CONNECT WITH US  

ಭವಿಷ್ಯ

ಮೇಷ
ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆಗೆ ಇತರರಿಂದ ಮೆಚ್ಚುಗೆ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗದ ಅವಕಾಶಗಳು ಒದಗಿ ಬಂದಾವು. ನಾನಾ ರೀತಿಯಲ್ಲಿ ಧನಾಗಮನದಿಂದ ಕಾರ್ಯಸಾಧನೆಯಾಗ‌ಲಿದೆ.
ವೃಷಭ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರ್ಥಿಕವಾಗಿ ಹೂಡಿಕೆಗಳು ಲಾಭಕರವಾಗಲಿವೆ. ಮನೆ ಬದಲಾವಣೆಯ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪ್ರಯತ್ನಬಲ ಉತ್ತಮ ಫ‌ಲಿತಾಂಶ ನೀಡಲಿವೆ.
ಮಿಥುನ
ಸಾಂಸಾರಿಕವಾಗಿ ಧರ್ಮಪತ್ನಿಯೊಂದಿಗೆ ಸಹನೆಯ ಹೊಂದಾಣಿಕೆ ಇರಲಿ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭ ತೋರಿಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಿರೀಕ್ಷಿತ ಸಂಚಾರ ಭಾಗ್ಯವಿದೆ.
ಕಟಕ
ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿವಿಧ ರೀತಿಯಲ್ಲಿ ಧನಾಗಮನದಿಂದ ಅಭಿವೃದ್ಧಿಯು ತೋರಿಬರುವುದು. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಿದಲ್ಲಿ ಉತ್ತಮ ಫ‌ಲಿತಾಂಶವು ತೋರಿಬರಲಿದೆ.
ಸಿಂಹ
ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಆರ್ಥಿಕ ಹೂಡಿಕೆಗಳ ಬಗ್ಗೆ ದುಡುಕದಿರಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗವು ಲಭಿಸಲಿದೆ. ದಿನಾಂತ್ಯ ಶುಭ.
ಕನ್ಯಾ
ಹಿರಿಯರು ನಿಮಗೆ ಸೂಕ್ತ ಮಾರ್ಗದರ್ಶನವನ್ನು ನೀಡಲಿದ್ದಾರೆ. ಬಾಕಿ ಇದ್ದ ಬಹಳಷ್ಟು ಕೆಲಸ ಕಾರ್ಯಗಳನ್ನು ಪೂರೈಸಬೇಕಾಗುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾದೀತು. ಆರೋಗ್ಯದಲ್ಲಿ ಕಾಳಜಿ ಇರಲಿ.
ತುಲಾ
ಮನೆಯಲ್ಲಿ ಆಪ್ತ ಜನರೊಡನೆ ಸಮಾಲೋಚನೆ ಕಂಡು ಬರಲಿದೆ. ಆಲಂಕಾರಿಕ ವಸ್ತುಗಳಿಗಾಗಿ ಧನವ್ಯಯವಾದೀತು. ಅನಿರೀಕ್ಷಿತ ರೂಪದಲ್ಲಿ ಆರೋಗ್ಯದ ಬಗ್ಗೆ ಗಮನಹರಿಸುವಂತಾದೀತು. ಕೊಟ್ಟುಕೊಳ್ಳುವಿಕೆಯಲ್ಲಿ ಜಾಗ್ರತೆ ಇರಲಿ.
ವೃಶ್ಚಿಕ
ಆಗಾಗ ಸಂಚಾರಗಳು ಒದಗಿ ಬಂದೀತು. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಿ. ವೃತ್ತಿರಂಗದಲ್ಲಿ ವಾದ-ವಿವಾದದಿಂದ ದೂರವಿದ್ದಷ್ಟೂ ಒಳ್ಳೆಯದು. ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ನಿರುತ್ಸಾಹವಾಗುವುದು.
ಧನು
ನೆರೆಹೊರೆಯವರ ಕಿರಿಕಿರಿಯಿಂದ ಮನಸ್ಸಿಗೆ ಸಮಾಧಾನ ಇರದು. ಆಗಾಗ ಸಂಚಾರಗಳು ದೇಹಾಯಾಸಕ್ಕೆ ಕಾರಣವಾದಾವು. ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಿದ್ಧಿ ಇದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಮೂಡೀತು.
ಮಕರ
ವಾದ-ವಿವಾದಗಳು ಕಲಹಕ್ಕೆ ಕಾರಣವಾದಾವು. ಆಗಾಗ ಧನಾಗಮನವಿದ್ದರೂ ಖರ್ಚುವೆಚ್ಚಗಳು ಅಧಿಕವಾಗಲಿವೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯವೈಖರಿ ಮೆಚ್ಚುಗೆ ಪಡೆದೀತು. ಉದ್ಯೋಗಿಗಳಿಗೆ ಮುಂಭಡ್ತಿ ಇದೆ.
ಕುಂಭ
ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಲಿದ್ದಾರೆ. ವೈಯಕ್ತಿಕ ಆರೋಗ್ಯದ ಬಗ್ಗೆ ಯೋಚಿಸುವಂತಾದೀತು. ಅನಾವಶ್ಯಕವಾಗಿ ವಾದ - ವಿವಾದಗಳು ನಿಷ್ಠುರತೆಗೆ ಕಾರಣವಾದಾವು. ಉದ್ಯೋಗಿಗಳಿಗೆ ಹೊಂದಾಣಿಕೆ ಇರಲಿ.
ಮೀನ
ಬಂದ ಅವಕಾಶಗಳನ್ನು ಸದುಪಯೋಗಿಸಿ ಕೊಂಡಲ್ಲಿ ಉತ್ತಮ ಫ‌ಲವಿದೆ. ಮನೆಯಲ್ಲಿ ನೆಂಟರ ಆಗಮನ ಸಂತಸ ತರಲಿದೆ. ಸರಕಾರಿ ಅಧಿಕಾರಿ ವರ್ಗಕ್ಕೆ ಸ್ಥಳ ಬದಲಾವಣೆಯ ಸಾಧ್ಯತೆಯು ಕಂಡು ಬರಲಿದೆ.
Back to Top