CONNECT WITH US  

"ಈ ತರಕಾರಿ ಸೊಪ್ಪು"ಗಳ ಔಷಧೀಯ ಗುಣಗಳ ಬಗ್ಗೆ ಗೊತ್ತಾ…

ಹಿಂದೆ ಜನರು ತಮಗೆ ಅಗತ್ಯವಿರುವ ಔಷಧಿಗಳನ್ನು ತಮ್ಮ,-ತಮ್ಮ ಮನೆಗಳಲ್ಲಿಯೇ ತಯಾರಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯವರಿಗೆ ಔಷಧದ ಬಗ್ಗೆ ಅಷ್ಟೊಂದು ತಿಳಿದಿರಲಿಕ್ಕಿಲ್ಲ. ಹಾಗಾಗಿ ನಾವು ಮನೆಯಲ್ಲಿ ಸೇವಿಸುವ ಕೆಲವೊಂದು ಸೊಪ್ಪುಗಳಲ್ಲಿ ಏನೇನು ಅಡಗಿದೆ ಔಷಧೀಯ ಗುಣಗಳು ಎಂಬುದು ತಿಳಿದುಕೊಳ್ಳೋಣ.

1. ಮೆಂತೆ ಸೊಪ್ಪು:

- ಮೆಂತೆ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಇರುತ್ತದೆ.

- ಮಧುಮೇಹಿಗಳಿಗೂ ಇದು ಉತ್ತಮ ಔಷಧಿ.

- ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ.

ಚಿನ್ನ ಕೊಂಡರೆ ಸಾಲದು; ಚಿನ್ನದ ಒಡವೆಗಳ ಜೋಪಾನ ಹೇಗೆ!

ಆಭರಣ ಧರಿಸುವುದರಿಂದ ನೈಸರ್ಗಿಕ ಸೌಂದರ್ಯ ಇನ್ನೂ ಶೋಭಿಸುತ್ತದೆ. ಭಾರತ ದೇಶದಲ್ಲಿರುವವರಿಗೆ ಚಿನ್ನದ ಮೇಲೆ ವಿಶೇಷವಾದ ವ್ಯಾಮೋಹವಿದೆ. ನಿಮಗೆಲ್ಲಾ ಚಿನ್ನದ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಚಿನ್ನದ ಒಡವೆ ಇದ್ದರೂ ಸಹ ಸಾಲದು. ಎಷ್ಟೇ ಬಡವರಿದ್ದರೂ ಇದ್ದದ್ದರಲ್ಲೇ ಹಣವನ್ನು ಕೂಡಿಟ್ಟುಕೊಂಡು ಚಿನ್ನದ ಒಡವೆ ಮಾಡಿಸಿಕೊಂಡೇ ಇರುತ್ತಾರೆ. ಚಿನ್ನದ ಒಡವೆಗಳನ್ನು ಕೊಂಡು ಬಿಟ್ಟರೆ ಮುಗಿದು ಹೋಗಲ್ಲ ಅವನ್ನು ದೀರ್ಘ‌ಕಾಲದವರೆಗೆ ಜಾಗೃತೆ ಇದ್ದು  ನೋಡಿಕೊಳ್ಳುವುದು ಅಷ್ಟೇ ಮುಖ್ಯ.

ಚಿನ್ನದ ಒಡವೆಗಳ ಜೋಪಾನ ಮಾಡುವಲ್ಲಿ ಕೆಲವು ವಿಧಾನಗಳನ್ನು ಅನುಸರಿಸಿದರೆ ಬಹಳ ಕಾಲದವರೆಗೆ ಅದರ ಅಂದವನ್ನು ಹಾಗೆಯೇ ಇಡಬಹುದು.

ವೀಳ್ಯದೆಲೆಯ ಮಹತ್ವ; ವೀಳ್ಯದೆಲೆಯಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ!

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇ ಬೇಕು. ವೀಳ್ಯದೆಲೆ ಜೀವಸತ್ವವನ್ನು ಹೊಂದಿದ್ದು ಇದನ್ನು ನಿತ್ಯ ಊಟವಾದ ಬಳಿಕ ತಾಂಬೂಲದ ರೂಪದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ಬಹಳ ಉಪಯುಕ್ತ.

ಎರಡು ವೀಳ್ಯದೆಲೆ ಜಿಗಿಯಿರಿ...ಅವುಗಳ ಕೆಲಸ ಅವು ಮಾಡಿಕೊಳ್ಳುತ್ತಾ ಹೋಗುತ್ತವೆ. ಇನ್ನು ವೀಳ್ಯದೆಲೆಯಿಂದ ಆಗುವ ಉಪಯೋಗಗಳು ಏನು ಎಂಬುದು ತಿಳಿದುಕೊಳ್ಳೋಣ...

1.ಒಂದು ಚಮಚದಷ್ಟು ವೀಳ್ಯದೆಲೆಯ ರಸವನ್ನು ಮಕ್ಕಳಿಗೆ ಕೊಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.

ಬಹುಪಯೋಗಿ ನಿಂಬೆ  ಹಣ್ಣಿನಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ...?

ನಿಂಬೆ ಹಣ್ಣು ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ! ಈ ನಿಂಬೆ ಹಣ್ಣು ಮಿಟಮಿನ್‌ ಸಿ ಯ ಸಮೃದ್ಧ ಆಗರ. ಅಡುಗೆಯಲ್ಲಿ ಆರೋಗ್ಯಕ್ಕೆ , ಸೌಂದರ್ಯಕ್ಕೆ  ಹೀಗೆ ಹತ್ತು ಹಲವು ವಿಧಗಳಲ್ಲಿ  ನಿಂಬೆ ಅತ್ಯುಪಯುಕ್ತ.

ನಿಂಬೆ ಸಾರು:

ಒಂದು ಚಮಚ ಅಕ್ಕಿ, ಒಂದು ಚಮಚ ಗೋಧಿ , ಒಂದು ಗಂಟೆ ನೆನೆಸಿಡಿ. ಬಳಿಕ ಸ್ವಲ್ಪ ತೆಂಗಿನ ತುರಿ, 4 ಹಸಿ ಮೆಣಸು, ಬೆಲ್ಲ, ಉಪ್ಪು, 2 ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿ ಬೆರಸಿ ಎಲ್ಲವನ್ನು ನೆನೆಸಿದ ಅಕ್ಕಿ ಮತ್ತು ಗೋಧಿಯೊಂದಿಗೆ ನಯವಾಗಿ ಅರೆಯಬೇಕು. ಬಳಿಕ ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಂದು ನಿಂಬೆರಸ ಬೆರಸಬೇಕು.ತುಪ್ಪದಲ್ಲಿ ಸಾಸಿವೆ , ಕರಿಬೇವು ,ಇಂಗು , ಮೆಣಸಿನ  ಒಗ್ಗರಣೆ ನೀಡಬೇಕು.

ನಿಂಬೆ -ಪುದೀನಾ ಸಾರು

ಸಿಂಪಲ್‌ ಆಗಿ ವೆಜಿಟೆಬಲ್‌ ಮಂಚೂರಿಯನ್‌ ಮಾಡೋದು ಹೇಗೆ ?

ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನ‌ಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್‌ಗೆ ಮನೆಯಲ್ಲೇ ಕೂತು ಚೈನೀಸ್‌ ಫುಡ್ ತಿನ್ನಬೇಕು ಎಂಬ ಆಸೆ ನಿಮಗಾಗಿದ್ದರೆ ವೆಜಿಟೆಬಲ್‌ ಮಂಚೂರಿಯನ್‌ ತಯಾರಿಸಿ ನೋಡಿ ತುಂಬಾ ಸಿಂಪಲ್‌. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ವೆಜಿಟೆಬಲ್‌ ಮಂಚೂರಿಯನ್‌ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ...

ಬೇಕಾಗುವ ಸಾಮಗ್ರಿಗಳು:

ಹಣ್ಣುಗಳಿಂದ ಸೌಂದರ್ಯವರ್ಧಕ; ಮನೆಯಲ್ಲೇ ತಯಾರಿಸಿ

ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ ಅದಕ್ಕಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಬ್ಯೂಟಿಪಾರ್ಲರ್‌ಗಳಿಗೆ ಹೋಗುವುದು ಸಾಮಾನ್ಯವಾದ ವಿಷಯ.

ಹಿಂದಿನ ಕಾಲದಲ್ಲಿ ಜನರು ಮನೆಯಲ್ಲಿ ಸುಲಭವಾಗಿ ಸಿಗಬಹುದಾದ ವಸ್ತುಗಳನ್ನು ಉಪಯೋಗಿಸಿ ಚರ್ಮವನ್ನು ಕಾಪಾಡಿಕೊಳ್ಳುತ್ತಿದ್ದರು.  ಆದರೆ ಈಗ ಇಂತಹ ಪದಾರ್ಥಗಳ ಉಪಯೋಗ ಹೇಗೆ ಮಾಡಬಹುದೆಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಾವು ದಿನನಿತ್ಯ ಉಪಯೋಗಿಸುವ ತರಕಾರಿ ಹಾಗೂ ಹಣ್ಣುಗಳ ಬಳಕೆಯಿಂದ ಯಾವುದೇ ರೀತಿಯ ದುಷ್ಟರಿಣಾಮ ಬೀರುವುದಿಲ್ಲ.

ಮನೆಯಲ್ಲಿ ಸಿಗುವ ವಸ್ತುಗಳಿಂದ ತಯಾರಿಸುವ ಸೌಂದರ್ಯದ ಟಿಪ್ಸ್‌ ನಿಮಗಾಗಿ...

ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ.. ಆರೋಗ್ಯಕ್ಕೆ ಹಿತಕರ!

ಮಣ್ಣಿನ ಪಾತ್ರೆಗಳು ಪರಿಸರ ಸ್ನೇಹಿಯಾಗಿವೆ. ಯಾವುದೇ ರಾಸಾಯನಿಕ ಅಂಶಗಳ ಮಿಶ್ರಣವಿಲ್ಲದಿರುವುದರಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ ಮಾತ್ರವಲ್ಲದೇ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುವುದಿಲ್ಲ ಎಂಬುದು ನಂಬಿಕೆ. 

ಮಳೆಗಾಲದ ಸ್ಪೆಷಲ್‌ ತಿಂಡಿ ಪತ್ರೊಡೆ ಮಾಡುವ ವಿಧಾನ ಹೀಗೆ..

ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆಗೆ ವಿಶೇಷವಾದ ಸ್ಥಾನವಿದೆ.ಪರಿಸರಕ್ಕೆ ಪೂರಕವಾಗಿರುವ ಆಹಾರ ಪದ್ಧತಿ ಕರಾವಳಿಗರ ವಿಶೇಷ.ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹಲಸು,ಅಣಬೆ,ಕೆಸು ಮುಂತಾದ ಪರಿಸರದಲ್ಲಿ ಸಿಗುವ ವಸ್ತುಗಳನ್ನೇ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿರುವುದು ನಮ್ಮ ಕರಾವಳಿಗರ ಹೆಗ್ಗಳಿಕೆ.ಮಳೆಗಾಲ ಬಂತೆಂದರೆ ಊರ ಕೆಸು ಮತ್ತು ಮರ ಕೆಸುವಿನ ಎಲೆಗಳನ್ನು ಬಳಸಿ ತಯಾರಿಸುವ ಪತ್ರೊಡೆಯ ರುಚಿಯನ್ನು ಬಲ್ಲವರೇ ಬಲ್ಲರು..ಹಾಗಾದ್ರೆ  ಮರ ಕೆಸುವಿನ ಪತ್ರೊಡೆ ತಯಾರಿಸುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೊಣ...

Pages

Back to Top