವ ಕಾಯುತ ಹುತಾತ್ಮರಾದರು ನಮ್ಮಯ ವೀರ ಸೈನಿಕರು . ನರಿ ಚೀನಿಗಳ ಕುತಂತ್ರ ಅರಿಯದೆ ವೀರ ಮರಣವ ಹೊಂದಿದ ನಮ್ಮಯ ವೀರ ಯೋಧರು.
-ಹಸನ್‌, ಸುರತ್ಕಲ್‌

ವೀರಮರಣವನ್ನಪ್ಪಿದ ನಮ್ಮ ಹೆಮ್ಮೆಯ ಯೋಧರಿಗೆ ಕೋಟಿ ಅಶ್ರುತರ್ಪಣ. ಮತ್ತೂಮ್ಮೆ ಹುಟ್ಟಿ ಬನ್ನಿ. ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ನಿಮ್ಮ ಬಲಿದಾನವನ್ನು ಅಜರಾಮರವಾಗಿಸುತ್ತೇವೆ.
-ಸೀತಾ ಕೆ., ತುಂಗಾನಗರ,

ನಿಮ್ಮ ಸೇವೆಗೆ ನಮ್ಮ ಅರ್ಪಣೆ ಆತ್ಮಸ್ಥೆçರ್ಯವೆಂಬ ಆಯುಧ.. ತಿರಂಗ ಹಿಡಿದೆತ್ತಿ ಜಯಶಾಲಿಗಳಾಗಿ ತಮಗಿದೊ ಶಿರಭಾಗಿ ನಮಸುತ ನಿಮ್ಮ ಸೇವೆಗೊಂದು ನಮ್ಮ ಸಲಾಂ.
-ಪದ್ಮನಾಭ ಬೊಳ್ಳಿ, ಮರಕಡ

ರಾಷ್ಟ್ರಧ್ವಜ ಹಾರುತ್ತಿರುವುದು ಗಾಳಿಯಿ ಂದಲ್ಲ.. ನಮ್ಮ ಕೆಚ್ಚೆದೆಯ ಸೈನಿಕರ ಉಸಿರಿನಿಂದ! ಕುತಂತ್ರೀ ಚೀನಾದ ದಾಳಿಯಿಂದ ಮಡಿದ ಹುತಾತ್ಮ ವೀರ ಯೋಧರಿಗೆ ಕೋಟಿ ಕೋಟಿ ನಮನಗಳು.
-ರವೀಶ್‌ರಾಜ…, ಕೋಡಿಕಲ್‌

ನೆತ್ತರ ಸುರಿಸಿ ಪ್ರಾಣವನುಳಿಸಿ ತನ್ನವರ ತೊರೆದು ನನ್ನವರ ಕಾದು ದಣಿವರಿಯದ ದೇವರು ದೇಶಕಾಯೋ ಯೋಧರು..
ಎಲ್ಲ ನಮ್ಮ ಭಾರತಾಂಬೆಯ ಯೋಧರಿಗೆ ಕೋಟಿ ಕೋಟಿ ನಮನಗಳು..
-ಆರ್‌. ಕುಶಲ ಎಸ್‌., ಕುಳಾಯಿ

ವಾತ್ಯಲ್ಯವೆಲ್ಲವ ಬಿಟ್ಟು, ದೇಶದ ಒಲವು ತೊಟ್ಟು, ತನ್ನ ಕಷ್ಟವ ಇಷ್ಟದಿ ಉಟ್ಟುದ್ರೋಹಿಗಳ ಮೆಟ್ಟಿ ಹುಟ್ಟಡಗಿಸುತಲಿ, ಪ್ರಾಣವ ತೆತ್ತ ಹೃಕ್ಕೋಟೆಯ ಸೇನಾನಿಗಳೇ ಭಾರತಾಂಬೆಯ ಮಡಿಲಲ್ಲಿ ನೆಲೆಯೂರಿದ್ದೀರಿ.
-ಅಬ್ದುಲ್‌ ರಜಾಕ್‌, ನೇರಳಕಟ್ಟೆ

ಅವಳ ಕಾಪಾಡುವ ನೆಪದಲಿ ನೀ ಮಡಿದೆ , ದೇಶದ ಗಡಿಯಲಿ ನಿನಗೆ ಅಲ್ಲಿ ಸುಖವಿಲ್ಲ ಖಾತ್ರಿ, ಪ್ರತಿ ರಾತ್ರಿ ಸುಡುಬಿಸಿಲು ಬಿರುಗಾಳಿ ಮಳೆಗೂ ಕದಲದು ನಿನ್ನ ಸಂಕಲ್ಪ ನಿನಗಿದೋ ಹಚ್ಚಿದೆವು ನಮ್ಮ ನಮನದಾ ದೀಪ.
-ಪೂಜಾ ನಾಯಕ್‌, ಪಡೀಲ್‌

ಕೆಂಪು ಜಿರಳೆಗಳ ಕುತಂತ್ರಕ್ಕೆ ಬಲಿಯಾದ ನನ್ನ ದೇಶದ ವೀರ ಯೋಧರೇ ನಿಮ್ಮ ಈ ವೀರ ಮರಣ ಎಂದಿಗೂ ಅಜರಾಮರ ನಿಮ್ಮ ಈ ಬಲಿದಾನವನ್ನು ವ್ಯರ್ಥವಾಗಲು ಭಾರತೀಯರಾದ ನಾವು ಬಿಡೆವು.
-ಸುಜನ್‌ ಕುಮಾರ್‌, ಬಿ.ಸಿ ರೋಡ್‌

ಭಾರತ ಚೀನಾ ಗಡಿಯ ಗಾಲ್ವಾನ್‌ ಕಣಿವೆಯಲ್ಲಿ ಹೋರಾಡಿ ಚೀನಿ ಸೈನಿಕರನ್ನು ಸದೆ ಬಡಿದು ರಾಷ್ಟಕ್ಕಾಗಿ ಹುತಾತ್ಮರಾದ ತಾಯಿ ಭಾರತೀಯ ವೀರ ಪುತ್ರರಿಗೆ ಶತ ನಮನಗಳು ಮತ್ತೂಮ್ಮೆ ಹುಟ್ಟಿ ಬನ್ನಿ.
-ಪುಷ್ಪರಾಜ್‌ ಶೆಟ್ಟಿ, ಚೇಳೈರು

ಹೇ ಯೋಧಾ… ನೀ ಅಲ್ಲಿರುವರೆಗೆ ನಾನಿಲ್ಲಿ ಸುರಕ್ಷಿತ…ನಿನ್ನ ಮುಂದೆ ಶತ್ರು ಇರಲಿ ಇಲ್ಲದಿರಲಿ ನೀನು ನಿನ್ನ ಬೆನ್ನಹಿಂದೆ 136ಕೋಟಿ ಭಾರತೀಯರನ್ನು ಬಚ್ಚಿಟ್ಟುಕೊಂಡಿರುವೆ. ನೀನು ನನ್ನ ಅಭಿಮಾನದ ಸಂಕೇತ.
-ಯೊಗೀಶ್‌ , ಕಾವುರ್‌

ದೇಶ ಪ್ರೇಮದ ಅರಿವು ಬರಿದಿಟ್ಟ ಪುಸ್ತಕದಿಂದ ತಿಳಿಯಲಿಲ್ಲ ಅವರಿವರ ಮಾತಿನಿಂದ ಅರ್ಥವಾಗಲಿಲ್ಲ ಬದಲಿಗೆ ನಮ್ಮೆಲ್ಲರ ಸುರಕ್ಷಣೆಗೆ ಗಡಿಯಲ್ಲಿ ನಿಂತ ನಿಮ್ಮ ದಿಟ್ಟ ನಿರ್ಧಾರಕ್ಕೆ ಅರಿತೇ ಭಾರತಾಂಬೆಯ ಅಸ್ತಿತ್ವ…
-ಯಶಸ್ವಿನಿ ಶಂಕರ್‌, ಮೂಲ್ಕಿ

ಅವನ ಬದುಕಿಗೂ ಒಂದು ಅರ್ಥವಿದೆ. ಅವನ ಸಾವಿಗೂ ಒಂದು ಅರ್ಥವಿದೆ.ಯಾಕೆಂದರೆ ಆತ ಸೈನಿಕ.. ಆತ ತನ್ನ ಮನೆ, ಮನೆಯವರನ್ನು ಬಿಟ್ಟು ದೇಶ ಸೇವೆಗೆ ನಿಂತವ..
-ಕೌಶಿಕ್‌ ಎಸ್‌., ಕುಳಾಯಿ

ನಮ್ಮ ಭವಿಷ್ಯಕ್ಕಾಗಿ, ನಿಮ್ಮ ವರ್ತಮಾನವನ್ನು ನೀಡಿದ್ದೀರಿ. ದೇಶಕ್ಕಾಗಿ ಶ್ರೇಷ್ಠ ಬಲಿದಾನ ಮಾಡಿದ ಮಹಾತ್ಮರು. ಭಾರತ ಎಂದೆಂದಿಗೂ ಚಿರಋಣಿ. ಹೃದಯಾಂತರಾಳದ ನಮಗಳು. ಜೈ ಹಿಂದ್‌.
-ವೈ. ಧರ್ಮೇಂದ್ರ, ಕಾಸರಗೋಡು

ಈ ದೇಶಕ್ಕಾಗಿ ಜೀವ ನೀಡಿದ ಯೋಧರಿಗೆ ನಾನು ತಲೆಬಾಗುವೆ. ಈ ದೇಶಕ್ಕಾಗಿ ಜೀವ ನೀಡಿದ ಯೋಧರಿಗೆ ನಾನು ತಲೆ ಬಾಗುವೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮ್ಮೆಲ್ಲರ ನಮನಗಳು .
-ಗಗನ್‌, ಕೆ‌ರೆಕಾಡು

“ಬದುಕು’ ಎಂಬ ಈ ಭೂಮಿಯಲ್ಲಿ “ಸೈನಿಕ’ ಎಂಬ ಪದವಿ ಪಡೆದು “ದೇಶದ’ ರಕ್ಷಣೆಗೆ ಜೀವವ ಸವೆದ ನೀವು ಸದಾ ಅಮರ ಅಜರಾಮರ.
-ರಕ್ಷಿತಾ, ಮಂಗಳೂರು

ಸೈನಿಕರೇ ನಿಮ್ಮ ಕೆಚ್ಚೆದೆಯ ಧೈರ್ಯವನ್ನು ಮೆಚ್ಚುವೆವು. ಚೀನದ ವಸ್ತುಗಳನ್ನು ಬಹಿಷ್ಕರಿಸಿ ಅದಕ್ಕೆ ಸರಿಯಾದ ತಿರುಗೇಟನ್ನು ನೀಡುವೆವು. ನಿಮ್ಮ ತ್ಯಾಗವನ್ನು ವ್ಯರ್ಥ ವಾಗಲು ಬಿಡೆವು ನಿಮ್ಮ ಕುಟುಂಬ ಮತ್ತು ತಾಯಿ ಭಾರತಿಗೆ ನ್ಯಾಯ ದೊರಕಿಸದೇ ಬಿಡವೆ.
-ಭಾರತಿ ಎ., ಉಪ್ಪಳ

ದೇಶಕ್ಕಾಗಿ ಜೀವವನ್ನು ಸಮರ್ಪಿಸಿದ ವೀರಯೋಧರಿಗೆ ಶತಕೋಟಿ ಪ್ರಣಾಮಗಳು. ನಿಮ್ಮ ಈ ಸೇವೆಗೆ ನಾವೆಂದೆಂದುಚಿರರುಣಿ.
-ನಂದಕಿಶೋರ, ದೇಲಂಪಾಡಿ

ಚೀನ-ಭಾರತ ಪರಸ್ಪರ ಶಾಂತಿ ಮಾತುಕತೆಯ ಒಪ್ಪಂದವಾಗಿದ್ದರೆ ಭಾರತದ ಯೋಧರನ್ನು ಚೀನ ಯಾಕೆ ಹತ್ಯೆಗೈಯಿತು? ಹಾಗೆಯೇ ಚೀನದ ವಸ್ತುಗಳನ್ನು ಬಹಿ ಸ್ಕರಿಸುವ ಮುಖಾಂತರ ಹುತಾತ್ಮ ವೀರ ಯೋಧರಿಗೆ ಕಂಬನಿ ಮಿಡಿಯೋಣ.
-ಸೂರ್ಯಕಾಂತ್‌ ಶೆಟ್ಟಿ, ಪೊಳಲಿ

ಭಾರತದ ಮಾತೆಯ ರಕ್ಷಣೆಯಲ್ಲಿ ಹುತಾತ್ಮರಾದ ಎಲ್ಲಾ ವೀರ ಪುತ್ರರಿಗೆ ಹೃದಯಾಂತರಾಳದ ನಮನಗಳು. ಅವರು ಮತ್ತೂಮ್ಮೆ ಈ ಪುಣ್ಯ ಭೂಮಿಯಲ್ಲಿ ಜನಿಸಿ ಬರಲಿ.
-ರಾಮದಾಸ್‌ ಎಕ್ಕೂರು, ಮಂಗಳೂರು

ರಣಹೇಡಿಗಳ ಕುತಂತ್ರದ ದಾಳಿಗೆ ಸಿಲುಕಿ ತಮ್ಮ ಪ್ರಾಣತೆತ್ತರು ನಮ್ಮ ರಕ್ಷಣೆಗಾಗಿ, ಅವರಾತ್ಮಕೆ ಶಾಂತಿ ಕೋರಿ ಹಚ್ಚಿ ಹಣತೆ, ಮನೆ-ಮನಗಳಲ್ಲಿ, ಸಾವಿಗೆ ತಕ್ಕ ಉತ್ತರ ಕೊಡುವವರೆಗೂ, ಸಂಹಾರ ನಿಲ್ಲದಿರಲಿ.
-ರಂಗನಾಥ್‌ ಎಸ್‌., ಮಂಗಳೂರು

ರಕ್ಷಣೆಯಲ್ಲಿ ತೊಡಗಿರುವ ವೀರ ಪುತ್ರರಿಗೆ ನೈತಿಕ ಧೈರ್ಯವನ್ನು ತುಂಬಬೇಕಾದ್ದು ನಮ್ಮ ಕರ್ತವ್ಯ. ಚೀನ ವಸ್ತುಗಳನ್ನು ಬಹಿಷ್ಕರಿಸುವುದರ ಮೂಲಕ ಬಲಿದಾನಕ್ಕೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ.
-ಗೀತಾ ಆರ್‌, ಅನಂತಾಡಿ

ವೀರ ಸೈನಿಕರ ತ್ಯಾಗ ವ್ಯರ್ಥ ವಾಗಬಾರದು.ಕಾನೂನಿಗೆ ಗೌ ರವ ಕೊಟ್ಟು, ನಿರಾಯುಧರಾಗಿ ಮುನ್ನುಗ್ಗಿ , ಚೀನ ಸೈನಿಕರನ್ನು ಎದುರಿಸಿದ ಭಾರತದ ವೀರ ಯೋಧರ ಎದೆಗಾರಿಕೆ ಸಲಾಂ.
-ಸುಧಾಕರ ಸಾಲ್ಯಾನ್‌,ಬಂಟ್ವಾಳ

ಚೀನಾಆದ ಅಗ್ಗದ ಸಾಮಗ್ರಿಗಳಿಗೆ, ಮೊಬೈಲ್‌ ಆ್ಯಪ್‌ಗ್ಳಿಗೆ ತಿಲಾಂಜಲಿ ನೀಡುತ ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡುತ ನಮ್ಮ ಪುಟ್ಟ ಮಾನಸಸೇವೆಯಾದರೂ ನೀಡೋಣ. ಭಾರತದ ಕಲಿಗಳೇ ನಿಮಗಿದೋ ವಂದನೆ.
-ವಿಜಯಲಕ್ಷ್ಮೀ,ಬಂಟ್ವಾಳ

ದೇಶಕ್ಕಾಗಿ ಹೋರಾಡಿ ಉಸಿರು ಚೆಲ್ಲಿದ ನಂತರ ತಿರಂಗವನ್ನೇ ಹೊದ್ದು ಮಲಗುವ ಸೈನಿಕರಿಗೆ ಸಲಾಂ ಹೇಳಿದರೂ ಸಾಲದು. ಕುಟುಂಬದ ಕಂಬನಿ ತೊಡೆಯುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಶ್ರದ್ಧೆ ನಮ್ಮದಾಗಲಿ.
-ಎಂ.ಕೆ ಕನ್ಯಾಡಿ, ಧರ್ಮಸ್ಥಳ

ದೇಶವನ್ನು ರಕ್ಷಿಸಿ ನಮಗಾಗಿ ಹುತಾತ್ಮರಾದ ಸೈನಿಕರಿಗೆ ನನ್ನದೊಂದು ಸಲಾಂ. ಚೀನ ಕುತಂತ್ರವರಿತು ಅದರ ಆರ್ಥಿಕ ಭದ್ರತೆಗೆ ನಾವೇ ಬುನಾದಿಯಾಗದೆ ಚೀನ ವಸ್ತುವನ್ನು ಬಹಿಷ್ಕರಿಸೋಣ
-ಜ್ಯೋತಿಶ್ರೀ, ಮಾವಿನಕಟ್ಟೆ

ಅವರ ಬಲಿದಾನದ ಮೌಲ್ಯ ಅರಿಯೋಣ
ಕೋವಿಡ್ ಲಾಕ್‌ಡೌನ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ಚೀನದ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿರುವ ದಾಳಿ ಖಂಡನೀಯ. ಅದರಲ್ಲಿಯೂ ಯೋಧರು ಸಾವನ್ನಪ್ಪಿರುವುದು ಊಹಿಸಲೂ ಅಸಾಧ್ಯವಾಗಿದೆ. ಸೈನಿಕರು ದೇಶದ ಬೆನ್ನೆಲುಬಾಗಿದ್ದಾರೆ. ಗಟ್ಟಿತನದಿಂದ ದೇಶದ ಗಡಿಭಾಗಗಳಲ್ಲಿ ಶತ್ರುಗಳಿಗೆ ಎದೆಒಡ್ಡಿ ನಿಲ್ಲುವ ಕಾರಣದಿಂದಾಗಿ ನಾವು ಇಂದು ನೆಮ್ಮದಿಯಿಂದ ಇದ್ದೇವೆ. ಚಳಿ, ಮಳೆ, ಗಾಳಿ, ಬಿಸಿಲು ಇವು ಯಾವುದೂ ಕೂಡ ಅವರಿಗೆ ಮುಖ್ಯವಲ್ಲ. ದೇಶದ ಹಿತಕಾಯುವುದಷ್ಟೇ ಅವರ ಧ್ಯೇಯ. ಸೈನಿಕರಲ್ಲಿರುವ ಕೆಲವೊಂದಷ್ಟು ಅಂಶಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಈ ದಾಳಿ ಮತ್ತಷ್ಟು ಭೀಕರವಾಗದಿರಲಿ ಎಂದು ಆಶಿಸುತ್ತೇನೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಆದರೂ ಕೂಡ ನಮ್ಮ ಸೈನಿಕರು ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಈ ವೈಷಮ್ಯ ಇಲ್ಲಿಗೆ ಶಮನವಾದರೆ ಉತ್ತಮ. ಪ್ರತಿಯೊಬ್ಬರೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಸಹಜ ಕೂಡ ಹೌದು. ಆದರೆ ಸೈನಿಕರು ಆ ಎಲ್ಲ ಕಾಳಜಿಗಳನ್ನು ದೇಶಸೇವೆಯ ಮೇಲಿರಿಸುತ್ತಾರೆ. ದೇಶರಕ್ಷಣೆಯೇ ಅವರ ಮೊದಲ ಧ್ಯೇಯವಾಗಿರುತ್ತದೆ. ಈ ಕಾರಣಕ್ಕಾಗಿ ಸೈನಿಕರಿಗೆ ಸರಕಾರ, ಜನತೆ ಮತ್ತಷ್ಟು ಬೆಂಗಾವಲಾಗಿ ನಿಲ್ಲಬೇಕು.. ದೇಶದ ಜನರು ಹಾಗೂ ಸೈನಿಕರ ಹಿತದೃಷ್ಟಿಯಿಂದ ಭಾರತ ಯುದ್ಧತಂತ್ರದಲ್ಲಿ ಜಾಣ್ಮೆಯ ನಡೆ ಅನುಸರಿಸುವುದು ಅತೀ ಅಗತ್ಯವಾಗಿದೆ.
-ರಕ್ಷಿತ್‌ ಶೆಟ್ಟಿ, ನಟ-ನಿರ್ದೇಶಕ

ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಲೆಕ್ಕಿಸದೆ ಸವಾಲುಗಳನ್ನೆಲ್ಲ ಅನುಕೂಲವಾಗಿ ಪರಿವರ್ತಿಸಿ ಕೊಂಡು, ಊರು, ಸಂಸಾರ ಎಲ್ಲವನ್ನು ದೂರ ಮಾಡಿಕೊಂಡರೂ ಸದಾ ಕಾಲ ದೇಶಕ್ಕಾಗಿ ಹೋರಾಡುವ ಸೈನಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎನ್ನುವುದು ಅತ್ಯಂತ ಸಂತಸ ನೀಡುತ್ತದೆ. ಸೇನೆಯಲ್ಲಿರುವ ಪ್ರತಿಯೊಬ್ಬನ ಜೀವನದಲ್ಲಿ ಯುದ್ಧ , ದುಷ್ಟ ನಿಗ್ರಹಕ್ಕೆ ಅವಕಾಶ ಸಿಗುವುದು ಹೆಮ್ಮೆಯ ವಿಚಾರ ಹಾಗೂ ದೇಶಕ್ಕಾಗಿ ಕೊನೆ ಉಸಿರಿರುವ ತನಕ ಹೋರಾಡಿ ತನ್ನನ್ನು ದೇಶಕ್ಕೆ ಸಮರ್ಪಿ ಸುವ ಯೋಧ ಅಮರ ಎನಿಸಿಕೊಳ್ಳುತ್ತಾನೆ. ದೇಶದ ಯಾವುದೇ ಮೂಲೆಯಲ್ಲಿ ಸೇವೆ ಸಲ್ಲಿಸುವ ಸೈನಿಕ ತನ್ನ ಇನ್ನೊಬ್ಬ ಸಹಪಾಠಿಯನ್ನ ಕಷ್ಟದ ಸಮಯದಲ್ಲಿ ಕೈಬಿಡಲಾರ. ಅಗತ್ಯ ಬಿದ್ದರೆ ಆತನ ರಕ್ಷಣೆಗೆ ನಿಂತು ತನ್ನ ಜೀವವನ್ನು ಬಲಿಕೊಡುತ್ತಾನೆ. ಗಡಿಯಲ್ಲಿ ಸಂಘರ್ಷಗಳಾದಾಗ, ಶತ್ರು ಸೇನೆಯ ನಡುವೆ ಬಿಗುವಿನ ವಾತಾವರಣದಲ್ಲೂ ಸೈನಿಕ ಹಿಂಜರಿಯಲಾರ. ಲಡಾಯಿ ನಡೆಯುವಾಗ ಸೇವೆಯಲ್ಲಿರುವ ಎಲ್ಲಾ ಸೈನಿಕರಿಗೆ ಆತ್ಮ ಸ್ಥೆçರ್ಯ ತುಂಬುವ ಕಾರ್ಯ, ತನ್ನ ದೇಶದ ಪರ ನಿಲ್ಲುವ ಕಾರ್ಯ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯರಿಂದ ಆಗಬೇಕು.
-ಮಂಜುನಾಥ್‌ ಪೂಜಾರಿ, ಎನ್‌ಎಸ್‌ಜಿ ಕಮಾಂಡೊ, ಕೋಟ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rafale-1

ವಾಯು ಸೇನೆಯ ಹೊಸ ಶಕ್ತಿ ‘ರಫೇಲ್’ ಗೆ ಆಗಸದಲ್ಲೇ ಇಂಧನ ಭರ್ತಿ!

Raffel

ಭಾರತದ ರಫೇಲ್‌ v/s ಚೀನದ J-11: ಯಾರದ್ದು ಸ್ಟ್ರಾಂಗ್ – ಇಲ್ಲಿದೆ ಡಿಟೇಲ್ಸ್

ಮತ್ತೆ ಚೀನಾದ 47 ಆ್ಯಪ್ ನಿಷೇಧಿಸಿದ ಭಾರತ; ಒಟ್ಟು 250 ಆ್ಯಪ್ ನಿಷೇಧವಾಗಲಿದೆಯಾ?

ಮತ್ತೆ ಚೀನದ 47 ಆ್ಯಪ್ ನಿಷೇಧಿಸಿದ ಭಾರತ; ಒಟ್ಟು 250 ಆ್ಯಪ್ ನಿಷೇಧವಾಗಲಿದೆಯಾ?

ಗಡಿ ವಿವಾದ: ಯಥಾಸ್ಥಿತಿಯಲ್ಲಿನ ಯಾವುದೇ ಬದಲಾವಣೆ ನಾವು ಒಪ್ಪಲ್ಲ: ಚೀನಾಕ್ಕೆ ಭಾರತ

ಗಡಿ ವಿವಾದ: ಯಥಾಸ್ಥಿತಿಯಲ್ಲಿನ ಯಾವುದೇ ಬದಲಾವಣೆ ನಾವು ಒಪ್ಪಲ್ಲ: ಚೀನಾಕ್ಕೆ ಭಾರತ

raj-nath-sing

ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ 2 ದಿನಗಳ ಲಡಾಕ್-ಕಾಶ್ಮೀರ ಪ್ರವಾಸ ಆರಂಭ, ಮಹತ್ವದ ಮಾತುಕತೆ !

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.