ಐಪಿಎಲ್ನಲ್ಲಿ ಅಮೆರಿಕ ಆಟಗಾರ
Team Udayavani, Sep 12, 2020, 10:12 PM IST
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿ ಅಮೆರಿಕ ಆಟಗಾರನನ್ನು ಕಣಕ್ಕೆ ಇಳಿಸಲು ವೇದಿಕೆ ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಮೆರಿಕದ ಆಟಗಾರ ಅಲಿ ಖಾನ್ ಅವರೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಇಂಗ್ಲೆಂಡ್ ತಂಡದ ಹ್ಯಾರಿ ಗರ್ನಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಬದಲಿ ಆಟಗಾರನನ್ನಾಗಿ ಅಮೆರಿಕದ 29 ವರ್ಷದ ವೇಗಿ ಅಲಿ ಖಾನ್ ಅವರನ್ನು ಕೆಕೆಆರ್ ಸೇರಿಸಿಕೊಂಡಿದೆ. ಗುರುವಾರ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಪ್ರಶಸ್ತಿ ಗೆದ್ದ ಟ್ರಿನ್ಬಾಗೊ ನೈಟ್ರೈಡರ್ (ಟಿಕೆಆರ್) ತಂಡದಲ್ಲಿ ಆಡಿದ್ದ ಖಾನ್ ಎಂಟು ವಿಕೆಟ್ ಉರುಳಿಸಿದ್ದರು.