CONNECT WITH US  

ಮನೆ ಮದ್ದು; ಶೀತ, ಜ್ವರಕ್ಕೆ ಈ ಹಿತ್ತಲ ಗಿಡ ಸಂಜೀವಿನಿ ಇದ್ದಂತೆ…

ಅದೊಂದು ದಿನ ಇದ್ದಕ್ಕಿದ್ದ ಹಾಗೆ ಅಣ್ಣನ ಮಗನಿಗೆ ಶೀತ, ಕೆಮ್ಮು ಪ್ರಾರಂಭವಾಗಿತ್ತು. ಆದು ಮಳೆಗಾಲದ ಸಮಯವಾದ್ದರಿಂದ ಸ್ವಲ್ಪ ಮಟ್ಟಿನ ಗಡಿಬಿಡಿ ಅತ್ತಿಗೆ ಮುಖದಲ್ಲಿ ಕಾಣಿಸುತ್ತಿತ್ತು. ಶಾಲೆಗೆ ಹೋಗುವ ಮಗು ಮಳೆಗಾಲ ಬೇರೆ ಇಂಥ ಸಣ್ಣ ಸಣ್ಣ ರೋಗಗಳು ಹರಡುವುದು ಸಾಮಾನ್ಯವಾಗಿರುತ್ತದೆ. ತನ್ನ ಮಗನಿಗೆ ಇದ್ದಕ್ಕಿದ್ದ ಹಾಗೇ ಶೀತ, ಕೆಮ್ಮು ಕಾಣಿಸಿಕೊಂಡಿರುವುದು  ಅತ್ತಿಗೆಯ ಭಯಕ್ಕೆ ಕಾರಣವಾಗಿರಬಹುದು. ಸಂಜೆ ಹೊತ್ತು ಆಸ್ಪತ್ರೆಗೆ ಹೋಗಿ ಮದ್ದು ತರುವ ಎಂದರೆ ಮಳೆ ಧಾರಾಕಾರವಾಗಿ ಸುರಿಯುತಿದೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಅಮ್ಮ ಬಂದು ಹಿತ್ತಳಲಲ್ಲಿ ಹೂಗಿಡಗಳ ಮಧ್ಯೆ ಬೆಳೆದ ಒಂದು ಎಲೆಯನ್ನು ತಂದು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಸಿದರು. ಇವತ್ತಿಗೆ ಸಾಕು ಎಂದು ಹೇಳಿದರು.

ಮಳೆಗಾಲದಲ್ಲಿ ಯಾವ ಆಹಾರ ದೇಹಕ್ಕೆ ಉತ್ತಮ ಗೊತ್ತಾ?

ಸಾಂದರ್ಭಿಕ ಚಿತ್ರ

ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಸಂತಸ, ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ವರ್ಷ ಋತು ಪರಿಣಾಮ ಬೀರುತ್ತದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ ಬದಲಾಗಿಸಿಕೊಳ್ಳಬೇಕಾಗುತ್ತದೆ. ಕಾಲ ಬದಲಾದಂತೆ ನಮ್ಮ ಬಾಯಿ ರುಚಿ ಕೂಡ ಬದಲಾಗುತ್ತದೆ. ಬಾಯಿ ರುಚಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಕೆಟ್ಟದು ಎಂದು ಗೊತ್ತಿರುವುದಿಲ್ಲ. ಅದು ರುಚಿ ರುಚಿಯಾದ ಆಹಾರವನ್ನು ಮಾತ್ರ ಬಯಸುತ್ತದೆ. ಆದರೆ ನಾಲಗೆಯ ರುಚಿಗಿಂತ ಆರೋಗ್ಯಕರ ಆಹಾರ ಮುಖ್ಯ.

ಅಪ್ಪನ ಆ 1 ದಿನದ ನಿರ್ಧಾರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು!

ಅಪ್ಪ...! ಈ ಎರಡಕ್ಷರದ ಪದದಲ್ಲಿರುವ ಗತ್ತು ಗಮ್ಮತ್ತು ತಿಳಿದವರೆ ಬಲ್ಲರು. ಹೌದು, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಧೈರ್ಯ ಎಲ್ಲವನ್ನು ಸಾಧಿಸಲು ಬೆನ್ನೆಲುಬಾಗಿ ನಿಲ್ಲಬಲ್ಲ ಸ್ಪೂರ್ತಿ...! ಹೇಳುತ್ತಾ ಹೋದರೆ ಈ ಎರಡಕ್ಷರದ ಪದಕ್ಕೆ ವ್ಯಾಖ್ಯಾನವೇ ಕಡಿಮೆ ಆದೀತು. ಇಂದು ಅಪ್ಪಂದಿರ ದಿನದಲ್ಲಿ ನನ್ನ ಪ್ರೀತಿಯ ಅಪ್ಪನ ಕುರಿತಾಗಿ ಅಕ್ಷರ ರೂಪ.

ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳೋದು ಹೇಗೆ?

ಬೇಸಿಗೆಯ ಬಿಸಿಯಿಂದ ಬಸವಳಿದಿದ್ದ ಇಳೆಯನ್ನು ತಂಪುಗೊಳಿಸಲು ಮಳೆಗಾಲ ಮೇ ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ. ಆಗಾಗ ಬರುವ ಮಳೆ, ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿಡಬೇಕು. ಈ ಕಾಲದಲ್ಲಿ ಶೀತ, ನೆಗಡಿ, ಜ್ವರ ಸರ್ವೆಸಾಮಾನ್ಯ. ಮಳೆಗಾಲದಲ್ಲಿ ನೀರು ಕಲುಷಿತವಾಗುತ್ತದೆ ಸೋಂಕು ಬಹುಬೇಗ ಬರುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕಲುಷಿತ ನೀರಿನಿಂದ ಸೊಳ್ಳೆ ನೊಣಗಳ ಸಂಖ್ಯೆ ಹೆಚ್ಚಾಗುವುದು ಜೊತೆಗೆ ರೋಗಗಳು ಹರಡುತ್ತದೆ. ಕೆಲವು ಸರಳ ಉಪಾಯಗಳನ್ನು ನಮ್ಮದಾಗಿಸಿಕೊಂಡಲ್ಲಿ ಅನಾರೋಗ್ಯದಿಂದ ದೂರವಿರಬಹುದು.

ದಿನನಿತ್ಯದ ಆರೋಗ್ಯಕ್ಕೆ ನೀರು ಎಷ್ಟು ಮುಖ್ಯ ಗೊತ್ತೆ?

ಆರೋಗ್ಯಕ್ಕೆ ನೀರು ಎಷ್ಟು ಮುಖ್ಯವೆಂದು ನಮಗೆಲ್ಲಾ ಗೊತ್ತೆ ಇದೆ.  ದಿನಕ್ಕೆ ಕನಿಷ್ಠ ಎಂದರೆ 11 ರಿಂದ 12 ಲೋಟ ನೀರು ಕುಡಿಯಿರಿ ಎಂದು ವೈದ್ಯರು ತಿಳಿಸುತ್ತಾರೆ.  ನೀರಿನ ಅವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀರಿನ ಅವಶ್ಯಕತೆ ಎನ್ನವುದು ಆನೇಕ ಅಂಶಗಳನ್ನು ಅವಲಂಬಿಸಿಕೊಂಡು, ಒಬ್ಬ ವ್ಯಕ್ತಿಯಿಂದ ಇನೊಬ್ಬ ವ್ಯಕ್ತಿಗೆ ಬೇರೆ ಬೇರೆ ಆಗಿರುತ್ತದೆ. ನೀರಿನ ಅವಶ್ಯಕತೆಯು ಅವಲಂಬಿಸಿರುವ ಅಂಶಗಳು ಅಂದರೆ, ವ್ಯಕ್ತಿಯ ದೈಹಿಕ ಚಟುವಟಿಕೆ, ಸುತ್ತಲಿನ ತಾಪಮಾನ, ಆರೋಗ್ಯ ಪರಿಸ್ಥಿತಿ, ದೈಹಿಕ ಪರಿಸ್ಥಿತಿ ವಯಸ್ಸು ಲಿಂಗ ಹಾಗೂ ಇನ್ನಿತರ ಅಂಶಗಳು.

ಎಷ್ಟು ಪ್ರಮಾಣದ ನೀರು ಅವಶ್ಯಕ?

ಬಿಸಿಲ ಬೇಗೆ…ಇವು ಆರೋಗ್ಯ ರಕ್ಷಣೆಗೆ ಉತ್ತಮವಾದ ಹಣ್ಣುಗಳು

ಬಿಸಿಲ ಧಗೆಯಂತೂ ದಿನ ದಿನೇ ಹೆಚ್ಚುತ್ತಲೇ ಇದೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಕುರಿತು ಎಷ್ಟೇ ಕಾಳಜಿ ತೆಗೆದುಕೊಂಡರು ಕಡಿಮೆಯೇ. ಒಮ್ಮೆ ಮಳೆ ಬಂದು ಭೂಮಿ ತಂಪಾದರೆ ಸಾಕಪ್ಪಾ ಎನ್ನುವಂತಾಗಿದೆ. 

ಬೇಸಿಗೆಯ ಧಗೆ ವಿಪರೀತವಾದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹಾಗಾಗಿ ಬೇಸಿಗೆ ಮುಗಿಯುವವರೆಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸೋದು ಮುಖ್ಯ.

Back to Top