CONNECT WITH US  

ಯಕ್ಷಲೋಕದಿಂದ ಮರೆಯಾದ ಅಗರಿ ರಘುರಾಮ ಭಾಗವತರು 

ಯಕ್ಷರಂಗ ಇತ್ತೀಚೆಗೆ ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ತನ್ನದೆ ಆದ ಕೊಡುಗೆಗಳನ್ನು ಯಕ್ಷರಂಗಕ್ಕೆ ನೀಡಿದ ಹಿರಿಯ ಚೇತನ,ತೆಂಕಿನ ಧೀಮಂತ ಭಾಗವತ ಅಗರಿ ರಘುರಾಮ ಭಾಗವತರು ಇನ್ನು ನೆನಪು ಮಾತ್ರ. 

ತೆಂಕು ತಿಟ್ಟಿನ ದಿಗ್ಗಜ ಭಾಗವತರಾಗಿದ್ದ ಅಗರಿ ಶೈಲಿಯ ಖ್ಯಾತಿಯ ಶ್ರೀನಿವಾಸ ಭಾಗವತ ಮತ್ತು ರುಕ್ಮಿಣಿ ಅಮ್ಮನವರ ಪುತ್ರರಾಗಿ 1935 ರಲ್ಲಿ ಜನನ. ರಘುರಾಮ ಭಾಗವತರು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಉದ್ಯೋಗವನ್ನು ಪಡೆದಿದ್ದರು. ಆದರೂ ವೃತ್ತಿ ಭಾಗವತನಾಗಿ ಕಾಣಿಸಿಕೊಂಡದ್ದು ಆ ಕಾಲಕ್ಕೂ ಈ ಕಾಲಕ್ಕೂ ವಿಶೇಷವೇ.

ಮನೆಯಲ್ಲೇ ಯಕ್ಷಗಾನ ವಾತಾವರಣದ ಪ್ರೇರಣೆಯಿಂದ ಕಲಾವಿದ ನಾಗಿ ಬೆಳೆದ ರಘುರಾಮ ಭಾಗವತರು, ಸರ್ಕಾರಿ ಉದ್ಯೋಗದ ನಡುವೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಕ್ಷೇತ್ರ ಮಹಾತ್ಮೆಗಳ ಪರ್ವ;ನಿರಂತರ 7 ದಿನ ಯಕ್ಷೋತ್ಸವದ ಸಂಭ್ರಮ 

ಯಕ್ಷಗಾನ ರಂಗದಲ್ಲಿ  ಪ್ರಸ್ತುತದಲ್ಲಿ  ಹೆಚ್ಚಾಗಿ ಕ್ಷೇತ್ರ ಮಹಾತ್ಮೆಗಳನ್ನು ಹೆಚ್ಚಾಗಿ ಇಷ್ಟ ಪಡುವ ಅಭಿಮಾನಿಗಳು ಹೆಚ್ಚಿದ್ದಾರೆ. ಬಯಲಾಟ ಮೇಳಗಳು ಪೌರಾಣಿಕ ಪ್ರಸಂಗಳಿಗಿಂತ ಕ್ಷೇತ್ರ ಮಹಾತ್ಮೆಗಳನ್ನು ಆಡುವುದು ಅಭಿಮಾನಕ್ಕೆ ಸಾಕ್ಷಿಯಾಗಿದೆ. 

ಉಡುಪಿ ಜಿಲ್ಲೆಯ ಕುಂಜಾಲಿನ ನೀಲಾವರ ಕ್ರಾಸ್‌ ಬಳಿ ನಿರಂತರ 7 ದಿನಗಳ ಕಾಲ ನಡೆದ ಕ್ಷೇತ್ರ ಮಹಾತ್ಮೆಗಳ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸಿತು. 

ನೀಲಾವರ ಕ್ರಾಸ್‌ ಫ್ರೆಂಡ್ಸ್‌ ಮತ್ತು ರೋಟರಿ ರಾಯಲ್‌ ಬ್ರಹ್ಮಾವರದ ಸಹಭಾಗಿತ್ವದಲ್ಲಿ ಅದ್ಧೂರಿ 7 ದಿನಗಳ ಯಕ್ಷೋತ್ಸವ ಯಶಸ್ವಿಯಾಗಿ ನಡೆದು ಹೊಸ ದಾಖಲೆಗೆ ಪಾತ್ರವಾಯಿತು. 

ಪ್ರತಿಭಾ ಸಂಪನ್ನ ಕಲಾವಿದ ಅಡೂರು ಮರೆಯಾದರು

ಅವರೊಬ್ಬರು ದೈತ್ಯ ಪ್ರತಿಭೆ, ತನ್ನ ನುಡಿತಗಳಿಂದ ಲಕ್ಷಾಂತರ ಜನರಿಗೆ ರಂಜನೆ ನೀಡಿದವರು,ನಿದ್ದೆಯಿಂದ ಬಡಿದೆಬ್ಬಿಸಿದವರು, ಅವರೇ ಅಡೂರು ಗಣೇಶ್‌ ರಾವ್‌. ನಡುವಯಸ್ಸಿನಲ್ಲೇ  ಯಕ್ಷಲೋಕವನ್ನು ಅಗಲಿ ಹೋಗಿದ್ದಾರೆ. 

ಡಿಸೆಂಬರ್‌ 11 ರಂದು ಯಕ್ಷಗಾಭಿಮಾನಿಗಳಿಗೆ, ನೂರಾರು ಕಲಾವಿದರಿಗೆ ನೋವಿನ ಸುದ್ದಿಯಾಗಿ ಕೇಳಿ ಬಂದಿದ್ದು ಅಡೂರು ಗಣೇಶ್‌ ರಾವ್‌ ಅವರ ನಿಧನದ ವಾರ್ತೆ. ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ  50 ರ ಹರೆಯದ ಗಣೇಶ್‌ ರಾವ್‌ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಯಾರಿಗೂ ನಂಬಲೂ ಸಾಧ್ಯವಾಗಲಿಲ್ಲ.

ಉಮಾಲಯಪುರಂ ಶಿವರಾಮನ್‌ ಕೈಚಳಕ; ಬೆರಗು ಮೂಡಿಸುವ ಮಾಂತ್ರಿಕ

ಗಂಭೀರ ಸ್ವರೂಪದ ದೈತ್ಯ ಪ್ರತಿಭೆ, ಎದುರು ಮೃದಂಗ ಇಟ್ಟು ಬೆರಳುಗಳ ಸಂಚಾರ ಆರಂಭಿಸಿತು ಎಂದರೆ ಪ್ರೇಕ್ಷಕರೆಲ್ಲ ಮಂತ್ರ ಮುಗ್ಧ, ಸಹ ಕಲಾವಿದರೂ ಹೊಸ ಲೋಕಕ್ಕೆ ಸಾಗುವುದರಲ್ಲಿ ಎರಡು ಮಾತಿಲ್ಲ. ಹೌದು ನಾವು ಹೇಳ ಹೊರಟಿರುವುದು ಕರ್ನಾಟಕ ಸಂಗೀತ ಕ್ಷೇತ್ರದ ಪ್ರಸಿದ್ಧ ಮೃದಂಗ ವಾದಕ ಡಾ.ಉಮಾಲಯಪುರಂ ಕಾಶಿ ವಿಶ್ವನಾಥ ಶಿವರಾಮನ್‌ ಅವರ ಕುರಿತಾಗಿ.

ಮಂದಾರ್ತಿ ಮೇಳದ ತಿರುಗಾಟ ಆರಂಭ ; ಹರಕೆ ದಾರರಲ್ಲಿ ಸಂಭ್ರಮ 

ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ವತಿಯಿಂದ ಹೊರಡುವ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ 5 ತಂಡಗಳು ನವೆಂಬರ್‌ 19 ರಿಂದ ಆರಂಭಗೊಳ್ಳಲಿದೆ. 

ಐದೂ ಮೇಳಗಳಿಗೂ ನಿರಂತರ ಮೇ ತಿಂಗಳ ಕೊನೆಯ ವರೆಗೆ ಹರಕೆ ಆಟಗಳಿದ್ದು, ಉಡುಪಿ ಜಿಲ್ಲೆ , ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಹಲವೆಡೆ ಹರಕೆದಾರರ ಮನೆಗಳಲ್ಲಿ ಪ್ರದರ್ಶನಗಳು ನಿಗದಿಯಾಗಿದೆ. 

ಭಕ್ತರಲ್ಲಿ ಅಪಾರ ನಂಬಿಕೆ ಇರುವ ಬೆಳಕಿನ ಸೇವೆ, ಗೆಜ್ಜೆ ಸೇವೆ ಎಂದು ಕರೆಯಲಾಗುವ ಹರಕೆ ಬಯಲಾಟಕ್ಕೆ ಕರಾವಳಿ ಮತ್ತು ಮಲೆನಾಡಿನಲ್ಲಿ ವಿಶೇಷ ಸಂಭ್ರಮವಿರುತ್ತದೆ. ಅದಕ್ಕೆ ಸಿದ್ದತೆಯೂ ಜೋರಾಗಿ ನಡೆಯುತ್ತದೆ. 

 1990ರಲ್ಲೇ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ ಮರುಳ ಸಿದ್ದಯ್ಯ ಇನ್ನಿಲ್ಲ

ಕನ್ನಡ ನಾಡು ಕಂಡ ಮೇರು ಸಾಹಿತಿ ,ಸಾರಸ್ವತ ಲೋಕದ ಕೊಂಡಿ,  ಹಿರಿಯ ಚಿಂತಕ , ನಾಡಿನ ಏಳಿಗೆಗಾಗಿ ಪೂರ್ವಾಲೋಚನೆ ಹೊಂದಿದ್ದ , ಸ್ವಚ್ಛತೆಗಾಗಿ ಶ್ರಮಿಸಿದ್ದ ಮಹಾನ್‌ ಚೇತನವೊಂದನ್ನು ಕಳೆದುಕೊಂಡಿದೆ. ಸಮಾಜದ ಏಳಿಗೆಗಾಗಿ ಶ್ರಮಿಸಿ ವಿದೇಶಿ ವಿದ್ಯಾರ್ಥಿಗಳ ಗಮನ ಸೆಳೆದಿದ್ದ  ಡಾ. ಎಚ್‌.ಎಂ. ಮರುಳು ಸಿದ್ದಯ್ಯ ಅವರು 87 ರ ಹರೆಯದಲ್ಲಿ  ನಮ್ಮನ್ನಗಲಿದ್ದಾರೆ. 

ವಾರ್ಧಕ್ಯದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಕನ್ನಡದ ಧ್ವನಿಯಾಗಿದ್ದ ಕಾವಿ, ಔದಾರ್ಯದ ನಿಧಿಯಾಗಿದ್ದ ಮಹಾಸ್ವಾಮೀಜಿ 

''ತಮ್ಮ ಮೂಗಿನ ನೇರಕ್ಕೆ, ಅನುಕೂಲವಾದಿ ರಾಜಕಾರಣಕ್ಕೆ ಬಸವ ತತ್ವವನ್ನು ಬಳಸಿ ಇತ್ತೀಚೆಗೆ ನೀಡಲಾಗುತ್ತಿರುವ ಹೇಳಿಕೆಗಳನ್ನು ಸಮಾಜ ಉಪೇಕ್ಷಿಸಬೇಕು. ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿಲ್ಲದು'' ಇದು ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರು  ಲಿಂಗೈಕ್ಯರಾಗುವ 2 ದಿನ ಮುನ್ನ ನೀಡಿದ ಹೇಳಿಕೆ.

ಸಮಾನತೆ,ಶಾಂತಿ, ಸಹಬಾಳ್ವೆ ಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದ  ಶ್ರೀಗಳು ಬಸವಣ್ಣ  ಹೇಳಿತ ತತ್ವ ಸಿದ್ಧಾಂತಗಳಲ್ಲಿ  ಯಾವುದೇ ರಾಜಿ ಮಾಡಿಕೊಂಡವರಲ್ಲ. 

ಯಕ್ಷಲೋಕದ ನಿಜಾರ್ಥದ ನಾಯಕ ಹಾರಾಡಿ ರಾಮಗಾಣಿಗರು

ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ, ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು ಕಲಾವಿದರಲ್ಲಿ ಸದಾ ನೆನಪಾಗುವ ಹೆಸರು ಹಾರಾಡಿ ರಾಮಗಾಣಿಗರದ್ದು. 

ಯಕ್ಷರಂಗದ ಮೇರು ಶಿಖರವಾಗಿದ್ದ ಹಾರಾಡಿ ರಾಮಗಾಣಿಗರು ನಮ್ಮನ್ನಗಲಿ (1968)50 ವರ್ಷಗಳು ಸಂದರೂ ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. 

ತನ್ನ ಗತ್ತು ಗೈರತ್ತು , ಹಿತಮಿತವಾದ ಅದ್ಭುತ ಮಾತುಗಾರಿಗೆ , ಸುಂದರವಾದ ಆಳಂಗ, ಆಳ್ತನದಿಂದ  ಸ್ವಾತಂತ್ರ್ಯ ಪೂರ್ವದಲ್ಲಿ ಕರಾವಳಿಯ ರೀಯಲ್‌ ಹೀರೋ ಎನಿಸಿಕೊಂಡಿದ್ದವರು ರಾಮಗಾಣಿಗರು. ಇಂದಿಗೂ ಅವರ ಪಾತ್ರ ವೈಭವವನ್ನು 70 ವರ್ಷ ದಾಟಿದ ಹಿರಿಯರು ನೆನಪಿಸಿಕೊಳ್ಳುತ್ತಾರೆ. 

Pages

Back to Top