CONNECT WITH US  

ಕೊನೆಗೂ ಬಯಲಾಯ್ತು ಜ್ವಾಲೆಗಳ ನರ್ತನ ರಹಸ್ಯ!ವಿಸ್ಮಯ ನೋಟ

ದಿನವೆಲ್ಲಾ ಉರಿಯುತ್ತಲೇ ಇರುವ ಬೆಂಕಿಯ ಬಂಡೆಯಿದು. ಇಲ್ಲಿ ಪ್ರವಾಸಿಗರು ಶಾಖದಿಂದ ಮೈ ಬಿಸಿ ಮಾಡಿ, ಬೆಂಕಿಯಲ್ಲಿ ಚಹಾ ಕುದಿಸಿ ಸುಖಿಸುತ್ತಾರೆ.

ಇದು ಜಗತ್ತಿನ ಒಂದು ವಿಸ್ಮಯದ ನೋಟ. ವಿಶಾಲವಾಗಿ ನೆಲದ ತುಂಬ ಹರಡಿಕೊಂಡಿರುವ ಬಂಡೆಯ ಮೇಲೆ ಅಗಣಿತವಾದ ಬಿರುಕುಗಳಿವೆ. ಅಲ್ಲಿಂದ ಜ್ವಾಲೆಗಳ ರಾಶಿ ಮೇಲೆದ್ದು ಧಗಧಗ ಉರಿಯುತ್ತಲೇ ಇರುತ್ತದೆ. ರಾತ್ರಿ ಕಾಲದಲ್ಲಿ ಬಂಡೆಯ ಮೈಯಲ್ಲಿ ಲಾಸ್ಯವಾಡುವ ಸಾವಿರ ಸಾವಿರ ಸಾವಿರ ಜ್ವಾಲೆಗಳ ಗುಚ್ಛವನ್ನು ನೋಡುವುದೇ ಒಂದು ಅನನ್ಯ ಅನುಭವ. ಇದರ ವೀಕ್ಷಣೆಗೆ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಎರಡೂವರೆ ಸಾವಿರ ವರ್ಷಗಳಿಂದ ನಿರಂತರವಾಗಿ ಬಂಡೆ ಉರಿಯುತ್ತಲೇ ಇದ್ದರೂ ಅದರೊಳಗಿರುವ ಇಂಧನದ ಕಣಜ ಮಾತ್ರ ಬರಿದಾಗಿಲ್ಲ.

ಪ್ರಕೃತಿ ಸೌಂದರ್ಯದ ಭೂಲೋಕದ ಕೈಲಾಸ “ಈ ನರಹರಿ ಪರ್ವತ”

ಪ್ರಕೃತಿಯ ಮಡಿಲಲ್ಲಿ ಸುಂದರವಾದ ಒಂದು ತಾಣವೆಂದರೆ ಅದು ನರಹರಿ ಪರ್ವತ ಅದರಲ್ಲಿ ಶ್ರೀ ಸದಾಶಿವ ದೇವರ ಸನ್ನಿದಾನವೆಂಬುದು ಆಕರ್ಷಕ ದೇಹಕ್ಕೆಜೀವ ತುಂಬಿದಂತೆ, ಇಲ್ಲಿಗೆಬಂದು ನಿಂತಾಗಒಂದುಅನಿರ್ವಚನೀಯಆನಂದಉಂಟಾಗುತ್ತದೆ.ಅದು ಈ ಕ್ಷೇತ್ರದ ಪಾವಿತ್ರ್ಯದ ಸಂಕೇತ. ನರಹರಿ ಕ್ಷೇತ್ರವೆಂದರೆ ಸಂಕಟದಲ್ಲಿರುವವರ  ಸಂಕಟಗಳನ್ನು ದೂರಮಾಡುವಂಥ ಸ್ಥಳ ಎಂದೇ ವಾಡಿಕೆ.

ನೋಡಬನ್ನಿ ಮೈದುಂಬಿ ಹರಿಯೋ ಸಿರಿಮನೆ ಜಲಪಾತ…

ಮಲೆನಾಡಿದೆ ಕಾಲಿಟ್ಟರೆ ಸಾಕು ಜಿಟಿ ಜಿಟಿ ಜಿನುಗುವ ಮಳೆ , ಮೈಕೊರೆಯುವ ಚಳಿ,  ಜೊತೆಗೆ ಭತ್ತದ ಗದ್ದೆಗಳಲ್ಲಿ ನಾಟಿಯ ಸಂಭ್ರಮ,  ಎತ್ತ ನೋಡಿದರು ಬಾನೆತ್ತರಕ್ಕೆ ಶಿರವೆತ್ತಿ ನಿಂತಿರುವ ಗಿರಿ ಶಿಖರಗಳು,  ಈ ಗಿರಿ ಶಿಖರಗಳ ಸಂಧಿಯಲ್ಲಿ ಹರಿಯುವ ಜಲಧಾರೆಗಳು,  ವಾಹ್,  ಮಲೆನಾಡಿನ ವರ್ಣನೆಗೆ ಪದಗಳೇ ಸಾಲದು.

ಸುತ್ತಲೂ ಹಚ್ಚ ಹಸುರಿನ ಕಾನನದ ನಡುವೆ ಜುಳುಜುಳು ಹರಿಯುವ ಜಲಪಾತದ ನಿನಾದ, ಧುಮ್ಮಿಕ್ಕಿ ಹರಿಯುವ ನೀರಿನಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು ಇದನ್ನು ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಜನಸಾಗರ.  ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ದೃಶ್ಯವೈಭವ.

ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!

ಎತ್ತ ನೋಡಿದರೂ  ಹಾಲ್ನೊರೆಯಂತೆ  ಮುತ್ತಿಡುವ  ಮಂಜಿನ  ಮುಸುಕು  ಜೊತೆಗೆ  ಬೀಸುವ ತಣ್ಣನೆಯ  ಗಾಳಿ  ವಾಹ್, ಇನ್ನೇನು  ಎರಡು  ಹೆಜ್ಜೆ  ಮುಂದಿಟ್ಟರೆ  ಆಗಸವೇ  ಕೈಯಿಂದ ಮುಟ್ಟುತ್ತೇವೇನೋ  ಎಂತಹ  ಅನುಭವ,  ಹೌದು  ನಾನೀಗ  ಹೇಳಲು  ಹೊರಟಿರುವುದು  ಕಾಫಿ ನಾಡು ಎಂದು  ಪ್ರಸಿದ್ದಿ  ಪಡೆದಿರುವ  ಚಿಕ್ಕಮಗಳೂರು  ಜಿಲ್ಲೆಯಲ್ಲಿರುವ  ಮುಳ್ಳಯ್ಯನಗಿರಿ  ಬೆಟ್ಟದ  ಬಗ್ಗೆ.

ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು  ಆಕರ್ಷಿಸುತ್ತದೆ. 

ಶೈಕ್ಷಣಿಕ ನಗರಿಯಲ್ಲಿ ಸದ್ದುಮಾಡುತ್ತಿದೆ ಅರ್ಬಿ ಜಲಪಾತ!

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಲವಾರು ರೀತಿಯ ಜಲಪಾತಗಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತವೆ. ಅಂತೆಯೇ ಕರಾವಳಿಯಲ್ಲಿಯೂ ಪುಟ್ಟ ತೊರೆಗಳು ಮೋಹಕ ಜಲಪಾತಗಳಾಗಿ ಜೀವ ತಳೆಯುವುದು ಸರ್ವೇ ಸಾಮಾನ್ಯ ಅಂತಹದೇ ಒಂದು ಜಲಪಾತ ಶೈಕ್ಷಣಿಕ ನಗರಿ ಎಂದೇ ಹೆಸರುವಾಸಿಯಾಗಿರುವ ಮಣಿಪಾಲದ ಹೊರಭಾಗದಲ್ಲಿ ಸದ್ದು ಮಾಡುತ್ತಿದೆ..ಅದುವೇ ಅರ್ಬಿ ಜಲಪಾತ .

ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿದೆ ಅರ್ಬಿ ಜಲಪಾತ.ಈ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದುಬಂದಂತಹ ಅನುಭವ.

ಪ್ರಕೃತಿ ಸೌಂದರ್ಯದ “ಚಾರ್ಮಾಡಿ” ಎಂಬ ಪ್ರವಾಸಿಗರ ಸ್ವರ್ಗ

ಚಾರ್ಮಾಡಿ ಹೆಸರು ಕೇಳದವರಿಲ್ಲ ಒಂದು ವೇಳೆ ಕೇಳರಿಯದವರು ಇತ್ತೀಚಿನ ಪತ್ರಿಕೆಗಳನ್ನು ಮೆಲುಕು ಹಾಕಿದರೆ ಪತ್ರಿಕೆ ತುಂಬೆಲ್ಲಾ ಚಾರ್ಮಾಡಿ ಘಾಟಿಯದ್ದೇ ಸುದ್ಧಿ, ಹೌದು ಇದು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ  ಗುಡ್ಡ ಕುಸಿದು ಪ್ರಯಾಣಿಕರು ರಾತ್ರಿಯಿಡೀ ಮಕ್ಕಳು ಮರಿಯೆನ್ನದೆ ರಸ್ತೆಯಲ್ಲೇ ಕಾಲಕಳೆದ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪ್ರಕೃತಿಯ ಏರಿಳಿತಗಳಿಗೆ ತಲೆಬಾಗಲೇ ಬೇಕು ಆದೇನೆ ಇರಲಿ ನಾವೀಗ  ಚಾರ್ಮಾಡಿಯನ್ನು ಪ್ರವಾಸಿ ಕೇಂದ್ರವಾಗಿ ನೋಡೋಣ...

ಮೂಡಗಲ್ಲು “ಗುಹಾಲಯ” ಕೇಶವನಾಥೇಶ್ವರ ದೇವಸ್ಥಾನ

ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ  ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ ಹಾಗೆ ನಾನು ಹೇಳಲು ಹೊರಟಿರುವುದು ಪ್ರಕೃತಿಯಿಂದಲೇ ನಿರ್ಮಿತವಾಗಿರುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯದ ಬಗ್ಗೆ. 

ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು  ಎಂಬ ಪ್ರದೇಶದಲ್ಲಿದೆ . ಎತ್ತ ನೋಡಿದರು ಕಾನನದ ಸೊಬಗಿನ ನಡುವೆ ಡಾಂಬರು ಮಾಸಿರುವ ರಸ್ತೆ  ಜನರ ಸಂಚಾರವಿಲ್ಲದ ಕೇವಲ ಬೆರಳೆಣಿಕೆಯಷ್ಟು ಮನೆಗಳು ಇರುವಂಥಹ ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ.

ಕಲ್ಲು ಬಂಡೆಯೇ "ಗುಡ್ಡಟ್ಟು ಗಣಪನ" ಆವಾಸಸ್ಥಾನ

ದೇವಾಲಯಗಳ ತವರೂರೆಂದೇ ಕರೆಯಬಹುದಾದ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪುರಾತನ ದೇವಾಲಯಗಳಿವೆ ಅವುಗಳ ಪೈಕಿ ಪ್ರಾಕೃತಿಕ ಮಾತ್ರವಲ್ಲದೆ ಧಾರ್ಮಿಕವಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿರುವ ದೇವಾಲಯ ಗುಡ್ಡಟ್ಟು ಗಣಪತಿ.

ಯಾವುದೇ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಮೊದಲು ಗಣಪತಿಯನ್ನು ಸ್ತುತಿಸಬೇಕು ಎಂಬುದು ನಂಬಿಕೆ ಇಂತಹ ಅದ್ಭುತವಾದ ಗಣಪ ಉಡುಪಿ ಜಿಲ್ಲೆಯ ಬಾರಕೂರಿನ ಗುಡ್ಡಟ್ಟುವಿನಲ್ಲಿ ನೆಲೆನಿಂತಿರುವುದು ವಿಶೇಷ.

ಕಲ್ಲು ಬಂಡೆಗಳ ಮದ್ಯೆ ಗುಹೆಗಳ ಒಳಗೆ ಮೂಡಿ ಬಂದವನೇ ವಿಘ್ನ ನಿವಾರಕ ಈ ವಿನಾಯಕ ಹಲವಾರು ಅಂತಸ್ತಿನ ಬಂಡೆಗಳ ಒಳಗೆ ವಿರಾಜಮಾನನಾಗಿ ನೆಲೆನಿಂತಿರುವಂತಹ ಗಣಪನೇ ಗುಡ್ಡಟ್ಟು ಗಣಪ..

Pages

Back to Top