CONNECT WITH US  

ಶ್ರೀಮಂತವಾದರೂ ಯಕ್ಷಗಾನ ಲೋಕ ಬಡವಾಗುತ್ತಿದೆಯೇ ? 

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ ಮಾತು ಯಕ್ಷಗಾನಾಭಿಮಾನಿಗಳೆಲ್ಲರೂ ಒಪ್ಪುವಂತಹದ್ದು. 

ಯಕ್ಷಗಾನದ ಶಕ್ತಿಗೆ ಸಾಕ್ಷಿ ಎಂಬಂತೆ ಅಮೆರಿಕಾ , ಜರ್ಮನ್‌ನಿಂದ ಮಹಿಳೆಯರು ಆಗಮಿಸಿ ಅದನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದಾರೆ. ಕರಾವಳಿಗೆ ಮತ್ತು ಕರಾವಳಿಗರಿಗೆ ಮಾತ್ರ ಸೀಮಿತ ಎನಿಸಿಕೊಂಡ ಕಲೆ  30 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನಗೊಂಡಿದ್ದು, ಅಂತರಾಷ್ಟ್ರೀಯ ಜಾನಪದ ಕಲೆಗಳ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದು ಕಲೆಯ ಶ್ರೇಷ್ಠತೆಗೆ ಸಾಕ್ಷಿ .

ಅಂದು v/s ಇಂದು; ಯಕ್ಷ ಲೋಕದಲ್ಲಿ ಮತ್ತೆ ಹಳೆಯ ಕಾಲ ಬರುವುದೇ ? 

1965 ರ ಸುಮಾರಿನ ಮಂದಾರ್ತಿ ಮೇಳದ ಯಕ್ಷಗಾನದ ದೃಶ್ಯ

ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಮರೆಯಾದ ದಿಗ್ಗಜರು ನೂರಾರು ಮಂದಿ. ತಲೆಮಾರುಗಳಿಂದ ವಿವಿಧ ಪರಂಪರೆ ವಿಶಿಷ್ಟತೆಗಳನ್ನು ತನ್ನೊಳಗೆ ಸೇರಿಸಿಕೊಂಡಿರುವ ಶ್ರೀಮಂತ ಕಲೆ ಯಕ್ಷಗಾನ. ಕಲೆಗಾಗಿ ತಮ್ಮ ಸಂತೋಷವನ್ನೆಲ್ಲಾ ಬದಿಗೊತ್ತಿ ಬದುಕನ್ನೇ ನಿಸ್ವಾರ್ಥ ಭಾವದಿಂದ ಮುಡಿಪಾಗಿಟ್ಟವರು ಹಲವಾರು ಮಂದಿ ದಿಗ್ಗಜರು. ಅವರೆಲ್ಲಾ ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಹೋದರು ತಮ್ಮ ಅದ್ಭುತ ಕೊಡುಗೆಳಿಂದಾಗಿ ಇಂದಿಗೂ ಕೆಲವರು ಕಲಾಲೋಕದಲ್ಲಿ ನಿತ್ಯ , ಇನ್ನು ಕೆಲವರು ಆಗಾಗ ನೆನಪಾಗುತ್ತಾರೆ. ಇತಿಹಾಸದ ಪುಟಗಳಲ್ಲಿ ಸೇರಿರುವ ಅವರೆಲ್ಲಾ ಕಲೆ ಇರುವವರೆಗೆ ಸದಾ ನೆನಪಿನಲ್ಲಿ ಉಳಿಯುತ್ತಾರೆ. 

ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾದರೆ 26ರ ರ‍್ಯಾಪ್‌ ಗಾಯಕ 

ಆತನಿಗಿನ್ನೂ ವಯಸ್ಸು 26, ತನ್ನ  ಹಾಡುಗಳ ಮೂಲಕ ಯುವ ಹೃದಯಗಳಲ್ಲಿ ಹುಚ್ಚೆಬ್ಬಿಸಲು ಆರಂಭಿಸಿದ್ದ . ಪ್ರಖ್ಯಾತಿಯ ಉತ್ತುಂಗಕ್ಕೇರಬೇಕಾದ ಹುಡುಗ ಚಿಗುರುವಾಗಲೇ ಮರೆಯಾಗಿ ಹೋಗಿದ್ದಾನೆ. 

ಹೌದು ಅಮೆರಿಕದ ಯುವ ರ‍್ಯಾಪ್‌ ಹಾಡುಗಾರ ಮೆಕ್‌ ಮಿಲ್ಲರ್‌ ಕ್ಯಾಲಿಫೋರ್ನಿಯಾದ ತನ್ನ ನಿವಾಸದಲ್ಲಿ  ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಹಿಂಸೆ ವಿರುದ್ಧ ನಿರಂತರ ಆಕ್ರೋಶ ; ಕಟು ಪ್ರವಚನಗಳ ಸಂತ ಜಿನೈಕ್ಯ 

ಅಹಿಂಸೆಯೆ  ಪರಮಧರ್ಮ ಎನ್ನುವ ಜೈನ ಮುನಿಗಳಲ್ಲಿ  ತರುಣ್‌ ಸಾಗರ್‌ ಜಿ ಮಹಾರಾಜ್‌ ಅವರದ್ದು ಬಲು ದೊಡ್ಡ ಹೆಸರು. ಅವರ ಖ್ಯಾತಿಗೆ ಕಾರಣವಾದುದ್ದು ಏರು ಧ್ವನಿಯ ಪ್ರವಚನಗಳು. ಭ್ರಷ್ಟಾಚಾರ, ಮದ್ಯಪಾನ , ಪ್ರಾಣಿಹತ್ಯೆಯ ವಿರುದ್ಧ ಪ್ರತೀ ಪ್ರವಚನದಲ್ಲೂ  ಆಕ್ರೋಶ ಹೊರ ಹಾಕಿದ ಮುನಿ ಅತ್ಯಂತ ಕಠಿಣ ಸಲ್ಲೇಖನ ವೃತ ನಡೆಸಿ ಇಹಲೋಕ ತ್ಯಜಿಸಿ ಜಿನೈಕ್ಯರಾಗಿದ್ದಾರೆ. 

ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಗುಹಾಂಚಿ ಎಂಬ ಹಳ್ಳಿಯಲ್ಲಿ 1967 ರಲ್ಲಿ ಪ್ರತಾಪ್‌ ಚಂದ್ರ ಜೈನ್‌ ಮತ್ತು ಶಾಂತಿ ಬಾಯಿ ಜೈನ್‌ ಅವರ ಸುಪುತ್ರನಾಗಿ ಜನಿಸಿದ ತರುಣ್‌ ಸಾಗರ್‌ ಅವರ ಬಾಲ್ಯದ ಹೆಸರು ಪವನ್‌ ಕುಮಾರ್‌. 

ಬಡಗಿನ ಶ್ರೇಷ್ಠ ಭಾಗವತ ಹೆರಂಜಾಲು ಗೋಪಾಲ ಗಾಣಿಗರು 

ಹೆರಂಜಾಲು... ಯಕ್ಷಗಾನ ಲೋಕದಲ್ಲಿ ಈ ಪುಟ್ಟ ಊರಿನ ಹೆಸರು ಕಳೆದ ಒಂದು ಶತಮಾನದಿಂದ ಪ್ರಸಿದ್ಧಿಯಲ್ಲಿದೆ. ಇದಕ್ಕೆ ಕಾರಣ ಯಕ್ಷರಂಗಕ್ಕೆಅಮೋಘ ಕೊಡುಗೆ ಸಲ್ಲಿಸಿರುವ ಹೆರಂಜಾಲು ಗಣಪಯ್ಯ ಗಾಣಿಗ, ಅವರ ಪುತ್ರ ಗುರು ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಅವರ ಪುತ್ರ ಪ್ರಸಿದ್ದ ಭಾಗವತ ಹೆರಂಜಾಲು ಗೋಪಾಲ ಗಾಣಿಗರು.

ಬಡಗುತಿಟ್ಟಿನ ಯಕ್ಷಗಾನ ಲೋಕದ ಸಮರ್ಥ ಗುರುಗಳಲ್ಲಿ ಒಬ್ಬರಾದ ಹೆರಂಜಾಲು ವೆಂಕಟರಮಣ ಗಾಣಿಗರ ಸುಪುತ್ರನಾಗಿ ಜನಿಸಿದ ಗೋಪಾಲ ಗಾಣಿಗರು ಬಾಲ್ಯದಲ್ಲೇ ಕಲಾವಿದನಾಗುವ ಮಹಾದಾಸೆ ಹೊಂದಿ  ಸಾಧನೆ ಮತ್ತು ಶ್ರಮದಿಂದ ಯಶಸ್ಸು ಪಡೆದು ಅಪಾರ ಸಾಂಪ್ರದಾಯಿಕ ಯಕ್ಷಗಾನ ಅಭಿಮಾನಿಗಳ ಪ್ರೀತಿಗೆ ಪಾತ್ರವಾದವರು. 

ಕಲಾವಿದನಾಗಲು ಬೆಂಬಲವಿರಲಿಲ್ಲ !.99 ರ ಗೋಪಾಲ ರಾಯರ ಮಾತು 2

ಯಕ್ಷಗಾನವೆನ್ನುವುದು ಪರಂಪರೆಯಿಂದ ಬೆಳೆದು ಬಂದ ಕಲೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕೈ ಕೈ ಸೇರಿ ಚಪ್ಪಾಳೆ ಎಂಬಂತೆ ಹಲವು ವಿದ್ವಾಂಸರ ಕೊಡುಗೆ , ಕಲಾವಿದರ ಕೊಡುಗೆ ಕಲೆಯ ಏಳಿಗೆಗೆ ಕಾರಣವಾಗಿದೆ. ಯಕ್ಷಗಾನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿದೆ. ಇಂದು ಬದಲಾವಣೆಯ ಹಾದಿ ಹಿಡಿದಿದೆ. 

ಡೈಲಾಗ್‌ಗಳ ಹಿರಿಯಣ್ಣ ಮಾಸ್ಟರ್‌ ಹಿರಣ್ಣಯ್ಯ !

ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಲವು ದಿಗ್ಗಜರಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರ ಹೆಸರು ಅಗ್ರ ಪಂಕ್ತಿಯದ್ದು. ತನ್ನ  ಅಭಿನಯ , ಖಡಕ್‌ ಡೈಲಾಗ್‌ಗಳ ಮೂಲಕ ವಿಡಂಬನಾತ್ಮಕವಾಗಿ ಎಷ್ಟೇ ಪ್ರಭಾವಿಗೂ ನೇರವಾಗಿ ರಾಜಿಯಿಲ್ಲದೆ ಟಾಂಗ್‌ ಕೊಡುವ ಸಾಹಸ ಮಾಡಿದ ಬಣ್ಣದ ಬದುಕಿನ ಬೆರಳೆಣಿಕೆಯ ಕಲಾವಿದರ ಪೈಕಿ ಮಾಸ್ಟರ್‌ ಹಿರಣ್ಣಯ್ಯ ಓರ್ವರು. 

ಮಾಸ್ಟರ್‌ ಹಿರಣ್ಣಯ್ಯ ಬಣ್ಣದ ಲೋಕದಲ್ಲೇ ಜನ್ಮವೆತ್ತಿದ ಅದ್ಭುತ ಕಲಾವಿದ. ಮೈಸೂರಿನ ಕಲ್‌ಚರ್ಡ್‌ ಕಾಮೆಡಿಯನ್‌ ಎಂದು ಆ ಕಾಲದಲ್ಲಿ ಪ್ರಖ್ಯಾತವೆತ್ತಿದ ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ  ದಂಪತಿಗಳ ಏಕೈಕ ಪುತ್ರನಾಗಿ  ಫೆಬ್ರವರಿ 15, 1934ರಲ್ಲಿ ಜನಿಸಿದ ನರಸಿಂಹ ಮೂರ್ತಿ ಬಣ್ಣದ ಲೋಕದಲ್ಲಿ ಖ್ಯಾತವಾಗಿದ್ದು ಮಾತ್ರ ತಂದೆಯ ಹೆಸರಲ್ಲಿ ಮಾಸ್ಟರ್‌ ಸೇರಿಸಿಕೊಂಡು. 

ರಸರಾಗ ಚಕ್ರವರ್ತಿ ಕಾಳಿಂಗ ನಾವಡರ ಗುರುಭಕ್ತಿ;ಅಜ್ಜ ಹೇಳಿದ ಕಥೆ!

ಗುಂಡ್ಮಿ ಕಾಳಿಂಗ ನಾವಡರು ತನ್ನ ಕಂಠಸಿರಿಯಿಂದ ಯಕ್ಷಲೋಕವನ್ನು ಶ್ರೀಮಂತಗೊಳಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವರು. ರಂಗದ ನಿಯಂತ್ರಣ ವಿಚಾರದಲ್ಲಿ  ಅವರಿಗಿಂತ ಹೆಚ್ಚುಗಾರಿಕೆ ಬೇರೆಯವರಲ್ಲಿ ಅಸಾಧ್ಯ ಎನ್ನುವುದು ಅವರೊಂದಿಗೆ ರಂಗದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರ ಅಭಿಪ್ರಾಯ. 
ಹಿರಿಯರಿಗೆ ಗೌರವ ಕೊಡುವ ವಿಚಾರದಲ್ಲಿ ಕಾಳಿಂಗ ನಾವಡರು ಆದರ್ಶಪ್ರಾಯರು. ಅದಕ್ಕೆ ಸಾಕ್ಷಿ ಎನ್ನುವಂತೆ ನನ್ನ ಅಜ್ಜ , ಹಿರಿಯ ಭಾಗವತ , ಗುರು ದಿವಂಗತ ಗೋರ್ಪಾಡಿ ವಿಟ್ಠಲ ಪಾಟೀಲರು ಹೇಳಿದ ಒಂದು ಕಥೆ. 

ಮನೆಯಲ್ಲಿ ಕ್ಯಾಸೆಟ್‌ ಹಾಡುಗಳನ್ನು ಕೇಳುವ ಕಾಲದಲ್ಲಿ ನಾವಡರ ಹಾಡು ಕೇಳಿದ ಬಳಿಕ ಅಜ್ಜ ನಾವಡರ ಕುರಿತು ಒಂದು ಸ್ವಾರಸ್ಯಕರ ಅವರ ಆದರ್ಶಪ್ರಾಯ ನಡತೆಯ ಬಗ್ಗೆ ಘಟನೆಯೊಂದರ ಮೆಲುಕು ಹಾಕಿದರು. 

Pages

Back to Top