ಚೆನ್ನೈ-ಡೆಲ್ಲಿ ಕದನ ಕುತೂಹಲ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿ
Team Udayavani, Sep 25, 2020, 6:59 PM IST
ದುಬೈ: ಐಪಿಎಲ್ 13ನೇ ಆವೃತ್ತಿಯ ಏಳನೇ ಪಂದ್ಯದಲ್ಲಿ ಚೆನ್ನೈ ಮತ್ತು ಡೆಲ್ಲಿ ಕಾದಾಡುತ್ತಿದ್ದು ಟಾಸ್ ಗೆದ್ದ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಂದಿನ ಮ್ಯಾಚ್ ನಡೆಯುತ್ತಿದ್ದು, ಈ ಆವೃತ್ತಿಯ 3ನೇ ಪಂದ್ಯವನ್ನು ಚೆನ್ನೈ ಆಡುತ್ತಿದೆ. ಮೊದಲೆರೆಡು ಗೇಮ್ ನಲ್ಲಿ ಸಿಹಿ-ಕಹಿ ಎರಡನ್ನೂ ಕಂಡಿರುವ ಧೋನಿ ಪಡೆ ಇಂದು ಗೆಲ್ಲುವ ಉತ್ಸಾಹದಲ್ಲಿದೆ. ಅದಾಗ್ಯೂ ಚೆನ್ನೈ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮಾರ್ಥ್ಯದ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದ್ದು, ಇಂದಿನ ಕದನ ಕುತೂಹಲ ಕೆರಳಿಸಿದೆ.
ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ನಲ್ಲಿ ಗೆದ್ದು ಬೀಗಿ ವಿಶ್ವಾಸದಲ್ಲಿದೆ. ಸ್ಟೋಯ್ನಿಸ್, ರಬಾಡ ಸೇರಿದಂತೆ ಅತ್ಯುತ್ತಮ ಆಟಗಾರರನ್ನು ಡೆಲ್ಲಿ ಹೊಂದಿದ್ದು, ಇಂದು ಬಲಿಷ್ಟ ಚೆನ್ನೈ ತಂಡವನ್ನು ಮಣಿಸುವ ಯೋಜನೆ ರೂಪಿಸಿದೆ.
ಇತ್ತಂಡಗಳೂ 21 ಬಾರಿ ಮುಖಾಮುಖಿಯಾಗಿದ್ದು 15ರಲ್ಲಿ ಚೆನ್ನೈ ಗೆದ್ದರೆ, 6ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯಗಳಿಸಿದೆ
ಆಡುವ ಹನ್ನೊಂದರ ಬಳಗ
ಚೆನ್ನೈ ಸೂಪರ್ ಕಿಂಗ್ಸ್: ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರನ್, ರುತುರಾಜ್ ಗಾಯಕವಾಡ್, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ), ರವೀಂದ್ರ ಜಡೇಜಾ, ಜೋಶ್ ಹ್ಯಾಜಲ್‌ವುಡ್, ದೀಪಕ್ ಚಹರ್, ಪಿಯೂಷ್ ಚಾವ್ಲಾ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಆಕ್ಸರ್ ಪಟೇಲ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್, ಆ್ಯನ್ರಿಚ್ ನೋರ್ಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ
ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು
ಜಾನುವಾರು ವಧೆ ಆರೋಪ: ಇಬ್ಬರು ಪೊಲೀಸರ ವಶಕ್ಕೆ
ರಸಗೊಬ್ಬರ,ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳ ದಿಢೀರ್ ದಾಳಿ