CONNECT WITH US  

ನ್ಯಾಶನಲ್‌ ಪೆನ್ಶನ್‌ ಸ್ಕೀಮಿನ ಪ್ರತಿಫ‌ಲದ ನಾನಾ ಮುಖಗಳು 

(ಕಳೆದ ವಾರದಿಂದ) 
ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್‌ ಡೆಟ್‌ (ಸರಕಾರಿ ಸಾಲಪತ್ರಗಳು), C ಅಥವಾ ಕಾರ್ಪೋರೇಟ್‌ ಡೆಟ್‌ (ಖಾಸಗಿ ಕಂಪೆನಿಗಳ ಸಾಲಪತ್ರಗಳು) ಅಥವಾ A ಅಥವಾ ಆಲ್ಟರ್ನೇಟಿವ್‌ ಫ‌ಂಡುಗಳು.

ಎನ್‌ಪಿಎಸ್‌- ಇದು ಎಂದೆಂದೂ ಮುಗಿಯದ ಕತೆ

(ಕಳೆದ ವಾರದಿಂದ) - ಕಳೆದ ವಾರ ಸಾರ್ವಜನಿಕರ ಎನ್‌ಪಿಎಸ್‌ ಯೋಜನೆಯ (Citizen model) ಬಗ್ಗೆ ಕೆಲವು ಮಾಹಿತಿ ನೀಡಲಾಗಿತ್ತು. ಈ ಬಾರಿ ಅಂತಹ ಸಾರ್ವಜನಿಕ ಮಾದರಿಯಲ್ಲಿನ ಖಾತೆಯ ಮುಂದುವರಿಕೆ, ಮುಕ್ತಾಯ, ಭಾಗಶಃ ಹಿಂಪಡೆತ ಹಾಗೂ ಕರ ವಿನಾಯಿತಿ ಬಗ್ಗೆ ಚರ್ಚೆ ಮಾಡೋಣ: 

ಮುಂದುವರಿಕೆ
ನಿಮ್ಮ ಖಾತೆಯನ್ನು ಯಾವುದೇ ಹಿಂಪಡೆತ/ಆನ್ಯೂಟಿ ಇಲ್ಲದೆ 70 ವರ್ಷದವರೆಗೆ ಜೀವಂತ ಖಾತೆಯಾಗಿ ದೇಣಿಗೆ ಕಟ್ಟುತ್ತಾ ಮುಂದುವರಿಸಿಕೊಂಡು ಹೋಗಬಹುದು. ಈ ಅವಧಿಯಲ್ಲಿ ನಿಮ್ಮ ಖಾತೆ ಎಲ್ಲಾ ರೀತಿಯಲ್ಲೂ ಹಿಂದಿನ ಸಾಮಾನ್ಯ ಖಾತೆಯಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಕರ ವಿನಾಯಿತಿ ಮತ್ತಿತರ ಸೌಲಭ್ಯಗಳು ದೊರಕುತ್ತವೆ. 

ಎನ್‌ಪಿಎಸ್‌ ಎಂಬ ಅಗೆದಷ್ಟೂ ಮುಗಿಯದ ಬೆಟ್ಟ

ಕಳೆದ ವಾರ ಎನ್‌.ಪಿ.ಎಸ್‌. ಬಗ್ಗೆ ಬರೆದದ್ದು ಹಲವರ ಕುತೂಹಲವನ್ನು ಕೆರಳಿಸಿದೆ. ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌) ಎನ್ನುವುದು ಒಂದು ಉತ್ತಮ ಯೋಜನೆಯೇ ಆದರೂ ಅದಕ್ಕೆ 3 ವಿಭಿನ್ನ ಮುಖಗಳಿವೆ. ಕೇಂದ್ರ ಸರಕಾರದ ಮಾದರಿ, ರಾಜ್ಯ ಸರಕಾರದ ಮಾದರಿ ಹಾಗೂ ಸಾರ್ವಜನಿಕರ ಮಾದರಿ. ಈ ಮೂರೂ ಮಾದರಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಹಿಂದೆ ಜಾಸ್ತಿ ವ್ಯತ್ಯಾಸಗಳಿದ್ದು ಈಗೀಗ ಆ ವ್ಯತ್ಯಾಸಗಳು ಕಡಿಮೆಯಾಗಿವೆ ಆದರೂ ವ್ಯತ್ಯಾಸಗಳಿವೆ. ಬಹುತೇಕ ವ್ಯತ್ಯಾಸಗಳು ದೇಣಿಗೆ ಮತ್ತು ಹೂಡಿಕೆಯ ಶೈಲಿಗೆ ಸಂಬಂಧಪಟ್ಟವುಗಳು. ಆದರೂ ಬಹುತೇಕ ಅವುಗಳ ಮಧ್ಯೆ ಹೋಲಿಕೆಯೂ ಇವೆ.
 

ಚಳಿಗಾಲದಲ್ಲಿ ತಲೆ ಬಿಸಿಯೇರಿಸುವ ಹೂಡಿಕೆ ಲೆಕ್ಕಾಚಾರಗಳು 

ಚಳಿಗಾಲದ ಆ ಬೆಳಗ್ಗಿನ ದಿನಗಳು... ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ. ಅದು ಬಿಡಿ ಮನೆಯೊಳಗೇನೇ ಡ್ರಾಯಿಂಗ್‌ ರೂಮಿನಲ್ಲಿ ಕುಳಿತು ಪೇಪರು ಮಗಚಲು ಆರಂಭಿಸಿದರೂ ಕೂಡಾ ಚಂಡಿಗಾಳಿ ತಣ್ಣಗೆ ಬೀಸಿ ನಿಮ್ಮ ಮೈಯೊಳಕ್ಕೆ ಚಳಿ ಇಳಿಸಲು ಪ್ರಯತ್ನಿಸುತ್ತಿರುತ್ತದೆ. ಬೆಳಗ್ಗೆ ಬೇಗನೆ ಎಚ್ಚರವಾಗಿ ಪುನಃ ನಿದ್ರೆ ಬಾರದೆ ಪೇಪರ್‌ ಮಗುಚುಹಾಕಿಕೊಂಡು ಕಾಲ ಹರಣ ಮಾಡುತ್ತಿ ರುವ ಸಂದರ್ಭದಲ್ಲಿ ಒಂದಿಷ್ಟು ಬಿಸಿಬಿಸಿ ಕಾಫಿ, ಜೊತೆಗೆ ಒಂದಷ್ಟು ಗರಿ ಗರಿ ಬೋಂಡಾ ಸ್ಯಾಂಕ್ಷನ್‌ ಆಗಬಹುದೇನೋ ಎಂಬ ಆಸೆ ಯಲ್ಲಿ ಅಡುಗೆಮನೆಯತ್ತ ನಿಮ್ಮ ಕಟಾಕ್ಷವನ್ನು ಹಾಯಿಸುತ್ತೀರಿ. ಆದರೆ ಅಡುಗೆಮನೆ ಬಾಗಿಲಿನ್ನೂ ತೆರೆದಿರುವುದಿಲ್ಲ. ಬಾಗಿಲನು ತೆರೆದು ಸೇವೆಯನು ಮಾಡೇ...

ಎನ್‌.ಪಿ.ಎಸ್‌.ನಲ್ಲಿ ಆಗಲಿರುವ ಜಾಮೂನ್‌ ಬದಲಾವಣೆಗಳು

ಇದು ಅತ್ಯಂತ ತಾಜಾ ಖಬರ್‌! ಇದಿನ್ನೂ ಕಾನೂನು ಆಗಿಲ್ಲ. ಆದರೆ ಅಗುವುದು ಖಚಿತ. ಹೆಚ್ಚಾಗಿ ಯಾವುದೇ ಮಾಹಿತಿ ಕಾನೂನಾಗಿ ನೋಟಿಫೈ ಆಗುವವರೆಗೆ ಅದರ ಬಗ್ಗೆ ಕಾಕುವಿನಲ್ಲಿ ಬರೆಯುವ ಪರಿಪಾಠ ನನಗೆ ಇಲ್ಲ. ಅದಕ್ಕೆ ಕಾರಣವೇನೆಂದರೆ ಕಾಕುವಿನಲ್ಲಿ ಒಂದು ಸಂಭಾವ್ಯ ವಿಚಾರವನ್ನು ಹಾಕಿದರು ಕೂಡಾ ಅದೇ ಅಂತಿಮ ವಾಸ್ತವ ಎಂಬ ಭಾವನೆ ಜನರಿಗೆ ಬರುತ್ತದೆ. ಅದರಿಂದ ಹಲವಾರು ಗೊಂದಲಗಳು ಉಂಟಾಗುವುದನ್ನು ತಪ್ಪಿಸಲು ಖಚಿತವಾಗಿ ಕಾನೂನು ಹೊರ ಬರುವವರೆಗೆ ಯಾವುದೇ ಮಾಹಿತಿಯನ್ನು ಕಾಕುವಿನಲ್ಲಿ ಬರೆಯುವ ಪದ್ಧತಿಯನ್ನು ನಾನು ಇಟ್ಟುಕೊಂಡಿಲ್ಲ. ಆದರೂ ಇದೊಂದು ಬಾಂಬ್‌ ನ್ಯೂಸ್‌! ಹಾಗಾಗಿ ಈ ಬಗ್ಗೆ ಒಂದಿಷ್ಟು ಕೊರೆಯಲೇ ಬೇಕು ಎನ್ನುವ ಆಸೆ ಎನ್ನ ಮನದಾಳದಲಿ ಅಂಕುರವಾಗಿದೆ.

ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ - ಈ ವರ್ಷದ ಪರಿಷ್ಕೃತ ಮಾಹಿತಿ

ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್‌ ಇತ್ಯಾದಿಗಳು ಆದಾಯ ಕರದ ಭಾಷೆಯಲ್ಲಿ "ಇತರ ಆದಾಯ' ಆಗುತ್ತದೆ. ಬಾಡಿಗೆ ಆದಾಯದಿಂದ ಅನ್ವಯ ರಿಯಾಯಿತಿಗಳನ್ನು ಕಳೆದು ಸಾಮಾನ್ಯ ರೀತಿಯಲ್ಲಿ ಸಂಬಳ, ಬಿಸಿನೆಸ್‌ ಇತ್ಯಾದಿ ಆದಾಯಗಳೊಂದಿಗೆ ಜೊತೆಗೂಡಿಸಿ ತೆರಿಗೆ ಕಟ್ಟಬೇಕು. 

ಹಿಂದು ಅವಿಭಕ್ತ ಕುಟುಂಬ ಎಂಬ "ಕರಪ್ರಸಾದ'  

ಗುರುಗುಂಟಿರಾಯರ ಕುಟುಂಬದಲ್ಲಿ ನಿವೃತ್ತರಾದ ಅವರನ್ನು ಬಿಟ್ಟರೆ ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರೇ. ಮಗರಾಯ ಒಂದು ಖಾಸಗಿ ಕಂಪೆನಿಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಸುಮಾರು ರೂ. 5 ಲಕ್ಷದಷ್ಟು ಸಂಪಾದನೆ ಇಟ್ಟುಕೊಂಡವನಾಗಿದ್ದಾನೆ. ಸೊಸೆಯಾದ ಬಹೂರಾನಿ ಒಂದು ಖಾಸಗಿ ಹೈ-ಫೈ ಬ್ಯಾಂಕಿನಲ್ಲಿ ಕಸ್ಟಮರ್‌ ರಿಲೇಶನ್‌ ಮ್ಯಾನೇಜರ್‌ ಅಂತೇನೋ ಆಗಿದ್ದು ಗಂಡನಿಂದಲೂ 1 ಲಕ್ಷ ಜಾಸ್ತಿಯೇ ಸಂಪಾದಿಸುತ್ತಾಳೆ. ರಾಯರಿಗೆ ಮಾಮೂಲಿನಂತೆ ತಿಂಗಳಿಗೆ ಇಪ್ಪತ್ತೈದು ಸಾವ್ರ ಪಿಂಚಣಿ ಬರುತ್ತದೆ. ಅದಲ್ಲದೆ ಪ್ರತಿಯೊಬ್ಬರಿಗೂ ಬಡ್ಡಿ ಆದಾಯ, ಕೃಷಿ ಆದಾಯ, ಅಂಗಡಿ ಬಾಡಿಗೆ, ಭೂಮಿ ಮಾರಾಟದಿಂದ ಆದಾಯ ಇತ್ಯಾದಿ ಇತರ ಆದಾಯಗಳು ಅಗಾಗ್ಗೆ ಬರುತ್ತಾ ಇರುತ್ತದೆ. 

ಕರ ವಿನಾಯಿತಿ ಪಡೆಯಲು ನಾನಾ ಮಾರ್ಗಗಳು 

ಕಳೆದ ವಾರ ತಿಳಿಸಿದಂತೆ ಈ ವಿತ್ತ ವರ್ಷ 2018-19ರ ಕರ ಕಾನೂನು 2018ರ ಬಜೆಟ್‌ ಮೇರೆಗೆ ಇರುತ್ತದೆ. ಈ ಕೆಳಗಿನ ಪಟ್ಟಿ ಬಜೆಟ್‌-2018 ಅನ್ನು ಅನುಸರಿಸಿ ತಯಾರಿಸಲಾಗಿದೆ. ಹಾಗಾಗಿ ಈ ವರ್ಷದ ಕರ ಉಳಿತಾಯಕ್ಕೆ ಮೊತ್ತ ಮೊದಲನೆಯದಾಗಿ ನೀವು ಈ ಕೆಳಗಿನ ವಿಚಾರಗಳಲ್ಲಿ ಮಾಡಿದ ಖರ್ಚು/ಹೂಡಿಕೆ ಏನಾದರೂ ಇವೆಯೇ ಎನ್ನುವುದನ್ನು ಹಂತ ಹಂತವಾಗಿ ಪರಿಶೀಲಿಸಿ ಪಟ್ಟಿ ಮಾಡಿಕೊಳ್ಳಿ.

1. ಸ್ಟಾಂಡರ್ಡ್‌ ಡಿಡಕ್ಷನ್‌ 
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನ್ಶನ್‌ ಮೊತ್ತದಿಂದ ರೂ. 40,000 ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ.

Pages

Back to Top