CONNECT WITH US  

ಪಂಚರ್

ಐದು ವರ್ಷದಲ್ಲಿ ರಾಜ್ಯ ಬಾಲ್ಯವಿವಾಹ ಮುಕ್ತವಾಗಬೇಕು: ಸಿಎಂ
-ಮುಕ್ತ... ಮುಕ್ತ... ಮುಕ್ತ... ಮುಕ್ತ...ಮುಕ್ತ...
ಈ ಬಾರಿ ಗಣರಾಜ್ಯೋತ್ಸವದಲ್ಲಿ 23 ಸ್ತಬ್ಧಚಿತ್ರ.
-ಇದನ್ನ ನೋಡಿದವರು ಆಗ್ತಾರಾ ಮೂಕಸ್ತಬ್ಧ?
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ ಶೋ ಗೋವಾಗೆ ಸ್ಥಳಾಂತರ?
-ಬೆಂಗಳೂರು ಏರ್‌ ಶೋನಲ್ಲಿ ಯಾರೋ ಗೋ ಗೋ ಗೋವಾ ಅಂತ ಹಾಡಿದ್ದನ್ನು ಪರೀಕ್ಕರ್‌ ಸೀರಿಯಸ್ಸಾಗಿ ತಗೊಂಡ ಹಾಗೆ ಕಾಣ್ತಿದೆ.
ರಾಜಕಾರಣಿಗಳಿಂದ ಬದಲಾವಣೆ ಸಾಧ್ಯವಿಲ್ಲ : ರಿಚರ್ಡ್‌
-ರಾಜಕಾರಣಿಗಳೂ ಬದಲಾಗಲ್ಲ ಅಂತಾನೂ ಹೇಳಿಬಿಡಿ
ಮತ್ತೊಬ್ಬ ಬಾಂಗ್ಲಾ ಕ್ರಿಕೆಟಿಗ ಜೈಲುಪಾಲು.
-ಬಾಂಗ್ಲಾದಲ್ಲಿ ಕ್ರಿಕೆಟಿಗರಿಗೆಂದೇ ಹೊಸ ಬಂದೀಖಾನೆ ಅಗತ್ಯವಿದೆ.
ನಿಧನರಾದ ವ್ಯಕ್ತಿಯ 50 ಸಾವಿರರೂಪಾಯಿ ಹಳೇ ನೋಟು ಸ್ವೀಕರಿಸಲು ಆರ್‌ಬಿಐ ನಕಾರ.
*ನೋಟೂ ಸತ್ತು ಹೋಗಿದೆ ಅಂತಆರ್‌ಬಿಐ ತೀರ್ಮಾನಿಸಿರಬಹುದು!
ಮಿತಿಮೀರಿದ ತೂಕದ57 ಸಿಬ್ಬಂದಿಗೆ ವಿಮಾನದಿಂದ ಕೊಕ್‌ ನೀಡಿದ ಏರ್‌ ಇಂಡಿಯಾ.
* ಏರ್‌ ಇಂಡಿಯಾದ ಸಂಬಳದ ಬಿಲ್ಲಿನ ತೂಕವೇ ಅತಿಯಾಗಿದೆ!
ಸೆರೆನಾಗೆ "ಗೋರಿಲ್ಲಾ' ಎಂದು ನೌಕರಿ ಕಳೆದುಕೊಂಡ ವೀಕ್ಷಕ ವಿವರಣೆಕಾರ
*ಗೋರಿಲ್ಲಾ ಪದ ಬಳಸಿ ಏನಿಲ್ಲಅಂದಂಗಾಯ್ತು..!
ವಾಕ್‌ ಸ್ವಾತಂತ್ರ್ಯ ಅಪಾಯದಲ್ಲಿ:ಮನಮೋಹನ ಸಿಂಗ್‌ ಕಳವಳ.
* ಯಾವತ್ತೂ ಮಾತಾಡದಮನಮೋಹನ್‌ ಸಿಂಗ್‌ ವಾಕ್‌ ಸ್ವಾತಂರ್ತ್ಯದ ಬಗ್ಗೆ ಮಾತಾಡಿದ್ರಲ್ಲ!
ಯಡಿಯೂರಪ್ಪ ಮುಖ ನೋಡಿ ಜನ ಬಿಜೆಪಿಗೆಮತ ಹಾಕೋಲ್ಲ- ಈಶ್ವರಪ್ಪ
*ಈಶ್ವರಪ್ಪ ಮುಖ ನೋಡಿದ್ರೆ ಮತಕಟ್ಟೆಗೇ ಬರೋಲ್ಲ!
ಸಮಾಜವಾದಿ ಪಕ್ಷದಲ್ಲಿ ಶಿವಪಾಲ್‌ ವಜಾ ಮಾಡಿದ್ದ ಅಖೀಲೇಶ್‌ ಆಪ್ತರ ಮರುಸೇರ್ಪಡೆ.
* ವಜಾ ಮಾಡಿಸಿಕೊಂಡೋರು ಇನ್ನು ಮಜಾ ಮಾಡಬಹುದು!
30 ಸಾವಿರ ಮೇಲ್ಪಟ್ಟ ವ್ಯವಹಾರಕ್ಕೂ ಪಾನ್‌ ಕಡ್ಡಾಯ: ಚಿಂತನೆ
* ಪಾನ್‌ ಕಡ್ಡಾಯ ಅಂತಷ್ಟೇ ಓದಿ ಅಡಕೆ ಬೆಳೆಗಾರರು ಖುಷಿ ಪಟ್ಟರಂತೆ!
ಧೋನಿ, ಯುವಿಗೆ ಬ್ಯಾಟಿಂಗ್‌ಗೆ ನಡುಗಿದ ಇಂಗ್ಲೆಂಡ್‌.
* ಇಬ್ಬರು "ಸೋತವರಿಂದ' ಗೆದ್ದ ಭಾರತ...!
ಜಲ್ಲಿಕಟ್ಟು : ಮದ್ರಾಸ್‌ ಹೈಕೋರ್ಟ್‌ಗೇ ಹೋಗಿ: ಕೈತೊಳೆದುಕೊಂಡ ಸುಪ್ರೀಂ
* ಕಟ್ಟು ಬಿಚ್ಚೋದಕ್ಕೆ ಎಲ್ಲರಿಗೂ ಭಯವೇ!
ಜಲ್ಲಿಕಟ್ಟು: ಕೋರ್ಟ್‌ ವಿರುದ್ಧವೇ ತಿರುಗಿಬಿದ್ದ ತಮಿಳ್ನಾಡು ಜನ.
* ಅವರಿಗೆ ಕಟ್ಟು -ಪಾಡೇ ಇಲ್ಲ!
ಬಿಗ್‌ಬಾಸ್‌ ಮನೆಯಲ್ಲೇ ಮದುವೆಯಾದ ವಿಕ್ರಾಂತ್‌-ಮೊನಾಲಿಸಾ
* ಅದೀಗ ಮದುವೆ ಮನೇನೂ ಆಯ್ತಲ್ಲ!
ವಿಶ್ವದ ಮೊದಲ ರೊಬೊಟ್‌ ರಿಪೋರ್ಟರ್‌!
* ಈಗಂತೂ ಎಲ್ಲ ರಿಪೋರ್ಟರುಗಳೂ ರೊಬೋ ಆಗಿದ್ದಾರೆ!
ಶಾಲೆ ಬಿಟ್ಟ ವಿದ್ಯಾರ್ಥಿ ಈಗ ಮಹಾ ಉದ್ಯಮಿ
* ಶಾಲೆ ಬಿಟ್ಟ ಮೇಷ್ಟ್ರು ಚಿತ್ರೋದ್ಯಮಿ ಆಗಿದ್ದಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ಉದಾಹರಣೆ!
ಕುಸ್ತಿಯಲ್ಲಿ ಒಲಿಂಪಿಕ್ಸ್‌ ಪದಕ ವಿಜೇತನನ್ನು ಸೋಲಿಸಿದ ಬಾಬಾ ರಾಮ್‌ದೇವ್‌!
* ಟೋಕಿಯೋ ಒಲಿಂಪಿಕ್ಸ್‌ಗೆ ಕಳುಹಿಸಿದರೆ ಚಿನ್ನ ಗ್ಯಾರಂಟಿ..?
ಶೀಲಾ ದೀಕ್ಷಿತ್‌ ನೇಪಥ್ಯಕ್ಕೆ.
* ಅವರು ಪಥ್ಯ ಶುರು ಮಾಡಿ ಬಹಳ ಕಾಲ ಆಯ್ತು!
ಮುಲಾಯಂ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ- ಸುಪ್ರೀಂ ಕೋರ್ಟ್‌ಗೆ ಅಖೀಲೇಶ್‌ ಕೇವಿಯೆಟ್‌.
* ಸೈಕಲ್‌ ಅಡಿಗೆ ಬಿದ್ದು ಒಂದು ಸಾವು!
ಪೀಟರ್‌ ಮುಖರ್ಜಿಯಿಂದ ವಿಚ್ಛೇದನ ಬೇಕು: ಇಂದ್ರಾಣಿ
* ಮೂಗರ್ಜಿ ಸಲ್ಲಿಸಿ!
ಆಸೀಸ್‌ ಸ್ಪಿನ್ನರ್‌ಗಳಿಗೆ ಭಾರತದಶ್ರೀರಾಮ್‌ ಸಲಹಾಗಾರರು
* ಭಾರತಕ್ಕೆ ಭಾರತದ್ದೇ ಸ್ಪಿನ್‌ ಮಂತ್ರನಾ..?

Pages

Back to Top