CONNECT WITH US  

ಹತ್ತು ವರ್ಷ 8% ನೀಡುವ "ವಯ ವಂದನ' ಯೋಜನೆ

ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫ‌ಲವೂ ಕೊಡುವ ಯೋಜನೆ ಯಾವುದಾದರೂ ಇದೆಯೇ? ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಸರಕಾರ ಪ್ರಾಯೋಜಕತ್ವದಿಂದ ಮಾತ್ರವೇ ಸಾಧ್ಯ. ಕೆಲ ವಾರಗಳ ಹಿಂದೆ 8.7% ಪ್ರತಿಫ‌ಲದ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್ ಸ್ಕೀಂ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ. ಇದೀಗ ಎಲ್‌ಐಸಿಯ ವತಿಯಿಂದ ಅಂತಹದ್ದೇ ಇನ್ನೊಂದು 8% ಪ್ರತಿಫ‌ಲ ನೀಡುವ "ವಯ ವಂದನ' ಯೋಜನೆಯ ಬಗ್ಗೆ ಚರ್ಚಿಸೋಣ.

ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುವ ಸರಕಾರ

ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ ಶೈಲಿಯಲ್ಲಿ ಬಜೆಟ್‌ ಮಂಡಿಸಲು ಆರಂಭಿಸಿದಳು. ಮಗರಾಯ ಲೆಕ್ಕದಲ್ಲಿ ಲೆಕ್ಕಕ್ಕೆ ಮಾತ್ರ ಎಂಬುದು ಮನೆಯವರಿಗೆ ಬಿಡಿ, ನಿಮಗೂ ಗೊತ್ತಿರುವ ವಿಚಾರ! ಇಂತಿಪ್ಪ ಆಸಕ್ತಿಹೀನ ಪತಿರಾಯ ಸ್ವಲ್ಪಕಾಲ ಪತ್ನಿಯ ಭಾಷಣವನ್ನು ಕೇಳುವ ನಾಟಕ ಮಾಡಿ ಒಂದೆರಡು ಬಾರಿ ಹೆಬ್ಟಾವಿನಂತೆ ದೊಡ್ಡದಾಗಿ ಬಾಯಿ ತೆರೆದು ಎಂಜಿಎಂ ಸಿನೆಮಾ ಕಂಪೆನಿಯ ಸಿಂಹದಂತೆ ಆಂ. . .' ಎಂದು ಸಶಬ್ದವಾಗಿ ಆಕಳಿಸಿ ರಿಮೋಟನ್ನು ಹುಡುಕಲು ಹೊರಟನು.

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌

ನಮ್ಮ ಗುರುಗುಂಟಿರಾಯರಿಗೆ ಬ್ಯಾಂಕ್‌ ವಿಚಾರವಾಗಿ ಉಂಟಾಗುವ ಕಿರಿಕಿರಿ ಕಡಿಮೆಯೇನಲ್ಲ. ತಮ್ಮ ಯೌವನದ ಕಾಲದಲ್ಲಿ ಚೆಕ್‌ ಲೀಫ್ ಹಿಡಕೊಂಡು ಬ್ಯಾಂಕು ಬ್ರಾಂಚುಗಳಲ್ಲಿ ಕ್ಯೂ ನಿಂತು ದುಡ್ಡು ತಗೊಂಡು ಮಾತ್ರ ಅನುಭವ ಇರುವ ರಾಯರಿಗೆ ಈ ಹೊಸ ಮಾದರಿಯ ಇಂಟರ್ನೆಟ್‌ ಬ್ಯಾಂಕ್‌, ಮೊಬೈಲ್‌ ಬ್ಯಾಂಕ್‌, ಎಸ್ಸೆಮ್ಮೆಸ್‌ ಬ್ಯಾಂಕ್‌ ಇತ್ಯಾದಿ ಬ್ಯಾಂಕುಗಳು ಅರ್ಥವೇ ಆಗಲೊಲ್ಲದು. ಇತ್ತೀಚೆಗೆ ಮಿಸ್ಡ್ ಕಾಲ್‌ ಬ್ಯಾಂಕ್‌ ಬೇರೆ ಬಂದಿದೆ ಎಂದು ಎಲ್ಲೋ  ಕೇಳಿ "ಇದೇನಪ್ಪಾ ಈ ಪರಿ?' ಎಂದು ಗಾಬರಿ ಬಿದ್ದಿದ್ದಾರೆ. ಹೀಗೇ ಬಿಟ್ಟರೆ ಇನ್ನು ರಾಂಗ್‌ ನಂಬರ್‌ ಬ್ಯಾಂಕ್‌ ಬಂದು ಯಾರದ್ದೋ ದುಡ್ಡು ಯಾರಿಗೋ ಕ್ರೆಡಿಟ್‌ ಆಗಿ ಯಾವ ರಾದ್ಧಾಂತ ಆಗಲಿಕ್ಕಿದೆಯೋ ಎಂದು ಹೌಹಾರಿದ್ದಾರೆ. 

ಇಂದ ಕಾಲತ್ತಿಲೂ ಶೇ. 8.1 ನೀಡುವ ಸುಕನ್ಯಾ ಸಮೃದ್ಧಿ 

ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಬಹುದು. ಈ ಖಾತೆಯನ್ನು ಪಾಲಕರು ತೆರೆಯಬಹುದು. ಹೆತ್ತವರು ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. 

ಟ್ಯಾಕ್ಸಾಫೀಸಿನಿಂದ ಬರುವ ಲವ್‌ ಲೆಟರುಗಳು 

ನೋಟೀಸು ಬಂದ ಮರುದಿನ ಪೋಲೀಸರು ಅರೆಸ್ಟ್‌ ಮಾಡಿ ವಿಚಾರಣೆಯಿಲ್ಲದೆ ಜೈಲಿಗೆ ದೂಡುವುದಿಲ್ಲ.ಕಾನೂನಿನಡಿಯಲ್ಲಿ ನೊಟೀಸಿಗೆ ಉತ್ತರಿಸಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಕಾನೂನು ಪರಿಧಿಯ ಒಳಗೆಯೇ ಅಸೆಸೆ¾ಂಟ್‌ ನಡೆಯುತ್ತದೆ. ಅದನ್ನು ಒಪ್ಪುವ ಬಿಡುವ, ಕಾನೂನು ಹೋರಾಟ ನಡೆಸುವ ಹಕ್ಕು ನಿಮಗಿದೆ. 

ಇನ್ನಷ್ಟು ಕರ ಗೊಂದಲಗಳು ಮತ್ತು ಅವುಗಳ ನಿವಾರಣೆ

ಕೆಲವು ಉದ್ಯೋಗಸ್ಥರು ತಮ್ಮ ಸಂಬಳದಲ್ಲಿ ಟಿಡಿಎಸ್‌ ಸಂಪೂರ್ಣವಾಗಿ ಕಡಿತವಾಗಿದೆ, ಇನ್ನು ಕರಕಟ್ಟಲು ಯಾವುದೇ ಬಾಕಿ ಇಲ್ಲ ಎಂಬ ಕಾರಣಕ್ಕೆ ತಾವು ರಿಟರ್ನ್ ಫೈಲಿಂಗ್‌ ಕೂಡಾ ಮಾಡುವ ಅಗತ್ಯವಿಲ್ಲ ಎಂಬ ಭ್ರಮೆಯಲ್ಲಿ¨ªಾರೆ. ಆದರೆ ಈ ವಿಚಾರ ಸರಿಯಲ್ಲ. ಕರ ಹೇಳಿಕೆ ಅಥವಾ ರಿಟರ್ನ್ ಫೈಲಿಂಗ್‌ ಪ್ರತಿಯೊಬ್ಬ ಕರಾರ್ಹ ವ್ಯಕ್ತಿಯೂ ಸಲ್ಲಿಸಲೇ ಬೇಕು; "ಒಟ್ಟು ಆದಾಯ' ರೂ 2.5 ಲಕ್ಷ ಮೀರಿ ಇರುವವರು ರಿಟರ್ನ್ ಫೈಲಿಂಗ್‌ ಮಾಡಲೇ ಬೇಕು.

ಕರಪಾವತಿಯ ವೇಳಾಪಟ್ಟಿ, ಬಡ್ಡಿ, ರಿಟರ್ನ್ ಫೈಲಿಂಗ್‌ ಹಾಗೂ ವಿಳಂಬ ದಂಡ

ಕೆಲವೊಮ್ಮೆ ರಿಟರ್ನ್ ಫೈಲಿಂಗಿನ ಕೊನೆಯ ದಿನಾಂಕ ತಪ್ಪಿ ಹೋಗುತ್ತದೆ. ಈ ಬಾರಿ ಆಗಸ್ಟ್‌ 31ರಂದು ಕರ ಹೇಳಿಕೆ/ರಿಟರ್ನ್ ಫೈಲಿಂಗ್‌ ಮಾಡದಿದ್ದಲ್ಲಿ ಏನಾಗುತ್ತದೆ? ಇದರಲ್ಲಿ ಎರಡು ವಿಚಾರಗಳಿವೆ. ಕರಪಾವತಿ ಬಾಕಿ ಇಟ್ಟುಕೊಂಡು ಹೇಳಿಕೆ ಸಲ್ಲಿಸದೆ ಇರುವುದು ಮತ್ತು ಕರ ಬಾಕಿ ಇಲ್ಲದೆ ಕೇವಲ ಹೇಳಿಕೆ ಸಲ್ಲಿಕೆ ಬಾಕಿ ಇರುವಂಥದ್ದು. 

ಛೋಟಾ ಬಿಸಿನೆಸ್‌ ಮತ್ತು ಪ್ರೊಫೆಶನಲ್‌ ಆದಾಯಕ್ಕೆ ಸುಗಮ ತೆರಿಗೆ 

ಗುರುಗುಂಟಿರಾಯರು ತಮ್ಮ ಪೆನ್ಶನ್‌ ಆದಾಯದ ಒಂದೊಂದು ಪೈಯನ್ನೂ ಕ್ಯಾಲಿಕ್ಯುಲೇಟರಿನಲ್ಲಿ ಬಟನ್‌ ಒತ್ತೀ ಒತ್ತೀ ಒಳ ದಬ್ಬುತ್ತಾ ಟ್ಯಾಕ್ಸ್‌ ಲೆಕ್ಕ ಹಾಕುತ್ತಾ ದಿನಗಳೆಯುತ್ತಿದ್ದರೆ ಪಕ್ಕದ್ಮನೆ ಬಿಸ್ನೆಸ್‌ ಹುಡುಗ ದಿನಾ ಬೆಳಗ್ಗೆ ಎಂಬಂತೆ ಬೈಕ್‌ ಏರಿ ಆರಾಮವಾಗಿ ತಿರುಗಾಡುತ್ತಿದ್ದ. ಅಂದರೆ, ಜುಲೈ ಮಾಸದ ಕರಬಿಸಿ ಆತನಿಗಿನ್ನೂ ತಟ್ಟಿದಂತೆ ಕಾಣಿಸುತ್ತಿರಲಿಲ್ಲ. ಇದನ್ನು ನೋಡಿ ರಾಯರಿಗೆ ತಕ್ಕಮಟ್ಟಿಗೆ ಕನೂ#éಶನ್‌ ಉಂಟಾಯಿತು. ಬಹೂರಾಣಿಯೇ ಅಗಾಗ್ಗೆ ಹೇಳುತ್ತಿದ್ದಂತೆ ಪಕ್ಕದ್ಮನೆ ಹುಡುಗ ಅದೇನೋ ಹೊಸ ಬಿಸಿನೆಸ್‌ ಆರಂಭಿಸಿ ಒಳ್ಳೆ ಸಂಪಾದನೆಯನ್ನೂ ಮಾಡಿಕೊಳ್ತಾ ಇ¨ªಾನಂತೆ.

Pages

Back to Top