CONNECT WITH US  

ದೇವರು ಪ್ರತ್ಯಕ್ಷನಾದರೆ ನೀನೇನು ವರ ಕೇಳಬೇಕು?

ದೇವರನ್ನೇ ನಂಬಿ ಬದುಕುತ್ತಿರುವವನಿಗೆ ಆಗಾಗ ದೇವರು ಬೋನಸ್‌ ಕೊಡುತ್ತಾನೆಯೇ ಹೊರತು ಭಕ್ತನ ಹಿಂದಿನ ಜನ್ಮದ ಕರ್ಮಕ್ಕೆ ದೇವರು ಹೊಣೆಯಲ್ಲ, ಆ ಕರ್ಮವನ್ನು ಎಲ್ಲರೂ ಅನುಭವಿಸಲೇಬೇಕು. ದೇವರು ವರ ಕೊಡಲು ಭೂಮಿಗಿಳಿದರೆ, ಜನರು ಅವನಿಗೆ ವಾಪಸ್‌ ಹೋಗಲು ಬಿಡುವುದೇ ಅನುಮಾನ!

ಓದಿನಿಂದ ಬಂದ ಜ್ಞಾನ ಯಾವತ್ತೂ ವ್ಯರ್ಥವಲ್ಲ

ಮನುಷ್ಯನಿಗೆ ಕಷ್ಟ ಬಂದಾಗ, ಕೈಯಲ್ಲಿ ಹಣ ಇಲ್ಲದೆ ಇದ್ದಾಗ ವಿದ್ಯೆಯ ಮಹತ್ವ ಗೊತ್ತಾಗುತ್ತದೆ. ನಮ್ಮ ಹತ್ತಿರ ವಿದ್ಯೆಯೊಂದಿದ್ದರೆ ನಾವು ಯಾವುದೇ ವಯಸ್ಸಿನಲ್ಲಿ, ಎಲ್ಲಿಗೆ ಹೋದರೂ ಹಣ ಸಂಪಾದಿಸಬಹುದು. ಹಾಗಂತ ಬರೀ ದುಡಿಯುವುದಕ್ಕಾಗಿ ಹಣಗಳಿಸುವುದಕ್ಕಾಗಿ ಓದಬೇಕು, ವಿದ್ಯಾವಂತರಾಗಬೇಕು ಎಂದೇನಿಲ್ಲ. ನಾವು ನಮ್ಮ ದೇಹದ ಹಸಿವನ್ನು ನೀಗಿಸುವುದಕ್ಕಾಗಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಊಟಮಾಡುತ್ತೇವೆ. ಮನಸ್ಸಿನ ಹಸಿವನ್ನು ನೀಗಿಸುವಂಥದ್ದು ಪ್ರೀತಿ, ಸ್ನೇಹ, ಸಂಬಂಧಗಳು. ಹಾಗೆಯೇ ನಮ್ಮ ಬುದ್ದಿಯ ಮೆದುಳಿನ ಹಸಿವಿಗೂ ಊಟ ಹಾಕಬೇಕಲ್ಲವೇ?

ನಾವು ಯಾರ ರೀತಿಯೂ ಇರಬಾರದು; ವಿಶೇಷವಾಗಿರಬೇಕು!

ಬೀದಿಯ ಕಸ ಗುಡಿಸುವವರಾಗಿರಲಿ, ಪಾನಿಪುರಿ ಮಾರುವವನಾಗಿರಲಿ, ಶೌಚಾಲಯ ಕ್ಲೀನ್‌ ಮಾಡುವವರಾಗಿರಲಿ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಾಗಿರಲಿ, ಶಾಲೆ ಕಾಲೇಜಿನಲ್ಲಿ ಪಾಠ ಮಾಡುವವರಾಗಿರಲಿ ಅಥವಾ ನಿಷ್ಠೆಯಿಂದ ಪೌರೋಹಿತ್ಯ ಮಾಡಿಸುವವರಾಗಿರಲಿ... ಎಲ್ಲರೂ ಸೆಲೆಬ್ರಿಟಿಗಳೇ. 

ಪ್ರತಿದಿನ ನಾವೆಲ್ಲರೂ ಬೇರೆಯವರನ್ನು ನೋಡಿ ಬೇಕಾದಷ್ಟು ಕಲಿಯುತ್ತಿರುತ್ತೇವೆ. ಕಲಿಯಬೇಕು ಕೂಡ, ಅದರಲ್ಲಿ ತಪ್ಪೇನಿಲ್ಲ. ಆದರೆ, ನಾವು ಕಲಿಯುವ ವಿಷಯ ಅಥವಾ ಅನುಕರಣೆ ಮಾಡುವ ಸಂಗತಿ ನಮ್ಮ ನಿತ್ಯ ಜೀವನಕ್ಕೆ ಸರಿಹೊಂದುತ್ತದೆಯೇ? ನಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್‌ ಆಗುತ್ತದೆಯೇ? ಇದನ್ನು ವಿಮರ್ಶಿಸಿಕೊಂಡು, ನಂತರ ಬೇರೆಯವರಲ್ಲಿನ ಗುಣವನ್ನು ನಾವು ಅನುಕರಿಸುವುದು ಅಗತ್ಯ. ಇಲ್ಲವಾದರೆ ನಮಗೇ ನಷ್ಟವಾದೀತು.

ಹೆಣ್ಮಕ್ಕಳೇಕೆ ಈ ಪರಿ ಕನ್ನಡಿ ನೋಡಿಕೊಳ್ಳುತ್ತಾರೆ?

ದಕ್ಷಿಣ ಅಮೆರಿಕದ ಮನೆಗಳಲ್ಲಿ ಯಾರಾದರೂ ಸತ್ತರೆ ಕೂಡಲೇ ಕನ್ನಡಿ ಹಾಗೂ ಪ್ರತಿಬಿಂಬ ತೋರಿಸುವ ಟಿವಿ ಮುಂತಾದ ಎಲ್ಲಾ ನಯವಾದ ವಸ್ತುಗಳನ್ನು ವಸ್ತ್ರದಿಂದ ಮುಚ್ಚಿಡುತ್ತಾರೆ. ಅಂತ್ಯಸಂಸ್ಕಾರ ಮುಗಿದ ನಂತರವಷ್ಟೇ ಆ ಬಟ್ಟೆ ತೆಗೆಯುತ್ತಾರೆ. ಮುಚ್ಚಿಡದಿದ್ದರೆ ಸತ್ತವರ ಆತ್ಮ ಕನ್ನಡಿಯಲ್ಲಿ ಅಡಗಿಕೊಂಡು ಶಾಶ್ವತವಾಗಿ ಅಲ್ಲೇ ನೆಲೆಸಿಬಿಡುತ್ತದೆ ಎಂಬ ನಂಬಿಕೆ ಅವರದು! 

ಕನ್ನಡಿ-ದರ್ಪಣ: ಇದೊಂದೇ ನಮ್ಮನ್ನು ನಾವು ಸಂಪೂರ್ಣವಾಗಿ ನೋಡಿಕೊಳ್ಳಲು ಸಹಾಯ ಮಾಡುವಂತಹ ವಸ್ತು ಎಂದರೆ ತಪ್ಪಾಗಲಾರದು. ನಮ್ಮ ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲ, ಎಷ್ಟೋ ಸಲ ನಮ್ಮ ಆಂತರಿಕ ನೋವನ್ನೂ ಪ್ರತಿಬಿಂಬಿಸುವ ಶಕ್ತಿ ಅದಕ್ಕಿದೆ. ಏಕೆಂದರೆ ಅದರ ಮುಂದೆ ನಿಂತರೆ ಅದರೊಳಗೆ ಕಾಣುವುದು ನಮ್ಮ ಪ್ರತ್ಯಕ್ಷ ಸ್ವರೂಪ ಅಲ್ಲವೇ!

ನನಗೆಲ್ಲ ಗೊತ್ತು ಎಂದು ಹೇಳುವವನಷ್ಟು ದಡ್ಡ ಯಾರೂ ಇಲ್ಲ!

ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ ನಡೆದು ಹೋಗುವವರನ್ನು ಮಾತನಾಡಿಸಿ, ಒಬ್ಬೊಬ್ಬರಿಂದ ಒಂದೊಂದು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬಹುದು. 

ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಇದೆ!

ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ ಅದನ್ನು ಗುರುತಿಸುವುದಿಲ್ಲ.  ರೂಪನ್ನ ಎಲ್ಲಿ ಮಲಗಿಸಿದ್ದೀರಾ ಅಂತ ಯಾರೂ ಕೇಳುವುದಿಲ್ಲ. ಬಾಡಿ ಎಲ್ಲಿದೆ ಅಂತಲೇ ಕೇಳುತ್ತಾರೆ. 

ಮಗು ಹುಟ್ಟಿದ ತಕ್ಷಣ ಅದಕ್ಕೊಂದು ಹೆಸರಿಟ್ಟು ಹಬ್ಬ ಆಚರಿಸುತ್ತಾರೆ. ನಮ್ಮ ಪೂರ್ವಜರ ಕಾಲದಲ್ಲಿ ಮಗು ಹುಟ್ಟಿದ ನಂತರ ಗಂಡೋ-ಹೆಣ್ಣೋ ಖಚಿತವಾದ ಮೇಲೆ ಹೆಸರು ಹುಡುಕುತ್ತಿದ್ದರು. ಈಗ ಮಗು ಹುಟ್ಟುವ ಮೊದಲೇ ಇಂಟರ್‌ನೆಟ್‌ನಲ್ಲಿ ಅನೇಕ ಹೆಸರುಗಳನ್ನು ಹುಡುಕಿ, ಮನೆಯವರಿಗೆ ಆ ಹೆಸರು ಇಷ್ಟ ಆಗಲಿ ಬಿಡಲಿ ಬಲವಂತ ಮಾಡಿಯಾದರೂ ಒಪ್ಪಿಸುತ್ತಾರೆ. 

ನವಗ್ರಹಗಳಿಗೆಷ್ಟು ತಾಕತ್ತಿದೆ? ಭವಿಷ್ಯ ಎಷ್ಟು ನಂಬಬೇಕು?

ಸಾತ್ವಿಕ ಮತ್ತು ದೈವಿಕವಾದ ಆಚರಣೆಗಳು ಮುಖ್ಯ. ದೈವಶಕ್ತಿಯ ಮುಂದೆ ಮಾಯ-ಮಾಟ, ವಶೀಕರಣ ಯಂತ್ರ, ದಿಗ್ಬಂಧನ, ವಾಮಾಚಾರ ಇವೆಲ್ಲವುಗಳಿಂದ ಶಕ್ತಿ ಪ್ರಯೋಗ ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಆಚರಣೆಗಳಲ್ಲೂ ನಂಬಿಕೆ ಇರಬೇಕು, ಆದರೆ ಯಾವುದು ನಮ್ಮ ಜೀವನಕ್ಕೆ ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ಸಾತ್ವಿಕ ಬುದ್ಧಿ ನಮ್ಮಲ್ಲಿರಬೇಕು. 

ಸ್ವಾಭಿಮಾನ ಎನ್ನುವ ಸರ್ವನಾಮ ಪದದ ಸುತ್ತ...

ಸ್ವಾಭಿಮಾನಿಯಾದವನು ಹರಿವ ತೊರೆಯ ಪಕ್ಕದ ಶಾಂತ ಕಲ್ಲಿನಂತೆ ಅಚಲವಾಗಿ ತನ್ನ ಪಾಡಿಗೆ ತಾನಿರುತ್ತಾನೆ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ಹಾಗಂತ ಅವನ ಶಾಂತತೆ, ಸೌಜನ್ಯ ದೌರ್ಬಲ್ಯವಲ್ಲ. ಬೇಕೆಂದಾಗ ದಿಟ್ಟ, ಬೇಡವನಿಸಿದಾಗ ಕಟು, ತನ್ನಾವರಣದೊಳಗೆ ಹಾಗೆಲ್ಲಾ ಯಾರಾರಿಗೋ ಜಾಗ ಕೊಡುವುದಿಲ್ಲ. 

Pages

Back to Top