CONNECT WITH US  

ಒಂದು ಹನಿ ನೀರು ಇದ್ದರೆ ಸಾಲ ಕೊಡುತ್ತೀರಾ?

ನೀತಿ ಆಯೋಗದ ಇತ್ತೀಚಿನ ವರದಿಯ ಅಂಶ ಗಮನಿಸಿದರೆ ಹತ್ತು ವರ್ಷಗಳಲ್ಲಿ ಕನಿಷ್ಠ ಒಂದಿಷ್ಟು ನಗರಗಳಾದರೂ "ನಮ್ಮಲ್ಲಿ ನೀರು ಲಭ್ಯವಿಲ್ಲ' ಎಂಬ ಫ‌ಲಕಗಳನ್ನು ತೂಗು ಹಾಕಬೇಕು. ಅದರೊಂದಿಗೇ "ಒಂದು ಹನಿ ನೀರು ಇದ್ದರೆ ಸಾಲ ಕೊಡಿ' ಎಂಬ ಫ‌ಲಕಗಳನ್ನೂ ಹಾಕಬೇಕು! 

ಅರೆನಗರ ಅಭಿವೃದ್ಧಿಗೆ ಮಹಾನಗರ ಮಾದರಿಯೇ?

ದೇಶದ ಅರೆ ನಗರ ಮತ್ತು ಪಟ್ಟಣಗಳಿಗೆ ಶ್ರೇಷ್ಠ ಪರಂಪರೆಯನ್ನು ಹಾಕಿಕೊಡುವ ಹೊಣೆಗಾರಿಕೆ ನಮ್ಮ ಮಹಾನಗರಗಳದ್ದಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಅರೆನಗರಗಳು-ಪಟ್ಟಣಗಳ ಭವಿಷ್ಯ ಭದ್ರವಾಗಬೇಕೆಂದರೆ ಇಡಬೇಕಾದ ಹೆಜ್ಜೆಯೇ ಬೇರೆಯಾಗಬೇಕು.

 ಒಂದೇ ದಿನದಲ್ಲಿ ರೋಮ್‌ ನಿರ್ಮಿಸಲಿಲ್ಲ

ಸಾಂದರ್ಭಿಕ ಚಿತ್ರ

ನಮ್ಮ ನಗರಗಳನ್ನು ಉಳಿಸಿಕೊಳ್ಳಲು ನಾವು ಬೆಟ್ಟ ಹತ್ತಬೇಕಾಗಿಲ್ಲ, ಗುಡ್ಡ ಕಡಿಯಬೇಕಾಗಿಲ್ಲ. ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿದರೆ ಸಾಕು. ನಮ್ಮಲ್ಲೇ ಸುಧಾರಣೆಯ ಚಳವಳಿಯನ್ನು ಆರಂಭಿಸಿಕೊಂಡರೆ ನಗರಗಳನ್ನು ಜೀವಂತವಾಗಿರಿಸಿಕೊಳ್ಳಬಹುದು. ಅದಕ್ಕೆ ಮುಹೂರ್ತ ಕಾಯುತ್ತಾ ಕುಳಿತುಕೊಳ್ಳಬೇಕಿಲ್ಲ.

ಬನ್ನಿ ಒಮ್ಮೆ ಹಳ್ಳಿಗಳತ್ತ ಸುತ್ತು ಹಾಕಿ ಬರೋಣ

ನಗರವೆಂಬ ದಂತಗೋಪುರದಿಂದ ಹೊರಗೆ ಬರುವುದು ಹೇಗೆ ಎಂಬ ಪ್ರಶ್ನೆ ಇಂದು ಎಲ್ಲರನ್ನೂ ಕಾಡುತ್ತಿರುವಂಥದ್ದು. ಅದಕ್ಕೆ ನಮಗೆ ಹಳ್ಳಿಗಳಲ್ಲಿ ಉತ್ತರವಿದೆ. ಅದನ್ನು ಹುಡುಕಿಕೊಳ್ಳಬೇಕಷ್ಟೆ.

ನಗರಗಳನ್ನು ಸೋಲಿಸದಿರೋಣ, ಬದಲಾಗಿ ಗೆಲ್ಲಿಸೋಣ

ನಗರಗಳನ್ನು ಸೋಲಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗೆಲ್ಲಿಸುವವರು ಕಡಿಮೆ. ನಾವೆಲ್ಲಾ ಸೇರಿ ಸಣ್ಣದೊಂದು ಪ್ರಯತ್ನ ಮಾಡಿದರೆ ಪ್ರತಿ ನಗರಗಳೂ ಅವ್ಯವಸ್ಥೆಯ ವಿರುದ್ಧ ಗೆಲ್ಲುತ್ತವೆ. ಅದು ಸಾಧ್ಯವಾಗಬೇಕೆಂಬುದು ಎಲ್ಲರ ಆಶಯ.

ನಮ್ಮ ನಗರಗಳ ಆರೋಗ್ಯದ ಕುರಿತು ಬಹಳಷ್ಟು ಯೋಚಿಸಿದ್ದೇವೆ, ಯೋಚಿಸುತ್ತಿರುತ್ತೇವೆ. ಆದರೆ ಕಾರ್ಯೋನ್ಮುಖವಾಗುವುದು ಎಷ್ಟರಮಟ್ಟಿಗೆ ಎಂದು ಲೆಕ್ಕ ಹಾಕುವಾಗಲೆಲ್ಲ ಸೋತಿದ್ದೇವೆ. ಅಂದಾಜಿನ ಲೆಕ್ಕದಲ್ಲೇ ಅಳೆದು ಸುರಿದೂ ಮಾತನಾಡಿದರೂ ಕೊನೆಗೆ ಫ‌ಲಿತಾಂಶದ ಲೆಕ್ಕದಲ್ಲಿ ಹೇಳಲು ಹೊರಟಾಗ ಸಿಗುವುದು ದೊಡ್ಡ ಸೊನ್ನೆಯ ಹೊರತು ಬೇರೇನೂ ಅಲ್ಲ. ಇದು ಈ ಹೊತ್ತಿನ ವರ್ತಮಾನ. 

ಇದ್ದದ್ದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಕಡ ಕೇಳಿದವನ ಕಥೆ

ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ಮಹಾನಗರಗಳದ್ದಾಗುತ್ತಿದೆ. ಬೆಂಗಳೂರು ಸಣ್ಣದೊಂದು ಉದಾಹರಣೆ. ಬೇರೆ ಮಹಾನಗರಗಳದ್ದೂ ಅದೇ ಕಥೆ. ಈ ಮಧ್ಯೆಯೂ ನಾವು ನಡೆಯಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ.

ನಾವು ಇದನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ಒಂದು ಬಗೆಯಲ್ಲಿ  ಪರಿಸರದ ಅಸಮರ್ಪಕ ನಿರ್ವಹಣೆ ಎಂದು ಕರೆದು ಬಿಡಬಹುದೇನೋ. ಇನ್ನೊಂದೆಡೆ ಪರಿಸರದ ದುರ್ಬಳಕೆ ಎಂದು ಹೇಳಿಯೂ ತಣ್ಣಗಾಗಬಹುದು. ಆದರೆ ಈ ವ್ಯಾಖ್ಯಾನಗಳಿಗಿಂತ ಅಥವಾ ಅರ್ಥೈಸುವಿಕೆಗಿಂತ ಭೀಕರವಾದ ಅಪಾಯ ನಮ್ಮ ಕಾಲ ಕೆಳಗೇ ಘಟಿಸುತ್ತಿದೆ. ಅದನ್ನು ಅರಿಯಲು ಪ್ರಯತ್ನಿಸದೇ ನಾವು ವೃಥಾ ಚರ್ಚೆಯಲ್ಲೇ ಮುಳುಗುತ್ತಿದ್ದೇವೆಯೇ ಎಂದೂ ಅನಿಸಿದ್ದುಂಟು. 

ನಗರಗಳಲ್ಲಿ ಮಳೆಗಾಲ ಗಡಗಡ ನಡುಗುವ ಕಾಲ! 

ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು.

ಶಿಮ್ಲಾವನ್ನು ಪ್ರೀತಿಸುವುದಾದರೆ ದಯವಿಟ್ಟು ಸ್ವಲ್ಪ ದಿನ ಹೋಗಬೇಡಿ

ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು. 

ಮೇ   - ಜೂನ್‌ ಬಂತೆಂದರೆ ನಾವು ಯಾವುದೋ ಗಿರಿಧಾಮದತ್ತ ಮುಖ ಮಾಡುತ್ತೇವೆ. ಮಕ್ಕಳಿಗೂ ರಜಾ ಸಮಯ, ವಾತಾವರಣವೂ ಬಿಸಿ. ಒಂದೆರಡು ದಿನವಾದರೂ ತಣ್ಣಗೆ ಇದ್ದು ಬರೋಣ ಎಂದು ಗಿರಿಧಾಮಗಳ ವಿಳಾಸವನ್ನು ಹುಡುಕುತ್ತೇವೆ. ಅದರಲ್ಲೂ ಶಿಮ್ಲಾ, ಕುಲು, ಮನಾಲಿ ತಣ್ಣಗಿರಲು ಹೇಳಿ ಮಾಡಿಸಿದ ಸ್ಥಳವೆಂದು ಸಾಬೀತಾಗಿ ಹೋಗಿದೆ. ಅಲ್ಲಿನ ನಿಸರ್ಗರಮ್ಯತೆ, ವಾತಾವರಣವೆಲ್ಲವೂ ಬಹಳ ಮುದ ನೀಡುವಂಥದ್ದು. ಹಾಗಾಗಿ ಎಲ್ಲರ ಆಯ್ಕೆಯ ಸ್ಥಳವಾಗಿದೆ ಅವು. ಹಾಗೆಯೇ ತಮಿಳುನಾಡಿನ ಊಟಿ (ಉದಕಮಂಡಲಂ) ಇರಬಹುದು. 

Pages

Back to Top