CONNECT WITH US  

ಪಂಚರ್

ನಿಗಮ, ಮಂಡಳಿ ಅಧ್ಯಕ್ಷರಿಗೆ ಕೆಂಪು ಗೂಟದ ಕಾರು ಇಲ್ಲ.
-ಅದೇ ಇಲ್ಲ ಅಂದ್ಮೇಲೆ ಆ ಹುದ್ದೆಯಾದ್ರೂ ಯಾಕೆ ಅಂದ್ರಂತೆ ಶಾಸಕರು!
ಶೀಘ್ರದಲ್ಲೇ ಜಯಲಲಿತಾ ಆಸ್ಪತ್ರೆಯಿಂದ ಬಿಡುಗಡೆ.
- ಕಾವೇರಿ ಹೋರಾಟಕ್ಕೆ ಮತ್ತೆ ಕನ್ನಡಿಗರು ರೆಡಿಯಾಗಿ!
ಬೇರೆಯವರ ಖಾತೆಗೆ ಹಣ ಹಾಕಿದರೆ 7 ವರ್ಷ ಜೈಲು.
- ಕೈಯೆತ್ತಿ ಕೊಡೋರಿಗೂ ಎಂತಾ ಕಾಲ ಬಂದೋಯ್ತು!
ನೋಟು ನಿಷೇಧದ ಎಫೆಕ್ಟ್ ಪರಿಶೀಲಿಸಲು ಕರ್ನಾಟಕಕ್ಕೆ ಶೀಘ್ರದಲ್ಲೇ ಕೇಂದ್ರ ತಂಡ.
- ಬರ, ನೆರೆ ಕಷ್ಟ ನೋಡಲು ಬನ್ನಿ ಅಂತ ಗೋಗರೆದರೂ ಬರೋದಿಲ್ಲ. ಈಗ ನೋಡಿ!
2ನೇ ಟೆಸ್ಟ್‌: ಭಾರತದ ವಿರುದ್ಧ ಅತಿ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದ ಇಂಗ್ಲೆಂಡ್‌ ಆರಂಭಕಾರರಾದ ಕುಕ್‌-ಹಮೀದ್‌
-ಜನರಿಗೆ ಧಾರಾವಾಹಿ ನೋಡಿದಂಗೆ ಆಯ್ತಂತೆ
ಬ್ಯಾಂಕ್‌ ಖಾತೆಗೆ ಭಾರಿ ಹಣಕಟ್ಟಿದವರಿಗೆ ತೆರಿಗೆ ನೋಟಿಸ್‌, ದಾಖಲೆ ಸಮೇತ ವಿಚಾರಣೆಗೆ ಬುಲಾವ್‌.
*ದುಡ್ಡು ಕೊಟ್ಟೋರನ್ನಷ್ಟೇ ಚೆನ್ನಾಗಿ ವಿಚಾರಿಸ್ಕೋತಾರಂತೆ!
ಈತ ಹಳೇ ನೋಟು ಬದಲಿಸಿಕೊಳ್ಳಲು ಬಂದಾಗ ಸಿಕ್ಕಿದ್ದು 15 ಕೇಜಿ ತೂಕದ 10 ರೂ. ನಾಣ್ಯ!
*ನಾಣ್ಯ ಯಾವತ್ತೂ ರದ್ದಾಗಲ್ಲ, ಬರೀ ಸದ್ದಾಗತ್ತೆ ಅಷ್ಟೇ!
ಗುಂಡುಪ್ರಿಯರಿಗೆ ನೋಟು ಪ್ರತಿಬಂಧದ ಪ್ರಹಾರ. ಒಡಿಶಾದಲ್ಲಿ ಮದ್ಯ ಮಾರಾಟ ಭಾರಿ ಇಳಿಕೆ
* ನೋ ಟು ಡ್ರಿಂಕ್ಸ್‌
ಬಿಲ್ಡರ್‌ಗಳ ಮೇಲೆ ದೇಶಾದ್ಯಂತ ಐಟಿ ಕಣ್ಣು.
*ದೇಶ ಕಟ್ರೋ ಅಂದ್ರೆ ಅಪಾರ್ಟುಮೆಂಟು ಕಟ್ತೀವಿ ಅನ್ನೋರಿಗೆ ಸರಿಯಾದ ಶಿಕ್ಷೆ!
3ನೇ ಏಕದಿನ: ಜಿಂಬಾಬ್ವೆ-ವಿಂಡೀಸ್‌ ಪಂದ್ಯ ರೋಚಕ ಟೈ
*ಮುಂದೆ ವಿಂಡೀಸ್‌ ತಂಡ ಹಾಲೆಂಡ್‌, ಆಫ್ಘಾನಿಸ್ತಾನ ವಿರುದ್ಧವೂ ಟೈ ಸಾಧಿಸಬಹುದು!
ಎಲ್ಲ ತೆರಿಗೆ ರದ್ದು.
*ನೋಟು ರದ್ದು ಮಾಡಿದ್ದರಿಂದ ಹೆರಿಗೇನೇ ರದ್ದಾಗಿದೆ!
ಬೇರೆಯವರ ಹಣ ಇಡಲು ನಿಮ್ಮ ಬ್ಯಾಂಕ್‌ ಖಾತೆ ನೀಡಬೇಡಿ.
* ಪರರ ಹಣ ಮತ್ತು ಹೆಣ ಎರಡರಿಂದಲೂ ಜೈಲು ಗ್ಯಾರಂಟಿ
ಬ್ಯಾಂಕ್‌ ಲಾಕರ್‌, ಆಭರಣ ಜಪ್ತಿ ಮಾಡಲ್ಲ: ಸರ್ಕಾರ
* ಕಿತ್ಕಳ್ಳಕ್ಕೆ ಅದೊಂದೇ ಉಳಿದಿರೋದು!
ಬ್ಯಾಂಕ್‌ಗಳ ಮುಂದೆ ಉದ್ದುದ್ದ ಸಾಲು ಗಂಭೀರ ವಿಷಯ: ಸುಪ್ರೀಂ ಕೋರ್ಟ್‌ ಕಳವಳ.
* ಬ್ಯಾಂಕುಗಳ ಮುಂದೆ ಸಾಲ ಇರುತ್ತಿತ್ತು. ಈಗ ಸಾಲು ಇದೆ!
ಕಡೆಗೂ ಪಾಕಿಸ್ತಾನದ ಕಳಂಕಿತ ಕ್ರಿಕೆಟಿಗ ಕನೇರಿಯಾಗೆ ಪಾಕ್‌ ಕ್ರಿಕೆಟ್‌ ಮಂಡಳಿಯಿಂದ ಉದ್ಯೋಗ?
*ಬಾಕಿ ಮೂವರು ಕಳಂಕಿತರು ಮತ್ತೆ ಕ್ರಿಕೆಟ್ಟಾಟವನ್ನೇ ಶುರು ಮಾಡಿದ್ದಾರೆ, ಅಂತಾದ್ರಲ್ಲಿ....
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2 ಕೋಟಿ ರೂ. ಬಿಡುಗಡೆ.
* ನೋಟು ರದ್ದಾದರೂ ಸಾಹಿತ್ಯದ ನೋಟ ಭದ್ರ!
ಚಿಲ್ಲರೆ ಸಮಸ್ಯೆ: ಪಡಿತರ ಧಾನ್ಯ "ಸಾಲ'ನೀಡಲು ಸರ್ಕಾರ ನಿರ್ಧಾರ.
*ಸಾಲ ಭಾಗ್ಯದಿಂದ ತಂದ ಅಕ್ಕಿಯಿಂದ ಅನ್ನ ಭಾಗ್ಯ!
ಚಿಲ್ಲರೆ ಕದ್ದು ನೋಟು ಬಿಟ್ಟು ಹೋದ ಕಳ್ಳರು.
* ಕಳ್ಳರ ನೋಟು ಕಳ್ಳರಿಗೂ ಬೇಡವಂತೆ!
9ನೇ ದಿನವೂ ಹಣಕ್ಕಾಗಿ ಹಾಹಾಕಾರ.
*ಕಾಸಿದ್ರೆ ಕೈಲಾಸ, ಇಲ್ದಿದ್ರೆ ಕೈ ಸಾಲ!
ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌ ವೇಳೆ ಪಿಚ್‌ ಪ್ರವೇಶಿಸಿದ ನಾಯಿ.
* ಕೊಹ್ಲಿ ಬ್ಯಾಟಿಂಗ್‌ಗೆ ಮನಸೋತ ಶ್ವಾನ!?
ನೋಟು ನಿಷೇಧಿಸಿದ ಸರ್ಕಾರಕ್ಕೆ ಪ್ರತಿಪಕ್ಷಗಳ ತೀವ್ರ ತರಾಟೆ.
*ನೋಟಿಗೂ ಓಟಿಗೂ ಇರೋ ಸಂಬಂಧ ಗೊತ್ತಿದ್ದವರ ತಕರಾರು!
ಮುಂಬೈ ಬಳಿಯ ಎಟಿಎಂ ಮುಂದೆ ರಾಹುಲ್‌ ಪ್ರತ್ಯಕ್ಷ- ಕ್ಯೂ ನಿಂತಿದ್ದ ಜನರ ಜತೆ ಮಾತುಕತೆ.
*ರಾಹುಲ್‌ ಹೀಗೆ ಅನುಮಾನಾಸ್ಪದವಾಗಿ ಸುತ್ತಾಡೋದು ಸರಿಯಲ್ಲ ಮಾರಾಯ್ರೆ!
ಶೂಟಿಂಗ್‌ ದುರಂತಗಳಿಗೆ ನಿರ್ದೇಶಕರೇ ಹೊಣೆ.
*ಇತ್ತೀಚಿನ ಕನ್ನಡ ಸಿನಿಮಾಗಳೆಲ್ಲ ಶೂಟಿಂಗ್‌ ದುರಂತಗಳೇ!
ನೋಟು ನಿಷೇಧ ಹಿನ್ನೆಲೆ: ಪುಣೆ ಮ್ಯಾರಥಾನ್‌ ಮುಂದೂಡಿಕೆ!
* ಹಳೆ ನೋಟು ಬದಲಾಯಿಸಲು ಓಡುತ್ತಿದ್ದವರದ್ದೇ ಮ್ಯಾರಥಾನ್‌ ಮಾಡಿದ್ದರೆ ಆಗಿತ್ತು!

Pages

Back to Top