CONNECT WITH US  

ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು? ದೀರ್ಘಾವಧಿ ಹೂಡಿಕೆ ಅಗತ್ಯ

ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವುದು ಬಹುತೇಕ ಎಲ್ಲ ಹೆತ್ತವರ ಜೀವನೋದ್ದೇಶವಾಗಿರುವುದರಲ್ಲಿ ಯಾವುದೇ ಅತಿಶಯ ಇಲ್ಲ. ಹಾಗಿದ್ದರೂ ಈ ನಿಟ್ಟಿನಲ್ಲಿ ವಸ್ತು ನಿಷ್ಠ  ಚಿಂತನೆ ಹಿಂದೆಂದಿಗಿಂತಲೂ ಇಂದು ಮುಖ್ಯವಾಗುತ್ತದೆ. 

ಮಕ್ಕಳು ದೊಡ್ಡವರಾದಾಗ ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಮುಂತಾಗಿ ಏನೇನೆಲ್ಲ ಆಗಬೇಕೆಂದು ಹೆತ್ತವರು ಕನಸು ಕಾಣುತ್ತಾರೆ. ಆದರೆ ಮಕ್ಕಳಿಗಾಗಿನ ತಮ್ಮ ಈ ಆಶೋತ್ತರಗಳನ್ನು ಈಡೇರಿಸುವ ಆರ್ಥಿಕ ಮಾರ್ಗೋಪಾಯಗಳನ್ನು ಮಾತ್ರ ಬಹತೇಕ ಹೆಚ್ಚಿನ ತಂದೆ-ತಾಯಿಗಳು ಅರಿತಿರುವುದಿಲ್ಲ ಎನ್ನುವುದು ವಾಸ್ತವ.

ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ, ಆಯ್ಕೆ ನಿಮ್ಮದು !

ನಗ ಎಂದೂ ನಗಣ್ಯ ಅಲ್ಲ! Top Ten ಹೂಡಿಕೆಯಲ್ಲಿ  ಚಿನ್ನ ಹೇಗೆ ? ಟಾಪ್ ಟೆನ್ ಹೂಡಿಕೆ ಆಯ್ಕೆಗಳಲ್ಲಿ ಕೊನೆಯ ಹತ್ತನೇ ಸ್ಥಾನದಲ್ಲಿ ಚಿನ್ನ ಇದೆ. ಇಂಗ್ಲಿಷ್ನಲ್ಲಿ  ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬ ಮಾತಿದೆ. ಟಾಪ್ ಟೆನ್ ಹೂಡಿಕೆ ಪಟ್ಟಿಯಲ್ಲಿ ಚಿನ್ನ ಕೊನೆಯ ಸ್ಥಾನದಲ್ಲಿದೆಯಾದರೂ ಅದು ಎಷ್ಟು ಮಾತ್ರಕ್ಕೂ  ನಗಣ್ಯ ಹೂಡಿಕೆಯ ಆಯ್ಕೆ ಅಲ್ಲ ! ನಗಣ್ಯ ಎನ್ನುವಲ್ಲಿ ನಗ ಇರುವುದನ್ನು ಕೂಡ ನಾವು ಮನಗಾಣಬೇಕು. ಆದುದರಿಂದ ನಗ ಎಂದೂ ನಗಣ್ಯ ಆಗಲಾರದು. 

ಇದು ಹಿರಿಯ ನಾಗರಿಕರಿಗೆ ನೆಮ್ಮದಿ, ಭದ್ರತೆ ನೀಡುವ ಆಕರ್ಷಕ ಸ್ಕೀಮ್

ಟಾಪ್ ಟೆನ್ ಹೂಡಿಕೆ ಆಯ್ಕೆಗಳನ್ನು ಅವಲೋಕಿಸುವಲ್ಲಿ  ಏಳನೇ ಕ್ರಮಾಂಕದಲ್ಲಿ ನಾವು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು (ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ - SCSS ಯೋಜನೆ) ಗಮನಿಸಬಹುದು. 

ಎಲ್ಲಕ್ಕಿಂತ ಮೊದಲು ನಾವು ಉಳಿತಾಯ ಮತ್ತು ಹೂಡಿಕೆ ಎಂಬೆರಡು ಪದಗಳ ಅರ್ಥ ವ್ಯತ್ಯಾಸವನ್ನು  ಬಹಳ ಸೂಕ್ಷ್ಮವಾಗಿ ಕಾಣಬೇಕಾಗುತ್ತದೆ. ಉಳಿತಾಯ ಎಂದರೆ ಖರ್ಚಾಗಬಹುದಾದ ಹಣವನ್ನು ಖರ್ಚು ಮಾಡದೆ ಕಾಲಕಾಲಕ್ಕೆ  ಜೋಪಾನವಾಗಿ ಶೇಖರಿಸಿಡುವುದು. ಇದರ ಅರ್ಥ ಉಳಿತಾಯದ ಹಣ "ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ' ಎಂಬರ್ಥದಲ್ಲಿ ಹೆಚ್ಚಾಗುತ್ತಾ ಹೋಗುವುದು. 

ಪಬ್ಲಿಕ್ ಪ್ರಾವಿಡೆಂಟ್ ಫಂಡ್: ದುಡಿಯುವ ವರ್ಗಕ್ಕೊಂದು ವರದಾನ

ಜನಸಾಮಾನ್ಯರು ತಾವು ಕಷ್ಟಪಟ್ಟು  ಸಂಪಾದಿಸಿ ಉಳಿಸುವ ಹಣವನ್ನು  ದೀರ್ಘಾವಧಿಗೆ ಹೂಡಿಕೆ ಮಾಡಿ ಗರಿಷ್ಠ ಲಾಭ ಪಡೆಯುವಂತಾಗಲು ಸರಕಾರವೇ ರೂಪಿಸಿರುವ ಸುಭದ್ರ ಮತ್ತು ಆಕರ್ಷಕ ಯೋಜನೆಗಳು ಕೆಲವಿವೆ. ಅವುಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು.

ಟಾಪ್ ಟೆನ್ ಹೂಡಿಕೆ ಅವಕಾಶಗಳಲ್ಲಿ  ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಅತ್ಯಾಕರ್ಷಕವಾಗಿದ್ದು ಇದು ಮಧ್ಯಮ ವರ್ಗದ, ತಿಂಗಳ ಸಂಬಳದ ಆದಾಯ ಹೊಂದಿರುವ ನೌಕರ ವರ್ಗಕ್ಕೆ ದೊಡ್ಡ ವರದಾನದ ರೂಪದಲ್ಲಿ ಸರಕಾರ ರೂಪಿಸಿರುವ 15 ವರ್ಷಗಳ ದೀರ್ಘಾವಧಿಯ ಯೋಜನೆಯಾಗಿದೆ ಎನ್ನುವುದು ಗಮನಾರ್ಹ. 

ಟಾಪ್ ಟೆನ್ ಹೂಡಿಕೆ ಆಯ್ಕೆಗಳು ಯಾವುವು ? ಇಲ್ಲಿದೆ ಸುಲಭ ಮಾಹಿತಿ…

ಉಳಿತಾಯದ ಹಣವನ್ನು ಆಕರ್ಷಕ ಮಾಧ್ಯಮಗಳಲ್ಲಿ ಹೂಡುವ ಎಲ್ಲರ ಉದ್ದೇಶವು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಅದೆಂದರೆ ಗರಿಷ್ಠ ಇಳುವರಿ ಕನಿಷ್ಠ ಅವಧಿಯೊಳಗೆ ಸಿಗುವಂತಿರಬೇಕು; ಕಡಿಮೆ ರಿಸ್ಕ್ ಇರಬೇಕು; ಅಸಲು ಹಣವನ್ನು ಎಂದೂ ಕಳೆದುಕೊಳ್ಳಬಾರದು !

ಹಣ ಹೂಡಿಕೆಯಲ್ಲಿ ಇಂತಹ ಒಂದು ಧೋರಣೆ ಸರಿಯೇ ಆಗಿದೆ. ಹಿಂದೆಲ್ಲ ಐದು ವರ್ಷದೊಳಗೆ ದುಪ್ಪಟ್ಟಾಗುವ ಠೇವಣಿ ಯೋಜನೆಗಳು ಇದ್ದವು. ಮೂರು ಪಟ್ಟು , ನಾಲ್ಕು ಪಟ್ಟು ಆಗುವ ಆಮಿಷ ಒಡ್ಡುವ ಯೋಜನೆಗಳೂ ಇದ್ದವು. ಆದರೆ ಅಂತಹ ಯೋಜನೆಗಳಲ್ಲಿ ಹಣ ಹೂಡಿದ ಅಮಾಯಕರು ತಮ್ಮ ಅಸಲನ್ನೇ ಕಳೆದು ಕೊಂಡರು. 

ಕರೋಡ್ ಪತಿ ಆಗುವ ಆಸೆಯೇ? ಹಾಗಾದ್ರೆ ELSS ಬಗ್ಗೆ ತಿಳಿಯಿರಿ

ಕರೋಡ್ ಪತಿಗಳಾಗಬೇಕು ಎಂದು ಎಲ್ಲರೂ ಬಯಸುವುದು ಸಹಜವೇ. ಆದರೆ ಕರೋಡ್ಪತಿಗಳಾಗುವ ಉಪಾಯ ಹೇಗೆ ಎಂಬುದು ಜನಸಾಮಾನ್ಯರಿಗೆ ಯಾವತ್ತೂ ಮಿಲಿಯನ್ ಡಾಲರ್ ಪ್ರಶ್ನೆಯೇ. ಹಾಗಿದ್ದರೂ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಅಥವಾ ಇಎಲ್ಎಸ್ಎಸ್ ಎಂಬುದು ಕರೋಡ್ ಪತಿಗಳಾಗುವುದಕ್ಕೆ ಸರಿಯಾದ ಉಪಾಯ ಎಂದು ಹೇಳಬಹುದು. 

ಸಾಮಾನ್ಯವಾಗಿ ಹಣ ಸಂಪಾದನೆ, ಉಳಿತಾಯ, ಹಣಕಾಸು ಹೂಡಿಕೆ ಇವೆಲ್ಲವುಗಳ ಹಿಂದಿರುವ ನಮ್ಮ ಮನೋಭಿಲಾಷೆ ಎಂದರೆ ನಾವೂ ಕರೋಡ್ಪತಿಗಳಾಗಬೇಕು ಎಂಬುದೇ ಆಗಿರುತ್ತದೆ. ಈಗಿನ ದಿನಗಳಲ್ಲಿ ಲಕ್ಷಕ್ಕೆ ಬೆಲೆಯೇ ಇಲ್ಲ; ಹಾಗಾಗಿ ಲಕ್ಷಾಧಿಪತಿಗಳಾಗಬೇಕೆಂಬ ಜನಸಾಮಾನ್ಯರ ಕನಸು ಇಪ್ಪತ್ತೆದು ವರ್ಷಗಳ ಹಿಂದಿನ ಮಾತು; ಈಗ ಕೋಟಿಗೆ ಮಾತ್ರವೇ ಬೆಲೆ; ಹಾಗಾಗಿ ಈಗಿನ ದಿನಗಳಲ್ಲಿ  ಕೋಟ್ಯಧಿಪತಿಗಳಾಗುವುದೇ ಒಳ್ಳೆಯದು. 

ಹೂಡಿಕೆ ಮೂಲಕ ಹಣ ಸಂಪಾದಿಸುವುದು ಹೇಗೆ ? ಇಲ್ಲಿವೆ ಹಲವು ಉಪಾಯ !

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಲ್ಲಿ, ಹೇಗೆ, ಯಾವಾಗ ಹೂಡಿಕೆ ಮಾಡಬೇಕು ಎಂಬ ನಿಖರ ತಿಳಿವಳಿಕೆ ಅನೇಕರಿಗೆ ಇರುವುದಿಲ್ಲ; ಆದರೆ ಹನಿ ಹನಿಯಾಗಿ ಕೂಡಿಡುವ ಹಣವನ್ನು ಅತ್ಯಧಿಕ ಲಾಭ ತರುವ ಮಾಧ್ಯಮಗಳಲ್ಲಿ ಹೂಡುವುರಲ್ಲೇ ಬುದ್ಧಿವಂತಿಕೆ ಇರುತ್ತದೆ. 

ಅನೇಕರು ತಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಹಣ ಇರಿಸುವುದನ್ನು ಅಥವಾ ಉಳಿಯ ಬಿಡುವುದನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಇದಕ್ಕೆ ಕೇವಲ ಅಜ್ಞಾನವೊಂದೇ ಕಾರಣವಲ್ಲ; ನಮಗೆ ಬೇಕೆಂದಾಗ ಹಣ ನಮ್ಮ ಕೈಗೆ ಸಿಗುವಂತಿರಬೇಕು ಎಂಬುದೇ ಅವರ ವಾದವಾಗಿರುತ್ತದೆ. ಇದು ನಿಜವೂ ಹೌದು; ನಮ್ಮ ಕಷ್ಟಕ್ಕೆ ಒದಗಬೇಕಾದ ನಮ್ಮ ಹಣ ನಮಗೆ ಸಕಾಲದಲ್ಲಿ ಸಿಗದಿದ್ದರೆ ಏನು ಪುರುಷಾರ್ಥ ಸಾಧಿಸಿದಂತಾಯಿತು ಎಂಬುದೇ ಅನೇಕರ ಅಭಿಪ್ರಾಯ. 

ಶೇರು ಹೂಡಿಕೆಯಿಂದ ಸಿರಿವಂತರಾಗಬೇಕೇ?ನೀವೂ ಬಫೆಟ್ ಬಗ್ಗೆ ತಿಳಿದುಕೊಳ್ಳಿ

ಶೇರು ಮಾರುಕಟ್ಟೆಯಲ್ಲಿ  ನೀವು ಎಷ್ಟು ಬೇಕಾದರೂ ಹಣ ಹೂಡಿ; ಆದರೆ ಎರಡು ನಿಯಮಗಳನ್ನು ಮಾತ್ರ ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ !

ಈ ಮಾತನ್ನು ಹೇಳಿದವರು ಯಾರೆಂಬುದು ಇಡಿಯ ಜಗತ್ತಿಗೇ ಗೊತ್ತಿದೆ. ಏಕೆಂದರೆ ಇದು ಅಷ್ಟು ಪ್ರಸಿದ್ಧವಾದ ಮಾತು. ಇದನ್ನು ಹೇಳಿದವರು ಜಾಗತಿಕ ಶೇರು ಮಾರುಕಟ್ಟೆಯ ದಂತ ಕಥೆ ಎನಿಸಿರುವ ವಿಶ್ವ ವಿಖ್ಯಾತ ಹೂಡಿಕೆದಾರರ ಗುರು, ವಿಶ್ವದ ಮೂರನೇ ಅತೀ ದೊಡ್ಡ ಸಿರಿವಂತ ವಾರನ್ ಬಫೆಟ್ ! 

Pages

Back to Top