CONNECT WITH US  

ನೀಲಾವರ ಗೋಶಾಲೆ ; ಗೋಪಾಲನ ಕಿಂಕರನ ಕನಸಿನ ಸಾಕಾರ…

ಜಗದೋದ್ದಾರಕ ಶ್ರೀ ಕೃಷ್ಣ ಗೋಪಾಲಕ. ಗೋವುಗಳೆಂದರೆ ಶ್ರೀ ಕೃಷ್ಣನಿಗೆ ವಿಶೇಷ ಪ್ರೀತಿ, ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋವುಗಳನ್ನು ಹಾಗೂ ಗೋಪಾಲಕರನ್ನು ರಕ್ಷಿಸಿದ ಕಥೆಯೊಂದೇ ಸಾಕು ಶ್ರೀ ಕೃಷ್ಣನಿಗೆ ಗೋವುಗಳು ಮತ್ತು ಗೋಪಾಲಕರ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಲು. ಗೋಪಾಲಕನಾಗಿದ್ದ ಶ್ರೀ ಕೃಷ್ಣ ಆ ಬಳಿಕ ಪಾಂಡವ ಪಾಲಕನಾಗಿ ಮಹಾಭಾರತ ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕಥೆ ನಮಗೆಲ್ಲಾ ತಿಳಿದೇ ಇದೆ. ಇದು ಪುರಾಣದ ಮಾತಾಯಿತು, ನಮ್ಮ ದೇಶವು ಮೂಲತಃ ಕೃಷಿ ಪ್ರಧಾನ ದೇಶವಾಗಿದ್ದ ಕಾರಣದಿಂದ ಇಲ್ಲಿ ಗೊವುಗಳಿಗೆ ವಿಶೇಷ ಪ್ರಾಧಾನ್ಯತೆ ಮತ್ತು ಪೂಜ್ಯತೆಯ ಸ್ಥಾನಮಾನವಿದೆ.

ಶಿರಸಿ ಟು ಮಾಯಾನಗರಿ…ಈ ಗೃಹಿಣಿ ಸಾಧನೆ ನಿಜಕ್ಕೂ ಸ್ಫೂರ್ತಿಯ ಸೆಲೆ

ಮಲೆನಾಡಿನ ಶಿರಸಿ ಎಂಬ ಪಕ್ಕಾ ದೇಸಿ ಸೊಗಡಿನ ಊರಿನಿಂದ ಮುಂಬಯಿ ಎಂಬ ಮಾಯಾನಗರಿಗೆ ಹೋಗಿ ಅಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ನಿತ್ಯ ತರಗತಿಗಳಿಗೆ ಹಾಜರಾಗಿ ಎಂ.ಎ. ಪದವಿಯನ್ನು ಪಡೆದ ಗೃಹಿಣಿಯೊಬ್ಬರ ಸಾಧನೆಯ ಕಥೆಯಿದು. ಸಂಸಾರದ ನೊಗಕ್ಕೆ ಹೆಗಲನ್ನು ಕೊಟ್ಟ ಬಳಿಕ ಹೆಚ್ಚಿನ ಗೃಹಿಣಿಯರು ಗಂಡ-ಮನೆ-ಮಕ್ಕಳ ಜವಾಬ್ದಾರಿ ನಿಭಾಯಿಸುವುದರಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡುಬಿಟ್ಟಿರುತ್ತಾರೆ ಮತ್ತು ತಮ್ಮ ಆಸಕ್ತಿಯ ಕಡೆಗೆ ಗಮನವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಅನೇಕ ಗೃಹಿಣಿಯರಿಗೆ ಸ್ಪೂರ್ತಿಯ ಸೆಲೆಯಾಗಬಲ್ಲ ವಿಷಯವೊಂದನ್ನು ಈ ಬಾರಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

‘ಹಸಿರು ಭಗೀರಥ’ ಕೃಷ್ಣಪ್ಪ ಗೌಡರ ಮನೆಯೇ ‘ಕೃಷಿ ಆಲಯ’

ಪಟ್ಟಣದ ನಡುವೆ ಹಸಿರು ಲೋಕವನ್ನು ಸಾಕ್ಷಾತ್ಕಾರಗೊಳಿಸಿರುವ ‘ಕೃಷಿ ಭಗೀರಥ’ ಪಡ್ಡಂಬೈಲು ಕೃಷ್ಣಪ್ಪ ಗೌಡರು.

ಇವರು ನಗರವಾಸಿ ಆದರೆ ಇವರ ಮನೆಗೆ ಹೋದವರಿಗೆ ಕಾಂಕ್ರೀಟ್ ಕಾಡಿನಲ್ಲಿ ಹಸಿರು ತೋಟವನ್ನು ಹೊಕ್ಕ ಅನುಭವವಾಗುತ್ತದೆ. ಮಂಗಳೂರು ನಗರದಲ್ಲಿರುವ ಇವರ ಕಾಂಕ್ರೀಟ್ ಮನೆಯ ತುಂಬೆಲ್ಲಾ ಹಸಿರ ಸಿರಿ ಮೆರೆದಾಡುತ್ತಿದೆ. ಅಂದಹಾಗೆ ಪಟ್ಟಣದ ನಡುವೆ ಹಸಿರು ಲೋಕವನ್ನು ಸಾಕ್ಷಾತ್ಕಾರಗೊಳಿಸಿರುವ ‘ಕೃಷಿ ಭಗೀರಥ’ ಪಡ್ಡಂಬೈಲು ಕೃಷ್ಣಪ್ಪ ಗೌಡರು. ಸರಕಾರಿ ಉದ್ಯೋಗಿಯಾಗಿದ್ದು ನಗರ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರೂ ಇವರ ಹಸಿರು ಪ್ರೀತಿಗೆ ಇದ್ಯಾವುದೂ ಅಡ್ಡಿಯಾಗಲಿಲ್ಲ. ಮನೆಯ ಕಾಂಪೌಂಡ್, ಒಳ ಆವರಣ, ಮಹಡಿ ಮೆಟ್ಟಿಲುಗಳು… ಹೀಗೆ ಮನೆಯ ಸುತ್ತಲೆಲ್ಲಾ ಕೃಷಿ ಲೋಕವನ್ನೇ ಕೃಷ್ಣಪ್ಪ ಗೌಡರು ಅನಾವರಣಗೊಳಿಸಿದ್ದಾರೆ. ಇನ್ನು ಇವರ ಮನೆಯ ಮಹಡಿಯಂತೂ ಇವರ ಕೃಷಿ ಲೋಕ ಸಾಕಾರಕ್ಕಾಗಿರುವ ಪ್ರಯೋಗಶಾಲೆಯೇ ಆಗಿದೆ.

ಕಂಗೆಟ್ಟ ಮನಸ್ಸಿಗೆ ಸ್ಪೂರ್ತಿಯ ಚಿಲುಮೆ ಈ ನಮ್ಮ ಜಯರಾಮ್ ಶೆಟ್ರು...!

ನಾನು ಇವತ್ತು ಹೇಳಲು ಹೊರಟಿರುವುದು ವ್ಯಕ್ತಿಯೊಬ್ಬರ ಸ್ಪೂರ್ತಿಯ ಕಥೆಯನ್ನು. ಇವರ ಬದುಕೇ ಒಂದು ವಿಸ್ಮಯ, ಇವರು ಯೋಚಿಸುವ ರೀತಿ ವಿಭಿನ್ನ, ಈ ವ್ಯಕ್ತಿ ತಾನು ಮಲಗಿರುವ ಸ್ಥಿತಿಯಲ್ಲಿದ್ದರೂ ಪ್ರಪಂಚವನ್ನು ನೋಡುವ ರೀತಿ ತೀರಾ ಭಿನ್ನ... ಇಷ್ಟು ಮುನ್ನುಡಿಯನ್ನು ಕೊಟ್ಟು ನಾನೀಗ ನೇರವಾಗಿ ಈ ವ್ಯಕ್ತಿಯ ಸ್ಪೂರ್ತಿ ಚಿಲುಮೆಯ ಕುರಿತಾಗಿ ಹೇಳುತ್ತೇನೆ.

Badge No.15: ಈಕೆ ವಾಯುವ್ಯ ರೈಲ್ವೇ ವಲಯದ ಪ್ರಪ್ರಥಮ ಮಹಿಳಾ ಕೂಲಿ!

ಆಕೆಯ ಹೆಸರು ಮಂಜು ದೇವಿ, ಸದ್ಯ ಆಕೆ ವಾಯುಯ್ಯ ರೈಲ್ವೇ ವ್ಯಾಪ್ತಿಯಡಿಗೆ ಬರುವ ಜೈಪುರ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಹೊರುವ ‘ಕೂಲಿ’. ಕಳೆದ 5 ವರ್ಷಗಳಿಂದ ಮಂಜುದೇವಿ ಈ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಕೇವಲ ಪುರುಷರಿಗೆ ಮಾತ್ರವೇ ಸೀಮಿತವೆಂಬಂತಿದ್ದ ರೈಲ್ವೇ ಕೂಲಿ ಕೆಲಸದಲ್ಲಿ ಹೆಣ್ಣೊಬ್ಬಳು ಆ ಕೆಲಸವನ್ನು ಮಾಡುತ್ತಿರುವುದು ವಿಶೇಷವೇ ಸರಿ. ಇದೀಗ ಈಕೆಯ ಈ ಛಲ ದೇಶದ ಗಮನವನ್ನು ಸೆಳೆದಿದ್ದು ಇವತ್ತು ಮಂಜುದೇವಿ ಮತ್ತು ಆಕೆಯ ಛಲದ ಬದುಕಿನ ಕಥೆ ಹಲವಾರು ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು, ಜೀವನದಲ್ಲಿ ನಿರಾಶೆಯನ್ನನುಭವಿಸಿ ತಮ್ಮ ಬದುಕನ್ನು ದುರಂತಕ್ಕೊಡ್ಡಿಕೊಳ್ಳುತ್ತಿರುವ ಹಲವಾರು ಮಹಿಳೆಯರಿಗೆ ಸ್ಪೂರ್ತಿಯ ಪಾಠವಾಗಿದೆ ಮಂಜು ದೇವಿಯ ಬದುಕು.

‘ಬಾಂಧವ್ಯ’ದ ಮೂಲಕ ರಕ್ತದಾನಿಗಳ ಜಾಲವನ್ನು ಹಬ್ಬಿಸಿದ ದಿನೇಶ್ ಬಾಂಧವ್ಯ

ಇಂದು ವಿಶ್ವ ರಕ್ತದಾನಿಗಳ ದಿನ. ರಕ್ತದಾನಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಇವತ್ತು ಹಲವಾರು ರೀತಿಯ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ರಕ್ತದಾನದ ಮಹತ್ವವನ್ನು ಅರಿತಿರುವ ನಮ್ಮ ಯುವ ಜನಾಂಗ ಇಂದು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನವನ್ನು ಮಾಡುತ್ತಿರುವುದು ಖುಷಿಯ ವಿಚಾರವೇ ಆಗಿದ್ದರೂ, ರಕ್ತದಾನದ ಮಹತ್ವ ಕುರಿತಂತೆ ಇನ್ನೂ ಗಮನಾರ್ಹ ಬದಲಾವಣೆ ಆಗಬೇಕಾಗಿರುವುದು ಅತ್ಯಗತ್ಯವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕ ರಕ್ತದಾನಿಗಳು ಮತ್ತು ರಕ್ತದ ಅಗತ್ಯತೆಯುಳ್ಳವರ ನಡುವೆ ಒಂದು ಪರಿಣಾಮಕಾರಿ ಕೊಂಡಿಯನ್ನು ಬೆಸೆಯುವ ಕೆಲಸ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಬೇಕಾಗಿದೆ.

ಮಂಗಳೂರು ಮಳೆ ಬಿಚ್ಚಿಟ್ಟ ಮಾನವೀಯ ಮುಖಗಳು…

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕರಾವಳಿಯ ಜನಕ್ಕೆ ಮಳೆಯೇನೂ ಹೊಸತಲ್ಲ, ಮಾರ್ಚ್ ನಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗಿನ ಈ ಎರಡು ತಿಂಗಳುಗಳಲ್ಲಿ ಮೈಯೆಲ್ಲಾಬೆವರಿಳಿಸಿಕೊಂಡು ‘ಭಾರೀ ಶೆಕೆ ಮಾರ್ರೆ...’ ಎಂದು ಹೇಳುತ್ತಲೇ, ಮದುವೆ ಕೋಲ, ನೇಮ, ಬ್ರಹ್ಮಕಳಶ, ಯಕ್ಷಗಾನವೇ ಮುಂತಾದ ಚಟುವಟಿಕೆಗಳಲ್ಲಿ ಮುಳುಗಿಹೋಗುವ ಕರಾವಳಿಗರು ಪತ್ತನಾಜೆಯ ದಿನ ನಾಲ್ಕು ಹನಿ ಮಳೆ ಸುರಿದರೆ ಮತ್ತೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಭರ್ಜರಿ ಮಳೆಗಾಲಕ್ಕೆ ಸಿದ್ಧತೆಯನ್ನು ಪ್ರಾರಂಭಿಸುತ್ತಾರೆ. ಇದು ಅನಾದಿ ಕಾಲದಿಂದಲೂ ತುಳುನಾಡಿನಾದ್ಯಂತ ನಡೆದುಕೊಂಡುಬಂದಿರುವ ಸಂಪ್ರದಾಯ.

ಇದು… ಪಾಕ್ ನಲ್ಲಿ ಕಾಣೆಯಾದ ಭಾರತದ ಅಮರ್ ಜೀತ್ ನ ಇಂಟರೆಸ್ಟಿಂಗ್ ಕಹಾನಿ

ನಮ್ಮ ದೇಶದಲ್ಲಿ ಬೇಕಾದುದಕ್ಕಿಂತ ಬೇಡವಾದ ವಿಷಯಕ್ಕೇ ಹೆಚ್ಚು ಪ್ರಚಾರದಲ್ಲಿರುವ ಸಾಮಾಜಿಕ ಜಾಲತಾಣಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್, ಇತ್ತೀಚಿನ ದಿನಗಳಲ್ಲಿಯಂತೂ ಈ ಕೇಂಬ್ರಿಡ್ಜ್ ಅನಾಲಿಟಿಕಾ ಅವಾಂತರ ಮೂಲಕ ಭರ್ಜರಿ ಸುದ್ದಿಗೊಳಗಾಗಿತ್ತು. ಇವೆಲ್ಲದರ ನಡುವೆಯೇ ಇದೇ ಫೇಸ್ಬುಕ್ ಮಾಧ್ಯಮವು ಏಷ್ಯಾದ ಎರಡು ಸಾಂಪ್ರದಾಯಿಕ ವೈರಿ ರಾಷ್ಟ್ರಗಳ ನಡುವಿನ ಪ್ರಜೆಗಳಿಬ್ಬರ ನಡುವೆ ಗೆಳೆತನದ ಬೆಸುಗೆಯ ಕುರಿತಾಗಿಯೂ ಸುದ್ದಿಯಾಗುತ್ತಿದೆ. ಈ ಇಂಟೆರೆಸ್ಟಿಂಗ್ ವಿಷಯದ ಕುರಿತಾಗಿಯೇ ಈ ಲೇಖನ…

Pages

Back to Top