ಪಂಚಭೂತಗಳೊಂದಿಗೆ ಒಡನಾಡುವ ವಾನಪ್ರಸ್ಥ


Team Udayavani, Nov 30, 2020, 8:32 AM IST

ಪಂಚಭೂತಗಳೊಂದಿಗೆ ಒಡನಾಡುವ ವಾನಪ್ರಸ್ಥ

ಸಾಂದರ್ಭಿಕ ಚಿತ್ರ

ಈ ಭೂಮಿಗೆ ಮರ್ತ್ಯಲೋಕ ಎಂಬ ಹೆಸರೂ ಇದೆ. ಇಲ್ಲಿ ಜೀವ ತಳೆಯುವ ಎಲ್ಲರಿಗೂ ಮೃತ್ಯು ಖಚಿತ ಎಂಬುದನ್ನು ಹೇಳುವ, ನೆನಪಿಸುವ ಹೆಸರು ಅದು. ಇಲ್ಲಿ ಹುಟ್ಟುವ ಯಾರೂ, ಯಾವುದೂ ಶಾಶ್ವತ ವಲ್ಲ; ಅಸುವನ್ನು ನೀಗಿ ಭೂಮಿಗೆ ಮರಳ ಬೇಕು ಎಂಬರ್ಥವಿದೆ “ಮರ್ತ್ಯಲೋಕ’ಕ್ಕೆ.

ಜನರು ಐಹಿಕ ಬದುಕಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಬಳಿಕ “ವಾನಪ್ರಸ್ಥ’ಕ್ಕೆ ತೆರಳುವ ಕಥೆಗಳನ್ನು ಪುರಾಣ ಗಳಲ್ಲಿ ಕೇಳಿದ್ದೇವೆ. ನಾಲ್ಕು ಆಶ್ರಮ ಪರಿಕಲ್ಪನೆ ಗಳಲ್ಲಿ ಇದೂ ಒಂದು. ವಾನಪ್ರಸ್ಥ ಎಂದರೆ ಅರಣ್ಯದಲ್ಲಿ ವಾಸವಾಗಿರುವುದು ಎಂಬರ್ಥ. ಅದುವರೆಗೆ ಲೌಕಿಕದ ಜಂಜಡಗಳಲ್ಲಿ ಮುಳುಗಿದ್ದ ದೇಹ ಮತ್ತು ಮನಸ್ಸಿಗೆ “ಈ ಜೀವನ ಶಾಶ್ವತವಲ್ಲ’ ಎಂಬುದನ್ನು ನೆನಪಿಸಿ ಕೊಡುವ ಘಟ್ಟ ಇದು. ವಾನಪ್ರಸ್ಥವು ಅರಣ್ಯ ವಾಸವೇ ಆಗಿರಬೇಕಾಗಿಲ್ಲ. ನಾಲ್ಕು ಗೋಡೆ ಗಳಿಂದ ಹೊರಗೆ ಜೀವನ ನಡೆಸುವುದು ವಾನಪ್ರಸ್ಥ.

ಮನೆ ಎನ್ನುವುದು ಭದ್ರವಾದ ಒಂದು ಪೆಟ್ಟಿಗೆ. ಅದರೊಳಗೆ ಜೀವಿ ಸುವುದು ಅಮರ್ತ್ಯರು ಎಂಬ ಸುಳ್ಳು ನಂಬಿಕೆಯನ್ನು ಸೃಷ್ಟಿಸುತ್ತದೆ. ಮನೆಯ ನಾಲ್ಕು ಗೋಡೆಗಳ ಹೊರಗೆ ಜೀವಿಸುವುದು ಎಂದರೆ ಪಂಚಭೂತಗಳಿಗೆ ನಿಕಟ ವಾಗಿರುವುದು. ಅದು ಈ ದೇಹ ಮತ್ತು ಮನಸ್ಸಿಗೆ “ನೀನು ಚಿರಂಜೀವಿಯಲ್ಲ’ ಎಂಬುದನ್ನು ನೆನಪು ಮಾಡಿಕೊಡುತ್ತದೆ. ವಾನಪ್ರಸ್ಥದ ಮೂಲ ಆಶಯ ಇದು.

ನಾವು ಮನೆಯನ್ನು ಕಟ್ಟಿಕೊಳ್ಳಲಾರಂಭಿ ಸಿದ್ದು ಅಮರ್ತ್ಯರಾಗಿ ಉಳಿಯುವುದಕ್ಕಲ್ಲ. ನಮ್ಮ ಸಂತತಿ ಅಂದರೆ ನಮಗೆ ಮಕ್ಕಳಾದಾಗ ಕೆಲವು ವರ್ಷಗಳ ಕಾಲ ಅವರಿಗೆ ಸುರಕ್ಷಿತ ವಾತಾವರಣ, ಭದ್ರತೆ ಅಗತ್ಯವಾಗಿರುತ್ತದೆ. ಸಂತತಿಯು ಪ್ರಬುದ್ಧವಾಗುವ ತನಕ, ಅಂದರೆ ಹೊರ ಪ್ರಪಂಚದಲ್ಲಿ ಸ್ವತಂತ್ರವಾಗಿ ಬದುಕುಳಿಯುವುದಕ್ಕೆ ಅಗತ್ಯವಾದ ಶಕ್ತಿ ಸಾಮರ್ಥ್ಯಗಳನ್ನು ಗಳಿಸುವ ತನಕ ಅದನ್ನು ರಕ್ಷಿಸುವ ಪ್ರವೃತ್ತಿ ಎಲ್ಲ ಜೀವಸಂಕುಲ ಗಳಲ್ಲಿಯೂ ಕಂಡುಬರುತ್ತದೆ. ಹಕ್ಕಿ ಗೂಡು ಕಟ್ಟುವುದು ಇದಕ್ಕಾಗಿ. ನಾವು ಅಂದರೆ ಮನುಷ್ಯರೂ ಮನೆ ಕಟ್ಟಿಕೊಳ್ಳಲು ತೊಡಗಿದ್ದು ಇದಕ್ಕಾಗಿಯೇ.

ಇವತ್ತು ಏನಾಗಿದೆ ಎಂದರೆ, ಎಷ್ಟು ಸಾಧ್ಯವೋ ಅಷ್ಟು ಭದ್ರವಾದ ಮನೆಗಳನ್ನು ಕಟ್ಟಿಕೊಳ್ಳಲಾರಂಭಿಸಿದ್ದೇವೆ. ಇದರಿಂದ ಬೇರೂರುವುದು ನಾವು ಶಾಶ್ವತ ಎಂಬ ಸುಳ್ಳು. ಇದು ಸುಳ್ಳು ಎಂಬುದು ಮನಸ್ಸಿಗೆ ಮಾತ್ರ ಅಲ್ಲ; ಎಲ್ಲ ಆಯಾಮಗಳಿಂದಲೂ ಮನ ವರಿಕೆ ಆಗಬೇಕಾದರೆ ನಾಲ್ಕು ಗೋಡೆಗಳಿಂದ ಹೊರಗೆ ಬದುಕಬೇಕು. ಇದರರ್ಥ ನಾಳೆ ಯಿಂದ ಮನೆಗಳನ್ನು ಕೆಡವಿ ಹಾಕಿ ಬಟಾಬಯಲಿನಲ್ಲಿ ಜೀವಿಸಬೇಕು ಎಂದಲ್ಲ. ನಾವು ಪ್ರಕೃತಿಗೆ, ಪಂಚಭೂತಗಳಿಗೆ, ಭೂಮಿ ತಾಯಿಗೆ ನಿಕಟವಾಗಿ ಬದುಕಿದಾಗ ಮಾತ್ರ ಈ ಸತ್ಯ ಮನವರಿಕೆಯಾಗಲು ಸಾಧ್ಯ. ವಾನಪ್ರಸ್ಥ ಎಂದರೆ ಇದೇ.

ಭೂಮಿ ಮತ್ತು ಪಂಚ ಭೂತಗಳಿಗೆ ಹತ್ತಿರವಾಗಿ ಜೀವಿಸುವುದರಿಂದ ದೇಹ ಮತ್ತು ಮನಸ್ಸಿಗೆ ಕ್ಷಣಕ್ಷಣಕ್ಕೂ ತನ್ನ ನಶ್ವರತೆ ನೆನಪಾಗುತ್ತ ಇರುತ್ತದೆ. ಈ ಜೀವನ ನೀರ ಮೇಲಿನ ಒಂದು ಗುಳ್ಳೆ ಯಂತೆ ಎಂಬುದು ಗಾಢವಾಗಿ ಮನದಟ್ಟಾಗುತ್ತದೆ. ಭೂಮಿ ನಮ್ಮನ್ನು ಪೊರೆಯುವ ತಾಯಿ ಮತ್ತು ಅಂತಿಮವಾಗಿ ನಾವೆಲ್ಲ ಶಾಶ್ವತ ವಿಶ್ರಾಂತಿ ಪಡೆಯುವ ಏಕೈಕ ಮಾತೆ. ಇದು ದೇಹ ಮತ್ತು ಮನಸ್ಸಿಗೆ ಚೆನ್ನಾಗಿ ಮನವರಿಕೆ ಆಗಿದ್ದರೆ ಮಾತ್ರ ವಿನಮ್ರವಾದ, ಸದುಪಯೋಗಿ ಯಾದ, ಹೃತೂ³ರ್ವಕವಾದ ಬದುಕನ್ನು ಬದುಕುವುದು ಸಾಧ್ಯವಾಗುತ್ತದೆ. ಇದಕ್ಕಾಗಿ “ವಾನಪ್ರಸ್ಥ’ ಅಗತ್ಯ.

ವಾನಪ್ರಸ್ಥಕ್ಕೆ ಹೋಗುವುದು ಎಂದರೆ ಅರಣ್ಯಕ್ಕೆ ತೆರಳುವುದು, ಸಾಯಲಿಕ್ಕೆ ಹೋಗು ವುದು ಎಂದರ್ಥವಲ್ಲ. ನಾವು ಮರ್ತ್ಯರು ಎಂಬುದನ್ನು ಮನವರಿಕೆ ಮಾಡಿಕೊಳ್ಳುವು ದಕ್ಕಾಗಿ ಪ್ರಕೃತಿ, ಭೂಮಿ, ಪಂಚಭೂತಗಳಿಗೆ ನಿಕಟವಾಗಿ ಬದುಕುವುದು ಎಂಬರ್ಥ.

 

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ :

ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು  [email protected]ಗೆ ಕಳುಹಿಸಬಹುದು.

ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.