CONNECT WITH US  

ಹನಿಗಾರಿಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ತಾಳ್ಮೆ ಕಹಿಯಾದರೂ ಅದರ ಫ‌ಲ ಮಾತ್ರ ಸಿಹಿಯಾಗಿಯೇ ಇರುತ್ತದೆ.

ನಾಳೆಯ ಕೆಲಸ
ಇಂದೇ ಮಾಡಿರಿ
ಅನ್ನುವರಲ್ಲ , ಹೇಗೆ?
ನಾಳೆಯ ತನಕ
ಕಾಯಲೇ ಬೇಕು
ನಾಳೆಯ ಪತ್ರಿಕೆಗೆ!
 ಎಚ್‌. ಡುಂಡಿರಾಜ್‌

ನಾಚಿಕೆಯೋ ಕೋಪವೋ
ಆ ದೇವರಿಗೇ ಗೊತ್ತು
ನಮ್ಮ ಪಾಣಿ
ಗ್ರಹಣದ ಹೊತ್ತು
ನನ್ನವಳ ಮೋರೆಯೂ
ಕೆಂಪಾಗಿತ್ತು !

ಎಚ್‌. ಡುಂಡಿರಾಜ್‌

ಪಾಕಿಸ್ತಾನದ ಪ್ರಧಾನಿ
ಆಗುತ್ತಿದ್ದಾರೆ ಮಾಜಿ
ಕ್ರಿಕೆಟ್‌ ಪಟು ಇಮ್ರಾನ್‌ ಖಾನ್‌
ಸುದ್ದಿ ಕೇಳಿ ಮನಸ್ಸಲ್ಲೆ
ಮಂಡಿಗೆ ತಿಂದರಂತೆ
ಸಿಕ್ಸರ್‌ ಸಿದ್ಧು , ಅಜರುದ್ದೀನ್‌ !
 ...

ಅಂದು ಸೂರ್ಯ ಗ್ರಹಣ 
ಇಂದು ಚಂದ್ರ ಗ್ರಹಣ 
ಜ್ಯೋತಿಷಿಗಳಿಗೆ 
ಎರಡೂ ಒಂದೇ 
ಕೈ ತುಂಬಾ ಹಣ !

 ಎಚ್‌. ಡುಂಡಿರಾಜ್‌

ಯಾರನ್ನು ಬೇಕಾದರೂ 
ಬಂಧಿಸಿ ಹಿಂಸಿಸಬಹುದು 
ಪೋಲಿ ಠಾಣೆಗೆ ತಂದು 
ಕಾರಣ ಕೇಳಿದರೆ 
ಹೇಳಿದರಾಯಿತು 
ಗೌರಿ ಹತ್ಯೆ ಎಂದು !
 ಎಚ್‌. ಡುಂಡಿರಾಜ್‌

ಮೈತ್ರಿ ಸರಕಾರವೆಂಬ
ಮಿತ್ರನನ್ನು ಮುಚ್ಚಿದೆ
ಅಸಮಾಧಾನದ ಮೋಡ
ಸಂಪುಟ ವಿಸ್ತರಣೆಗೆ
ಇದೇ ನಿಜವಾದ ಅಡ್ಡಿ,
ಅನಿಷ್ಟಕ್ಕೊಬ್ಬ ಆಷಾಢ!
ಎಚ್‌. ಡುಂಡಿರಾಜ್‌

ವಿಮಾನ ನಿಲ್ದಾಣದಲ್ಲಿ
ಶಾಪಿಂಗ್‌ ಮಾಡುವಾಗ
ಮಧ್ಯಮ ವರ್ಗದ ಜನ
ಗೊಣಗುತ್ತಾರೆ ಛೇ
ಈ ದೇಶದಲ್ಲಿ ಇನ್ನೂ
ಬಂದಿಲ್ಲ ಅಚ್ಛೇದಿನ !
 ಎಚ್‌.ಡುಂಡಿರಾಜ್‌

ಲೋಕಸಭೆಯಲ್ಲಿ
ಕಣ್ಸನ್ನೆ, ಅಪ್ಪುಗೆ
ನಿಯಮಾವಳಿಯಲ್ಲಿ
ಇದಕ್ಕಿಲ್ಲ ಒಪ್ಪಿಗೆ
ಎನ್ನುವುದು ಬಹುಶಃ
ಗೊತ್ತಿಲ್ಲ ಪಪ್ಪುಗೆ!
ಎಚ್‌. ಡುಂಡಿರಾಜ್‌

ವಿರಹದ ಉರಿಯಲ್ಲಿ
ಬೇಯುತ್ತಿರುವ ಗಂಡ
ಸಂಪುಟ ವಿಸ್ತರಣೆಗೆ
ಕಾಯುತ್ತಿರುವ ಮುಖಂಡ
ಇಬ್ಬರ ಪ್ರಶ್ನೆಯೂ ಅದೇ
ಯಾವಾಗ ಮುಗಿಯುತ್ತದೆ
ಈ ಹಾಳು ಆಷಾಢ !

ಎಚ್‌. ಡುಂಡಿರಾಜ್...

ಸಂಸದರಿಗೆ ದುಬಾರಿ
ಐ ಫೋನ್‌ ಕೊಟ್ಟರು
ಪಕ್ಷದ ಕಾರ್ಯಕರ್ತರಿಗೆ
ಸಿಕ್ಕಿದ್ದು ಕಣ್ಣೀರು
ಐ ವಾಟರ್‌ !
 ಎಚ್‌. ಡುಂಡಿರಾಜ್‌

ಚೆನ್ನಾಗಿದೆ ಈ ಬಾರಿ ಮಳೆ
ತುಂಬಿವೆ ಕೆರೆ, ಬಾವಿ, ಹೊಳೆ
ಇನ್ನೂ ಸಾಲದಿದ್ದರೆ ನೀರು
ಚಿಂತೆ ಮಾಡಬೇಡಿ
ಸಿಎಂ ಸಾಹೇಬರು
ಸುರಿಸುತ್ತಾರೆ ಕಣ್ಣೀರು !
 ಎಚ್‌. ಡುಂಡಿರಾಜ್‌

ದೋಸ್ತಿಗಳ ನಡುವೆ
ನಡೆದಿದೆ ಕಿತ್ತಾಟ
ನೀ ಕೊಡೆ ನಾ ಬಿಡೆ
ಮಿತ್ರ ಪಕ್ಷದವರಿಂದ
ಮುಖ್ಯಮಂತ್ರಿಗಳಿಗೆ
ಬಿಸಿ ಬಿಸಿ ಪತ್ರೊಡೆ!
ಎಚ್‌. ಡುಂಡಿರಾಜ್‌

ಸಿಎಂ ಕುಮಾರಣ್ಣ
ಕರ್ಣನಾದರೆ
ಸಿದ್ದು ಸಾರಥಿ ಶಲ್ಯ
ಪತ್ರದ ಮೂಲಕ
ಸಲಹೆ, ಸೂಚನೆ
ಪತ್ರ ವಾತ್ಸಲ್ಯ!
ಎಚ್‌. ಡುಂಡಿರಾಜ್‌

ಸಂಪುಟ ವಿಸ್ತರಣೆಯ
ಜೇನುಗೂಡಿಗೆ ಈಗ
ಕೈ ಹಾಕುವುದು ಬೇಡ
ಒಂದು ದಿನ ಕಾದರೆ
ಮುಂದೂಡಲು ಸಿಗುತ್ತೆ
ಒಳ್ಳೆಯ ನೆಪ ಆಷಾಢ!
ಎಚ್‌. ಡುಂಡಿರಾಜ್‌

ಹೆಚ್ಚುತ್ತಿದೆ ರೈತರ ಒತ್ತಡ
ಮಾಡಿ ಸಂಪೂರ್ಣ ಸಾಲಮನ್ನಾ
ಅಕ್ಕಿ ಕಡಿತಕ್ಕೆ ಕೈ ಆಕ್ಷೇಪ
ಕಸಿಯಬೇಡಿ ಬಡವರ ಅನ್ನ
ಹಣ ಎಲ್ಲಿಂದ ತರಲಿ ಎಂದು
ಚಿಂತಿಸುತ್ತಿಹರು ಕುಮಾರಣ್ಣ

ಎಚ್...

ಹೆತ್ತವರು ಮದುವೆಗೆ
ಒಪ್ಪಲಿಲ್ಲವೆಂದು
ನೊಂದ ಈತ
ಅನಿವಾರ್ಯವಾಗಿ
ಮಾಡಿಕೊಂಡ ಲಗ್ನ
ನೊಂದಾಯಿತ!
 ಎಚ್‌. ಡುಂಡಿರಾಜ್‌

ಅಕ್ಕಿ,ಬೇಳೆ ಕೆಡಿಮೆ ಮಾಡಿ
ಕೊಟ್ಟಿದ್ದಾರೆ ಸಕ್ಕರೆಯನ್ನು
ಮುಂದಿನ ಬಜೆಟ್‌ನಲ್ಲಿ
ನಿರೀಕ್ಷಿಸಬಹುದು
ಇನ್ಸುಲಿನ್‌ ಇಂಜೆಕ್ಷನ್ನು !
 ಎಚ್‌. ಡುಂಡಿರಾಜ್‌

ಹಣ ದ್ವಿಗುಣಗೊಳಿಸಲು
ಷೇರು, ಅಸ್ತಿ ಖರೀದಿ
ಇತ್ಯಾದಿ ಹತ್ತಾರು ಹಾದಿ
ಸಮಸ್ಯೆಗಳು
ದುಪ್ಪಟ್ಟಾಗಲು
ಸಾಕು
ಎರಡನೇ ಮಡದಿ !

 ಎಚ್‌. ಡುಂಡಿರಾಜ್‌

ಕಾಂಗ್ರೆಸ್‌ ಶಾಸಕರಿಗೆ
ಖಾಸಗಿ ಹೋಟೆಲಲ್ಲಿ
ಸಿದ್ದರಾಮಯ್ಯ ಡಿನ್ನರು
ಕೆಲವರಿಗೆ ಯಾಕೋ
ಹೋಗಲು ಅಂಜಿಕೆ
ಹೋದರೂ
ಸರಿಯಾಗಿ ತಿನ್ನರು !
 ಎಚ್‌. ಡುಂಡಿರಾಜ್‌

Back to Top