CONNECT WITH US  

ಹನಿಗಾರಿಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಕವಿಯಲ್ಲ ಮಗು ನಾನು
ಪದಗಳ ಜತೆ ಆಡುವೆನು
ನೋಡಿ ನಗುವಳು ಕನ್ನಡತಾಯಿ
ನಿರಂತರವಾಗಿ ಬರೆದು
ಆದಾಗ ಲೇಖನಿ ಬರಿದು
ಮರೆಯದೆ ತುಂಬುವಳು ಶಾಯಿ! 
 *ಎಚ್‌. ಡುಂಡಿರಾಜ್...

ಹುಡುಕುತ್ತಿದ್ದಾರೆ ಜನರು
ಶಾಲು, ಸ್ವೆಟರು, ಮಫ್ಲರು
ಆರಂಭವಾಗಿದೆ ಚಳಿ,
ಅರಸುತ್ತಿದ್ದಾನೆ ಚಂದ್ರ
ಆಕಾಶದಲ್ಲಿ
ಎಲ್ಲಿದೆ ಮುಗಿಲ ಕಂಬಳಿ?
ಎಚ್‌. ಡುಂಡಿರಾಜ್‌

ತೆನೆಹೊತ್ತ ಮಹಿಳೆ, ಕರ
ಉಪ ಚುನಾವಣೆ ಸಮರ
ಒಟ್ಟಾಗಿ ಸೆಣಸಿ
ಕಮಲವ ಮಣಿಸಿ
ಸಾರಿದ್ದಾರೆ ಮೈತ್ರಿ ಲಾಭಕರ !
ಎಚ್‌.ಡುಂಡಿರಾಜ್‌

ಮುಗಿಯಿತು ದೀಪಾವಳಿ 
ಇನ್ನು ಬೆಂಗಳೂರಿನಲ್ಲಿ 
ಶುರುವಾಗಲಿದೆ ಭಾರೀ ಚಳಿ ,
ಬಿಜೆಪಿಯ ನಾಯಕರು 
ಆಗಲೇ ನಡುಗುತ್ತಿದ್ದಾರೆ 
ಚುನಾವಣೆ ಫ‌ಲಿತಾಂಶ ಕೇಳಿ !
 ಎಚ್‌. ಡುಂಡಿರಾಜ್...

ಲಗ್ನ ಮಂಟಪದಲ್ಲಿ ಅಂದು
ಒಂದೂ ಮಾತನಾಡದೆ
ತಲೆ ತಗ್ಗಿಸಿ ನಿಂತಿದ್ದಳು ಬಾಲೆ,
ಮದುವೆ ಆದ ಮೇಲೆ
ತಿಳಿಯಿತು ಈಕೆ
ಬಾಲೆಯಲ್ಲ ಪಟಾಕಿ ಮಾಲೆ!

*ಎಚ್.ದುಂಡಿರಾಜ್...

ರಾಜರತ್ನಂ ಸೃಷ್ಟಿಸಿದ
ಯೆಂಡ್ಕುಡ್ಕ ರತ್ನನಿಗೆ
ಕನ್ನಡ ಪದಗಳೆಂದರೆ ಪ್ರಾಣ
ಇಂದಿನ ಕನ್ನಡಿಗರಿಗೆ
ಇಂಗ್ಲಿಷ್‌ ವ್ಯಾಮೋಹ
ಎರಡು ಪೆಗ್‌ ಹಾಕಿದಾಕ್ಷಣ!
ಎಚ್‌.ಡುಂಡಿರಾಜ್‌

ಸಾಹಿತಿಗಳ ನಡುವೆ ಉಂಟು
ಸೈದ್ಧಾಂತಿಕ ಜಗಳ
ಪ್ರಗತಿಪರ, ಪ್ರತಿಗಾಮಿ
ಎಡ ಮತ್ತು ಬಲ
ವಾಚಕರಿಗೆ ವಾದ ಬೇಡನ
ಓದುವ ಹಂಬಲ
ಒಳ್ಳೆಯ ಕೃತಿ ರಚಿಸಿದರೆ
ನೀಡುವರು ಬೆಂಬಲ!...

ಕರಕ್ಕೆ ಕೈಕೊಟ್ಟು ಕಮಲಕ್ಕೆ
ಹಾರಿದ ಚಂದ್ರಶೇಖರ
ಅಲ್ಪ ಸಮಯದಲ್ಲೆ ಪುನಃ
ಮಾಡಿದ್ದಾರೆ ಪಕ್ಷಾಂತರ
ಕಾಂಗ್ರೆಸ್‌ ಸೇರಿ ಆಗಿದ್ದಾರೆ
ಚಂದ್ರ ಶೇ-ಕರ!
ಎಚ್‌. ಡುಂಡಿರಾಜ್‌

ಬಿಡಿಬಿಡಿಯಾದ ದಾರದ
ಎಳೆಗಳನ್ನು ಒಂದುಗೂಡಿಸಿ
ಸುಂದರ ಬಟ್ಟೆ ನೇಯವವರು
ನೇಕಾರರು,
ಜನರನ್ನು ಒಡೆದು
ಗೆದ್ದು ಅಧಿಕಾರ ಹಿಡಿದು
ಮೇಯುವವರು ನೇತಾರರು!
 ಎಚ್‌....

ಕಾಡಿಗೆ ಚಂದ ಚಂದನ
ಗಾಡಿಗೆ ಬೇಕು ಇಂಧನ
ನಾಡಿನ ಜನತೆಯ
ನಾಲಿಗೆ ತುದಿಯಲಿ
ನಲಿಯಲಿ ಕನ್ನಡ ಅನುದಿನ!
 ಎಚ್‌. ಡುಂಡಿರಾಜ್‌

ಹರಿದು ಹಂಚಿಹೋಗಿದ್ದ
ಭರತ ಭೂಮಿಯನ್ನು
ಒಂದುಗೂಡಿಸಿ ಹೊಲಿದಿಟ್ಟ
ದಿಟ್ಟ ದೇಶಭಕ್ತ ಟೇಲರು
ಸರ್ದಾರ್‌
ವಲ್ಲಭಭಾಯಿ ಪಟೇಲರು!
 ಎಚ್‌. ಡುಂಡಿರಾಜ್‌

ನಾವಿಬ್ಬರೂ ಪರಿಚಿತರು
ಒಂದೇ ಊರಿನವರು
ಅವಳು ನನ್ನ ಕ್ಲಾಸ್‌ ಮೇಟು,
ಅಷ್ಟೇ ಅಂದಿದ್ದ ಅವನ
ನಿಜವಾದ ಬಣ್ಣ
ಬಯಲಿಗೆಳೆದದ್ದು ಮಿ ಟೂ!
 ಎಚ್‌. ಡುಂಡಿರಾಜ್‌

ಹೊಡೆಯಲಿಲ್ಲ ಸಿಕ್ಸರು, ಫೋರನ್ನು
ಎಂದು ದೂರದಿರಿ ಯಾರನ್ನೂ
ಒಂಟಿ, ಅವಳಿ, ತ್ರಿವಳಿ
ಓಟಗಳು ಕೂಡ ಇರಲಿ
ಗೆಲ್ಲಲು ಸಾಕು ಒಂದು ರನ್ನು!
ಎಚ್‌. ಡುಂಡಿರಾಜ್‌
 

ಬಿಜೆಪಿ ನಾಯಕರ
ಮಾತಿನ ಏಟಿಗೆ
ಮಿತ್ರ ಪಕ್ಷಗಳ ತಿರುಗೇಟು
ಆದರೂ ಜನರ ಮನ
ಸೆಳೆದಿಲ್ಲ ಚುನಾವಣೆ
ಕಾರಣ ತಾರೆಯರ ಮಿ ಟೂ!
 ಎಚ್‌. ಡುಂಡಿರಾಜ್‌

ವಾಲ್ಮೀಕಿ ಜಯಂತಿಗೆ
ಗಣ್ಯರು ಬಾರದೆ
ಅವಮಾನ ಮಾಡಿದ್ದು ತರವೆ?
ಕೇಳುತ್ತಿದ್ದಾರೆ ಈಗ
ವಾಲ್ಮೀಕಿ ಜನಾಂಗದವರು
ಬೇಡ ನಿಮಗೆ ಬೇಡವೆ?
ಎಚ್‌.ಡುಂಡಿರಾಜ್‌

ಸಿಡಿಮದ್ದಿಗೆ ಕೋರ್ಟು
ಒಪ್ಪಿಗೆ ನೀಡಿದೆ
ಕೆಲವು ಷರತ್ತುಗಳನ್ನು ಹಾಕಿ,
ಯಾವ ಅಡೆತಡೆ ಇಲ್ಲದೆ
ಸಿಡಿಯುತ್ತಲೆ ಇರುತ್ತದೆ
ಪುಢಾರಿಗಳ ಬಾಯಿ ಪಟಾಕಿ!
ಎಚ್‌. ಡುಂಡಿರಾಜ್‌

ದಸರಾ ಕುಸ್ತಿ ಪಂದ್ಯ
ಮುಗಿಯಿತು ಎಂದು
ಬೇಸರಪಡುವುದು ಬೇಡ
ಐದು ಕ್ಷೇತ್ರಗಳಲ್ಲಿ
ಮಲ್ಲಯುದ್ಧಕ್ಕೆ
ಸಜ್ಜಾಗುತ್ತಿದೆ ಅಖಾಡ!
 ಎಚ್‌. ಡುಂಡಿರಾಜ್‌

ಹೇಳಲಾಗದೆ ಪಾಪ
ನುಂಗಿಕೊಂಡಿದ್ದಾರೆ
ನೋವು, ಅಪಮಾನ, ಕೊರಗು
ಹೈಕಮಾಂಡಿಗೆ ಹೆದರಿ
ಹಿಡಿದುಕೊಂಡಿದ್ದಾರೆ
ತೆನೆಹೊತ್ತ ಮಹಿಳೆಯ ಸೆರಗು!
 ಎಚ್‌. ಡುಂಡಿರಾಜ್‌

ಬೇಗ ಎದ್ದು ಮನೆಯಿಂದ
ಹೊರಗೆ ಬಂದರೆ ಉಂಟು
ಇಲ್ಲದಿದ್ದರೆ ನಿರಾಸೆ,
ಪೂರ್ವ ದಿಗಂತದ
ಕಾವಲಿಯಲ್ಲಿ
ಒಂದೇ ಒಂದು ದೋಸೆ!
 ಎಚ್‌. ಡುಂಡಿರಾಜ್‌

ಊರಿಂದ ಫೋನ್‌ ಮಾಡಿ
ಗೆಳೆಯ ಕೇಳಿದ
'ಹಬ್ಬ ಹ್ಯಾಂಗಾಯ್ತು?'
ನಾನೆಂದೆ 'ಶುಭಾಶಯಗಳ
ಸುರಿಮಳೆಯಿಂದ
ಫೋನು ಹ್ಯಾಂಗ್‌ ಆಯ್ತು !'
 ಎಚ್‌. ಡುಂಡಿರಾಜ್‌

Back to Top