Team Udayavani, Feb 12, 2019, 6:00 AM IST
ಜನರು ವಿದೇಶದಲ್ಲಿ ನೆಲೆಸಿ ನಮ್ಮ ದೇಶಕ್ಕೆ ಕಾಲಿಟ್ಟ ತಕ್ಷಣ ವಿಮಾನ ನಿಲ್ದಾಣದಿಂದಲೇ ದೇಶವನ್ನು ಬೈಯಲು ಆರಂಭಿಸುತ್ತಾರೆ. ನೀವು ದೇಶಕ್ಕಾಗಿ ಏನು ಮಾಡಿದ್ದೀರಾ ಎಂದು ಕೇಳಿದರೆ, ನಾವ್ಯಾಕೆ ಮಾಡ್ಬೇಕು? ಸರಕಾರ ಎಲ್ಲವನ್ನೂ ಸರಿಪಡಿಸಬೇಕು ಎನ್ನುತ್ತಾರೆ. ಬೇರೆ ದೇಶಗಳಲ್ಲಿ ನಮ್ಮವರು ಅಲ್ಲಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಏಕೆಂದರೆ ಅಲ್ಲಿ ನಿಯಮಗಳನ್ನು ಮೀರಿದರೆ ಯಾರು, ಏನು ಅಂತ ನೋಡದೆ ಒದ್ದು ಒಳಗೆ ಹಾಕುತ್ತಾರೆ..
Team Udayavani, Feb 05, 2019, 6:00 AM IST
ನಿಮಗೆ ಮಾನವ ಧರ್ಮ ಎಂಬ ಪರಮೋಚ್ಚ ಧರ್ಮ ಇದೆ. ಅದಕ್ಕೆ ವಂಚನೆ ಮಾಡುವುದು ಅಂದರೆ ಜೀವಾತ್ಮಕ್ಕೆ ವಂಚನೆ ಮಾಡುವುದು ಎಂದರ್ಥ. ಧರ್ಮಗಳಲ್ಲಿರುವ ಒಳ್ಳೆಯ ಅಭ್ಯಾಸಗಳನ್ನು ಯಾವ ಧರ್ಮದಿಂದ ಕಲಿತರೇನಂತೆ, ಮನುಷ್ಯನಿಗೆ ಜ್ಞಾನೋದಯವಾಗುವುದು ಹಾಗೂ ಒಳ್ಳೆಯ ಬುದ್ಧಿ ಬರುವುದು ಮುಖ್ಯ.
Team Udayavani, Jan 29, 2019, 6:00 AM IST
ಗಂಡು ಹೆಣ್ಣಿನ ನಡುವೆ ನಾನು ಮೇಲು ತಾನು ಮೇಲು ಎಂಬ ಪೈಪೋಟಿ ನಡೆಯುತ್ತಿದ್ದರೂ ಜೀವನದ ಪ್ರತಿ ಹಂತದಲ್ಲೂ ಗಂಡು ಹೆಣ್ಣಿನೆಡೆಗೆ ಆಕರ್ಷಿತನಾದರೆ, ಹೆಣ್ಣು ಗಂಡಿನೆಡೆಗೆ ಆಕರ್ಷಿತಳಾಗುತ್ತ ಇರುತ್ತಾಳೆ. ಇದು ಪ್ರಕೃತಿ-ಪುರುಷರ ನಡುವಿನ ಸೃಷ್ಟಿಯ ಆಟ. ಸಂತಾನೋತ್ಪತ್ತಿಗೂ ಗಂಡು ಹೆಣ್ಣೇ ಮೂಲ ಕಾರಣ.
ಇದು ಪೈಪೋಟಿಯ ಯುಗ, ಇಲ್ಲಿ ವಿದ್ಯಾರ್ಥಿಗಳ ಮಧ್ಯೆ, ಕ್ರೀಡಾಪಟುಗಳ ಮಧ್ಯೆ, ಉದ್ದಿಮೆಗಳ ಮಧ್ಯೆ, ನೌಕರರ ಮಧ್ಯೆ ಹೀಗೆ ಎಲ್ಲ ವರ್ಗದಲ್ಲೂ ಅಗಾಧ ಪೈಪೋಟಿಯಿದೆ. ಈ ಪೈಪೋಟಿ ಗಂಡು-ಹೆಣ್ಣಿನ ನಡುವೆಯೂ ಬೆಳೆಯುತ್ತಿದೆ. ಮಹಿಳೆಯರು ಪುರುಷರಿಗೆ ಸಮನಾಗಿ ನಿಲ್ಲಬೇಕು ಎಂಬ ಚಿಂತನೆ ಜನಪ್ರಿಯವಾದಂತೆ ಈ ಪೈಪೋಟಿ ಹೆಚ್ಚುತ್ತಿದೆ.
Team Udayavani, Jan 08, 2019, 6:00 AM IST
ಕೆಲವರು ಜೀವನದಲ್ಲಿ ಏನೂ ಗುರಿಗಳನ್ನೇ ಇಟ್ಟುಕೊಳ್ಳದೆ ಸುಮ್ಮನೆ ಬದುಕು ಸವೆಸುತ್ತಿರುತ್ತಾರೆ. ತುಂಬಾ ಆಸೆ ಕನಸುಗಳಿದ್ದರೂ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ, ಅಯ್ಯೋ ಅದೆಲ್ಲ ನನ್ನಿಂದ ಸಾಧ್ಯಾನಾ ಅಂತ ತಮ್ಮ ಮೇಲೆ ತಾವೇ ಅನುಮಾನ ಪಟ್ಟುಕೊಂಡು ಪ್ರತಿದಿನ ಕಾಲಹರಣ ಮಾಡುತ್ತಿರುತ್ತಾರೆ. 2019 ಈಗಷ್ಟೇ ಆರಂಭವಾಗಿದೆ. ಇಷ್ಟು ವರ್ಷ ಕಡೆಗಣಿಸಿದ ಕೆಲಸಗಳನ್ನು ಈ ವರ್ಷಕ್ಕೆ ಶೆಡ್ನೂಲ್ ಮಾಡಿಕೊಳ್ಳಿ ಪ್ರತಿಯೊಬ್ಬರಿಗೂ ಅವರು ಮಾಡಲೇಬೇಕಾದ ಕೆಲಸಗಳು, ನನಸು ಮಾಡಿಕೊಳ್ಳಲೇಬೇಕಾದ ಒಂದಷ್ಟು ಕನಸುಗಳು, ಈಡೇರಿಸಿಕೊಳ್ಳಲೇಬೇಕಾದ ಒಂದಷ್ಟು ಗುರಿಗಳು ಇರುತ್ತವೆ. ಅವುಗಳಲ್ಲಿ ಅರ್ಧದಷ್ಟನ್ನಾದರೂ ಮಾಡಿ ಮುಗಿಸದಿದ್ದರೆ ಬದುಕಿಗೆ ಅರ್ಥವಿರುವುದಿಲ್ಲ.
Team Udayavani, Dec 25, 2018, 6:00 AM IST
ಕೆಲವು ಹುಡುಗರು ತನ್ನ ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ತಮ್ಮ ಹೇರ್ ಸ್ಟೈಲ್ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಪ್ರಾರಂಭಿಸುತ್ತಾರೆ. ಹಬ್ಬಗಳ ವಿಶೇಷ ದಿನಗಳಲ್ಲಿ ತನ್ನ ಪ್ರಿಯೆಗೆ ಏನಾದರೂ ಉಡುಗೊರೆ ನೀಡಿ ಅವಳನ್ನು ಮೆಚ್ಚಿಸಲು ನೋಡುತ್ತಾರೆ. ಹೀಗೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ನಾನಾ ವಿಧದಲ್ಲಿ ಪ್ರಯತ್ನಿಸುತ್ತಾನೆ. ಅದಕ್ಕಾಗಿ ಏನನ್ನು ಮಾಡಲೂ ತಯಾರಿರುತ್ತಾನೆ.
Team Udayavani, Dec 18, 2018, 6:00 AM IST
ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು.
Team Udayavani, Dec 04, 2018, 6:00 AM IST
ದೇವರನ್ನೇ ನಂಬಿ ಬದುಕುತ್ತಿರುವವನಿಗೆ ಆಗಾಗ ದೇವರು ಬೋನಸ್ ಕೊಡುತ್ತಾನೆಯೇ ಹೊರತು ಭಕ್ತನ ಹಿಂದಿನ ಜನ್ಮದ ಕರ್ಮಕ್ಕೆ ದೇವರು ಹೊಣೆಯಲ್ಲ, ಆ ಕರ್ಮವನ್ನು ಎಲ್ಲರೂ ಅನುಭವಿಸಲೇಬೇಕು. ದೇವರು ವರ ಕೊಡಲು ಭೂಮಿಗಿಳಿದರೆ, ಜನರು ಅವನಿಗೆ ವಾಪಸ್ ಹೋಗಲು ಬಿಡುವುದೇ ಅನುಮಾನ!
Team Udayavani, Nov 27, 2018, 6:00 AM IST
ಮನುಷ್ಯನಿಗೆ ಕಷ್ಟ ಬಂದಾಗ, ಕೈಯಲ್ಲಿ ಹಣ ಇಲ್ಲದೆ ಇದ್ದಾಗ ವಿದ್ಯೆಯ ಮಹತ್ವ ಗೊತ್ತಾಗುತ್ತದೆ. ನಮ್ಮ ಹತ್ತಿರ ವಿದ್ಯೆಯೊಂದಿದ್ದರೆ ನಾವು ಯಾವುದೇ ವಯಸ್ಸಿನಲ್ಲಿ, ಎಲ್ಲಿಗೆ ಹೋದರೂ ಹಣ ಸಂಪಾದಿಸಬಹುದು. ಹಾಗಂತ ಬರೀ ದುಡಿಯುವುದಕ್ಕಾಗಿ ಹಣಗಳಿಸುವುದಕ್ಕಾಗಿ ಓದಬೇಕು, ವಿದ್ಯಾವಂತರಾಗಬೇಕು ಎಂದೇನಿಲ್ಲ. ನಾವು ನಮ್ಮ ದೇಹದ ಹಸಿವನ್ನು ನೀಗಿಸುವುದಕ್ಕಾಗಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಊಟಮಾಡುತ್ತೇವೆ. ಮನಸ್ಸಿನ ಹಸಿವನ್ನು ನೀಗಿಸುವಂಥದ್ದು ಪ್ರೀತಿ, ಸ್ನೇಹ, ಸಂಬಂಧಗಳು. ಹಾಗೆಯೇ ನಮ್ಮ ಬುದ್ದಿಯ ಮೆದುಳಿನ ಹಸಿವಿಗೂ ಊಟ ಹಾಕಬೇಕಲ್ಲವೇ?
Pages