CONNECT WITH US  

ಪಂಚರ್

ಪ್ರಧಾನಿ ಹುದ್ದೆ ಮೇಲೆ ಮಮತಾ ಕಣ್ಣು.
*ಹಿಂದಿ ಡಿಕ್ಷನರಿ ತೆಗೆದುಕೊಂಡ ದೀದಿ ಡಿಕ್ಷನರಿಯಲ್ಲೇ ನರಿಯೂ ಇದೆ!
ಪಟ್ಟಾಪಟ್ಟಿ ಲುಂಗಿ ತೊಟ್ಟು ¬ಬಂದಿದ್ದ ವ್ಯಕ್ತಿಗೆ ಕೇರಳ ವಿಧಾನಸಭೆ ಪ್ರವೇಶ ನಿರಾಕರಣೆ!
*ಅಂಗಿ ಮತ್ತು ಲುಂಗಿ ಕೇರಳದಲ್ಲಿ ಉಭಯಲಿಂಗಿಯಂತೆ!
ಕಪ್ಪು ಹಣ ಬಿಳಿ ಮಾಡಲು ಟೈಮ್‌ ಸಿಗ್ಲಿಲ್ಲ ಅಂತ ನೋಟು ನಿಷೇಧಕ್ಕೆ ವಿರೋಧ
*ಒಟ್ನಲ್ಲಿ ಟೈಮು ಚೆನ್ನಾಗಿಲ್ಲ!
2 ತಿಂಗಳಲ್ಲಿ ಜಯಾ ಮೊದಲ ಮಾತು.
* ಸ್ಪೀಕರ್‌ ಬಳಸಿ ಮಾತಾಡಿದ ಸಿಎಂ. ವಿಧಾನಸಭೆ ಸ್ಪೀಕರ್‌ ಅಲ್ಲವಂತೆ!
ಹೆದ್ದಾರಿಗಳಲ್ಲಿ ಡಿ.2ರವರೆಗೆ ಟೋಲ್‌ ಇಲ್ಲ.
- ಟೋಲೇ ಇಲ್ಲಾ, ಹೆದ್ದಾರಿಯಲ್ಲಿ ಸಾಗುವಾಗ... ಎಂದು ಹಾಡುತ್ತಾ ಓಡಾಡಬಹುದು!
ಪ್ರತಿಪಕ್ಷ ಮುಖಂಡರ ಕೈ ಕುಲುಕಿ ಮಾತನಾಡಿಸಿದ ಮೋದಿ
- ಆಮೇಲೆ ಕೈ ತೊಳ್ಕಂಡ್ರಾ ಅಂತ ಚೆಕ್‌ ಮಾಡಿ!
ನೋಟು ನಿಷೇಧ ಸಂಘಟಿತ ಲೂಟಿ, ಕೊಳ್ಳೆ: ಡಾ|ಸಿಂಗ್‌
- ದುಡ್ಡು ಕೊಟ್ಟರೂ ಮಾತಾಡದೇ ಇದ್ದ ಮನಮೋಹನ್‌ ಸಿಂಗ್‌, ನೋಟು ರದ್ದಾದ ತಕ್ಷಣ ಮಾತಾಡಿದ್ರಲ್ಲ!
ಡಿಜಿಟಲ್‌ ವ್ಯವಹಾರಕ್ಕೆ ಪ್ರೇರಣೆ:¬ಬಡವರಿಗೆ ಉಚಿತ ಮೊಬೈಲ್‌ ನೀಡಲು ಆಂಧ್ರ ಚಿಂತನೆ
-ಬಡವರು ಹೊಟ್ಟೆ ತುಂಬಾ ಮಾತಾಡಬಹುದು!
ಏಷ್ಯಾ ಕಪ್‌ನಲ್ಲಿ ಭಾಗಿ, ಪಾಕ್‌ ವಿರುದ್ಧ ಆಡೋದು ಖಚಿತವಿಲ್ಲ: ಬಿಸಿಸಿಐ
- ಮದ್ವೆಗೆ ಬಂದು ಊಟ ಮಾಡೋದು ಗ್ಯಾರಂಟಿ ಇಲ್ಲಾಂದ್ರೆ ಹೆಂಗೆ?
ಜನ-ಧನ ಖಾತೆಗೆ ಹಳೇನೋಟು ಜಮೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.2
*ಜನಬಲವೇ ಧನಬಲ!
20 ದಿನದಲ್ಲಿ ಸ್ಥಿತಿ ಸರಳವಾಗಲಿದೆ,ಎಟಿಎಂ ಸರದಿ ಸಾಲು ಕುಗ್ಗುತ್ತಿದೆ: ಸರ್ಕಾರ
*ಸರದಿ ಸಾಲು ಕುಗ್ಗುವುದೇ ಅಭಿವೃದ್ಧಿಯ ಸೂಚ್ಯಂಕ!
ಟೋಲ್‌ಗ‌ಳಲ್ಲಿ ಪ್ರತ್ಯೇಕ ದಾರಿಗಾಗಿ ಶಾಸಕರ ಬೇಡಿಕೆ.
* ಊರಿಗೊಂದು ದಾರಿಯಾದರೆ, ಪೋರನಿಗೋ ಒಂದು ದಾರಿ!
ಮತ್ತೆ ಹದಗೆಟ್ಟ ಐಸಿಸಿ-ಬಿಸಿಸಿಐ ಸಂಬಂಧ
*ನಿಜಕ್ಕೂ ಹದಗೆಟ್ಟಿರುವುದು ಐಸಿಸಿ ಮುಖ್ಯಸ್ಥ ಶಶಾಂಕ್‌ ಮತ್ತು ಬಿಸಿಸಿಐ ಅಧ್ಯಕ್ಷ ಅನುರಾಗ್‌ ಸಂಬಂಧವಂತೆ!
ಶಬರಿಮಲೆ ಅಯ್ಯಪ್ಪ ದೇಗುಲ ಹೆಸರು ಬದಲು: ದೇವಸ್ವಂ ನಿರ್ಧಾರಕ್ಕೆ ಸರ್ಕಾರ ಆಕ್ಷೇಪ.
*ದೇವಸ್ವಂ ಕೊಟ್ಟರೂ ಸರ್ಕಾರ ಬಿಡ!
ಗಬ್ಬು ನಾರುವ ಶೌಚಾಲಯ: ಕೋಲ್ಕತಾ ನಂ.1, ದಿಲ್ಲಿ ನಂ.2
* ಅದಕ್ಕೇ ಬಯಲ ಶೌಚ ವಾಸಿ ಅನ್ನೋದು.
ಬ್ರಿಟನ್‌ ಪತ್ರಿಕೆಯಿಂದ ಕೊಹ್ಲಿ ವಿರುದ್ಧ ಚೆಂಡು ವಿರೂಪ ಆರೋಪ!
* ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲ ಕೆಡಿಸಿತು...!
ಮೋದಿ ಸಮಾರಂಭದಲ್ಲಿ ಮಾತಾಡ್ತಾರೆ,ಸಂಸತ್ತಲ್ಲಿ ಮಾತಾಡಲ್ಲ: ರಾಹುಲ್‌ ವ್ಯಂಗ್ಯ
* ರಾಹುಲ್‌ ಸಮಾರಂಭಕ್ಕೇ ಹೋಗಿ ಮಾತು ಕೇಳಬಹುದಲ್ಲ
ನಟಿ ಗುಲ್‌ ಪನಾಗ್‌ ಈಗ ಪೈಲಟ್‌.
*ಬೇರೆ ನಟಿಯರು ಹಂಗೇ ಹಾರಾಡ್ತಾರೆ.ಇವರು ಲೈಸನ್ಸ್‌ ತಗೊಂಡು ಹಾರಾಡ್ತಿದ್ದಾರೆ!
2000 ರೂ. ನೋಟು ಬಿಡುಗಡೆ ಅಸಿಂಧು: ಕಾಂಗ್ರೆಸ್‌ನಿಂದ ಆರೋಪ
* ಅಯ್ಯೋ ಪಾಪ, ಹಳೇ ಕುಳಗಳ ಕಳವಳ ಸಹಜ!
ಚೀನಾದಲ್ಲಿ ದಾಖಲಾಯ್ತು ಮಾನವನ ಮೇಲೆ ರೋಬೋಟ್‌ನ ಮೊದಲ ದಾಳಿ!
* ಚೀನಾದಲ್ಲಿ ಏನು ಬೇಕಾದರೂ ಆಗಬಹುದು!
ಬ್ಯಾಂಕ್‌ಗಳಿಗೆ 5.45 ಲಕ್ಷ ಕೋಟಿ ರೂ. ಮೌಲ್ಯದ ಹಳೆಯ ನೋಟು ಸಲ್ಲಿಕೆ.
* ನೋಟು ಹಳೆಯದಾದರೇನು ಓಟು ನವನವೀನ!
ಆಸೀಸ್‌ ಪತ್ರಕರ್ತ, ಕ್ರಿಕೆಟಿಗ ಪ್ಲೆಸಿಸ್‌ ಭದ್ರತಾ ಸಿಬ್ಬಂದಿ ನಡುವೆ ಜಟಾಪಟಿ
*ಸುದ್ದಿ ಮಾಡುವ ಪತ್ರಕರ್ತನೇ ಸುದ್ದಿಯಾದ

Pages

Back to Top