CONNECT WITH US  

ಗುಂಪು ಕೃಷಿ ಯೋಜನೆ ರೈತರಿಗೆ ಉಪಯೋಗವಾಗಲಿ 

ಉತ್ತರಖಂಡದ ಮಾದರಿಯಲ್ಲಿ ರಾಜ್ಯದಲ್ಲೂ ಗುಂಪು ಕೃಷಿ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಒಂದು ಉತ್ತಮ ನಿರ್ಧಾರ. ಕೃಷಿ ಕ್ಷೇತ್ರದ ಬಿಕ್ಕಟ್ಟಿನ ನಿವಾರಣೆಯೆಂದರೆ ರೈತರಿಗೆ ಸಾಲ ಕೊಡುವುದು, ಅನಂತರ ಅದನ್ನು ಮನ್ನಾ ಮಾಡುವುದು ಎಂಬ ಸೀಮಿತ ಚಿಂತನೆಯಿಂದ ಕೊನೆಗೂ ಸರಕಾರ ಹೊರ ಬಂದಿರುವುದರ ಸೂಚನೆ ಇದು.

ಇಂದಿರಾ ಕ್ಯಾಂಟೀನ್‌ ಪ್ರಗತಿ ಕುಂಠಿತ ಜನಪ್ರಿಯ ಯೋಜನೆ ವಿಳಂಬ ಬೇಡ

ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದಿದೆ. ಶೇ.50ರಷ್ಟೂ ಅನುಷ್ಠಾನವಾಗಿಲ್ಲ. ಸಮ್ಮಿಶ್ರ ಸರಕಾರ ಬಂದ ನಂತರ ವೇಗ ಕಡಿಮೆ ಯಾಗಿದೆ. ಕಾಂಗ್ರೆಸ್‌ ಯೋಜನೆ ಎಂಬ ಕಾರಣಕ್ಕೆ ನಿರ್ಲಕ್ಷಿಸಿದರೆ ಜನರಿಗೆ ಅನ್ಯಾಯ ಮಾಡಿದಂತೆ.

ಉಪಚುನಾವಣೆ ಫ‌ಲಿತಾಂಶ: ರಾಷ್ಟ್ರ ರಾಜಕಾರಣಕ್ಕೂ ಸಂದೇಶ 

ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ವಿಶೇಷ ಅಚ್ಚರಿಗೇ ಕಾರಣವಾಗದಿದ್ದರೂ ಸ್ಪಷ್ಟ ಸಂದೇಶವನ್ನು ನೀಡಿದೆ. ಸಾಮಾನ್ಯವಾಗಿ ಉಪಚುನಾವಣೆ ನಡೆದಾಗ ಆಡಳಿತ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು ಮಾಮೂಲು ವಿಚಾರ. ಹೀಗಾಗಿ ಈ ಫ‌ಲಿತಾಂಶ ಅಚ್ಚರಿ ಎನ್ನುವಂತಿಲ್ಲ. ಆದರೆ ರಾಜ್ಯ ಮತ್ತು ರಾಷ್ಟ್ರ ರಾಜಕೀಯಕ್ಕೆ ಫ‌ಲಿತಾಂಶದಿಂದ ಹೋಗಿರುವ ಸಂದೇಶ ಮಾತ್ರ ಬಹಳ ಸ್ಪಷ್ಟವಾಗಿದೆ. 

ಪ್ರಾಮಾಣಿಕ ಇಚ್ಛಾಶಕ್ತಿ ಅಗತ್ಯ

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮರಳಿನ ಕೊರತೆ ಹಾಹಾಕಾರ ಸೃಷ್ಟಿಸಿದೆ. ಇದು ಆಡಳಿತಾರೂಢರಿಗೆ ಎಷ್ಟು ನಿದ್ದೆಗೆಡಿಸಬೇಕಿತ್ತೋ ಅಷ್ಟನ್ನು ಕೆಡಿಸಿಲ್ಲ, ಕಾರ್ಮಿಕರು, ಮರಳು ಬಳಕೆದಾರರಿಗೆ ಮಾತ್ರ ಸಾಕಷ್ಟು ನಿದ್ದೆಗೆಡಿಸಿದೆ ಎನ್ನುವುದು ಕಂಡುಬರುತ್ತಿದೆ.
 

ಅಸಾಮಾನ್ಯ ಆಟಗಾರ ಕ್ರಿಕೆಟ್‌ ದೇವರಾಗುವ ಹಾದಿಯಲ್ಲಿ ಕೊಹ್ಲಿ

ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಗೆ 30 ವರ್ಷ ಭರ್ತಿಯಾಗಲಿದೆ. ಕ್ರಿಕೆಟ್‌ನಲ್ಲಿನ ಈಗಿನ ಸ್ಪರ್ಧೆ, ಗುಣಮಟ್ಟ ವೇಗವನ್ನು ನೋಡಿದರೆ ಕೊಹ್ಲಿಗೆ ಕನಿಷ್ಠ ಇನ್ನೂ ಏಳೆಂಟು ವರ್ಷ ಸಮಯವಿದೆ. ಇಷ್ಟರಲ್ಲಿ ಅವರು ಮಾಡಲಿರುವ ದಾಖಲೆಗಳನ್ನು, ಸೃಷ್ಟಿಸಲಿರುವ ಹೆಜ್ಜೆಗುರುತುಗಳನ್ನು ಕಲ್ಪಿಸಿಕೊಂಡರೆ ಅದ್ಭುತವೆನಿಸುತ್ತದೆ. ಇದುವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವುದು 387 ಇನಿಂಗ್ಸ್‌, ಅದರಲ್ಲಿ 61 ಶತಕಗಳು ಬಂದಿವೆ.

ಹೆಮ್ಮೆ ಪಡುವ ಸಾಧನೆ ಇಂಡೋನೇಶ್ಯದಲ್ಲಿ ನಡೆದ ಏಶ್ಯನ್‌ ಗೇಮ್ಸ್‌

ಎಂಟನೇ ಸ್ಥಾನದಲ್ಲಿ ದೇಶ ಮಿಂಚುವಂತೆ ಮಾಡಿದ ಸಾಹಸ ಕಡಿಮೆಯೇನಲ್ಲ. ಎಲ್ಲ ಕ್ರೀಡಾಪಟುಗಳಿಗೆ ಹ್ಯಾಟ್ಸಾಪ್‌.

ಇಂಡೋನೇಶ್ಯದಲ್ಲಿ ನಡೆದ 18ನೇ ಏಶ್ಯನ್‌ ಗೇಮ್ಸ್‌ನ ಫೀಲ್ಡ್‌ ಮತ್ತು ಟ್ರ್ಯಾಕ್‌ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಮಾಡಿದ ಅಮೋಘ ಸಾಧನೆಯಿಂದ ದೇಶ ಹೆಮ್ಮೆಪಡುತ್ತಿದೆ. 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 2010ರಲ್ಲಿ ಚೀನಾದ ಗ್ವಾಂಗ್‌ಝೂನಲ್ಲಿ ನಡೆದ ಏಶ್ಯನ್‌ ಗೇಮ್ಸ್‌ ಸಾಧನೆಯನ್ನು ಮೀರಿಸಿದ್ದಾರೆ ನಮ್ಮ ಕ್ರೀಡಾಪಟುಗಳು. 

3 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್‌ ಮುನ್ನೋಟವಿಲ್ಲದ ಲೆಕ್ಕಾಚಾರಗಳು

ಮುಂಗಡಪತ್ರ ಮುಂದಿನ ಆರ್ಥಿಕ ವರ್ಷದಲ್ಲಿ ಸರಕಾರ ಯಾವ ರೀತಿ ಕಾರ್ಯಾಚರಿಸಲಿದೆ ಎಂಬ ಮುನ್ನೋಟ ನೀಡುವಂಥದ್ದು. ಯಾವೆಲ್ಲ ಅಭಿವೃದ್ಧಿ ಯೋಜನೆಗಳು, ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ- ಹೀಗೆ ಒಟ್ಟಾರೆ ಸರಕಾರದ ದೂರದೃಷ್ಟಿಯ ಸ್ಪಷ್ಟ ಚಿತ್ರಣ ಇದರಲ್ಲಿ ಸಿಗಬೇಕು.ಆದರೆ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಈ ಯಾವ ಲಕ್ಷಣಗಳಿಲ್ಲ. 

ಕೊನೆಗೂ ಸಂಪುಟ ರಚನೆ; ಇನ್ನು ಆಡಳಿದತ್ತ ಗಮನಹರಿಸಿ

ಬಹಳಷ್ಟು ಹಗ್ಗ ಜಗ್ಗಾಟದ ಬಳಿಕ ಕಡೆಗೂ ಕುಮಾರಸ್ವಾಮಿ ನೇತೃತ್ವದ ಸರಕಾರದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸಿನ 14 ಮತ್ತು ಜೆಡಿಎಸ್‌ನ 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೇ 15ರಂದು ಚುನಾವಣೆ ಫ‌ಲಿತಾಂಶ ಘೋಷಣೆಯಾಗಿದ್ದರೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾದ ಪರಿಣಾಮವಾಗಿ ಸರಕಾರ ರಚನೆ ವಿಳಂಬವಾಯಿತು. ಕುಮಾರಸ್ವಾಮಿ, ಪರಮೇಶ್ವರ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ 15 ದಿನಗಳ ಬಳಿಕ ಹೊಸ ಸಚಿವರ ಸೇರ್ಪಡೆಯಾಗಿದೆ ಎಂಬ ಅಂಶವೇ ಎರಡೂ ಪಕ್ಷಗಳಿಗೆ ಸಂಪುಟ ರಚನೆ ಎಷ್ಟು ಕಗ್ಗಂಟಾಗಿತ್ತು ಎನ್ನುವುದಕ್ಕೆ ಸಾಕ್ಷಿ. ಸಚಿವ ಸ್ಥಾನಕ್ಕೆ ಎರಡೂ ಪಕ್ಷಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದುದೇ ಇದಕ್ಕೆ ಕಾರಣ. 

Pages

Back to Top