CONNECT WITH US  

ಶೇರು ಹೂಡಿಕೆಯಿಂದ ಸಿರಿವಂತರಾಗಬೇಕೇ?ನೀವೂ ಬಫೆಟ್ ಬಗ್ಗೆ ತಿಳಿದುಕೊಳ್ಳಿ

ಶೇರು ಮಾರುಕಟ್ಟೆಯಲ್ಲಿ  ನೀವು ಎಷ್ಟು ಬೇಕಾದರೂ ಹಣ ಹೂಡಿ; ಆದರೆ ಎರಡು ನಿಯಮಗಳನ್ನು ಮಾತ್ರ ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ !

ಈ ಮಾತನ್ನು ಹೇಳಿದವರು ಯಾರೆಂಬುದು ಇಡಿಯ ಜಗತ್ತಿಗೇ ಗೊತ್ತಿದೆ. ಏಕೆಂದರೆ ಇದು ಅಷ್ಟು ಪ್ರಸಿದ್ಧವಾದ ಮಾತು. ಇದನ್ನು ಹೇಳಿದವರು ಜಾಗತಿಕ ಶೇರು ಮಾರುಕಟ್ಟೆಯ ದಂತ ಕಥೆ ಎನಿಸಿರುವ ವಿಶ್ವ ವಿಖ್ಯಾತ ಹೂಡಿಕೆದಾರರ ಗುರು, ವಿಶ್ವದ ಮೂರನೇ ಅತೀ ದೊಡ್ಡ ಸಿರಿವಂತ ವಾರನ್ ಬಫೆಟ್ ! 

ಗ್ರಾಮೀಣ ಅಂಚೆ ಜೀವವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ವಿಮಾ ರಹಿತ ಬದುಕನ್ನು ನಾವು ಇಂದಿನ ಆಧುನಿಕ ಜಗತ್ತಿನಲ್ಲಿ ಊಹಿಸಲಾರೆವು ಎನ್ನುವಲ್ಲಿ ಅತಿಶಯೋಕ್ತಿ ಇಲ್ಲ. ಅಷ್ಟು ಸಂಕೀರ್ಣವಾಗಿದೆ ಇಂದಿನ ನಮ್ಮ ಅಧುನಿಕ ಜಗತ್ತು, ಸಮಾಜ ಮತ್ತು ಜೀವನ. 

ಹಾಗಿದ್ದರೂ ಭಾರತೀಯರಿಗೆ ವಿಮೆ ಅಂದರೆ ಅಲರ್ಜಿ ಮತ್ತು ಭಾರತೀಯರ ವಿಮಾ ನಿರ್ಲಕ್ಷ್ಯ ಜಗತ್ ಪ್ರಸಿದ್ಧ ಎನ್ನುವುದನ್ನು ನಾವು ಹಿಂದಿನ ಕಂತಿನಲ್ಲಿ ಕಂಡುಕೊಂಡಿದ್ದೇವೆ. ಆದರೂ ಸಾಮಾಜಿಕ ಭದ್ರತೆಯ ಯತ್ನವಾಗಿ ಸರಕಾರ ಮತ್ತು ವಿಮಾ ಕಂಪೆನಿಗಳು ಜನರಿಗೆ ವಿಮೆಯ ಮಹತ್ವವನ್ನು ಮನದಟ್ಟು ಮಾಡಿಕೊಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಭಾರತೀಯ ಜೀವ ವಿಮಾ ನಿಗಮವು ಭಾರತ ಸರಕಾರದ ಒಡೆತನದಲ್ಲಿ, ಕಳೆದ ಆರು ದಶಕಗಳಿಂದ (ಸ್ಥಾಪನೆ : ಸೆಪ್ಟಂಬರ್ 1, 1956) ವಿಮಾ ಕ್ಷೇತ್ರದಲ್ಲಿ ಸೇವಾ ನಿರತವಾಗಿದೆ. 

ವಿಮೆ ಬಗ್ಗೆ ಅಸಡ್ಡೆ ಬೇಡ ; ಕೇರಳ, ಕೊಡಗು ಪ್ರವಾಹ ಕಲಿಸಿದೆ ಪಾಠ !

ವಿಮೆ ಮಾಡುವುದರಲ್ಲಿ ಭಾರತೀಯರ ನಿರಾಸಕ್ತಿ ಜಗತ್ ಪ್ರಸಿದ್ಧ. ವಿಮೆಯ ರೂಪದಲ್ಲಿ ಜನರಿಗೆ ಒದಗುವ ಸಾಮಾಜಿಕ ಭದ್ರತೆ  ಇಲ್ಲಿ ಬಹುತೇಕ ಶೂನ್ಯ ಎನ್ನುವುದೊಂದು ವಿಸ್ಮಯ, ಸೋಜಿಗ, ದುರದೃಷ್ಟಕರ !

ಹಾಗೆ ನೋಡಿದರೆ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿಯವರಿಗೆ ಕೂಡ ವಿಮೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ವಿಮೆ ಮಾಡಿದರೆ ನಮಗೆ ದೇವರ ಮೇಲಿನ ವಿಶ್ವಾಸ ಕುಗ್ಗುತ್ತದೆ ಎಂಬುದೇ ಅವರ ಅಭಿಪ್ರಾಯವಾಗಿತ್ತು. ಆದರೆ ಜಗತ್ತು ಈಗ ಸಾಕಷ್ಟು ಬದಲಾಗಿದೆ. ಇಂದಿನ ಅತ್ಯಂತ ಅನಿಶ್ಚಿತ ದಿನಗಳಲ್ಲಿ ವಿಮೆ ಅಲ್ಲದೆ ಬೇರೆಯದರಲ್ಲಿ ವಿಶ್ವಾಸ ಇಡುವುದು ಅಸಾಧ್ಯ ಎಂಬಷ್ಟು ಜಗತ್ತು ವಿಪರ್ಯಾಸಕರವಾಗಿ ಬದಲಾಗಿದೆ. 

ಚಿನ್ನಾಭರಣ ತಯಾರಿಕೆ ಮೂಲ ಪ್ರಕ್ರಿಯೆ ಹೇಗೆ, ವೇಸ್ಟೇಜ್ ನಷ್ಟ ಎಂದರೇನು?

ಚಿನ್ನವು ಒಂದು ಲಘು ಲೋಹ; ಆದುದರಿಂದ ಅದು ಆಭರಣ ಉತ್ಪಾದನೆಯ ವಿವಿಧ ಪ್ರಕ್ರಿಯೆಗಳಿಗೆ ಒಳಪಡುವಾಗ ಸಣ್ಣ ಪ್ರಮಾಣದ ನಷ್ಟಕ್ಕೆ ಗುರಿಯಾಗುತ್ತದೆ. ಸಾಂಪ್ರದಾಯಿಕ ವಿಧಾನದ ಚಿನ್ನದ ಶುದ್ಧತೆಯಲ್ಲಿ ಶೇ.2ರಷ್ಟು ವ್ಯತ್ಯಯ ಇರುತ್ತದೆ.

ವಜ್ರಾಭರಣ ನೋಡಲು ಸುಂದರ ನಿಜ, ಆದರೆ ರೀಸೇಲ್‌ ವ್ಯಾಲ್ಯೂ ?

ವಿವಾಹ ನಿಶ್ಚಿತಾರ್ಥಕ್ಕೆ  ಡೈಮಂಡ್‌ ರಿಂಗ್‌ ಕೊಡುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಏಕೆಂದರೆ ಅದು ನೋಡಲು ಅತ್ಯಾಕರ್ಷಕವೂ, ಫ‌ಳಫ‌ಳನೆ ಹೊಳೆಯುವಂಥದ್ದೂ ಆಗಿರುತ್ತದೆ. ಆದರೆ ಹೂಡಿಕೆ ದೃಷ್ಟಿಯಿಂದ ಅದರ ಮೌಲ್ಯ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ !

ಚಿನ್ನಾಭರಣಗಳಿಗೆ ಸಾವಿರಾರು ವರ್ಷಗಳಿಗೂ ಮೀರಿದ ಇತಿಹಾಸ ಇದೆ. ಆದರೆ ವಜ್ರಾಭರಣಗಳು ಈಚಿನವು. ಇತರ ಹರಳುಗಳಂತೆ ವಜ್ರ ಕೂಡ ಅತ್ಯಪರೂಪದ ವಸ್ತುವಾಗಿರುವುದರಿಂದ ಅದಕ್ಕೆ ಹಚ್ಚಿನ ಮೌಲ್ಯ ಇದೆ. ಚಿನ್ನಾಭರಣಗಳು ವಜ್ರ ಖಚಿತವಾದಾಗಲೇ ಅವುಗಳ ಆಕರ್ಷಣೆ ಹೆಚ್ಚು. 

ಚಿನ್ನ ಖರೀದಿಸೋಣ, ಆದರೆ ಚಿನ್ನದ ಬಗ್ಗೆ ನಮಗೆ ಗೊತ್ತಿರುವುದೆಷ್ಟು ?

ಸಮಾಜದ ಎಲ್ಲ ವರ್ಗದ ಜನರು ಚಿನ್ನವನ್ನು ಇಷ್ಟಪಡುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಲೋಕಿಸಿದರೆ ಹೊಳೆಯುವ ಹಳದಿ ಲೋಹವೆಂಬ ಚಿನ್ನವು ಭಾರತೀಯರ ಬದುಕಿನಲ್ಲಿ  ಹಾಸುಹೊಕ್ಕಾಗಿರುವುದನ್ನು ತಿಳಿಯಬಹುದು. ಹಾಗಿದ್ದರೂ ಚಿನ್ನ, ಅದರ ಭಾವನಾತ್ಮಕ ಮತ್ತು ಹೂಡಿಕೆ ಮೌಲ್ಯ, ಪರಿಶುದ್ಧತೆ, ವ್ಯಾವಹಾರಿಕ ಮಾಹಿತಿ, ಇತ್ಯಾದಿಗಳ ಬಗ್ಗೆ  ನಮಗೆ ತಿಳಿದಿರುವುದು ಅತ್ಯಲ್ಪವೇ. 

ಚಿನ್ನ ನಿಜಕ್ಕೂ ಒಂದು ಉತ್ತಮ ಹೂಡಿಕೆಯ ಮಾಧ್ಯಮ ಹೌದೇ ಅಲ್ಲವೇ ಎಂಬ ಬಗ್ಗೆ ಹೂಡಿಕೆ ತಜ್ಞರಲ್ಲಿ ಸದಾ ಕಾಲ ಚರ್ಚೆ ನಡೆಯುತ್ತಲೇ ಇರುವುದನ್ನು ನಾವು ಕಾಣುತ್ತೇವೆ. ನಿಮಗಿದು ಆಶ್ಚರ್ಯವಾದೀತು : ಅನೇಕ ಹೂಡಿಕೆ ಪರಿಣತರ ದೃಷ್ಟಿಯಲ್ಲಿ ಚಿನ್ನ ಒಂದು ಉತ್ತಮ ಹೂಡಿಕೆ ಮಾಧ್ಯಮ ಅಲ್ಲವೇ ಅಲ್ಲ ! 

ಕ್ರಮಬದ್ಧ ಉಳಿತಾಯ,ತೆರಿಗೆ ಲಾಭ,ಗರಿಷ್ಠ ಸಂಪತ್ತು: ಇದ್ಯಾವ ಮ್ಯಾಜಿಕ್‌?

ಕ್ರಮಬದ್ದ ತಿಂಗಳ ಉಳಿತಾಯದಿಂದ ವರ್ಷಂಪ್ರತಿ ಗರಿಷ್ಠ  ತೆರಿಗೆ ವಿನಾಯಿತಿ ಲಾಭವನ್ನು ಪಡೆಯುತ್ತಾ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಸಂಪತ್ತನ್ನು ಕಲೆ ಹಾಕುವ ಮ್ಯಾಜಿಕ್ ಯಾವುದು ಗೊತ್ತಾ ?

ಆ ಮ್ಯಾಜಿಕ್ ಎಂದರೆ ELSS ಮ್ಯೂಚುವಲ್ ಫಂಡ್ ಸ್ಕೀಮ್. ಇಎಲ್ಎಸ್ಎಸ್ ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್. ತಿಂಗಳ ಆದಾಯದ ಮಧ್ಯಮ ವರ್ಗದವರು ತಮ್ಮ ಸಂಬಳದ ಸ್ವಲ್ಪಾಂಶವನ್ನು ಕ್ರಮಬದ್ಧವಾಗಿ ಉಳಿತಾಯ ಮಾಡುವ ಪ್ರವೃತ್ತಿ ಹೊಂದಿರುವ ಮಧ್ಯಮ ವರ್ಗದವರಿಗೆ  ಈ ಸ್ಕೀಮ್ ಹೇಳಿ ಮಾಡಿಸಿದಂತಿದೆ ಎಂದರೆ ಅತಿಶಯವಲ್ಲ. 

ಯಾರ ಹಂಗಿಲ್ಲದೆ…ನಿವೃತ್ತ ಜೀವನ ಕಳೆಯೋದು ಹೇಗೆ, ಇಲ್ಲಿದೆ ಸೂತ್ರ!

ನಿವೃತ್ತ ಜೀವನ ವಿಶ್ರಾಂತಿ, ನೆಮ್ಮದಿ, ನಿಶ್ಚಿಂತೆಯ ಜೀವನವಾಗಬೇಕು ಎಂದು ಎಲ್ಲರೂ ಭಾವಿಸುವುದು, ಆಶಿಸುವುದು ಸಹಜವೇ.

ಆದರೆ ನಿವೃತ್ತ ಜೀವನ ನಿಜಕ್ಕೂ ಎಲ್ಲರ ಪಾಲಿಗೆ ಹಾಗೆಯೇ ಇರಬೇಕೇಂದೇನೂ ಇಲ್ಲ. ಇದಕ್ಕೆ ಕಾರಣಗಳು ಹಲವಾರು ಇರುತ್ತವೆ. ಮೊದಲನೇಯದಾಗಿ ಆರೋಗ್ಯ, ಎರಡನೇಯದಾಗಿ ಆದಾಯವಿಲ್ಲದ ನಿವೃತ್ತರನ್ನು ಅವರ ಮನೆಯವರು ಕಾಣುವ ರೀತಿ,  ಮೂರನೇಯದಾಗಿ ದೈಹಿಕವಾಗಿ, ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚುವ ಅವಲಂಬನೆ, ಹೀಗೆ ಈ ನೆಗೆಟೀವ್ ಅಂಶಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

Pages

Back to Top