CONNECT WITH US  

ಪಂಚರ್

ಟಾಯ್ಲೆಟ್‌ ಬಳಸುವ ಜನರೆಷ್ಟು ಎಂದು ಪತ್ತೆಕಾರ್ಯ ಆರಂಭಿಸಿದ ಕೇಂದ್ರ ಸರ್ಕಾರ.
-ಟಾಯ್ಲೆಟ್‌ ಬಳಸುವವರು ಅದನ್ನು ಶೌಚಕ್ಕೇ ಬಳಸ್ತಾರಾ ಅನ್ನೋದನ್ನೂ ಪತ್ತೆಹಚ್ಚಬೇಕಾಗಿದೆ!
ಅತ್ತೆ, ಮಾವನ ಆಸ್ತಿಯಲ್ಲಿ ಸೊಸೆಗೆ ಅಧಿಕಾರ ಇಲ್ಲ: ದೆಹಲಿ ಕೋರ್ಟ್‌
-ಮಾವನ ಮಗ ಒಬ್ಬನೇ ವಿನಾಯಿತಿ!
ತಮಿಳ್ನಾಡದಲ್ಲಿ ಅಮ್ಮಾ ಸಿಮೆಂಟ್‌ ಯೋಜನೆ ಜಾರಿಗೆ
-ಆಹಾ, ಅನುರಾಗ ಬಂಧನ!
ಪತಂಜಲಿ ಸಂಸ್ಥಾಪನಾ ದಿನದಂದು ಕುಸ್ತಿ ಪ್ರದರ್ಶನ ನೀಡಿದ ಬಾಬಾ ರಾಮದೇವ್‌!
-ಮೊದಲಿಂದ್ಲೂ ಹಂಗೇನೇ. ಕುಸ್ತಿ ಮಾಡ್ತಾನೇ ಬಂದಿದ್ದಾರೆ!
ಧೋನಿಯಂತೆ ಶಾಂತವಾಗಿರುವೆ: ಕೊಹ್ಲಿ ಆಶ್ವಾಸನೆ
ರಾಜಕೀಯದವರ ಮಾತು ನಂಬಲಸಾಧ್ಯ. ಕೊಹ್ಲಿ ಆಶ್ವಾಸನೆ ನಂಬಿದ್ರೆ ನಂಬಿ ಬಿಟ್ರೆ ಬಿಡಿ...!
ಟಾಯ್ಲೆಟ್‌ ಬಳಸುವ ಜನರೆಷ್ಟು ಎಂದು ಪತ್ತೆಕಾರ್ಯ ಆರಂಭಿಸಿದ ಕೇಂದ್ರ ಸರ್ಕಾರ.
- ಟಾಯ್ಲೆಟ್‌ ಬಳಸುವವರು ಅದನ್ನು ಶೌಚಕ್ಕೇ ಬಳಸ್ತಾರಾ ಅನ್ನೋದನ್ನೂ ಪತ್ತೆಹಚ್ಚಬೇಕಾಗಿದೆ!
ಟ್ವೀಟರ್‌ ಖಾತೆ ತೆರೆದ ಮಮತಾ ಬ್ಯಾನರ್ಜಿ.
- ಅವರ ಖಾತೆಯಲ್ಲಿ "ಫಾಲೋವಿಂಗ್‌' ಆಪ್ಷನ್‌ ಕಿತ್ತಾಕಬಹುದು. ಮಮತಾ ಫಾಲೋ ಮಾಡೋದು ತನ್ನನ್ನು ಮಾತ್ರ!
ಪಿ.ಕೆ. ಸಿನಿಮಾಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ಇಲ್ಲ. ಯಾಕೆ?
- ಅಖೀಲೇಶ್‌ ಯಾದವ್‌: ಸಿನಿಮಾದಲ್ಲಿ ಅಮೀರ್‌ ಖಾನ್‌ಗೆ ಬಟ್ಟೆ ಹಾಕ್ಕೊಳ್ಳೋಕೇ ಗತಿಯಿಲ್ಲ. ಇನ್ನು ತೆರಿಗೆ ಎಲ್ಲಿಂದ ಕಟ್ತಾರೆ ಪಾಪ
ಭಾರತದತ್ತ ಗುಂಡಿನ ದಾಳಿ ನಡೆಸಿ ಹೊಸ ವರ್ಷ ಸ್ವಾಗತಿಸಿದ ಪಾಕ್‌.
- "ಗುಂಡು' ಹಾಕಿ ಹೊಸವರ್ಷ ಆಚರಿಸಬೇಕು ಅನ್ನೋದನ್ನು ಅಕ್ಷರಶಃ ಪಾಲಿಸಿದ್ದಾರೆ!
ಯೋಗ ಗುರುವಿನಿಂದ ಕೋಟ್ಯಂತರ ರೂ.ಮೋಸ. ಮೋಸ ಹೋದರು ಸಿರಿವಂತ ಮಹಿಳೆಯರು.
- ಮೋಸ ಹೋಗೋದೂ ಒಂದು ಯೋಗ ಗುರೂ!
ಸಚಿವ ಆಂಜನೇಯಗೆ "ಕೋತಿ' ಎಂದು ಹೆಸರಿಡುತ್ತಿದ್ದರು: ಸಂಸದ ಪ್ರತಾಪ್‌ ಸಿಂಹ.
-ಇದು ಡೊಂಬರಾಟವಯ್ನಾ!
ಅಟಲ್‌, ಮಾಳವೀಯ ಜನ್ಮದಿನದಂದೇ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹುಟ್ಟುಹಬ್ಬ.
- "ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ' ಗಾದೆ ಸುಮ್ನೆ ಮಾಡಿದ್ದಲ್ಲ!
ಮತ್ತೂಂದು ಮಹಿಳೆಯನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿ.
- ನರಭಕ್ಷಕ ಹುಲಿಯನ್ನು ಮರಳಿ ಕಾಡಿಗೆ ಬಿಟ್ಟವರಿಗೆ ನೊಬೆಲ್‌ ಶಾಂತಿ ಪಾರಿತೋಷಕ ಘೋಷಿಸೋಣವೇ!?
ದೆಹಲಿ ಕ್ರಿಕೆಟ್‌ ಮಂಡಳಿ ಅಧಿಕಾರಿ ಕಡ್ಲೆಬೀಜ ಕದ್ರಂತೆ!
-ದುಬೈನಿಂದ ಚಿನ್ನ ಕದ್ದು ತಂದು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕದೀಮರನ್ನೂ ಮೀರಿಸಿದ ಕಡ್ಲೆಬೀಜ ಕಳ್ಳರಿವರು
ರಾಜ್ಯಸಭೆಯಲ್ಲಿ ಸತತ 5ನೇ ದಿನವೂ ಗದ್ದಲ. ಯಾವುದೇ ಕಲಾಪವಿಲ್ಲ.
-ಮತಾಂತರ ತಂದ ಗಂಡಾಂತರ!
ಎಟಿಎಂ ವ್ಯವಹಾರಕ್ಕೆ ಪಿನ್‌ ಸಂಖ್ಯೆ ಬದಲು ಬೆರಳಚ್ಚೇ ಪಾಸ್‌ವರ್ಡ್‌.
- ದರೋಡೆಯಾದರೆ ಬೆರಳ್ಗೆ ಕೊರಳ್‌!
ಲಿಕ್ಕರ್‌ ಲಾಬಿಗೆ ಮಣಿದ ಕೇರಳ ಸರ್ಕಾರ. 418 ಬಾರ್‌ಗಳಿಗೆ ಲೈಸೆನ್ಸ್‌.
-ಮದ್ಯದ ಕುರಿತ ತೀರ್ಮಾನಗಳು ಬರೀ ಮಧ್ಯಂತರ ಕಣ್ರೀ!
75 ಸಾವಿರ ಕ್ರೀಡಾಪ್ರತಿಭೆ ಶೋಧಕ್ಕೆ ಕೇಂದ್ರ ಸರ್ಕಾರದ ಯೋಜನೆ.
-76 ಸಾವಿರ ಪ್ರತಿಭೆಗಳನ್ನು ಶೋಧಿಸಿ: ವಿರೋಧಪಕ್ಷಗಳ ಆಗ್ರಹ!
ರಿಂಗ್‌ ರೋಡ್‌ನ‌ಲ್ಲಿ ಸಿಂಹ ಪ್ರತ್ಯಕ್ಷ.
-ರಿಂಗ್‌ ಮಾಸ್ಟರ್‌ ಇದ್ರೆ ಕಂಟ್ರೋಲ್‌ ಮಾಡ್ತಿದ್ದ!
ಸಿಧು ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ.
-ನಾನವನಲ್ಲ.. ನಾನವನಲ್ಲ ಅಂದ್ರೆ ನಮ್ಮ ಸಿದ್ಧು!
ಜಯಾಗೆ ಇನ್ನೂ 3 ತಿಂಗಳು ಜಾಮೀನು
ಕೇಸಲ್ಲಿ ಜಯ ಆಯಿತು ಅಂತ ಹಿಂದಿನ ಕಾಲದಲ್ಲಿ ಹೇಳ್ತಿದ್ದಿದ್ದು ಇದಕ್ಕೇನಾ?
ಭಾರತ ಹಾಕಿಗೆ ಹೊಸ ಕೋಚ್‌ ಹುಡುಕಾಟ ಆರಂಭ. ತಿಂಗಳೊಳಗೆ ಹೊಸ ಕೋಚ್‌?
-ಯಾರಾದರೂ ಕೋಚ್‌ಗಳೇ ಮತ್ತೆ ಕೋಚ್‌ ಆಗಲಿಯಪ್ಪಾ

Pages

Back to Top