CONNECT WITH US  

ಬಜೆಟ್‌ 2019 - ಆದಾಯವನ್ನು 5 ಲಕ್ಷದೊಳಗಿಡುವ ಹೂಡಿಕೆಗಳು 

ಕಳೆದ ವಾರದ ಆಂಕಣದಲ್ಲಿ 87ಎ ರಿಯಾಯಿತಿ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಅದು ರೂ. 5 ಲಕ್ಷದ ಒಳಗಿನ "ಕರಾರ್ಹ ಆದಾಯ' ಇರುವವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನವೂ ತಮ್ಮ ಕರಾರ್ಹ ಆದಾಯವನ್ನು ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಲು ಈ ಕೆಳಗಿನ ಹೂಡಿಕೆ/ವೆಚ್ಚಗಳನ್ನು ಬಳಸಿಕೊಳ್ಳಬಹುದು.

1. ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ತಮ್ಮ ಸಂಬಳ ಅಥವಾ ಪೆನ್ಶನ್‌ ಮೊತ್ತದಿಂದ ರೂ. 50,000ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ.

ಬಜೆಟ್‌ 2019 - 87ಎ ರಿಬೇಟ್‌ ಮತ್ತು ಮುಂದಿನ ಹಾದಿ

ತೆರಿಗೆ ವಿನಾಯಿತಿಯ ಮಿತಿಯನ್ನು  (Tax exemption limit) ಹೆಚ್ಚಳ ಮಾಡದೆ ಇದ್ದ ಕಾರಣ ಇದು ಎಲ್ಲಾಮಟ್ಟದ ಆದಾಯದವರಿಗೂ ಅನ್ವಯವಾಗುವುದಿಲ್ಲ. ಕೇವಲ ಒಂದು ಸ್ಲಾಬ್‌ನವರೆಗೆ ಮಾತ್ರ ಅನ್ವಯಿಸುವಂತೆ ರಿಯಾಯಿತಿ ನೀಡಿದ್ದಾರೆ. ಕರ ವಿನಾಯಿತಿಗೂ ಕರ ರಿಯಾಯಿತಿಗೂ ಇರುವ ವ್ಯತ್ಯಾಸ ಇದೇ. ಆದರೆ ಈ ರೀತಿ ಏಕೆ ಮಾಡಿದರು? ಎಂದು ಯಾರಾದರೂ ಕೇಳಬಹುದು. ಸರಕಾರದ ಎಲ್ಲಾ ಸೌಲಭ್ಯಗಳೂ ಇರುವುದೇ ಹಾಗೆ. ಆದಾಯ ತೆರಿಗೆ ಕೆಳ ಮಧ್ಯಮ ವರ್ಗಕ್ಕೆ ಕಡಿಮೆ ಮತ್ತು ಹೆಚ್ಚಿನ ಆದಾಯ ಇರುವವರಿಗೆ ಜಾಸ್ತಿ. 

ಬಜೆಟ್‌ 2019 - ಟ್ಯಾಕ್ಸ್‌ ರಿಬೇಟ್‌ ಎಂಬ ಕರ ಮನ್ನಾ ಯೋಜನೆ

2019ರ ಈ ಮಧ್ಯಾಂತರ ಬಜೆಟ್ಟಿನಲ್ಲಿ ಆದಾಯ ಸ್ಲಾಬ್‌ ಮತ್ತು ಕರ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಶೂನ್ಯ ಕರದ ಬೇಸಿಕ್‌ ಸ್ಲಾಬ್‌ ಆಗಿದ್ದ ರೂ 2.5 ಲಕ್ಷದ ಮಟ್ಟವನ್ನು (ಹಿರಿಯ ನಾಗರಿಕರಿಗೆ 3 ಲಕ್ಷ, ಅತಿ ಹಿರಿಯ ನಾಗರಿಕರಿಗೆ 5 ಲಕ್ಷ) ಕಿಂಚಿತ್ತೂ ಏರಿಸಲಾಗಿಲ್ಲ. ಕರ ದರಗಳಾದ ಶೇ.5, ಶೇ.20 ಹಾಗೂ ಶೇ.30 ಮತ್ತದರ ಮೇಲಿನ ಶೇ.10/ಶೇ.15ಸರ್ಚಾರ್ಜ್‌, ಶೇ.4 ಸೆಸ್‌ ಗಳನ್ನು ಕಿಂಚಿತ್ತೂ ಇಳಿಸಲಾಗಿಲ್ಲ. ಆದರೂ ಮಧ್ಯಮ ವರ್ಗಕ್ಕೆ ಅನ್ವಯಿಸುವಂತೆ ಸಂಪೂರ್ಣ ಕರ ವಿನಾಯಿತಿ ನೀಡಿದ್ದಾರೆ. ಅದು ಹೇಗೆ ಅಂದರೆ, ಈ ಬಜೆಟ್ಟಿನಲ್ಲಿ ನೀಡಲಾಗಿದ್ದು ಕರ ರಿಯಾಯಿತಿ, ಕರ ವಿನಾಯಿತಿ ಅಲ್ಲ. ಅದು "ಟ್ಯಾಕ್ಸ್‌ ರಿಬೇಟ್‌' ತರಗತಿಗೆ ಸೇರಿದ್ದು - ಒಂದು ರೀತಿಯ ಕರ ಮನ್ನಾ ಯೋಜನೆ!

ಎನ್‌ಪಿಎಸ್‌ Vs ಯುನಿಟ್ ಲಿಂಕ್ಡ್ ಪೆನ್ಶನ್‌ ಸ್ಕೀಂ

ಸಾಂದರ್ಭಿಕ ಚಿತ್ರ

ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಚಲಿತವಾಗುವ ಪೆನ್ಶನ್‌ ಪ್ಲಾನ್‌ ಎಂದರೆ ವಿಮಾ ಕಂಪೆನಿಗಳು ಮಾರುವ ಯುನಿಟ್ ಲಿಂಕ್ಡ್ ಪೆನ್ಶನ್‌ ಪ್ಲಾನ್‌. ಇದನ್ನು ಯುಎಲ್ಪಿಪಿ ಎನ್ನುತ್ತಾರೆ. ಸ್ಪಷ್ಟವಾಗಿ ಇದು ಪ್ರತ್ಯೇಕವಾಗಿ ಲಭ್ಯವಿರುವ ಯುಲಿಪ್‌ (ಯುನಿಟ್ ಲಿಂಕ್ಡ್ ಇನ್ಶೂರೆನ್ಸ್‌ ಪ್ಲಾನ್‌) ಅಲ್ಲದಿದ್ದರೂ ಸರಳವಾಗಿ ಬಹಳಷ್ಟು ಜನ ಇದನ್ನೂ ಕೂಡಾ ಯುಲಿಪ್‌ ಎಂದು ಹೇಳುವುದುಂಟು. ಯುಲಿಪ್‌ನಲ್ಲಿ ಇನ್ಶೂರೆನ್ಸ್‌ ಅಥವಾ ವಿಮೆ ಮಾತ್ರ ಇರುತ್ತದೆ. ಆದರೆ ಯುಎಲ್ಪಿಪಿಯಲ್ಲಿ ವಿಮೆಯ ಜೊತೆಗೆ ಪೆನ್ಶನ್‌ ಸೌಲಭ್ಯವೂ ಇರುತ್ತದೆ. ಬಿರ್ಲಾ ಸನ್‌ ಲೈಫ್, ಎಚ್‌ಡಿಎಫ್ಸಿ ಲೈಫ್, ಐಸಿಐಸಿಐ ಪ್ರುಡೆನ್ಷಿಯಲ್‌ ಇತ್ಯಾದಿ ವಿಮಾ ಕಂಪೆನಿಗಳು ಈ ಪಾಲಿಸಿಯನ್ನು ಮಾರುತ್ತವೆ.

ನ್ಯಾಶನಲ್‌ ಪೆನ್ಶನ್‌ ಸ್ಕೀಮಿನ ಪ್ರತಿಫ‌ಲದ ನಾನಾ ಮುಖಗಳು 

(ಕಳೆದ ವಾರದಿಂದ) 
ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್‌ ಡೆಟ್‌ (ಸರಕಾರಿ ಸಾಲಪತ್ರಗಳು), C ಅಥವಾ ಕಾರ್ಪೋರೇಟ್‌ ಡೆಟ್‌ (ಖಾಸಗಿ ಕಂಪೆನಿಗಳ ಸಾಲಪತ್ರಗಳು) ಅಥವಾ A ಅಥವಾ ಆಲ್ಟರ್ನೇಟಿವ್‌ ಫ‌ಂಡುಗಳು.

ಎನ್‌ಪಿಎಸ್‌- ಇದು ಎಂದೆಂದೂ ಮುಗಿಯದ ಕತೆ

(ಕಳೆದ ವಾರದಿಂದ) - ಕಳೆದ ವಾರ ಸಾರ್ವಜನಿಕರ ಎನ್‌ಪಿಎಸ್‌ ಯೋಜನೆಯ (Citizen model) ಬಗ್ಗೆ ಕೆಲವು ಮಾಹಿತಿ ನೀಡಲಾಗಿತ್ತು. ಈ ಬಾರಿ ಅಂತಹ ಸಾರ್ವಜನಿಕ ಮಾದರಿಯಲ್ಲಿನ ಖಾತೆಯ ಮುಂದುವರಿಕೆ, ಮುಕ್ತಾಯ, ಭಾಗಶಃ ಹಿಂಪಡೆತ ಹಾಗೂ ಕರ ವಿನಾಯಿತಿ ಬಗ್ಗೆ ಚರ್ಚೆ ಮಾಡೋಣ: 

ಮುಂದುವರಿಕೆ
ನಿಮ್ಮ ಖಾತೆಯನ್ನು ಯಾವುದೇ ಹಿಂಪಡೆತ/ಆನ್ಯೂಟಿ ಇಲ್ಲದೆ 70 ವರ್ಷದವರೆಗೆ ಜೀವಂತ ಖಾತೆಯಾಗಿ ದೇಣಿಗೆ ಕಟ್ಟುತ್ತಾ ಮುಂದುವರಿಸಿಕೊಂಡು ಹೋಗಬಹುದು. ಈ ಅವಧಿಯಲ್ಲಿ ನಿಮ್ಮ ಖಾತೆ ಎಲ್ಲಾ ರೀತಿಯಲ್ಲೂ ಹಿಂದಿನ ಸಾಮಾನ್ಯ ಖಾತೆಯಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಕರ ವಿನಾಯಿತಿ ಮತ್ತಿತರ ಸೌಲಭ್ಯಗಳು ದೊರಕುತ್ತವೆ. 

ಎನ್‌ಪಿಎಸ್‌ ಎಂಬ ಅಗೆದಷ್ಟೂ ಮುಗಿಯದ ಬೆಟ್ಟ

ಕಳೆದ ವಾರ ಎನ್‌.ಪಿ.ಎಸ್‌. ಬಗ್ಗೆ ಬರೆದದ್ದು ಹಲವರ ಕುತೂಹಲವನ್ನು ಕೆರಳಿಸಿದೆ. ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌) ಎನ್ನುವುದು ಒಂದು ಉತ್ತಮ ಯೋಜನೆಯೇ ಆದರೂ ಅದಕ್ಕೆ 3 ವಿಭಿನ್ನ ಮುಖಗಳಿವೆ. ಕೇಂದ್ರ ಸರಕಾರದ ಮಾದರಿ, ರಾಜ್ಯ ಸರಕಾರದ ಮಾದರಿ ಹಾಗೂ ಸಾರ್ವಜನಿಕರ ಮಾದರಿ. ಈ ಮೂರೂ ಮಾದರಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಹಿಂದೆ ಜಾಸ್ತಿ ವ್ಯತ್ಯಾಸಗಳಿದ್ದು ಈಗೀಗ ಆ ವ್ಯತ್ಯಾಸಗಳು ಕಡಿಮೆಯಾಗಿವೆ ಆದರೂ ವ್ಯತ್ಯಾಸಗಳಿವೆ. ಬಹುತೇಕ ವ್ಯತ್ಯಾಸಗಳು ದೇಣಿಗೆ ಮತ್ತು ಹೂಡಿಕೆಯ ಶೈಲಿಗೆ ಸಂಬಂಧಪಟ್ಟವುಗಳು. ಆದರೂ ಬಹುತೇಕ ಅವುಗಳ ಮಧ್ಯೆ ಹೋಲಿಕೆಯೂ ಇವೆ.
 

ಚಳಿಗಾಲದಲ್ಲಿ ತಲೆ ಬಿಸಿಯೇರಿಸುವ ಹೂಡಿಕೆ ಲೆಕ್ಕಾಚಾರಗಳು 

ಚಳಿಗಾಲದ ಆ ಬೆಳಗ್ಗಿನ ದಿನಗಳು... ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ. ಅದು ಬಿಡಿ ಮನೆಯೊಳಗೇನೇ ಡ್ರಾಯಿಂಗ್‌ ರೂಮಿನಲ್ಲಿ ಕುಳಿತು ಪೇಪರು ಮಗಚಲು ಆರಂಭಿಸಿದರೂ ಕೂಡಾ ಚಂಡಿಗಾಳಿ ತಣ್ಣಗೆ ಬೀಸಿ ನಿಮ್ಮ ಮೈಯೊಳಕ್ಕೆ ಚಳಿ ಇಳಿಸಲು ಪ್ರಯತ್ನಿಸುತ್ತಿರುತ್ತದೆ. ಬೆಳಗ್ಗೆ ಬೇಗನೆ ಎಚ್ಚರವಾಗಿ ಪುನಃ ನಿದ್ರೆ ಬಾರದೆ ಪೇಪರ್‌ ಮಗುಚುಹಾಕಿಕೊಂಡು ಕಾಲ ಹರಣ ಮಾಡುತ್ತಿ ರುವ ಸಂದರ್ಭದಲ್ಲಿ ಒಂದಿಷ್ಟು ಬಿಸಿಬಿಸಿ ಕಾಫಿ, ಜೊತೆಗೆ ಒಂದಷ್ಟು ಗರಿ ಗರಿ ಬೋಂಡಾ ಸ್ಯಾಂಕ್ಷನ್‌ ಆಗಬಹುದೇನೋ ಎಂಬ ಆಸೆ ಯಲ್ಲಿ ಅಡುಗೆಮನೆಯತ್ತ ನಿಮ್ಮ ಕಟಾಕ್ಷವನ್ನು ಹಾಯಿಸುತ್ತೀರಿ. ಆದರೆ ಅಡುಗೆಮನೆ ಬಾಗಿಲಿನ್ನೂ ತೆರೆದಿರುವುದಿಲ್ಲ. ಬಾಗಿಲನು ತೆರೆದು ಸೇವೆಯನು ಮಾಡೇ...

Pages

Back to Top