CONNECT WITH US  

ಪಂಚರ್

ಈಗ ಜನಧನ ಖಾತೆದಾರರಿಗೆ ಆರ್‌ಬಿಐ ಶಾಕ್‌. ತಿಂಗಳಿಗೆ 10 ಸಾವಿರ ರೂ. ಮಾತ್ರ ಹಿಂಪಾವತಿ ಅವಕಾಶ.
* ಎಲ್ಲವನ್ನೂ ಆಗಾಗ MODI ಫೈ ಮಾಡಲಾಗುತ್ತದೆ.
ದೇಶಕ್ಕಾಗಿ ಕಷ್ಟ ಅನುಭವಿಸಲು ಸಿದ್ಧ ಎಂದ ಸಾಮಾನ್ಯರು.
*ಗೊಣಗುತ್ತಿರೋರು ರಮ್ಯ ಥರದ ಸ್ತ್ರೀಸಾಮಾನ್ಯರು!
ಮದುವೆಗೆ ಹಣ ಪಡೆಯಲು ವಿಧಿಸಿದ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿ ದೆಹಲಿ ಹೈಕೋರ್ಟ್‌ನಿಂದ ವಜಾ.
* ಮದುವೆಗೆ ದುಡ್ಡು ಕೊಡೋಲ್ಲ ಅನ್ನೋದು ಅನುಕೂಲ ಅಲ್ವೇ!
ಸಿನಿಮಾ ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ಕಡ್ಡಾಯ. ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ.
*ಶೋಕಗೀತೆ, ಪ್ರೇಮಗೀತೆ ಕಡ್ಡಾಯ ಅಂತ ನಿರ್ದೇಶಕರು ನಂಬಿದ್ದರು!
ರಾಸಲೀಲೆ ನಡೆಸಿ ಸಿಕ್ಕಿಬಿದ್ದ ಬಾಂಗ್ಲಾ ಕ್ರಿಕೆಟಿಗರಿಗೆ ಭಾರೀ ದಂಡ, ಇನ್ನೊಮ್ಮೆ ತಪ್ಪು ಮಾಡದಂತೆ ಎಚ್ಚರಿಕೆ.
* ಇನ್ನೊಮ್ಮೆ ತಪ್ಪು ಮಾಡಿದರೂ ಸಿಕ್ಕಿ ಬೀಳದಿರಲು ಬಾಂಗ್ಲಾ ಕ್ರಿಕೆಟಿಗರ ನಿರ್ಧಾರ.
ನಿಷೇಧಿತ ನೋಟನ್ನು ಡಿ.30ರೊಳಗೇ ಖಾತೆಗೆ ಹಾಕಿºಡಿ, ಗಡುವು ವಿಸ್ತರಿಸಲ್ಲ.
-ಖಾತೆಯನ್ನೇ ನಿಷೇಧಿಸಲಾಗಿದ್ದರೆ!
ನಗದುರಹಿತ ಆರ್ಥಿಕತೆ ಕಾರ್ಯಸೂಚಿ ಸಿದ್ಧಪಡಿಸಲು ಉಪಸಮಿತಿ.
-ಮುನಿಸಿಕೊಂಡ ಪತ್ನಿಯೂ ನಗದು ಕಾರ್ಯಸೂಚಿ ಸಮಿತಿ ಸದಸ್ಯೆ!
ಸೋನಿಯಾ ಗಾಂಧಿಗೆ ಜ್ವರ: ಆಸ್ಪತ್ರೆಗೆ ದಾಖಲು
-ಡೀಮಾನಿಟೈಸೇಷನ್‌ ಫೀವರ್‌ ಇರಬಹುದು!
ಜಯಾ ಈಗ ಚೆನ್ನಾಗಿ ತಿನ್ನುತ್ತಿದ್ದಾರೆ: ಅಣ್ಣಾಡಿಎಂಕೆ
-ಮೊದಲೂ ಚೆನ್ನಾಗಿ ತಿನ್ನುತ್ತಿದ್ದುದಕ್ಕೆ ಕೋರ್ಟು ಪ್ರಕರಣಗಳೇ ಸಾಕ್ಷಿ!
ಕಿರಿಯರ ವಿಶ್ವಕಪ್‌ ಹಾಕಿಯಿಂದ ಪಾಕ್‌ ಔಟ್‌
-ಪಾಕಿಗಳ ಬಿಟ್ಟಾಕಿ!
160 ಟನ್‌ ಹೊಸ ನೋಟು ಸಾಗಿಸಿದ ವಾಯುಪಡೆ!
* ಎಲ್ಲಿಗೆ ಸಾಗಿಸಿದ್ರು? ಇಲ್ಲಂತೂ ದುಡ್ಡು ಸಿಗ್ತಿಲ್ಲ!
ಮೋದಿ ಅಧಿಕಾರದಿಂದ ಇಳಿವವರೆಗೂ ಹೋಟೆಲ್‌ ಮಾಲೀಕನಿಂದ ಅರ್ಧ ತಲೆ ಬೋಳಿಸಿಕೊಳ್ಳುವ ಶಪಥ!
* ಅಷ್ಟೊತ್ತಿಗೆ ಇನ್ನರ್ಧ ತಲೆಗೂದಲು ಬಂದಿರುತ್ತೆ!
8ನೇ ದಿನವೂ ಸಂಸತ್ತಲ್ಲಿ ಕಲಾಪ ಇಲ್ಲ
* ಕಲಾಪ ಅಂದ್ರೇನು ಅಂತ ಸಂಸದರು ಕೇಳ್ಳೋ ಹಾಗಿದೆ!
ದೀಪಿಕಾ- ರಣವೀರ್‌ ಮುದ್ದು ಮಗು ಬಗ್ಗೆ ರಣಬೀರ್‌ ಕಪೂರ್‌ ಹೇಳಿಕೆ
* ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿವವರಿಗೆ ಅರ್ಜೆಂಟು ನೋಡಿ!
ನೋಟು ರದ್ದಿನ ಪರಿಣಾಮ 2ನೇ ಪ್ರೊ ಕುಸ್ತಿ ಲೀಗ್‌ ಮುಂದೂಡಿಕೆ!
*ಕುಸ್ತಿ ಲೀಗ್‌ ಮೇಲೆ ನೋಟಿನ ಕುಸ್ತಿ
ಮನೆಮನೆಗೆ ತೆರಳಿ ಮಹಿಳೆಯರಿಗೆ ಅರಿಷಿನ ಕುಂಕುಮ ನೀಡಿ ರಾಯಚೂರು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ.
-ಜತೆಗೊಂದು ಹಳೇನೋಟು ಕೊಟ್ಟ ಸುದ್ದಿ ಬಂದಿಲ್ಲಪ್ಪ.
ಚಾಯ್‌ವಾಲಾಗೆ ಅಂಗಡಿ ಉದ್ಘಾಟಿಸುವ ಅವಕಾಶ ಕೊಟ್ಟ ಉದ್ಯಮಿ ನೀಲೇಶ್‌ ಭಾಟಿಯಾ.
- ಮುಂದೊಂದು ದಿನ ಆತ ಪ್ರಧಾನಿ ಆಗಬಹುದೇ?
ನೋಟು ನಿಷೇಧ ಸರಿ, ಅನುಷ್ಠಾನ ಸರಿಯಿಲ್ಲ: ದೇವೇಗೌಡ
- ಬಿಜೆಪಿ, ಕಾಂಗ್ರೆಸ್‌ ಎರಡೂ ಕಡೆ ಬ್ಯಾಲೆನ್ಸ್‌ ಮಾಡ್ಬುಟ್ರಲ್ಲ!
ನೋಟು ನಿಷೇಧದಿಂದ ಕೆಲವರಿಗೆ ನಿದ್ರೆ ಇಲ್ಲ, ಮಂದಹಾಸ ಮಾಯ: ಅಮಿತ್‌ ಶಾ
-ಸುಳ್ಳು, ನಾವು ವಿಧಾನಸಭೆಯಲ್ಲೇ ನಿದ್ರಿಸುತ್ತೇವೆ ಅಂದ್ರಂತೆ ಕೆಲವರು!
ಮೂರು ಪ್ರಮುಖ ಆರ್ಥಿಕ ಸುಧಾರಣೆಗಳಲ್ಲಿ ನೋಟು ರದ್ದತಿಯೂ ಒಂದು: ಟಾಟಾ
* ಹಳೇ ನೋಟಿಗೆ ಟಾಟಾ ಹೇಳಿದ್ದರಿಂದ ಟಾಟಾ ಮೆಚ್ಚಿಕೊಂಡಿರಬಹುದಾ!
ಯೋಗರಾಜ ಭಟ್ಟರು ಹುಡುಗಿ ಹುಡುಕುತ್ತಿದ್ದಾರಂತೆ.
*ಭಗ್ನಪ್ರೇಮಿ ಗಣೇಶನಿಗೆ ಮುಂಗಾರಿನಲ್ಲಿ ಮದುವೆ ಮಾಡಬಹುದು!
ನೋಟು ರದ್ದಾಗಿದ್ದರಿಂದ ಶೂಟಿಂಗುಗಳೂ ನಿಂತಿವೆಯಂತೆ.
*ನೋಟಿಲ್ಲದ ಮೇಲೆ ನೋಟ ಯಾರಿಗೆ ಬೇಕ್ರೀ!
ಕನ್ನಡ ಶಾಲೆಗಳಿಗೆ ಬೀಗ ಹಾಕಿದ್ದು ದುರದೃಷ್ಟಕರ-ಚಂಪಾ
* ಬೀಗ ಸರಬರಾಜು ಮಾಡಿದ ಸಂಸ್ಥೆಯ ಮೇಲೆ ದೂರು ದಾಖಲಿಸಿ!
ಹಗಲುರಾತ್ರಿ ಟೆಸ್ಟ್‌: ವೈಟ್‌ವಾಷ್‌ ತಪ್ಪಿಸಿಕೊಳ್ಳುವತ್ತ ಆಸ್ಟ್ರೇಲಿಯಾ
*ವೈಟ್‌ವಾಷ್‌ ಆದ್ರೂ ಗೊತ್ತಾಗಲ್ಲ ಬಿಡಿ, ಎಲ್ಲರೂ ಬಿಳಿಯರಲ್ಲವೆ?

Pages

Back to Top