CONNECT WITH US  

ಪಂಚರ್

ಕಿರಣ್‌ ಬೇಡಿ ಹೊಗಳಿ, ಆಪ್‌ ತೆಗಳಿದ ಶಾಂತಿ ಭೂಷಣ್‌.
ಹಮ್‌ ಆಪ್‌ ಹೇ ಕೈ ಕೌನ್‌!
ಒಬಾಮಾ ಜತೆ ಪತ್ನಿ ಬರ್ತಾರೆ, ಮಕ್ಕಳು ಬರಲ್ಲ.
- ಅಮೆರಿಕಾದಲ್ಲೂ ಮಕ್ಕಳಿಸ್ಕೂಲು ಮನೇಲಲ
ದೇವರ ತಪ್ಪಿನಿಂದ ಅಂಗವಿಕಲ ಮಕ್ಕಳ ಜನನ!: ಗೋವಾ ಸಿಎಂ
- ದೇವರೇ!
ಮೋದಿ ಬಂದ ನಂತರ ಭ್ರಷ್ಟಾಚಾರದ ಗುಸುಗುಸು ಕೂಡ ಇಲ್ಲ: ಜೇಟ್ಲಿ
ಇದೆ, ಮಾತಾಡ್ತಿಲ್ಲ ಅಂದ್ಕೊಬಹುದು
ನಾನು ಬಿಜೆಪಿ ಸೇರಲ್ಲ, ಚುನಾವಣೆಗೂ ಸ್ಪರ್ಧಿಸಲ್ಲ: ಸೌರವ್‌ ಗಂಗೂಲಿ
- ವನ್‌ಡೇನೂ ಇಲ್ಲ, ಟೆಸ್ಟೂ ಒಲ್ಲ!
ಮಿಶೆಲ್‌ ಒಬಾಮಾಗೆ 100 ಬನಾರಸ್‌ ಸೀರೆ ಉಡುಗೊರೆ.
- ಉಡದವರಿಗೇ ಉಡುಗೊರೆ!
ರೇಡಿಯೋದಲ್ಲಿ ಒಬಾಮಾ-ಮೋದಿ ಜಂಟಿ ಭಾಷಣ
- ಒಂಟಿದನಿಯಿದ್ದದ್ದು ಜಂಟಿ ದನಿ ಆಗಿದೆ. ಪಡ್ಕಳಿ! ತಡ್ಕಳಿ!
ಕೇಜ್ರಿ ವರ್ತನೆ ನೋಡಿ ಬೇಸತ್ತು ರಾಜಕೀಯ ಸೇರಿದೆ: ಬೇಡಿ.
- ಜನ ಬೇಡಿ ಬೇಡಿ ಬೇಡಿ ಅಂತ ಬೇಡಿಕೊಂಡಿರಬಹುದೇ!
ಅನುಷ್ಕಾ ಇಲ್ಲದೆ ಕೊಹ್ಲಿಗೆ ವಿರಹ ವೇದನೆ?
- ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ನಲ್ಲಿ ಧೋನಿ ಪಡೆಗೆ ಹೆರಿಗೆ ವೇದನೆ!
ಹುಲಿ ಸಂಖ್ಯೆ: ವಿಶ್ವಕ್ಕೆ ಭಾರತ, ದೇಶಕ್ಕೆ ಕರ್ನಾಟಕ ನಂ.1
ಹುಲಿಯೂರು ಕಣ್ರೀ ನಮ್ಮದು!
ಮಿಶೆಲ್‌ ಒಬಾಮಾಗೆ ಬೆಂಕಿಪೊಟ್ಟಣದಲ್ಲಿ ಹಿಡಿಸುವಂಥ ಸೀರೆ.
-ಮ್ಯಾಚ್‌ಲೆಸ್‌ ಗಿಫ್ಟ್
ಸೆನ್ಸಾರ್‌ ಮಂಡಳಿ ಈಗ ಬಿಜೆಪಿಮಯ.
-ಸಂಸಾರಕ್ಕೂ ಸೆನ್ಸಾರುಬರಬಹುದು!
ಅನುಷ್ಕಾ ಇಲ್ಲದೆ ಕೊಹ್ಲಿಗೆ ವಿರಹ ವೇದನೆ?
ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ನಲ್ಲಿ ಧೋನಿ ಪಡೆಗೆ ಹೆರಿಗೆ ವೇದನೆ
ಬೀದಿಯಲ್ಲಿ ದಮ್ಮು ಹೊಡೆಯೋದು ನಿಷೇಧ. ಗದಗ ದೇಶಕ್ಕೇ ನಂಬರ್‌ ವನ್‌.
- ಗದಗ ಧಗಧಗ ಅನ್ನೋದೆಲ್ಲ ಸುಳ್ಳಾಯಿತಾ!
ಬೆಂಗಳೂರಿನ ಫ‌ಲಪುಷ್ಪ ಪ್ರದರ್ಶನಕ್ಕೆ ಆನ್‌ಲೈನ್‌ ಬುಕಿಂಗು.
- ಆನ್‌ಲೈನಲ್ಲೇ ತೋರಿಸಿದ್ರೂ ಆಶ್ಚರ್ಯವಿಲ್ಲ!
ಹಿಂದುಗಳು ಹತ್ತು ಮಕ್ಕಳನ್ನು ಹೆರಲಿ: ಬದರಿ ಶ್ರೀಗಳು.
- ಶ್ರೀಗಳಿಗೂ ಪುತ್ರೋತ್ಸವದ ಚಿಂತೆಯೇ!?
ಜ.21ರಿಂದ ಆರಂಭವಾಗುವ ಮೈಸೂರು ರಣಜಿ ಪಂದ್ಯಕ್ಕೆ ಉಚಿತ ಪ್ರವೇಶ.
-ದುಡ್ಡು ಕೊಟ್ಟು ಪ್ರೇಕ್ಷಕರು ಬರುವ ನಿರೀಕ್ಷೆ ಇತ್ತಾ?
ಒಬಾಮಾ ಭದ್ರತೆಗೆ ಒಂದು ಲಕ್ಷ ಪೋಲೀಸರು.
- ಜನರಿಗೆ ಅಧ್ಯಕ್ಷ ರಕ್ಷಣೆ ಕೊಡಬೇಕಾ, ಅಧ್ಯಕ್ಷರಿಗೆ ಜನ ರಕ್ಷಣೆ ಕೊಡಬೇಕಾ ಅಂತ ದೇವರಿಗೂ ತಿಳಿಯಾಕಿಲ್ಲ
ಒಬಾಮಾಗೆ ದೆಹಲಿಯಲ್ಲಿ ಏಳು ಸುತ್ತಿನ ಭದ್ರಕೋಟೆ.
ಗಣರಾಜ್ಯೋತ್ಸವ ಪರೇಡ್‌ ನೋಡಲು ರಾಜಪಥಕ್ಕೆ ಬರೋದಕ್ಕಾದ್ರೂ ಪೊಲೀಸರು ಬಿಟ್ಟರೆ ಸಾಕಿತ್ತು!
ಆಮ್‌ ಆದ್ಮಿ ಪಕ್ಷದಿಂದ ಬಿಜೆಪಿಗೆ ನಾಯಕರ ಗುಳೆ.
- ಪಕ್ಷದ ಸಭೆಯಲ್ಲಿ ಪ್ರತಿಯೊಬ್ಬರ ಬಳಿ ಕೇಜ್ರಿವಾಲ್‌ ಪ್ರಶ್ನೆ: ಆಪ್‌ ಹಮಾರೆ ಸಾಥ್‌ ಹೈ?
ಮೋದಿ ಪ್ರಧಾನಿಯಾಗುಳಿಯಲು ಹಿಂದುಗಳು 10 ಮಕ್ಕಳ ಹೆರಬೇಕಂತೆ.
- ಯಾರದೋ ಮಕ್ಕಳು, ಇನ್ಯಾರದೋ ದರ್ಬಾರು!
ವಿಶ್ವಕಪ್‌ ಕ್ರಿಕೆಟ್‌ಗೆ ಪತ್ನಿಯರನ್ನು ಕರೆದೊಯ್ಯಲು ಬಿಸಿಸಿಐ ಅವಕಾಶ ನಿರಾಕರಣೆ.
ನೀ ಹಿಂಗ ನೋಡಬೇಡ ನನ್ನ.... ಆಟಗಾರರಿಂದ ಪತ್ನಿಯರಿಗೆ ಎಸ್‌ಎಂಎಸ್‌

Pages

Back to Top