CONNECT WITH US  
echo "sudina logo";

ಸಂಪಾದಕೀಯ

ಪ್ರಪಂಚದಲ್ಲೇ ಅತಿ ವೇಗದ ಜಿಡಿಪಿ ಬೆಳವಣಿಗೆ ದರ ಹೊಂದಿರುವ ಭಾರತವು, ದೇಶವಾಸಿಗಳ ಸ್ವಾಸ್ಥ್ಯಕ್ಕಾಗಿ ತನ್ನ ಒಟ್ಟು ಜಿಡಿಪಿಯಲ್ಲಿ ಕೇವಲ 1 ಪ್ರತಿಶತ ಪಾಲನ್ನು ಮಾತ್ರ ಮೀಸಲಿಡುತ್ತಿದೆ ಎನ್ನುತ್ತಿದೆ ಸೆಂಟ್ರಲ್‌...

ವಿಶ್ವಸಂಸ್ಥೆ ಮಾನವ ಹಕ್ಕು  ಮಂಡಳಿ (ಯುಎನ್‌ಎಚ್‌ಆರ್‌ಸಿ) ಯಿಂದ ಹೊರ ಬರಲು ಅಮೆರಿಕ ನಿರ್ಧರಿಸಿದೆ. ಅಮೆರಿಕದ ಈ ನಿರ್ಧಾರ ನೋಡಿ ಜಗತ್ತಿನ ಅನೇಕ ರಾಷ್ಟ್ರಗಳು ಅಚ್ಚರಿ-ಬೇಸರ ವ್ಯಕ್ತಪಡಿಸುತ್ತಿವೆ. ಇದರಿಂದಾಗಿ...

ಭಾರತದ ಮುಂದೆ ಚೀನಾ ಮತ್ತೂಂದು ಚಾಲಾಕಿ ದಾಳ ಉದುರಿಸಿದೆ. ಆದರೆ ಭಾರತ ಬಹಳ ದಿಟ್ಟ ತಂತ್ರವನ್ನು ಅನುಸರಿಸಿ ನಿಮ್ಮ ಆಟ ಇಲ್ಲಿ ನಡೆಯುವುದಿಲ್ಲ ಎಂದು ನೇರವಾಗಿಯೇ ಚೀನಾಕ್ಕೆ ಹೇಳಿದೆ.

ಮೂರುವರೆ ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಿದ್ದ ಪಿಡಿಪಿ ಮತ್ತು ಬಿಜೆಪಿ ಜತೆಗೂಡಿ ರಚಿಸಿದ್ದ ಮೈತ್ರಿ ಸರ್ಕಾರ ಪತನವಾಗಿದೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಮ್ಮ ಮೂವರು ಸಂಪುಟದ ಸದಸ್ಯರೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಅವರ ನಿವಾಸದಲ್ಲಿ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಧರಣಿ ಮೂಲಕವೇ ರಾಜಕೀಯ...

2 ಪಕ್ಷಗಳ ನಡುವಿನ ಹಗ್ಗಜಗ್ಗಾಟದಂತೆ ಇದು ಕಾಣಿಸುತ್ತಿಲ್ಲ. ಇಬ್ಬರು ನಾಯಕರ ರಾಜಕೀಯ ಪ್ರತಿಷ್ಠೆಯಂತೆ ವೇದ್ಯವಾಗುತ್ತಿದೆ. ತಾವು ಮಂಡಿಸಿದ ಯೋಜನೆಗಳನ್ನು ರದ್ದು ಮಾಡಬಹುದು ಎಂಬುದು...

ಕಾಶ್ಮೀರದ ಹಿರಿಯ ಪತ್ರಕರ್ತ, ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿಯ ಹತ್ಯೆ ಕೇಂದ್ರವು ಕಾಶ್ಮೀರದ ಕುರಿತಾದ ನಿಲುವನ್ನು ಪರಾಮರ್ಶಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ರಂಜಾನ್‌ ಮಾಸದಲ್ಲೇ...

ಸರಕಾರಿ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ ಪರಿಣತರನ್ನು ನೇಮಿಸಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರ ಕ್ರಾಂತಿಕಾರಿ ಮಾತ್ರವಲ್ಲದೆ ಸಮಯೋಚಿತವೂ ಆಗಿದೆ. ಲ್ಯಾಟರಲ್‌ ಸ್ಕೀಂ ಎನ್ನಲಾಗಿರುವ ಈ ಕಾರ್ಯಕ್ರಮದಡಿ ಸರಕಾರ ಜಂಟಿ...

ರಾಜ್ಯದಲ್ಲಿ ವರುಣನ ರುದ್ರನರ್ತನದಿಂದ ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಭಾಗಗಳು ಜಲಾವೃತಗೊಂಡು ಕೋಟ್ಯಂತರ ರೂ. ನಷ್ಟವಷ್ಟೇ ಅಲ್ಲದೆ ಜನ-ಜಾನುವಾರು-ಪ್ರಾಣ ಹಾನಿಯಾಗಿದೆ. ಮೊದಲಿಗೆ ಮಳೆ ಶುಭ ಸೂಚಕ ಎಂದು...

ಚೀನದ ಖೀಂಗ್ಡಾವೊದಲ್ಲಿ ಜರಗಿದ ಎಂಟು ದೇಶಗಳ ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದಲ್ಲಿ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಅಂಕಿತ ಹಾಕಲು ನಿರಾಕರಿಸಿ ಭಾರತ ದಿಟ್ಟತನ ಮೆರೆದಿದೆ. ಸಮ್ಮೇಳನದಲ್ಲಿ ಮಾತನಾಡಿದ ಮೋದಿ ಚೀನದ...

ರಾಜ್ಯದ ರಾಜಕೀಯ ಸಂಪೂರ್ಣ ಗೊಂದಲಮಯವಾಗಿದೆ. ಚುನಾವಣೆ ಮುಗಿದು ಒಂದು ತಿಂಗಳಾಗುತ್ತಾ ಬಂದಿದ್ದರೂ ರಾಜ್ಯದಲ್ಲಿನ್ನೂ ಆಡಳಿತ ಯಂತ್ರ ಕಾರ್ಯಾರಂಭ ಮಾಡಿಲ್ಲ.

ರೈಲ್ವೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ದೂರು ಇಂದು ನಿನ್ನೆಯದ್ದಲ್ಲ. ಮಂಗಳೂರೆಂದಲ್ಲ, ರಾಜ್ಯದಿಂದ ಎಂಟು ಮಂದಿ ರೈಲ್ವೆ ಸಚಿವರಾಗಿದ್ದರೂ ಕರ್ನಾಟಕಕ್ಕೆ ರೈಲ್ವೆ...

ಗ್ರಾಮೀಣ ಅಂಚೆ ನೌಕರರು 16 ದಿನ ನಡೆಸಿದ ಮುಷ್ಕರದ ಫ‌ಲವಾಗಿ ಕೇಂದ್ರ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. 2016ರಿಂದ ಪೂರ್ವಾನ್ವಯವಾಗುವಂತೆ ಅವರ ವೇತನದಲ್ಲಿ ಮೂರು ಪಟ್ಟು ಏರಿಕೆಯಾಗಲಿದೆ....

ಬಹಳಷ್ಟು ಹಗ್ಗ ಜಗ್ಗಾಟದ ಬಳಿಕ ಕಡೆಗೂ ಕುಮಾರಸ್ವಾಮಿ ನೇತೃತ್ವದ ಸರಕಾರದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸಿನ 14 ಮತ್ತು ಜೆಡಿಎಸ್‌ನ 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೇ 15ರಂದು...

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಪೂರ್ವ ರಾಷ್ಟ್ರಗಳ-ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರ-ಯಾತ್ರೆ ಯನ್ನು ಮುಗಿಸಿಕೊಂಡು ಬಂದಿದ್ದಾರೆ. ಇದೇ ವೇಳೆಯಲ್ಲೇ ಎಂದಿನಂತೆ ಪ್ರತಿಪಕ್ಷಗಳು ಈ ಯಾತ್ರೆಯ...

ಕಾಳಧನದ ಪ್ರವಾಹ ಮತ್ತು ಹಣಕಾಸು ಸಂಬಂಧಿ ಅಕ್ರಮಗಳು ಹಾಗೂ ಶಿಸ್ತಿನ ಉಲ್ಲಂಘನೆಯನ್ನು ತಡೆಯುವ ದೃಷ್ಟಿಯಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತೆಗೆದುಕೊಂಡಿರುವ ಬಹುಮುಖ್ಯ ಕ್ರಮಗಳಲ್ಲಿ ನೋಟು...

ಜಲ ವಿವಾದಗಳು ಭುಗಿಲೇಳುವುದೇ ಮಳೆ ಕೊರತೆಯ ಸಂದರ್ಭಗಳಲ್ಲಿ. ಅನಾವೃಷ್ಟಿಯ ವೇಳೆ ಪ್ರಾಧಿಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲವಿದೆ.

ಕೇಂದ್ರೀಯ ಸಾಂಖಿಕ ಕಚೇರಿ ಬಿಡುಗಡೆಗೊಳಿಸಿರುವ ಆರ್ಥಿಕ ಅಭಿವೃದ್ಧಿಯ ಅಂಕಿಅಂಶ ಆಶಾದಾಯಕವಾಗಿದೆ. 2017-18ನೇ ಸಾಲಿನ ವಿತ್ತ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 7.7 ಪ್ರಗತಿ ಕಂಡಿದೆ ಎಂದು...

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಜೂ. 7ರಂದು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಸಂಘ… ಶಿಕ್ಷಾ ವರ್ಗವನ್ನುದ್ದೇಶಿಸಿ ಮಾತನಾಡಲಿರುವ ವಿಚಾರ ರಾಜಕೀಯ ವಲಯದಲ್ಲೀಗ ಬಿರುಸಿನ ಚರ್ಚೆಗೆ ಕಾರಣ ವಾಗಿದೆ.

ಮಂಗಳವಾರ ಸುರಿದ ಭಾರೀ ಮಳೆಗೆ ಕರಾವಳಿಯ ಎರಡು ಜಿಲ್ಲೆಗಳು ತತ್ತರಿಸಿವೆ. ಅದರಲ್ಲೂ ಮಂಗಳೂರು ನಗರದಲ್ಲಿ ಅಕ್ಷರಶ ಜಲಪ್ರಳಯವೇ ಸಂಭವಿಸಿದೆ. ಹಲವಾರು ದಶಕಗಳ ಬಳಿಕ ಮಂಗಳೂರು ಈ ಮಾದರಿಯ ಸಮಸ್ಯೆಗೆ ಈಡಾಗಿದ್ದು ಇದೇ ಮೊದಲು...

Back to Top