CONNECT WITH US  

ಭವಿಷ್ಯ

ಮೇಷ
ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಗಳಿರುತ್ತವೆ. ಸಾಧ್ಯವಾದಷ್ಟು ಕೋಪತಾಪಗಳನ್ನು ನಿಯಂತ್ರಿಸಬೇಕಾಗುತ್ತದೆ. ಸಾಂಸಾರಿಕವಾಗಿ ಮಕ್ಕಳಿಂದ ಸಂತಸದ ವಾತಾವರಣ ತಂದೀತು.
ವೃಷಭ
ಶುಭವಾರ್ತೆ ಸಂತಸ ತರಲಿದೆ. ದೇವತಾಕಾರ್ಯಗಳಿಗೆ ಧನವ್ಯಯವಾಗಲಿದೆ. ಕಾರ್ಯಸಾಧನೆಯಿಂದ ನೆಮ್ಮದಿ ತರುತ್ತದೆ. ಸರಕಾರಿ ಕೆಲಸಕಾರ್ಯಗಳು ವಿಳಂಬವಾಗಲಿವೆ. ದಿನಾಂತ್ಯ ಶುಭವಿದೆ.
ಮಿಥುನ
ಆಗಾಗ ದೇಹಾರೋಗ್ಯದಲ್ಲಿ ಏರುಪೇರಾದೀತು. ಶುಭಮಂಗಲ ಕಾರ್ಯಗಳಿಗೆ ಓಡಾಟವಿರುತ್ತದೆ. ಕ್ರಯವಿಕ್ರಯಗಳು ಲಾಭಕರವಾಗುತ್ತವೆೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳಿರುತ್ತವೆ.
ಕಟಕ
ದೀರ್ಘ‌ ಕಾಲದ ಸಮಸ್ಯೆಗಳು ನಿವಾರಣೆ ಯಾಗಲಿವೆ. ನ್ಯಾಯಾಲಯದ ಸಮಸ್ಯೆಗಳಿಗೆ ಧನವ್ಯಯವಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಮಾಧಾನಕರವಾದ ಅಭಿವೃದ್ಧಿ ಸಿಗುತ್ತದೆ.
ಸಿಂಹ
ಭೂ ವ್ಯವಹಾರದಲ್ಲಿ ಹಣ ಹೊಳೆಯಂತೆ ಹರಿಯಲಿದೆ. ಕೀಳರಿಮೆಯ ಜನರಿಂದ ಬೇಸರಕ್ಕೆ ಕಾರಣವಾಗುತ್ತದೆ. ಯಾತ್ರಾದಿಗಳಿಂದ ಪುಣ್ಯ ಲಾಭವಿದ್ದೀತು. ವಾಹನ ಖರೀದಿಗೆ ಸಕಾಲವಲ್ಲ.
ಕನ್ಯಾ
ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುತ್ತದೆ. ಬೇಸಾಯಗಾರರಿಗೆ ತಮ್ಮ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿದೆ. ಕ್ರೀಡಾ ವಿನೋದಗಳಲ್ಲಿ ಯಶಸ್ಸು ಕಂಡು ಬರಲಿದೆ. ಶುಭವಿದೆ.
ತುಲಾ
ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಅವಕಾಶಗಳಿರುತ್ತವೆ. ನಿರುದ್ಯೋಗ ಸಮಸ್ಯೆಗಳು ನಿವಾರಣೆಯಾಗಲಿವೆ. ಆಗಾಗ ಹಿತಶತ್ರುಗಳ ಬಾಧೆ. ದಿನಾಂತ್ಯ ಕಿರು ಸಂಚಾರವಿದೆ.
ವೃಶ್ಚಿಕ
ಮನೆಯಲ್ಲಿ ಕಳ್ಳಕಾಕರ ಭೀತಿ ತಂದೀತು. ಅನಾರೋಗ್ಯದ ಸಮಯ. ಜಾಗ್ರತೆ ಇರಬೇಕು. ವಿದ್ಯಾರ್ಥಿಗಳಿಗೆ ನಿರುತ್ಸಾಹ ತೋರಿ ಬರುತ್ತದೆ. ಬಂಡವಾಳದಲ್ಲಿ ಹಣ ಹೂಡಿಕೆ ಉತ್ತಮವಲ್ಲ.
ಧನು
ದೇವತಾ ಕಾರ್ಯಗಳು ಮನಸ್ಸಿಗೆ ಹಿತವಾದಾವು. ದಾಯಾದಿಗಳು ನಿಮ್ಮ ಮೈತ್ರಿಗೆ ಹಾತೊರೆಯುವರು. ದೇಹಾರೋಗ್ಯದ ಬಗ್ಗೆ ಗಮನಹರಿಸಿರಿ. ಸಂಚಾರದಲ್ಲಿ ದೇಹಾಯಾಸವಾಗುತ್ತದೆ.
ಮಕರ
ಪಾಲು ಬಂಡವಾಳದಲ್ಲಿ ಹೂಡಿಕೆ ಬಗ್ಗೆ ಜಾಗ್ರತೆ ವಹಿಸಿರಿ. ಶ್ರೀ ಕುಲದೇವತಾ ದರ್ಶನ ಭಾಗ್ಯ ತಂದೀತು. ಹಳೇ ಮಿತ್ರರ ಸಹಕಾರ ತೋರಿ ಬರುತ್ತದೆ. ಸಂಚಾರದಲ್ಲಿ ಜಾಗ್ರತೆ ಇರಲಿ.
ಕುಂಭ
ಸಾಂಸಾರಿಕವಾಗಿ ನೆಮ್ಮದಿ ತೋರಿ ಬರುತ್ತದೆ. ವೃತ್ತಿರಂಗದಲ್ಲಿ ಕಾರ್ಯಒತ್ತಡಗಳಿದ್ದರೂ ಕಾರ್ಯಾನುಕೂಲವಾಗುತ್ತದೆ. ವಿವಾಹ ಪ್ರಸ್ತಾವಗಳಿಗೆ ಆಗಾಗ ಅಡಚಣೆ ಇರುತ್ತದೆ.
ಮೀನ
ಅಧಿಕಾರಿ ವರ್ಗದವರಿಗೆ  ಸಹೋದ್ಯೋಗಿ ಗಳಿಂದ ಸಹಕಾರ. ವಿದ್ಯಾರ್ಥಿಗಳಿಗೆ ತುಸು ಚೇತರಿಕೆ ಮುನ್ನಡೆ ತರಲಿದೆ. ಶುಭಕಾರ್ಯಗಳ ಚಿಂತನೆ ಸದ್ಯದಲ್ಲಿ ಕಾರ್ಯಗತವಾಗದು.
Back to Top