ಐಪಿಎಲ್ನಿಂದ ಹೊರಬಿದ್ದ ಹರ್ಷಲ್ ಪಟೇಲ್
Team Udayavani, Apr 12, 2019, 9:25 AM IST
ಹೊಸದಿಲ್ಲಿ: ಪ್ರಸಕ್ತ ಐಪಿಎಲ್ನಲ್ಲಿ ನಿರೀಕ್ಷೆಗಿಂತಲೂ ಕೆಳ ಮಟ್ಟದ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಆಘಾತವೊಂದು ಎದುರಾಗಿದೆ. ತಂಡದ ಸೀಮರ್ ಹರ್ಷಲ್ ಪಟೇಲ್ ಬಲಗೈ ಮೂಳೆ ಮುರಿತಕ್ಕೆ ಸಿಲುಕಿದ್ದು, ಕೂಟದಿಂದ ಹೊರಬಿದ್ದಿದ್ದಾರೆ. ತಂಡದ ಕೋಚ್ ರಿಕಿ ಪಾಂಟಿಂಗ್ ಈ ವಿಷಯ ತಿಳಿಸಿದರು.
“ಕೆಕೆಆರ್ ಎದುರಿನ ಎ. ಒಂದರ ಪಂದ್ಯದ ವೇಳೆ ಹರ್ಷಲ್ ಪಟೇಲ್ ಬಲಗೈ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಅವರಿಗೆ 3-4 ವಾರಗಳ ವಿಶ್ರಾಂತಿ ಬೇಕಿದೆ. ಹೀಗಾಗಿ ಐಪಿಎಲ್ನ ಉಳಿದ ಅವಧಿಗೆ ಲಭ್ಯರಾಗುತ್ತಿಲ್ಲ. ಪಟೇಲ್ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಬೇಕಿದೆ’ ಎಂದು ಪಾಂಟಿಂಗ್ ಹೇಳಿದರು.
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಮನೋಜ್ ಕಾರ್ಲಾ ಕೂಡ ಬಲ ಭುಜದ ತೋಳಿನ ನೋವಿಗೆ ಸಿಲುಕಿದ್ದಾರೆ ಎಂದು ಪಾಂಟಿಂಗ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ