CONNECT WITH US  

ಭವಿಷ್ಯ

ಮೇಷ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಇರಲಿ. ವಿದ್ಯಾರ್ಥಿಗಳಿಗೆ ಪ್ರವಾಸ ಯೋಗವಿದೆ. ಸರಕಾರಿ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ತಂದೀತು. ಸಂಚಾರದಲ್ಲಿ ಜಾಗ್ರತೆ ಇರಲಿ.
ವೃಷಭ
ಸಾಂಸಾರಿಕವಾಗಿ ಬಂಧುಮಿತ್ರರ ಸಮಾಗಮದಿಂದ ಸಂತಸ ತಂದೀತು. ವೃತ್ತಿರಂಗದಲ್ಲಿ ಕಾರ್ಯಒತ್ತಡಗಳಿರುತ್ತವೆ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳಿರುತ್ತವೆ. ದಿನಾಂತ್ಯ ಶುಭ.
ಮಿಥುನ
ಕ್ರಯ ವಿಕ್ರಯಗಳು ಲಾಭ ತಂದಾವು. ದಾಯಾದಿಗಳು ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಯಾರು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಮುಖ್ಯವಾಗಿ ಸಾಲದ ಬಗ್ಗೆ ಚಿಂತಿಸುವಿರಿ.
ಕಟಕ
ವ್ಯಾಪಾರ ವ್ಯವಹಾರಗಳ ಚೇತರಿಕೆ ಸಂತಸ ತರುತ್ತದೆ. ನೂತನ ವ್ಯವಹಾರಗಳಿಗೆ ಹೂಡಿಕೆ ಲಾಭಕರವಾದರೂ ಜಾಗ್ರತೆ ಇರಲಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು.
ಸಿಂಹ
ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಹಾಗೆ ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಬಂದಾವು. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲ ತಂದಾವು.
ಕನ್ಯಾ
ಸಾಂಸಾರಿಕ ಮನಸ್ತಾಪಗಳಿಗೆ ಕಾರಣರಾಗದಿರಿ. ಆರ್ಥಿಕ ಏರುಪೇರು ತೋರಿ ಬಂದರೂ ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು. ದೂರ ಸಂಚಾರದ ಸಾಧ್ಯತೆ ಇದೆ. ದಿನಾಂತ್ಯ ಶುಭವಾರ್ತೆ ಇರುತ್ತದೆ.
ತುಲಾ
ಹಲವು ರೀತಿಯಲ್ಲಿ ಮನಃ ಕ್ಲೇಶಗಳನ್ನನುಭವಿಸುವಿರಿ. ಹಣದ ಅಪವ್ಯಯದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ. ಕೋರ್ಟು ಕಚೇರಿಗಳ ವ್ಯಾಜ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ
ಆಗಾಗ ಅನಾರೋಗ್ಯ ಕಾಡಲಿದೆ. ದಾಂಪತ್ಯದಲ್ಲಿ ವಿರಸ ಕಾಡಲಿದೆ. ಗೃಹಕೃತ್ಯಗಳಲ್ಲಿ ತೊಂದರೆಗಳಿರುತ್ತವೆೆ. ಕಲುಷಿತ ನೀರಿನಿಂದ ತೊಂದರೆ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರುತ್ಸಾಹ ತಂದೀತು.
ಧನು
ದೂರ ಸಂಚಾರದಿಂದ ಕಾರ್ಯಸಿದ್ಧಿ. ಆರ್ಥಿಕವಾಗಿ ಅಭಿವೃದ್ಧಿ ಇರುತ್ತದೆ. ಜೀರ್ಣ ಶಕ್ತಿಯಲ್ಲಿ ತೊಂದರೆ ಕಾಣಿಸಲಿದೆ. ಗ್ರಹಿಸಿದ ಕೆಲವು ಕಾರ್ಯಗಳು ಕೈಗೂಡಲಿವೆ. ವಿದ್ಯಾರ್ಥಿಗಳಿಗೆ ಶುಭವಾರ್ತೆ.
ಮಕರ
ಆಡ್ಯ ಜನರ ಸಹಕಾರದಿಂದ ಕಾರ್ಯಸಿದ್ಧಿ. ಮನೆಯ ಬಗ್ಗೆ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬಂದೀತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕುಂಭ
ವೃತ್ತಿರಂಗದಲ್ಲಿ ಮಿಥ್ಯಾರೋಪದಿಂದ ಬೇಸರ. ಮನೆಯಲ್ಲಿ ಅಸಮಾಧಾನಕರ ವಾತಾವರಣ. ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಬೆಳವಣಿಗೆ ಕಾರ್ಯಸಿದ್ಧಿಗೆ ಅನುಕೂಲ ತೋರಿ ಬಂದೀತು.
ಮೀನ
ವಿದ್ಯಾ ಪ್ರವೃತ್ತಿಯವರಿಗೆ ಉತ್ತಮ ಫ‌ಲಿತಾಂಶ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನ ವಿರಲಿ. ಸಂಚಾರದಲ್ಲಿ ಧನವ್ಯಯವಿದೆ.
Back to Top