ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

Team Udayavani, Sep 21, 2020, 9:22 AM IST

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ದುಬೈ: 13ನೇ ಆವೃತ್ತಿಯ ಐಪಿಎಲ್ ಪಂದ್ಯವೇ ಹಲವು ರೋಚಕತೆಗೆ ಸಾಕ್ಷಿಯಾಯಿತು. ಮಾರ್ಕಸ್ ಸ್ಟೋಯಿನಸ್ ಸಾಹಸದಿಂದ ದಿಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ನಲ್ಲಿ ವಿಜಯಿ ಸಾಧಿಸಿತು. ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಆದರೆ ಈ ಪಂದ್ಯದಲ್ಲಿಅಂಪಾಯರ್ ಮಾಡಿದ ಒಂದು ತಪ್ಪು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಒಂದು ತಪ್ಪಿನಿಂದ ಪಂಜಾಬ್ ತಂಡ ಸೋಲನುಭವಿಸಬೇಕಾಯಿತು.

ಆಗಿದ್ದೇನು? 18.3 ನೇ ಎಸೆತವನ್ನು ಮಯಾಂಕ್ ಅಗರ್ವಾಲ್ ಕವರ್ ಏರಿಯಾಗೆ ಬಾರಿಸಿ ಎರಡು ರನ್ ಓಡಿದರು. ಆದರೆ ಮತ್ತೊಂದೆಡೆ ಇದ್ದ ಕ್ರಿಸ್ ಜೋರ್ಡಾನ್ ಎರಡನೇ ರನ್ ಓಡುವಾಗ ಕ್ರೀಸ್ ಮುಟ್ಟಿಲ್ಲ ಎಂದು ಅಂಪಾಯರ್ ಒಂದು ರನ್ ಕಡಿತಗೊಳಿಸಿದರು. ಎರಡು ರನ್ ಓಡಿದರೂ ತಂಡಕ್ಕೆ ಒಂದೇ ರನ್ ನೀಡಲಾಯಿತು. ಈ ಒಂದು ರನ್ ಅಂತಿಮವಾಗಿ ತಂಡಕ್ಕೆ ಮುಳುವಾಯಿತು. ಪಂದ್ಯ ಟೈ ಆಯಿತು. ಸೂಪರ್ ಓವರ್ ನಲ್ಲಿ ರಾಹುಲ್ ಪಡೆ ಸೋಲನುಭವಿಸಿತು.

ಇಷ್ಟೇ ಆಗಿದ್ದರೆ ದೊಡ್ಡ ವಿಷಯ ಆಗುತ್ತಿರಲಿಲ್ಲ. ಆದರೆ ಅಂಪಾಯರ್ ನಿತಿನ್ ಮೆನನ್ ನೀಡಿದ ಆ ತೀರ್ಪು ತಪ್ಪಾಗಿತ್ತು. ಜೋರ್ಡಾನ್ ಸರಿಯಾಗಿ ಕ್ರೀಸ್ ಮುಟ್ಟಿದ್ದು ರೀಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಐಸಿಸಿ ಎಲೈಟ್ ಪ್ಯಾನೆಲ್ ದರ್ಜೆಯ  ಅಂಪಾಯರ್ ನಿತಿನ್ ಮೆನನ್ ತಪ್ಪಿನಿಂದ ಪಂಜಾಬ್ ತಂಡ ಸೋಲಿನೊಂದಿಗೆ ಕೂಟ ಆರಂಭಿಸಬೇಕಾಯಿತು.

ತಪ್ಪು

ಸೆಹವಾಗ್ ಕಿಡಿ: ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕಿಂಗ್ಸ್ ಇಲೆವೆನ್ ಆಟಗಾರ ವೀರೇಂದ್ರ ಸೆಹವಾಗ್,” ಮ್ಯಾನ್ ಆಫ್ ದಿ ಮ್ಯಾಚ್ ಗೆ ನಿಮ್ಮ ಆಯ್ಕೆ ತಪ್ಪಾಗಿತ್ತು. ಈ ತೀರ್ಪು ನೀಡಿದ ಅಂಪಾಯರ್ ಗೆ ನೀವು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು” ಎಂದು ಹೇಳಿದ್ದಾರೆ.

ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡಾ ಈ ಬಗ್ಗೆ ಮಾತನಾಡಿದ್ದು, ಇಷ್ಟೆಲ್ಲಾ ಟೆಕ್ನಾಲಜಿ ಇರುವಾಗ ಈ ತಪ್ಪು ನಡೆಯಬಾರದು. ಥರ್ಡ್ ಅಂಪಾಯರ್ ಆದರೂ ಇದನ್ನು ಸರಿಪಡಿಸಬಹುದಿತ್ತು ಎಂದಿದ್ದಾರೆ.

ಟಾಪ್ ನ್ಯೂಸ್

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಮೆಕಲಮ್‌ಗೆ ಸೋಲಿನ ವಿದಾಯ

ಮೆಕಲಮ್‌ಗೆ ಸೋಲಿನ ವಿದಾಯ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

2

ಎಸ್ಸೆಸ್ಸೆಲ್ಸಿ; ಶೇ.84.95 ಫಲಿತಾಂಶ ದಾಖಲಿಸಿದ ಜಿಲ್ಲೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

bc-road

ಬಿ.ಸಿ.ರೋಡ್‌: ನೀರಲ್ಲೇ ಬಸ್‌ಗೆ ಕಾಯಬೇಕಾದ ಸ್ಥಿತಿ

manikkara

ಅಂದು ಬಿಸಿಲಾಯಿತು ಇಂದು ಮಳೆಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ

kallumutlu

ವಿವಿಧೆಡೆ ಮುಂದುವರಿದ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.