CONNECT WITH US  

ಪಂಚರ್

ರಾಜ್ಯದ 100 ಕಾಲೇಜುಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ಆರಂಭಿಸಲು ಚಿಂತನೆ.
- ಕಾಲೇಜು ಹುಡುಗರೆಲ್ಲ ಕೈಲಿ ಸ್ಮಾರ್ಟ್‌ಫೋನ್‌ ಹಿಡ್ಕೊಂಡು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ ನಡೆಸ್ತಿದ್ದಾರಲ್ಲ?
24ರ ಹುಡುಗಿ ಮದುವೆಯಾದ ಮಣಿಪುರದ 77 ವರ್ಷದ ಕುಟುಂಬ ಕಲ್ಯಾಣ ಮಂತ್ರಿ.
- ಆ ಖಾತೆ ಕೊಟ್ಟಿದ್ದಕ್ಕೂ ಸಾರ್ಥಕವಾಯ್ತು!
ಕಿರಣ್‌ ಬೇಡಿ ಸೇರ್ಪಡೆಗೆ ಬಿಜೆಪಿಯಲ್ಲಿ ಅಸಮಾಧಾನ.
ಪರ ಇರುವವರೂ, ವಿರುದ್ಧ ಇರುವವರೂ ಬಳಸಬೇಕಾದ ಸ್ಲೋಗನ್‌ ಒಂದೇ: ಬೇಡಿ ಬೇಡಿ ಬೇಡಿ!
ನೀವು ಪ್ರಶ್ನೆ ಕೇಳಿ, ನಾನು ಉತ್ತರಿಸಲ್ಲ: ನಿವೃತ್ತಿ ಪ್ರಶ್ನೆಗೆ ಪತ್ರಕರ್ತರಿಗೆ ಧೋನಿ ಉತ್ತರ
‌ -ಶಾಲಾ ದಿನಗಳಲ್ಲೂ ಧೋನಿ ಅಧ್ಯಾಪಕರಿಗೆ "ಇದೇ ನನ್ನ ಉತ್ತರ ಎಂದಿದ್ದರಂತೆ'!
ಅಣ್ಣಾ ಹಜಾರೆ ಪಾಳಯ ಬಿಟ್ಟು ಬಿಜೆಪಿಗೆ ಕಿರಣ್‌ ಬೇಡಿ..
ಬೇಡಿ.. ಹೋಗಬೇಡಿ ಎಂದು ಯಾರೂ ಹೇಳಿಲ್ವಂತೆ!
5 ವರ್ಷ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ
ಯಾರ್ರೀ ಅದು ಡಿಸ್ಟರ್ಬ್ ಮಾಡೋದು ಅಂತಾ ಹೇಳಿ ಮಗ್ಗುಲು ಬದಲಿಸ್ಕೊಂಡ್ರಂತೆ ಆಕಾಂಕ್ಷಿಗಳು!
ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಕಾಗೋಡು ಸಾಕು: ಜೋಶಿ -ಅವರನ್ನ ನಿಮ್‌ ಪಕ್ಷಕ್ಕೆ ಸೇರಿಸ್ತೀವಿ
ಹುಷಾರ್‌ ಅಂತ ಕಾಂಗ್ರೆಸಿಗರು ಎಚ್ಚರಿಸಿದ್ದು ಜೋಶಿಯವರಿಗೆ ಕೇಳಿಲ್ಲವಂತೆ.
536 ಕೋಟಿ ರೂ. ಸೇವಾತೆರಿಗೆ ಬಾಕಿಯುಳಿಸಿಕೊಂಡಿರುವ ಬಿಸಿಸಿಐ.
-ತಾನು ಯಾವುದೇ ಸೇವೆ ನಡೆಸುತ್ತಿಲ್ಲವಾದ್ದರಿಂದ ತೆರಿಗೆ ಪಾವತಿ ಮಾಡಲ್ಲ: ಬಿಸಿಸಿಐ
ಇನ್ನರೆಡು ತಿಂಗಳಲ್ಲಿ ರಾಹುಲ್‌ಗೆ ಪಟ್ಟಾಭಿಷೇಕ?
ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಖರೀದಿ!
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆ ಹೊರಲು ಸಿದ್ಧ: ಹುಕ್ಕೇರಿ
ಹುದ್ದೆಯಿಂದ ಇಳಿಸಲು ನಾವು ಸಿದ್ಧ: ಭಿನ್ನರು!
ಬಿಜೆಪಿಗೆ ಕಿರಣ್‌ ಬೇಡಿ
ಹೋಗ್ಲಿಬಿಡಿ. ಏನ್ಮಾಡ್ತಾರೋ ನೋಡ್‌ಬಿಡಿ
ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಜೆರ್ಸಿ, ಸರಾಸರಿ 33 ಪ್ಲಾಸ್ಟಿಕ್‌ ಬಾಟಲಿ ಪುನರ್‌ ಸಂಸ್ಕರಿಸಿ ಪ್ರತಿ ಜೆರ್ಸಿ ಕಿಟ್‌ತಯಾರಿ.
-ಶಕ್ತಿ ಅಧಿಕಗೊಳ್ಳಲು ಧೋನಿ ಪಡೆಗೆ ಬಾಟಲಿ ಪವರ್‌
ತಾಜ್‌ಮಹಲ್‌ ಬಳಿ ಬೆರಣಿ ಸುಟ್ಟರೆ ದಂಡ
-ಮಮತಾಜಳನ್ನು ಹೂತ ಜಾಗದಲ್ಲಿ ಬೆರಣಿ ಸುಡಬಾರದಲ್ವಾ
ನಡುದಾರಿಯಲ್ಲೇ ನಿಂತ ಮೆಟ್ರೋ.
-ಮೆಟ್ರೋ ಕಾಮಗಾರಿ ಅರ್ಧಕ್ಕೇ ನಿಲ್ಲುತ್ತಿತ್ತು. ಈಗ ಮೆಟ್ರೋ ಕೂಡ!
ಗುಂಡು ಪ್ಲಸ್‌ ರಾವ್‌ ಅಂತ ಸಿನಿಮಾ ಮಾಡ್ತಿದ್ದಾರಂತೆ!
-ಇಷ್ಟ ಪಡದೇ ಇಧ್ದೋರು ಸಮುದ್ರಕ್ಕೆ ಬೀಳಲಿ ಅಂತ ಟ್ಯಾಗ್‌ ಲೈನ್‌ ಇರಬಹುದಾ
ಬೆಳಗಾವಿಯಲ್ಲಿ ವೈನ್‌ ಮೇಳ ಮದ್ಯ ಮೇಳ ಮಾಡಿದ್ದರೆ,
ಎಂಇಎಸ್‌ಗೆ ಪುಗಸಟ್ಟೆ ಬೈಗುಳ ಭಾಗ್ಯ
ಆಸೀಸ್‌ ಕ್ರಿಕೆಟ್‌ ತಂಡ ಪ್ರತಿನಿಧಿಸಲಿರುವ ಮೊದಲ ಭಾರತೀಯ ಗುರಿಂದರ್‌ ಸಂಧು.
-ಪ್ರತಿನಿಧಿಸಿ, ಆದರೆ ತುಂಬಾ ವೇಗವಾಗಿ ಬೌಲಿಂಗ್‌ ಮಾಡಬೇಡಿ: ಬ್ಯಾಟ್ಸ್‌ಮನ್‌ಗಳ ಮನವಿ
ಜನಾರ್ದನ ಪೂಜಾರಿ ಅರೆ ಹುಚ್ಚ: ಎಂ.ಪಿ. ರೇಣುಕಾಚಾರ್ಯ.
ತನ್ನ ತಾನು ಅರಿವುದು ಅಂದ್ರೆ ಇದೇ ಅಲ್ವಾ!
ನಿತ್ಯಾನಂದ ಆಶ್ರಮದೊಳಗೆ ಪ್ರವೇಶಿಸಲು ನಾಗಾ ಸಾಧುಗಳಿಗೆ ಅವಕಾಶ ನಿರಾಕರಣೆ.
-ನಾಗಾಗಳಿಗೇ ಸರ್ಪಗಾವಲು!
ಹಿಂದುಗಳು 5 ಮಕ್ಕಳನ್ನು ಹೆರಬೇಕು: ಬಂಗಾಳ ಬಿಜೆಪಿ ನಾಯಕ ಶಾಮಲಾಲ್‌.
-ಡೆಲಿವರಿ ಆರ್ಡರ್‌!
ಪ್ರಧಾನಿಗೆ ವಾರಾಣಸಿ ವಿದ್ಯಾರ್ಥಿಗಳಿಂದ 1 ಮೈಲಿ ಉದ್ದದ ದೂರು ಪಟ್ಟಿ.
ಮೈಲ್‌ ಹಾಕೋದು ಅಂದ್ರೆ ಇದೇ ಇರಬೇಕು!
ನಿಗೂಢವಾಗಿ ನಾಪತ್ತೆಯಾಗಿದ್ದ ಉತ್ತರಪ್ರದೇಶ ರಾಜ್ಯ ಹಾಕಿ ಆಟಗಾರ್ತಿ ಪ್ರಿಯತಮನೊಂದಿಗೆ ಪತ್ತೆ.
-ಆದರೆ 16ರ ಹುಡುಗಿ ತಾನು ಪ್ರೌಢೆ, ಓಡಿಹೋಗಲು ಅಧಿಕಾರವಿದೆ ಎನ್ನುತ್ತಿದ್ದಾಳಲ್ಲ?!

Pages

Back to Top