CONNECT WITH US  

ಕಾನನದ ಯೋಧರು: ಅರಣ್ಯ ಇಲಾಖೆಯ ದಿನಗೂಲಿ ನೌಕರರು

ಚಿತ್ರ: ವಿಜಯ ಮೋಹನರಾಜ…

ಆನೆ ಓಡಿಸಲು ಹೋಗಿ ವಿಧಿವಶರಾದ ಚಿಕ್ಕೀರಯ್ಯ, ಬಿಳಿಗಿರಿರಂಗನಬೆಟ್ಟದ ಬುಡದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಕಣ್ಣು ಕಳೆದುಕೊಂಡ ಕಂಚಗಳ್ಳಿಯ ಮಾದೇಗೌಡ, ಕಳ್ಳಬೇಟೆಗಾರರನ್ನು ತಡೆಯಲು ಹೋಗಿ ತಾನೇ 32 ಚಿಲ್ಲುಗಳಿಂದ ಗಾಯಗೊಂಡ ಬೆಂಡುಗೋಡಿನ ಸಿದ್ದರಾಜು ಹೀಗೆ ಅರಣ್ಯ ಇಲಾಖೆಯ ನೂರಾರು ದಿನಗೂಲಿ ನೌಕರರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕಾಡು, ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕಾವೇರಿ ವನ್ಯಜೀವಿಧಾಮದ ಹೆಮ್ಮೆಯ ತರಕರಡಿಯ ಕಥೆ 

ಸಾಮಾನ್ಯವಾಗಿ ಒಂಟಿಯಾಗಿ ಓಡಾಡುವ ಜೇನ್‌ ಹೀರ್ಕ ಕೆಲವೊಮ್ಮೆ ಜೊತೆಯಾಗಿ ನಮ್ಮ ಕ್ಯಾಮರಾ ಟ್ರಾಪ್‌ಗ್ಳಲ್ಲಿ ಕಂಡುಬಂದಿವೆ. ಇವು ಬಹುಶಃ ಗಂಡು ಹೆಣ್ಣು ಜೋಡಿಯಿರಬಹುದೆಂದು ನಾವು ಊಹಿಸಿದರೆ ತಪ್ಪಾಗಬಹುದು. ಕೆಲವೊಮ್ಮೆ ತಾಯಿಯನ್ನೇ ಮೀರಿ ಬೆಳೆದ ಗಂಡು ಮರಿ ಇನ್ನೂ ತನ್ನ ಅವ್ವನ ಮೇಲೆ ಅವಲಂಬಿತವಾಗಿ ಜೊತೆಯಾಗಿ ಓಡಾಡುತ್ತಿರುತ್ತದೆ. ಈ ತರಹದ ಹಲವಾರು ಕುತೂಹಲಕಾರಿ ವಿಚಾರಗಳನ್ನು ಹೊಂದಿರುವ ಜೇನ್‌ ಹೀರ್ಕವನ್ನು ನಮ್ಮ ಸಮಾಜಕ್ಕೆ ತೋರಿಸಿಕೊಟ್ಟ ಕಾವೇರಿ ವನ್ಯಜೀವಿಧಾಮಕ್ಕೆ ಬಹು ದೊಡ್ಡ ಕೃತಜ್ಞತೆಗಳು.

ಅರಮನೆಯ ಚಿರತೆಗಳು: ಚಿಕ್ಕ ಕಾಡಿನಲ್ಲೂ ಅಚ್ಚರಿಯ ಲೋಕ

ಮೈಸೂರುನಗರ ಚಾಮುಂಡಿಬೆಟ್ಟವನ್ನು ಎÇÉಾ ಕಡೆಯಿಂದಲೂ ವ್ಯಾಪಿಸಿಕೊಳ್ಳುತ್ತಿದೆ, ಹಾಗೆಯೇ ಬೆಟ್ಟದ ಮೇಲೆ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಮುಂದೊಂದು ದಿನ ಅಲ್ಲಿ ಚಿರತೆಗಳು ಉಳಿಯುತ್ತವೆಯೇ  ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಮೈಸೂರಿನಲ್ಲಿ ವನ್ಯಜೀವಿ, ಪರಿಸರದ ಬಗ್ಗೆ ಕಾಳಜಿಯಿರುವ ಸಾಕಷ್ಟು ನಾಗರಿಕರಿ¨ªಾರೆ ಅವರು ಚಾಮುಂಡಿಬೆಟ್ಟದ ಕಾಡು ಮತ್ತು ಅದರ ವನ್ಯಜೀವಿಗಳನ್ನು ಉಳಿಸಿಕೊಳ್ಳುತ್ತಾರೆಂಬ ಭರವಸೆಯಿದೆ.  

ಹಿಕ್ಕೆಯ ಒಡಲಲ್ಲಿ ವನ್ಯ ಬದುಕಿನ ರಹಸ್ಯ!

ಕರಡಿಯನ್ನು ಸಂರಕ್ಷಿಸಬೇಕಾದರೆ ಅದು ಆಹಾರಕ್ಕಾಗಿ ಆಶ್ರಯಿಸಿರುವ ಹಲವಾರು ಜಾತಿಯ ಮರಗಳನ್ನು ಗುರುತಿಸಿ ಕಾಪಾಡಬೇಕಾಗುತ್ತದೆ. ಆ ಮರಗಳ ಜಾತಿಯನ್ನು ತಿಳಿದುಕೊಳ್ಳಲು ಕರಡಿಗಳ ಹಿಕ್ಕೆಯೇ ನಮಗೆ ದಾರಿ ದೀಪ. ಬಹುಶಃ ಒಂದು ಹಿಕ್ಕೆಯ ಗುಡ್ಡೆ ಸಾವಿರ ಪದಗಳಿಗೆ ಸಮಾನ ಎಂದೇ ಹೇಳಬಹುದು. ಹಿಕ್ಕೆಗಳನ್ನು ಅಭ್ಯಸಿಸುವುದು ಪತ್ತೇದಾರಿ ಕೆಲಸದ ಹಾಗೆ. 

ವನ್ಯಜೀವಿ ವಿಜ್ಞಾನದ ಅಸೂಯೆ ರಾಜಕಾರಣ

ಮೈಸೂರಿನಿಂದ ಹೊರಟ ತಕ್ಷಣ ಮಾಧ್ಯಮಗಳಿಂದ ಕರೆಗಳು ಬರಲು ಪ್ರಾರಂಭವಾಯಿತು. ಚಿರತೆ ಸತ್ತದ್ದೇಕೆ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು. ಮರುದಿನ ಬೆಳಿಗ್ಗೆ ಕೆಲ ಪತ್ರಿಕೆಗಳನ್ನು ನೋಡಿದಾಗ ಆಘಾತವಾಯಿತು. ಒಂದು ಪ್ರಮುಖ ಪತ್ರಿಕೆಯಲ್ಲಿ ""ರೇಡಿಯೋ ಕಾಲರ್‌ ಅಳವಡಿಸಿದ್ದರಿಂದಲೇ ಚಿರತೆ ಸಾವನ್ನಪಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು, ಅದರ ಕಳೇಬರವನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ'' ಎಂದು ಬರೆಯಲಾಗಿತ್ತು. ಚಿರತೆಯ ಕಳೇಬರವನ್ನು ಮೈಸೂರಿನಲ್ಲೇ ಸುಟ್ಟಿದ್ದರೂ ಹೀಗೆ ಪ್ರಕಟವಾಗಿತ್ತು.

ಚಿರತೆಗಳ ಬಗ್ಗೆ ಹೊಸ ವಿಚಾರ ತಿಳಿಸಿದ "ಬೆಂಕಿ'

ಬೆಂಕಿಯ ಹೊಟ್ಟೆಯ ಕೆಳಭಾಗದ ತೊಗಲು ಸ್ವಲ್ಪ ಜೋತುಬಿದ್ದಿದ್ದು ಅದಕ್ಕೆ ವಯಸ್ಸಾಗುತ್ತಿದೆಯೆಂದು ತಿಳಿಸಿತು. ಈ ಚಿತ್ರ ಸಿಕ್ಕಿದ ಒಂದೇ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಸಹೋದ್ಯೋಗಿಗಳೆಲ್ಲ ಸೇರಿ ಬೆಂಕಿಯ ಮೈಮೇಲಿದ್ದ ಚುಕ್ಕೆಗಳನ್ನು ಕೇಕ್‌ ಮೇಲೆ ಛಾಪಿಸಿ ನನಗೂ ವಯಸ್ಸಾಗುತ್ತಿದೆಯೆಂದು ಜ್ಞಾಪಿಸಿದರು. 

ಕಾವೇರಿ ನದಿ ತೀರದಲ್ಲಿ ಓಡಿ ಮಾಯವಾಯ್ತು ಚಿರತೆ

ಉದ್ದವಾದ ಕೋಲಿನಿಂದ ಒಮ್ಮೆ ಅದಕ್ಕೆ ತಿವಿದು ಸಂಪೂರ್ಣವಾಗಿ ಮಲಗಿದೆಯೆಂದು ಖಾತರಿ ಮಾಡಿಕೊಂಡು ಬೋನಿನ ಬಾಗಿಲು ತೆಗೆದೆ. ಪ್ರಾಣಿಯನ್ನು ಮೆಲ್ಲನೆ ಆಚೆ ಎಳೆದು, ಕೆಳಗೆ ದಪ್ಪವಾದ ಬಲೆಯಿದ್ದ ಹೊದಿಕೆಯ ಮೇಲೆ ಮಲಗಿಸಿ, ತೂಕ ಮಾಡಲು ತೆಗೆದುಕೊಂಡು ಹೋದೆವು. ತಕ್ಕಡಿಗೆ ಚಿರತೆ ಮಲಗಿದ್ದ ತಾಟಿ ಮತ್ತು ಬಲೆಯನ್ನು ತೂಗುಹಾಕಿದರೆ ತಕ್ಕಡಿಯ ಮುಳ್ಳು 61 ಕೆ.ಜಿ. ಎಂದು ತೋರಿಸಿತು.

ಹುಲಿಯೂರು ದುರ್ಗದಿಂದ ಕಾವೇರಿಗೆ ಬಂದ ಚಿರತೆ

ಚಿರತೆ ಹೇಗಿದೆಯೆಂದು ನೋಡೋಣವೆಂದು ಮೆಲ್ಲಗೆ ಅದಿದ್ದ 407 ಗಾಡಿಯ ಹತ್ತಿರ ಹೋದರೆ ಸಾಕು, ಅದಕ್ಕೆ ಕಂಡಿಲ್ಲದಿದ್ದರೂ ಸಹ ಗೊರ್ರ, ಗೊರ್ರ ಎಂದು ಗರ್ಜಿಸಲು ಪ್ರಾರಂಭಿಸುತ್ತಿತ್ತು. ಬೋನನ್ನು ಟಾರ್ಪಾಲ್‌ ಹಾಕಿ ಮುಚ್ಚಿದ್ದರಿಂದ, ಮೆಲ್ಲಗೆ ಟಾರ್ಪಾಲ್‌ ಸರಿಸಿ ಒಳಗೆ ಇಣುಕಿದೆ.

Pages

Back to Top