CONNECT WITH US  

ಆರಾಧನೆಗೆ ಥಳಕು ಹಾಕಿದ ಹಲಸು

ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೋಸೆ. ಅಂದು ಮನೆಮಂದಿ ಮಾತ್ರ ಹಾಜರಿ.

ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ ಅಪ್ಪದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಪಡ್ರೆ ಗ್ರಾಮದ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಅಪ್ಪದ ಸೇವೆಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ. ಜೂನ್‌ ಹದಿನೈದರಿಂದ ಜುಲೈ ಹದಿನೈದರೊಳಗೆ ಅನುಕೂಲಕರ ದಿವಸದಂದು ಆಚರಣೆ. 

ಮೇಳಗಳ ಮಾಲೆಗೆ ಈಗ ಕಾಡು ಹಣ್ಣು

ಕಾಡು ನುಣುಪಾಗುತ್ತಿರುವ ಕಾಲಘಟ್ಟದಲ್ಲಿ ಮೇಳಗಳ ಮೂಲಕ ಹಲಸು, ಮಾವು, ಕಾಡು ಹಣ್ಣು.. ಮೊದಲಾದ ಫ‌ಲ ಗಳನ್ನು ರಕ್ಷಿಸುವತ್ತ ವಾಲುತ್ತಿದ್ದೇವಲ್ಲ... ಅದೇ ಸಮಾಧಾನ. ಇದರ ಹಿಂದೆ ಹಸಿರು ಮನಸ್ಸುಗಳು ರೂಪುಗೊಳ್ಳುತ್ತಿರು ವುದು ಭರವಸೆ ಮೂಡಿಸುತ್ತಿವೆ. 

ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌

ಹೊಸ ತಳಿಗಳ ಹಸಿವಿನಿಂದ ಅನಿಲ್‌ ಜಾಲತಾಣಗಳಲ್ಲಿ ಅಲೆಯುತ್ತಾರೆ. ಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ. ಹೊಸ ತಳಿಯು ಪತ್ತೆಯಾದರೆ ವಿವರಗಳನ್ನು ಗುಂಪುಗಳಲ್ಲಿ ಪ್ರಕಟಿಸುತ್ತಾರೆ. ಈ ವಿಚಾರಗಳು ಚರ್ಚಿತವಾಗುತ್ತವೆ. ತಳಿಯ ಗುಣಾವಗುಣ ತೃಪ್ತಿಯಾದರೆ ಮಾತ್ರ ಅಸಕ್ತರಾಗುತ್ತಾರೆ. ಸಂಬಂಧಪಟ್ಟ ಸ್ನೇಹಿತರ ಮೂಲಕ ತರಿಸಿಕೊಳ್ಳುತ್ತಾರೆ.

ಕಾಲವು ಅಪ್‌ಡೇಟ್‌ ಆಗುತ್ತಿದೆ! ಅಂದರೆ ಕಾಲವನ್ನೇ ಅಪ್‌ಡೇಟ್‌ನತ್ತ ತಿರುಗಿಸುವ ತಂತ್ರಜ್ಞಾನಗಳ ಅವೃತ್ತಿಗಳು ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಲೋಕಾರ್ಪಣೆಗೊಳ್ಳುತ್ತಿವೆ. ಅಂಗೈಯೊಳಗೆ ವಿಶ್ವವನ್ನೇ ಕಾಣುವ ಯೋಗ. ಆದರೆ ಬಳಕೆಯ ವಿಧಾನದಲ್ಲಿ ಯೋಗವು ದುರ್ಯೋಗವಾಗುತ್ತಿದೆ. ಭಾಷಣ, ಮಾತುಕತೆಗಳಲ್ಲಿ ಗೊಣಗಾಟಗಳು ರಾಚುತ್ತಲೇ ಇರುತ್ತವೆ. 

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

ಭತ್ತದ ಗದ್ದೆಗಳು ಕರಾವಳಿ ಏಕೆ, ಕನ್ನಡ ನಾಡಿನಾದ್ಯಂತ ಮಾಯವಾಗುತ್ತಿವೆ, ಮಾಯವಾಗಿವೆ. ಬ್ರೆಡ್‌ ತುಂಡಿನಂತೆ ತುಂಡರಿಸಲ್ಪಟ್ಟು ಸೈಟ್‌ಗಳಾಗಿವೆ. ದೊಡ್ಡ ದೊಡ್ಡ ಕಟ್ಟಡಗಳ ಫೌಂಡೇಶನ್‌ಗಳಾಗಿವೆ. ರೈತರ ಕೈಯಿಂದ ಚಿಕ್ಕಾಸಿಗೆ ಗದ್ದೆಗಳನ್ನು ಖರೀದಿಸಿ, ನಾಲ್ಕೈದು ಪಟ್ಟು ಅಧಿಕ ಲಾಭ ಮಾಡಿಕೊಂಡವರ ಸಂಖ್ಯೆ ಅಗಣಿತ.

ಹಳ್ಳಿಯಲ್ಲಿ ಬೀಸಿದ ತಂಪು ಬೇರಿನ ತಂಗಾಳಿ

ಯುವ ಸಂಘಟನೆ ಅಂದಾಗ ಯುವಜನ ಮೇಳ, ವಾರ್ಷಿಕೋತ್ಸವ, ಕ್ರೀಡೆ... ಈ ವ್ಯಾಪ್ತಿಯಲ್ಲೇ ಸುತ್ತುತ್ತಿರುತ್ತವೆ. ಅದರಾಚೆ ನೋಡುವ ಮನಸ್ಥಿತಿಯಿಲ್ಲ. ಊರಿನ ಮಧ್ಯೆಯೇ ಇದ್ದು ತಮಗೂ-ಸಮಾಜಕ್ಕೂ ಏನೇನೂ ಸಂಬಂಧವಿಲ್ಲದಂತೆ ಇದ್ದು ಬಿಡುವ ಜಾಯಮಾನ ಅರ್ಥವಾಗುತ್ತಿಲ್ಲ. ಸ್ಥಾಪಿತ ಕಲಾಪವನ್ನಿಟ್ಟುಕೊಂಡೇ ಅಭಿವೃದ್ಧಿಯ ನೋಟವನ್ನು ಯಾಕೆ ರೂಢಿಸಿಕೊಳ್ಳಬಾರದು?

ದೇವರ ನಾಡಿನಲ್ಲಿ ಹಲಸಿಗೆ ರಾಜ ಕಿರೀಟ

ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ "ಉಪ್ಪಾಡ್‌ ಪಚ್ಚಿಲ್‌' (ಉಪ್ಪು ಸೊಳೆ) ಖಾದ್ಯಗಳನ್ನು ಗ್ರಹಿಸಿ ಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ ಉಪ್ಪಾಡ್‌ ಪಚ್ಚಿಲ್‌ ನುಗ್ಗಿದೆ! ಶ್ರೀಲಂಕಾದಲ್ಲಿ ಹಲಸಿನ ಬೀಜದ ಮಸಾಲೆ ಮದ್ಯದಂಗಡಿಯಲ್ಲಿ ಜನಪ್ರಿಯ.

ಹಂಗಿಲ್ಲದ ನೀರಿಗೆ ಇಂಗುಬಾವಿ

ಮಣ್ಣು ವಡ್ಡರು ಎನ್ನುವ ಜನಾಂಗದವರು ಇಂಗುಬಾವಿ ತೋಡುವುದರಲ್ಲಿ ನಿಷ್ಣಾತರು. ಕಳೆದೆರಡು ದಶಕಗಳೀಚೆಗೆ ಬೆಂಗಳೂರಿನಲ್ಲಿ ಐವತ್ತು ಸಾವಿರಕ್ಕೂ ಮಿಕ್ಕಿ ಇಂಗುಬಾವಿಗಳಾಗಿವೆ! ಇಲ್ಲಿ ಇಂಗುಬಾವಿ ತೋಡುವುದನ್ನು ಬದ್ಧತೆಯಿಂದ ಆರಂಭಿಸಿದವರು ಮುನಿಯಪ್ಪ. ಇವರೊಡನೆ ದುಡಿಯುತ್ತಿದ್ದ ಹಲವರು ಇಂಗುಬಾವಿ ನಿರ್ಮಾಣ ತಂಡವನ್ನೇ ಮಾಡಿಕೊಂಡಿದ್ದಾರೆ.

ಪರಿಸರಕ್ಕೆ ಬದ್ಧತೆಯ ದನಿ ನೀಡಿದ್ದ ಶಂಪಾ

ಶಂಪಾ ದೈತೋಟರು ಅಪ್ಪಟ ಪರಿಸರವಾದಿ. ಸೋಗುಗಳಿಲ್ಲದ ವ್ಯಕ್ತಿತ್ವ. ನಿತ್ಯ ಅಧ್ಯಯನಶೀಲ. ವಿಶ್ವಾದ್ಯಂತ ಬದಲಾಗುತ್ತಿರುವ ಪರಿಸರ ವಿಚಾರಗಳ ಮಾಹಿತಿಗಳತ್ತ ಕುತೂಹಲಿ. ಕಂಪ್ಯೂಟರ್‌ ಹೆಚ್ಚು ಸದ್ದು ಮಾಡದ ದಿನಗಳಲ್ಲಿ ಶಂಪಾರ ಮತಿಯು ನಿತ್ಯ ಅಪ್‌ಡೇಟ್‌ ಆಗುತ್ತಿತ್ತು. ಶಂಕರನಾರಾಯಣ ಭಟ್‌ ಪಾಣಾಜೆ ದೂರವಾಗಿ ಹದಿನಾರು ವರುಷ ಸಂದಿತು. ಅವರ ಒಡನಾಡಿಗಳು, ಪರಿಸರ ಸಂಬಂಧಿ ಮನಸ್ಸುಗಳು ಶಂಪಾರನ್ನು ಮರೆಯುವುದಿಲ್ಲ.

Pages

Back to Top