CONNECT WITH US  

ಪಂಚರ್

ಅಣ್ಣಾ ಕ್ಯಾಂಟೀನಲ್ಲಿ ಐದೇ ರುಪಾಯಿಗೆ ಅನ್ನ, ಚಿತ್ರಾನ್ನ.
-ಇನ್ಮೇಲೆ "ಹೊಟ್ಟೆಗೇನ್‌ ಅಣ್ಣಾ ತಿಂತೀರೋ ಅಥ್ವಾ...' ಅಂತಲೂ ತರಾಟೆಗೆ ತಗೋಬಹುದು!
ಯುವಕರನ್ನು ಸೆಳೆಯಲು ಕೈ ತಂತ್ರ.
-ಹಸ್ತ ಸಾಮುದ್ರಿಕೆ ತಂತ್ರ ಅಂತ ಕರೀಬಹುದಾ!
ದಿಲ್ಲಿ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿಯಿಂದ ನಿಧಿ ಸಂಗ್ರಹ.
-ವೋಟು ಹಾಕಿ ಅಂತ ಬೇಡ್ತಿದ್ರು. ಈಗ ಚುನಾವಣಾ ವೆಚ್ಚವನ್ನೂ ಭಿಕ್ಷೆ ಎತ್ತೋಕೆ ಶುರುಮಾಡಿದ್ದಾರೆ!
ವಿಶ್ವಸಾಹಿತ್ಯ ಅರ್ಥಮಾಡಿಕೊಳ್ಳಲು ಅನುವಾದ ಬೇಕು- ಲಕ್ಷ್ಮೀನಾರಾಯಣ ಭಟ್ಟ
-ಸಾಹಿತ್ಯ ಅಂದ ಮೇಲೆ ಅರ್ಧ ವಾದ, ಇನ್ನರ್ಧ ಅನುವಾದ!
ವಿಂಡೀಸ್‌ ವಿಶ್ವಕಪ್‌ ಕ್ರಿಕೆಟ್‌ ತಂಡದಿಂದ ಬ್ರಾವೋ, ಪೊಲಾರ್ಡ್‌ ಬಿಟ್ಟಿದ್ದಕ್ಕೆ ಕ್ರಿಸ್‌ಗೇಲ್‌ ಆಕ್ರೋಶ.
-ಅಪಘಾತವಾದ ಮೇಲೆ ಡ್ರೈವರ್‌ಗೆ ಬೈದಂಗಾಯ್ತು.
ಸ್ವತ್ಛ ಭಾರತ ಅಭಿಯಾನಕ್ಕಾಗಿ ಕಸ ಗುಡಿಸಿದ ಕಾಂಗ್ರೆಸ್‌ನ ಮಾಜಿ ಸಚಿವ ರಾಮಲಾಲ್‌ ಉಚ್ಚಾಟನೆ.
-ದೇಶದ ಜೊತೆ ಕಾಂಗ್ರೆಸ್‌ ಕೂಡ ಸ್ವತ್ಛವಾಗ್ತಿದೆ ಅಂತಾಯ್ತು !
24 ವರ್ಷದಿಂದ ಗೈರಾಗಿದ್ದ ಸರ್ಕಾರಿ ಅಧಿಕಾರಿ ಈಗ ವಜಾ.
- ಅವನನ್ನು ವಜಾಗೊಳಿಸಲು ಮೇಲಧಿಕಾರಿಗೆ ಯಾರೂ ಲಂಚ ಕೊಟ್ಟಿರಲಿಲ್ವಲ್ಲ, ಅದ್ಕೆ ತಡವಾಯ್ತು!
ಗುಜರಾತ್‌ಗೆ ಬಂದಿದ್ದಾರೆ ಬಾನ್‌ ಕಿ ಮೂನ್‌.
- ಕೃಷ್ಣ ಪಕ್ಷದಲ್ಲಿ ಚಂದ್ರ ಬಂದಿದ್ದಾನೆ. ಟೀವಿ ಜ್ಯೋತಿಷಿಗಳ ಪ್ರಕಾರ ದೇಶಕ್ಕೆ ಏನ್‌ ಗಂಡಾಂತರ ಕಾದಿದೆಯೋ!
ಹನಿ ನೀರಾವರಿ ಅಳವಡಿಸಿದ್ರೆ ಸರ್ಕಾರ ಹಣ ಕೊಡುತ್ತೆ: ಶಾಮನೂರು.
ನೀರು ಯಾರು ಕೊಡ್ತಾರೆ?
ಬಿಸಿಸಿಐ ವಿರುದ್ಧ ರಾಷ್ಟ್ರಪತಿಗೆ ದೂರು
- ಸದಾ ದೂರಿನ ಪ್ರಚಾರದಲ್ಲೇ ಬಿಸಿಸಿಐ!
ಲಿಂಗ' ಚಿತ್ರದ ನಷ್ಟ ಭರಿಸುವಂತೆ ರಜನೀಕಾಂತ್‌ಗೆ ವಿತರಕರ ದುಂಬಾಲು
-ಇದು ಲಿಂಗಾಧಾರಿತ ಬೇಡಿಕೆ!
ಲವ್‌ ಜಿಹಾದ್‌ ವಿರುದ್ಧ ಜಾಗೃತಿಗೆ ಕರೀನಾ ಫೋಟೋ: ವಿವಾದ
- ಕರೆಯದೇ ಇದ್ದರೆ ಕರೀನಾ!
ತರೂರ್‌ಗೆ ನೋಟಿಸ್‌ ನೀಡಿಲ್ಲ: ದಿಲ್ಲಿ ಪೊಲೀಸರ ಸ್ಪಷ್ಟನೆ
- ಪೊಲೀಸರು ನೋಟೀಸ್‌ ನೀಡಿಲ್ಲ ಅನ್ನೋದೂ ಸುದ್ದಿ ಆಗೋ ಹಾಗಿದ್ರೆ ಬೆಂಗಳೂರಲ್ಲಿ ದಿನಕ್ಕೆ ಸಾವಿರ ಸುದ್ದಿ ಸಿಗ್ತಿತ್ತು!
ರಜೆ ವಿಸ್ತರಣೆ ಇಲ್ಲ. ಆದರೂ ಸಂಜಯ್‌ ದತ್‌ ಜೈಲಿಗೆ ಮರಳಲ್ಲ: ವಕೀಲರು
-ಘರ್‌ ವಾಪಸಿ ಥರ ಜೈಲ್‌ ವಾಪಸಿ ಇಲ್ವಾ
ರೇಖಾ ಜೊತೆ ಅಭಿನಯಿಸಲು ಸಿದ್ಧ: ಅಮಿತಾಭ್‌
- ಎರಡನೇ ದೇಖಾವೆ!
15 ವರ್ಷದ ಹಿಂದೆ ಹೋಟೆಲ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೆ: ಸ್ಮತಿ ಇರಾನಿ
- ಈಗ ದೇಶ ತೊಳೆಯದಿದ್ದರೆ ಸಾಕು!
ನಾನು ಮದುವೆಯಾಗಿದ್ದೇನೆ: ಇಮ್ರಾನ್‌ ಖಾನ್‌ ಒಪ್ಪಿಗೆ
- ತಪ್ಪೊಪ್ಪಿಗೆ ಅಂತ ತಿದ್ಕೊಳಿ!
ಆಸೀಸ್‌ ಸರಣಿಯಲ್ಲಿ ನಾಲ್ಕನೇ ಬಾರಿ ಗೆಳತಿ ಅನುಷ್ಕಾಗೆ ಹೂಮುತ್ತು ರವಾನಿಸಿದ ಕೊಹ್ಲಿ.
-ಸದ್ಯ ಅವಕಾಶವಿರುವುದು ಅಷ್ಟಕ್ಕೆ ಮಾತ್ರ!
ಜೀವಿಗಳು ವಾಸಿಸಬಹುದಾದಂಥ ಲಕ್ಷಣಗಳನ್ನು ಹೊಂದಿರುವ 8 ಹೊಸ ಗ್ರಹಗಳ ಪತ್ತೆ
-ಟಿಕೆಟ್‌ ಬುಕ್‌ ಮಾಡಬಹುದಾ?
ಅಮಿತ್‌ ಶಾ ನಮ್ಮ ಹಾಗೆ ಒಬ್ಬ ರಾಜಕಾರಣಿ. ಅವರು ಹೇಳಿದಾಕ್ಷಣ ಕಾಂಗ್ರೆಸ್‌ ನಾಶವಾಗಲ್ಲ: ಸಚಿವ ಮಹದೇವ ಪ್ರಸಾದ್‌
- ಸ್ವನಾಶಕ್ಕೆ ಪ್ರಯತ್ನಪಡೋರನ್ನು ಯಾರೂ ನಾಶ ಮಾಡಕ್ಕಾಗಲ್ಲ ಅನ್ನೋದು ಉಪನಿಷತ್‌ ವಾಕ್ಯ.
ಜನಗಣತಿ ವೇಳೆ ವೀರಶೈವ ಎಂದು ಬರೆಸಬೇಡಿ. ಲಿಂಗಾಯಿತ ಎಂದೇ ಬರೆಸಿ. ಲಿಂಗಾಯಿತ ಒಂದು ಪ್ರತ್ಯೇಕ ಧರ್ಮ: ಮಾತೆ ಮಹಾದೇವಿ.
- ಜಾತಿಯೊಳಗೊಂದು ಜಾತಿ ಹುಡುಕೋ ಜಾತಿ!
ಕೊಡುಗೈ ದಾನಿಗಳ ಪಟ್ಟಿಯಲ್ಲಿ ಅಜೀಂ ಪ್ರೇಮ್‌ಜೀ ನಂ.1. 2014ನೇ ಸಾಲಿನಲ್ಲಿ 12316 ಕೋಟಿ ರೂ. ದಾನ.
-ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಅಂತ ಅವರನ್ನು ನೋಡಿಯೇ ಬರೆದಿರಬೇಕು!
ಭಾರತ ಕ್ರಿಕೆಟ್‌ ಕೋಚ್‌ ಫ್ಲೆಚರ್‌ ಉತ್ತರಾಧಿಕಾರಿಗೆ ಬಿಸಿಸಿಐ ಶೋಧ ಆರಂಭ.
-ಆದರೂ ವಿದೇಶಗಳಲ್ಲಿ ಭಾರತ ಟೆಸ್ಟ್‌ ಗೆಲ್ಲೋದು ಅನುಮಾನ!

Pages

Back to Top