CONNECT WITH US  

ಭವಿಷ್ಯ

ಮೇಷ
ಕಾರ್ಯತಂತ್ರದಿಂದ ನಿಮ್ಮೆಲ್ಲ ಪ್ರಯತ್ನ ಸಫ‌ಲವಾದೀತು. ಹಾಕಿದ ಬಂಡವಾಳ ಹಣ ಇಮ್ಮಡಿಸೀತು. ಆದರೂ ಖರ್ಚುವೆಚ್ಚಗಳಲ್ಲಿ ಹಿಡಿತಬೇಕು. ದಿನಾಂತ್ಯ ಕಿರು ಸಂಚಾರವಿದೆ.
ವೃಷಭ
ಮಹತ್ವದ ಕಾರ್ಯ ನಿರ್ಧಾರಗಳಿಗೆ ಚಾಲನೆ ದೊರೆಯಲಿದೆ. ಸಾಂಸಾರಿಕ ಸುಖ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳಿಗೆ ಪರಸ್ಥಳ ಪ್ರಯಾಣವಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಿದೆ.
ಮಿಥುನ
ವ್ಯಾಪಾರಿ ವರ್ಗದವರಿಗೆ ಆಗಾಗ ಆತಂಕವಾದೀತು. ಮಕ್ಕಳ ಅಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸಿರಿ. ಸಹೋದರರಲ್ಲಿ ಮನಸ್ತಾಪ ತಂದೀತು. ದಿನಾಂತ್ಯ ಅತಿಥಿಗಳು ಬಂದಾರು.
ಕಟಕ
ನಿವೇಶನ ಮಾರಾಟದಿಂದ ಸಾಲ ನಿರ್ವಹಣೆ ಮಾಡಬೇಕಾದೀತು. ಧಾನ್ಯ ವ್ಯವಹಾರಗಳಲ್ಲಿ ಲಾಭವಾದೀತು. ವಿದ್ಯಾರ್ಥಿಗಳಿಗೆ ಅಲಕ್ಷ್ಯದ ಪರಿಣಾಮದಿಂದ ಹಿನ್ನಡೆ ಇದೆ.
ಸಿಂಹ
ಮನೆಯಲ್ಲಿ ದೇವತಾ ಕಾರ್ಯಗಳು ನಡೆದಾವು. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಿರಿಯರಿಗೆ ಪ್ರವಾಸ, ತೀರ್ಥಯಾತ್ರೆ ಭಾಗ್ಯವಿದೆ. ದಿನಾಂತ್ಯ ಶುಭವಾರ್ತೆವಿದೆ.
ಕನ್ಯಾ
ಆತ್ಮೀಯರ ಸತು³ತ್ರ ಸಂತಾನದ ಅಭಿವೃದ್ಧಿಯಿಂದ ಸಂತಸವಾದೀತು. ಆಳುಕಾಳುಗಳಿಂದ ಕಿರಿಕಿರಿ ಇರುತ್ತದೆ. ದೂರ ಸಂಚಾರದಿಂದ ಸುಸ್ತು. ಆರ್ಥಿಕವಾಗಿ ಖರ್ಚು ತರಲಿದೆ.
ತುಲಾ
ನಾನಾ ರೀತಿಯಲ್ಲಿ ಹಣ ಸಂಪಾದನೆಯಾಗಲಿದೆ. ದುಡುಕು ಬುದ್ಧಿಯಿಂದ ಕಾರ್ಯಹಾನಿಯಾಗದಂತೆ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಬಂಧುಬಳಗದವರ ಸಮಾಗಮವಿದೆ.
ವೃಶ್ಚಿಕ
ವೃತ್ತಿರಂಗದಲ್ಲಿ ಇನ್ನಿಲ್ಲದ ಒತ್ತಡಗಳಿರುತ್ತವೆೆ. ದೇಹಾರೋಗ್ಯ ಹಂತ ಹಂತವಾಗಿ ಸುಧಾರಿಸಲಿದೆ. ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಖರ್ಚುವೆಚ್ಚಗಳು ಅಧಿಕವಾದಾವು.
ಧನು
ಶೀತ ಬಾಧೆಯ ಬಗ್ಗೆ ಗಮನವಿರಲಿ. ಆಗಾಗ ಖರ್ಚುವೆಚ್ಚಗಳಿದ್ದರೂ ಧನಾಗಮನ ವಿರುತ್ತದೆ. ವಿದ್ಯಾರ್ಥಿಗಳಿಗೆ ಶುಭವಾರ್ತೆ ಇರುತ್ತದೆ. ದಿನಾಂತ್ಯ ಕಿರು ಸಂಚಾರವಿದೆ.
ಮಕರ
ಅಧಿಕಾರಿ ವರ್ಗದವರಿಗೆ ಮುಂಭಡ್ತಿಯ ಯೋಗವಿದೆ. ವ್ಯಾಪಾರಿ ವರ್ಗದವರಿಗೆ ಅಧಿಕ ಆದಾಯ ವಿರುತ್ತದೆ. ನಿರುದ್ಯೋಗಿಗಳಿಗೆ ಸದ್ಯ ತಾತ್ಕಾಲಿಕ ಉದ್ಯೋಗ ವಿರುತ್ತದೆ.
ಕುಂಭ
ಆರ್ಥಿಕ ಮುಗ್ಗಟ್ಟು ಇಲ್ಲವಾದರೂ ಖರ್ಚುವೆಚ್ಚಗಳು ಅಧಿಕವಾಗುತ್ತವೆ. ಸಾಂಸಾರಿಕ ತಾಪತ್ರಯಗಳು ಆಗಾಗ ಕಂಡು ಬರುತ್ತವೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ಮಾಡಬೇಕು.
ಮೀನ
ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ದೇವತಾರಾಧನೆಗಾಗಿ ಓಡಾಟ ವಿರುತ್ತದೆ. ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿರಿ. ದಾಯಾದಿಗಳ ಬಗ್ಗೆ ತಲೆಗೆಡಿಸಿಕೊಳ್ಳದಿರಿ. ದಿನಾಂತ್ಯ ಶುಭ.
Back to Top