CONNECT WITH US  

ಹನಿಗಾರಿಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮೊನ್ನೆ ಬೆನ್ನು ನೋವು
ನಿನ್ನೆ ಮಂಡಿ ನೋವು
ಇಂದು ನೋಯುತ್ತಿದೆ ಹಲ್ಲು
ನಾಳೆ? ಯಾರಿಗೆ ಗೊತ್ತು?
ವೃದ್ಧಾಪ್ಯವೆಂದರೆ
ನೋವಿನ ಸೀರಿಯಲ್ಲು!
ಎಚ್‌.ಡುಂಡಿರಾಜ್‌
 

ಹೇಳಿದ್ದೇನೆ ನನ್ನವಳ ಬಳಿ
ಕಡಿಮೆಯಾಗದಿದ್ದರೆ ಚಳಿ
ಮಾಡೋಣ ಇಬ್ಬರೂ ಸೇರಿ
ಚಳಿಯ ವಿರುದ್ಧ ಹೋರಾಟ
ಅಪ್ಪಿಕೊ ಚಳುವಳಿ !
ಎಚ್‌.ಡುಂಡಿರಾಜ್‌

ಈ ಕಲಿಯುಗದಲ್ಲಿ
ಗೋವು ಹುಲಿಯಾಗುವುದು
ಸಿಂಹ ಇಲಿಯಾಗುವುದು
ಹೂವು ಮುಳ್ಳಾಗುವುದು
ಸತ್ಯ ಸುಳ್ಳಾಗುವುದು
ಎಲ್ಲವೂ ಸರ್ವೇಸಾಮಾನ್ಯ
ಪ್ರಸಾದ ವಿಷವಾಗುವುದು
ವಿಷಾದನೀಯ...

ವಸುಂಧರೆಗೂ ಸಹಾ
ಸಹಿಸಲಾಗುತ್ತಿಲ್ಲ
ಡಿಸೆಂಬರಿನ ಕೊರೆವ ಚಳಿ
ಹೊದ್ದುಕೊಂಡಿದ್ದಾಳೆ
ಅಚ್ಚ ಬಿಳಿ
ಮಂಜಿನ ಕಂಬಳಿ !
ಎಚ್‌.ಡುಂಡಿರಾಜ್‌
 

ವಸುಂಧರೆಗೂ ಸಹಾ
ಸಹಿಸಲಾಗುತ್ತಿಲ್ಲ
ಡಿಸೆಂಬರಿನ ಕೊರೆವ ಚಳಿ
ಹೊದ್ದುಕೊಂಡಿದ್ದಾಳೆ
ಅಚ್ಚ ಬಿಳಿ
ಮಂಜಿನ ಕಂಬಳಿ !
 ಎಚ್‌. ಡುಂಡಿರಾಜ್‌ 

ಸಂಪುಟದಲ್ಲಿ ಯಾರಿಗೆ
ಸ್ಥಾನ ನೀಡಬೇಕು?
ಅದು ಹೈಕಮಾಂಡ್‌ ನಿರ್ಧಾರ.
ಆಯ್ಕೆಗೆ ಮಾನದಂಡ
ಆಕಾಂಕ್ಷಿಗಳ ಜಾತಿ, ಜಿಲ್ಲೆ 
ಮತ್ತು ಸೂಟ್‌ ಕೇಸಿನ ಭಾರ!
 ಎಚ್‌. ಡುಂಡಿರಾಜ್‌

ಕವಿಗಳು ಬಣ್ಣಿಸಿದಂತೆ
ಮೂಡಣದಲ್ಲಿ ರವಿ
ಕಿತ್ತಳೆ ಹಣ್ಣಿನ ಹಾಗೆ
ಆದರೇನು ಫ‌ಲ ?
ಅಷ್ಟು ಮೇಲೆ ಹತ್ತಿ
ಕಿತ್ತು ತಿನ್ನುವುದು ಹೇಗೆ?
 ಎಚ್‌. ಡುಂಡಿರಾಜ್‌...

ಈ ಬಾರಿ ಅಸೆಂಬ್ಲಿ
ಅಧಿವೇಶನದಲ್ಲಿ
ಬಿಸಿ ಬಿಸಿ ಚರ್ಚೆ ನಡೆಯಲಿ
ಪರಿಣಾಮವಾಗಿ ತುಸು
ಕಡಿಮೆಯಾಗಬಹುದು
ಬೆಳಗಾವಿಯ ಚಳಿ!
ಎಚ್‌. ಡುಂಡಿರಾಜ್‌

ಚೆಲುವಿಗೆ ಸೋತು
ಮದುವೆಯಾದ
ಚಂದದ ಚಿತ್ರಾಳನ್ನ,
ಪರಿಣಾಮ ಅವನ
ವೈವಾಹಿಕ ಜೀವನ
ಚಿಂದಿ ಚಿತ್ರಾನ್ನ!
ಎಚ್‌. ಡುಂಡಿರಾಜ್‌

ಚಿಂತಿಸಿ,ತಲೆಕೆರೆದು
ಕವಿಗಳಿಗೆ ಕೂದಲು
ಉದುರುತ್ತದೆ ಯೌವನದಲ್ಲೆ 
ಆದ್ದರಿಂದ ಸನ್ಮಾನದಲ್ಲಿ
ಪೇಟ ತೊಡಿಸುತ್ತಾರೆ
ಕಾಣದಂತೆ ಬೋಳು ತಲೆ !
ಎಚ್‌. ಡುಂಡಿರಾಜ್‌ 

ಉದ್ಯಾನ ನಗರಿಯಲ್ಲೀಗ
ಮರಗಿಡಗಳಿಗಿಂತ
ರಸ್ತೆ, ಕಟ್ಟಡಗಳೇ ಅಧಿಕ
ಪಾರ್ಕುಗಳ ಬದಲಿಗೆ
ಕಾಣುತ್ತದೆ ಎಲ್ಲೆಲ್ಲೂ
ನೊ ಪಾರ್ಕಿಂಗ್‌ ಫ‌ಲಕ !
ಎಚ್.ದುಂಡಿರಾಜ್...

ಜೀವ ಇಲ್ಲದಿದ್ದರೂ 
ಸದಾ ತನ್ನ ಮಟ್ಟ
ಕಾಯ್ದುಕೊಳ್ಳುತ್ತದೆ ನೀರು ,
ಟೀಕಿಸುವ ಭರದಲ್ಲಿ 
ತೀರಾ ಕೆಳಮಟ್ಟಕ್ಕೆ 
ಇಳಿಯುತ್ತಾರೆ ನಾಯಕರು !
ಎಚ್‌.ಡುಂಡಿರಾಜ್‌

ಪ್ರೀತಿಯ ನಾಟಕವಾಡಿ
ಅರ್ಧದಲ್ಲೆ 
ಎಳೆಯುತ್ತಾರೆ ಪರದೆ
ಪ್ರೇಮಿಸುವಾಗಲೆ ಇರುತ್ತೆ
ಕೈಕೊಡುವ ಇರಾದೆ
ಪ್ರಿಯ"ಕರ' ಎಂಬ ಶಬ್ದದಲ್ಲೆ 
ಕರ ಇದೆ !
ಎಚ್‌. ಡುಂಡಿರಾಜ್‌...

ಒಲ್ಲದ ಗಂಡನಿಗೆ
ಮೊಸರಿನಲ್ಲಿ ಕಲ್ಲು,
ಸಂದೇಹಿ ಹೆಂಡತಿಗೆ
ಜ್ಯೂಸಿನಲ್ಲೂ
ಸ್ಮೆಲ್ಲು  !
 ಎಚ್‌. ಡುಂಡಿರಾಜ್‌

ಎಲ್ಲರೂ ಮೆಚ್ಚುವರು
ಮೋಹಕವಾಗಿ ಕುಣಿವ
ನಮ್ಮ ರಾಷ್ಟ್ರೀಯ ಪಕ್ಷಿ
ನವಿಲನ್ನು
ಹಾವುಗಳಿಗೆ ಮಾತ್ರ
ಅದು ವಿಲನ್ನು!
 ಎಚ್‌. ಡುಂಡಿರಾಜ್‌

ಜನಸಾಮಾನ್ಯರ ಮಕ್ಕಳಿಗೆ 
ಚೆಂಡು, ಪೀಪಿ , ಬಲೂನು 
ಗೊಂಬೆ ಮುಂತಾದ ಆಟಿಕೆ 
ರಾಜಕಾರಣಿಗಳ ಮಕ್ಕಳಿಗೆ 
ಕಾರು, ರೇಸು, ಜೂಜು 
ಹೊಡೆದಾಟ ಬೂಟಾಟಿಕೆ !
 ಎಚ್‌. ಡುಂಡಿರಾಜ್‌...

ಅದೆಷ್ಟೊ ಆಯುಕ್ತರನ್ನು ಕಂಡಿದೆ
ನಮ್ಮ ಚುನಾವಣಾ ಕಮಿಶನ್‌
ನೆನಪಲ್ಲಿ ಉಳಿದವರು ಒಬ್ಬರೇ
ಅವರು ಟಿ ಎನ್‌ ಶೇಷನ್‌
ಉಳಿದವರೆಲ್ಲ ಅವಶೇಷನ್‌
ನಿಶ್ಯೇಷನ್‌!
ಎಚ್‌.ಡುಂಡಿರಾಜ್...

ನಿಘಂಟಿನ ಹಾಳೆಗಳ
ಎಡೆಯಲ್ಲಿ ಪದ
ನಿಶ್ಯಬ್ದವಾಗಿ ಅಡಗಿತ್ತು
ಕವಿಯ ಪೆನ್ನಿಗೆ ಸಿಕ್ಕು
ಕವನವಾಯಿತು
ಗಾಯಕನ ಕಂಠ ಹೊಕ್ಕು
ಹಾಡಾಯಿತು !
 ಎಚ್‌.ಡುಂಡಿರಾಜ್‌
 ...

ಸವರಬೇಕು ಅತೃಪ್ತ
ಶಾಸಕರ ಮೊಣಕೈಗೆ
ಸಂಪುಟ ವಿಸ್ತರಣೆಯ ತುಪ್ಪ
ಇಲ್ಲದಿದ್ದರೆ ಅವರನ್ನು
ಕಮಲ ಪಾಳಯದತ್ತ
ಸೆಳೆಯುವರು ಯಡಿಯೂರಪ್ಪ!
 ಎಚ್‌. ಡುಂಡಿರಾಜ್‌ 

ರಾಹುಲ್‌ ಹೇಳಿದ್ದಾರೆ
ನಾನು ಕಾಶ್ಮೀರಿ ಬ್ರಾಹ್ಮಣ
ದತ್ತಾತ್ರೇಯ ಕೌಲ್‌ ಗೋತ್ರ,
ಎಲ್ಲರಿಗೂ ಗೊತ್ತು ಅವರ
ಬ್ರಾಹ್ಮಣಿಕೆ, ಗೋತ್ರ, ಪ್ರವರ
ಚುನಾವಣೆವರೆಗೆ ಮಾತ್ರ!
ಎಚ್‌....

Back to Top