CONNECT WITH US  

ಪಂಚರ್

ಪ್ರಜ್ವಲ್‌ ರೇವಣ್ಣಗೆ ಜೆಡಿಎಸ್‌ ಸದಸ್ಯತ್ವ. ಭವಿಷ್ಯದಲ್ಲಿ ಹಾಸನ ರಾಜಕೀಯ ಹೊಣೆಗಾರಿಕೆ ಸಂಭವ.
-ಒಂದು ಕಡೆ ಅಕ್ಷರಾಭಿಷೇಕ, ಮತ್ತೂಂದು ಕಡೆ ಪಟ್ಟಾಭಿಷೇಕ!
ಮೋದಿ ಗೋಸುಂಬೆ ಸಹ ನಾಚಿಕೊಳ್ಳುವಷ್ಟು ಬಣ್ಣ ಬದಲಾಯಿಸುವ ವ್ಯಕ್ತಿ: ಬಿ.ಕೆ. ಹರಿಪ್ರಸಾದ್‌.
- ಪ್ರತಿ ದಿನ ಮೋದಿಯ ಬಣ್ಣ ಬಣ್ಣದ ವಸ್ತ್ರಗಳನ್ನು ನೋಡಿ ಹೇಳಿದ್ದಾ?
ಸಾಹಿತ್ಯ ಸಮ್ಮೇಳನಗಳ ವೈಫ‌ಲ್ಯಗಳನ್ನು ವಿರೋಧಿಸಿ ಎಮ್ಮೆ ಮೇಲೆ ನೀರು ಸುರಿದು ವಾಟಾಳ್‌ ಪ್ರತಿಭಟನೆ.
-ಎಮ್ಮೆಗೆ ಸ್ನಾನ ಮಾಡಿಸಿಕೊಂಡ ಖುಷಿ!
ತಿರುಪತಿ, ಕಾಳಹಸ್ತಿಗೆ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸಮೇತ ಭೇಟಿ.
-ಜೈಲಿಂದ ಬಂದ ಮೇಲೂ ವೆಂಕಟರಮಣ: ಹೊಸ ಗಾದೆ!
ಹೆಂಡತಿ ಜೊತೆಯಿಲ್ಲದ ಪರಿಣಾಮ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟಿಗರ ಪ್ರದರ್ಶನ ಕುಸಿತ?
-ಟೆಸ್ಟ್‌ ಸರಣಿ ವೇಳೆ ಜೊತೆಗಿದ್ದೂ ಏನಾಯ್ತು?
ಈ ಸೆಪ್ಟೆಂಬರ್‌ನಲ್ಲಿ ಸಲ್ಮಾನ್‌ ರಷ್ದಿ ಹೊಸ ಕಾದಂಬರಿ
-ಅಂತೂ ಬ್ಯಾನ್‌ ಮಾಡೋದಕ್ಕೆ ಮತ್ತೂಂದು ಕಾದಂಬರಿ ಸಿಕ್ತು!
ಕೇಜ್ರಿವಾಲ್‌ರಿಂದ ಚುನಾವಣೆ ಪ್ರಣಾಳಿಕೆ ಬಿಡುಗಡೆ. ಈ ಸಲವೂ ಹಳೇ ಭರವಸೆ ನೀಡಿಕೆ.
-ರಾಜೀನಾಮೆನೂ ನೀಡ್ತೀನಿ ಅಂತ ಹೇಳಿದ್ದಾರಾ?
ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಚಾಯ್‌ಪೇ ಚರ್ಚಾ
-ಎಲ್ಲಾ ರೈಲ್ಲಲ್ಲೂ ಮಾಡಿ ಸ್ವಾಮಿ. ನಮ್ಗೆ ಒಳ್ಳೇ ವ್ಯಾಪಾರ ಆಗುತ್ತೆ ಅಂದ್ರಂತೆ ಚಾಯ್‌ವಾಲಾಗಳು.
ಮೋದಿ ಪತ್ನಿ ಸುದ್ದಿ ಪ್ರಸಾರ ಮಾಡಿದ ಅಧಿಕಾರಿ ಅಂಡಮಾನ್‌ಗೆ ಎತ್ತಂಗಡಿ.
-ಒಳ್ಳೇದಾಯ್ತು ಬಿಡಿ. ಅಂಡಮಾನ್‌ನಲ್ಲಿ ಟೂರ್‌ ಮಾಡ್ಕೊಂಡು ಹಾಯಾಗಿರ್ತೀನಿ ಅಂತ ಆ ಅಧಿಕಾರಿ ಹೇಳಬಹುದು.
ಗಣರಾಜ್ಯೋತ್ಸವ ಕಾರ್ಯಕ್ರಮದುದ್ದಕ್ಕೂ ಚೂಯಿಂಗ್‌ ಗಮ್‌ ಜಗಿಯುತ್ತಿದ್ದ ಒಬಾಮಾ.
-ಕಾರ್ಯಕ್ರಮದ ವಿಮರ್ಶೆಯಿರಬಹುದೇ ಅದು!
ಕೇಜ್ರಿವಾಲ್‌ರನ್ನು ಆಹ್ವಾನಿಸದೇ ಇದ್ದಿದ್ದಕ್ಕೆ ಎಎಪಿ ಗರಂ
-ಸಿಟ್‌ ಮಾಡ್ಕೊಬ್ಯಾಡ್ರಪ್ಪ. ಸಾಹೇಬ್ರು ಅರ್ಧಕ್ಕೇ ಎದ್‌ ಬಂದ್‌ಬುಟ್ಟಾರು ಅಂತ ಕರೀಲಿಲ್ಲ!
ಬುಲೆಟ್‌ನಿಂದ ರಕ್ಷಣೆ ಸಿಕ್ಕರೂ ಒಬಾಮಾಗೆ ಮಳೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
- ಕನ್ನಡಿಗರಿಗೆ 'ಮುಂಗಾರು ಮಳೆ'ಯಿಂದ ತಪ್ಪಿಸಿಕೊಳ್ಳಲಾಗಲಿಲ್ಲವಲ್ಲ! ಹಂಗೆ!
ಪರ್ಥ್ ಪಂದ್ಯದಲ್ಲಿ ಇಂಗ್ಲೆಂಡ್‌ ಮಣಿಸಿದರೆ ಭಾರತ ಫೈನಲ್‌ಗೆ
-ಅಪ್ಪಿತಪ್ಪಿ ಇಂಗ್ಲೆಂಡೇ ಮಣಿಸಿದರೆ ಭಾರತಕ್ಕೆ ಅದೇ "ಫೈನಲ್‌'
ರಾಜ್ಯಾದ್ಯಂತ ಸಿಪಿಂ ನಿಂದ "ಬರಾಕ್‌ ಒಬಾಮಾ ಗೋ-ಬ್ಯಾಕ್‌' ಪ್ರತಿಭಟನೆ.
- ಬರಾಕ್‌ ಪುರುಸೊತ್ತಿಲ್ಲ, ಹೋಗಕ್‌ ಒತ್ತಾಯ ಶುರುವಾಯ್ತಲ್ಲ!
ನಿಂತು "ಸೂಸು' ಮಾಡಲು ಜರ್ಮನ್‌ ಕೋರ್ಟ್‌ ಅಸ್ತು!
- ನಿಂತೇ ಮಾಡಬೇಕು ಅಂತ ಆರ್ಡರ್‌ ಮಾಡದಿದ್ದರೆ ಸಾಕು.
ಇಡೀ ಬೆಂಗಳೂರು ದೇವೇಗೌಡರಿಗೆ ಸೇರಿದ್ದು. ಎಲ್ಲಿ ಬೇಕಾದರೂ ಶೆಡ್‌ ಹಾಕಿಕೊಳ್ಳಲಿ: ಡಿಕೆಶಿ
- ಹಿರಿಯ ರಾಜಕಾರಣಿಗಳು ಶೆಡ್‌ ಹಾಕಿಕೊಳ್ಳೋದೇ ಬಿಡಿ!
ಸತತ ಮೂರು ಗೆಲುವು, ಒಂದು ಡ್ರಾ ಸಾಧಿಸಿದ್ದ ಕರ್ನಾಟಕಕ್ಕೆ ಈ ರಣಜಿಯಲ್ಲಿ ಮೊದಲ ಬಾರಿಗೆ ಇನಿಂಗ್ಸ್‌ ಹಿನ್ನಡೆ.
- ಬರಬರುತ್ತಾ ರಾಯರ ಕುದುರೆ...?
ಮೋದಿ "ಮನ್‌ ಕಿ ಬಾತ್‌' ರೀತಿಯಲ್ಲಿ ಕಿರಣ್‌ ಬೇಡಿ ಅವರಿಂದ "ದಿಲ್‌ ಕಿ ಬಾತ್‌' ರೇಡಿಯೋ ಕಾರ್ಯಕ್ರಮ.
-ಮನಸ್ಸಿನ ಮಾತಿಗೂ, ಹೃದಯದ ಮಾತಿಗೂ ವ್ಯತ್ಯಾಸ ಇರುತ್ತೆ ಅಂತ ಬಲ್ಲವರು ಹೇಳ್ತಾರಲ್ಲ!
ಪ್ರಧಾನಿಯನ್ನು ಮತ್ತೆ ಹೊಗಳಿದ ಶಶಿ ತರೂರ್‌.
- ಬೋಲೋ ತಾರಾರಾರ...
ಒಬಾಮಾ ಭೇಟಿ ನಿಮಿತ್ತ ರಸ್ತೆ ತೊಳೆಯಲು 600 ಕಾರ್ಮಿಕರು.
- ಅಮೆರಿಕ ಅಧ್ಯಕ್ಷರು ನಮ್ಮ ಬೊಕ್ಕಸವನ್ನೂ ತೊಳೀತಿದಾರೆ ಅಂತಾಯ್ತು!
ದೇವೇಗೌಡ, ಕುಮಾರಸ್ವಾಮಿ ಬಿಪಿಎಲ್‌ ವರ್ಗಕ್ಕೆ ಸೇರಿಲ್ಲ: ಶ್ರೀನಿವಾಸ್‌ ಪ್ರಸಾದ್‌.
ಜೆಡಿಎಸ್‌?

Pages

Back to Top