ಎರಡನೇ ಕ್ವಾಲಿಫೈಯರ್: ಮುನ್ನುಗ್ಗೀತೇ ಹೈದರಾಬಾದ್‌? ಫೈನಲ್‌ನಲ್ಲಿ ಕಾಣಿಸೀತೇ ಡೆಲ್ಲಿ?


Team Udayavani, Nov 8, 2020, 3:29 PM IST

ಎರಡನೇ ಕ್ವಾಲಿಫೈಯರ್: ಮುನ್ನುಗ್ಗೀತೇ ಹೈದರಾಬಾದ್‌? ಫೈನಲ್‌ನಲ್ಲಿ ಕಾಣಿಸೀತೇ ಡೆಲ್ಲಿ?

ಅಬುಧಾಬಿ: ಮಂಗಳವಾರದ ಐಪಿಎಲ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದ ಎದುರಾಳಿ ಯಾರು ಎಂಬ ಕುತೂಹಲ ರವಿವಾರ ರಾತ್ರಿ ತಣಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸಲ ಫೈನಲ್‌ಗೆ ಲಗ್ಗೆ ಹಾಕಿ ಇತಿಹಾಸ ನಿರ್ಮಿಸೀತೇ ಅಥವಾ ಸನ್‌ರೈಸರ್ ಹೈದರಾಬಾದ್‌ 3ನೇ ಸಲ ಪ್ರಶಸ್ತಿ ಸುತ್ತಿಗೆ ಮುನ್ನುಗ್ಗೀತೇ ಎಂಬುದು ದ್ವಿತೀಯ ಕ್ವಾಲಿಫೈಯರ್‌ ನಲ್ಲಿ ಇತ್ಯರ್ಥವಾಗಲಿದೆ

ಪ್ರಸಕ್ತ ಫಾರ್ಮ್, ಆಡಿದ ರೀತಿ, ತೋರಿದ ಜೋಶ್‌, ಪ್ಲೇ ಆಫ್ ಫ‌ಲಿತಾಂಶವನ್ನೆಲ್ಲ ಗಮನಿಸಿದಾಗ ಡೆಲ್ಲಿಗಿಂತ ಹೈದರಾಬಾದ್‌ ತಂಡವೇ ಸಾಕಷ್ಟು ಮುಂದಿರುವುದರಲ್ಲಿ ಅನುಮಾನವಿಲ್ಲ. ಅದು ನೆಚ್ಚಿನ ತಂಡವೂ ಆಗಿದೆ. ಆದರೆ ನಿರ್ದಿಷ್ಟ ದಿನದಂದು ಟಿ20ಯಲ್ಲಿ ಏನೂ ಆಗಬಹುದು. ದೊಡ್ಡದೊಂದು ಅಚ್ಚರಿಯೇ ಸಂಭವಿಸ ಬಹುದು. ಹೀಗಾಗಿ ಇಲ್ಲಿ ಯಾರನ್ನೂ ಲಘುವಾಗಿ ತೆಗೆದು ಕೊಳ್ಳುವುದು ತಪ್ಪಾಗುತ್ತದೆ.

ಎದ್ದು ನಿಲ್ಲಬೇಕಿದೆ ಡೆಲ್ಲಿ

ಈವರೆಗೆ ಒಮ್ಮೆಯೂ ಕಪ್‌ ಎತ್ತದ, ಫೈನಲ್‌ ಮುಖವನ್ನೇ ನೋಡದ ಡೆಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ವಿರುದ್ಧ ಆಡಿದ ರೀತಿ ತೀರಾ ಬೇಸರ ಹುಟ್ಟಿಸುವಂತಿತ್ತು. ಶಾ, ಧವನ್‌, ರಹಾನೆ, ಅಯ್ಯರ್‌, ಪಂತ್‌… ಹೀಗೆ ಭಾರತದ ಟೆಸ್ಟ್‌ ತಂಡದಂತಿರುವ ಡೆಲ್ಲಿ ಶೂನ್ಯಕ್ಕೆ 3 ವಿಕೆಟ್‌ ಕಳೆದುಕೊಂಡಾಗಲೇ ಶರಣಾಗತಿ ಸಾರಿತ್ತು. ಮುಂಬೈ ಅಷ್ಟೊಂದು ಘಾತಕವಾಗಿ ಅಯ್ಯರ್‌ ಪಡೆಯ ಮೇಲೆರಗಿ ಹೋಗಿತ್ತು.

ಲೀಗ್‌ ಹಂತದ ಮೊದಲ 9 ಪಂದ್ಯಗಳಲ್ಲಿ ಏಳನ್ನು ಗೆದ್ದ ಡೆಲ್ಲಿಯ ಆಟ ಕಂಡಾಗ ಅದು ಫೇವರಿಟ್‌ ಆಗಿಯೇ ಗೋಚರಿಸಿತ್ತು. ಆದರೆ ಮುಂದಿನ 6 ಪಂದ್ಯಗಳಲ್ಲಿ ಐದನ್ನು ಸೋತು ಕಂಗಾಲಾಯಿತು. ಆದರೂ ದ್ವಿತೀಯ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತು. ಆರಂಭವೇ ಡೆಲ್ಲಿ ಪಾಲಿಗೆ ದೊಡ್ಡ ಕಂಟಕವಾಗಿ ಕಾಡಿದೆ. ಪೃಥ್ವಿ ಶಾಗೆ ಬ್ಯಾಟಿಂಗೇ ಮರೆತು ಹೋಗಿದೆ. ಧವನ್‌ ಅವಳಿ ಶತಕ ಸಿಡಿಸಿದರೂ ಸೊನ್ನೆಯ ನಂಟು ಬಿಟ್ಟಿಲ್ಲ. ಆರಂಭಿಕರಿಬ್ಬರು ಸೇರಿ 7 ಸೊನ್ನೆ ಸುತ್ತಿರುವುದು ಎಂಥ ತಂಡವನ್ನಾದರೂ ಅದುರುವಂತೆ ಮಾಡುತ್ತದೆ. ಜತೆಗೆ ರಹಾನೆ ಕೂಡ 2 ಸೊನ್ನೆ ಗೀಚಿದ್ದಾರೆ!

ಇದನ್ನೂ ಓದಿ:ಆರ್‌ಸಿಬಿ ತಂಡವಾಗಿ ಆಡಲಿಲ್ಲ: ಎಲಿಮಿನೇಟರ್ ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ

ಡೆಲ್ಲಿಯ ಬೌಲಿಂಗ್‌ ರಬಾಡ ಮತ್ತು ನೋರ್ಜೆ ಅವರನ್ನು ಅವಲಂಬಿಸಿದೆ. ಆದರೆ ಮೊನ್ನೆ ಮುಂಬೈ ಇವರಿಬ್ಬರನ್ನೇ ಟಾರ್ಗೆಟ್‌ ಮಾಡಿದ್ದನ್ನು ಮರೆಯುವಂತಿಲ್ಲ. ಅಶ್ವಿ‌ನ್‌, ಅಕ್ಷರ್‌ ಸ್ಪಿನ್‌ ಮ್ಯಾಜಿಕ್‌ ನಡೆದರೆ ಲಾಭವಿದೆ. ಸ್ಯಾಮ್ಸ್‌ ಬದಲು ಹೆಟ್‌ಮೈರ್‌ ಮರಳಬಹುದು. ಆಗ ಸ್ಟೋಯಿನಿಸ್‌ ಪೂರ್ತಿ ಬೌಲಿಂಗ್‌ ಕೋಟಾವನ್ನು ನಿಭಾಯಿಸಬೇಕಾಗುತ್ತದೆ.

ಹೈದರಾಬಾದ್‌ ಜಯದ ಓಟ

ಇನ್ನೊಂದೆಡೆ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್‌ ಸಂಘಟಿತ ಹಾಗೂ ಯೋಜನಾಬದ್ಧ ಆಟದ ಮೂಲಕ ಆರ್‌ಸಿಬಿ ಯನ್ನು ಕೆಡವಿದೆ. ತಂಡದ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಅಮೋಘ ಮಟ್ಟದಲ್ಲಿದೆ. ಕೂಟದ ಮೊದಲಾರ್ಧದಲ್ಲಿ ಹೈದರಾಬಾದ್‌ ಆಟ ಕಂಡಾಗ ಅದು ಲೀಗ್‌ ಹಂತದಲ್ಲೇ ಉದುರಿ ಹೋಗಲಿದೆ ಎನಿಸಿತ್ತು. ಆದರೆ ವಾರ್ನರ್‌ ಟೀಮ್‌ ಸರಿಯಾದ ಹೊತ್ತಿನಲ್ಲಿ ಗೆಲುವಿನ ಮೆಟ್ಟಿಲು ಏರತೊಡಗಿದೆ.

ಸನ್‌ರೈಸರ್ ಪ್ಲಸ್‌ ಪಾಯಿಂಟ್‌

ಮೊದಲ 11 ಪಂದ್ಯಗಳಲ್ಲಿ ಹೈದರಾಬಾದ್‌ಗೆ ಒಲಿದದ್ದು ನಾಲ್ಕೇ ಜಯ. ಆದರೆ ಇಲ್ಲಿಂದ ಮುಂದೆ ಎಸ್‌ಆರ್‌ಎಚ್‌ ಮುಟ್ಟಿದ್ದೆಲ್ಲ ಗೆಲುವಾಗಿ ಪರಿವರ್ತನೆ ಆಗುತ್ತಲೇ ಬಂದಿದೆ. 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೇ ಕೂಟದ ಮೊದಲ ವಿಜಯೋತ್ಸವ ಆಚರಿಸಿದ್ದ ವಾರ್ನರ್‌ ಪಡೆ, 12ನೇ ಪಂದ್ಯದಲ್ಲಿ ಮತ್ತೆ ಡೆಲ್ಲಿಯನ್ನು ಮಣಿಸಿ ಅಜೇಯ ಓಟ ಬೆಳೆಸಿದೆ. ಅರ್ಥಾತ್‌, ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಅದು ಡೆಲ್ಲಿಯನ್ನು ಮಗುಚಿದೆ. ಇದು ಕೂಡ ಹೈದರಾಬಾದ್‌ಗೆ ಪ್ಲಸ್‌ ಪಾಯಿಂಟ್‌.

ವಾರ್ನರ್‌, ವಿಲಿಯಮ್ಸನ್‌, ಪಾಂಡೆ, ಆಲ್‌ರೌಂಡರ್‌ ಹೋಲ್ಡರ್‌, ಸಂದೀಪ್‌ ಶರ್ಮ, ರಶೀದ್‌ ಖಾನ್‌, ಟಿ. ನಟರಾಜನ್‌ ಅವರೆಲ್ಲ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಗರ್ಗ್‌, ಸಮದ್‌ ಮೇಲೂ ನಂಬಿಕೆ ಇಡಬಹುದು. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಗಾಯಾಳು ಸಾಹಾ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದಷ್ಟೇ ಬ್ಯಾಡ್‌ ನ್ಯೂಸ್.

ಟಾಪ್ ನ್ಯೂಸ್

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಐಪಿಎಲ್‌ ಫ್ರಾಂಚೈಸಿಗಳಿಗೆ ಇಂದು ಅಂತಿಮ ಗಡುವು

ಐಪಿಎಲ್‌ ಫ್ರಾಂಚೈಸಿಗಳಿಗೆ ಇಂದು ಅಂತಿಮ ಗಡುವು

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

1-gfdfdg

ಆರ್.ಅಶ್ವಿನ್ ಅಪೂರ್ವ, ಅಸಾಧಾರಣ ಸಾಧನೆ: ಕೋಚ್ ದ್ರಾವಿಡ್ ಶ್ಲಾಘನೆ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

3boy

ಕಾಣೆಯಾಗಿದ್ದ ವಿಶೇಷ ಚೇತನ ಬಾಲಕ ಹಳ್ಳದಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.