CONNECT WITH US  

ಪಂಚರ್

ಗುಟ್ಕಾ ನಿಷೇಧದಿಂದ ಸಕಾರಾತ್ಮಕ ಫ‌ಲಿತಾಂಶ- ವಿಶ್ವ ಆರೋಗ್ಯ ಸಂಸ್ಥೆ
-ಉಗಿಯೋರ ಸಂಖ್ಯೆ ಕಮ್ಮಿಯಾಗಿದೆಯಂತೆ!
ಭಾರತದಲ್ಲಿನ ಮತಾಂತರ ವರದಿಗಳ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ:ಅಮೆರಿಕ
-ಹುರ್ರೇ.. ಅಂತೂ ಅಮೆರಿಕಕ್ಕೊಂದು ಕೆಲಸ ಸಿಕ್ತು!
ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋದು ಇದಕ್ಕೇ
ದೀರ್ಘ‌ ನಿಷೇಧದ ಭೀತಿಯಲ್ಲಿದ್ದ ಬಾಕ್ಸರ್‌ ಸರಿತಾಗೆ 1 ವರ್ಷ ನಿಷೇಧ.
-ನಂಗೆ ಬಲಗೈ ಗಾಯ ಆಗಿದೆ, ಸ್ವಲ್ಪ ವಿಶ್ರಾಂತಿ ಬೇಕಿತ್ತು ಎಂದ್ರಂತೆ ಸರಿತಾ!
ಲಕ್ಷ್ಮಣರೇಖೆ ದಾಟಬೇಡಿ. ಸಂಸದರು, ಸಚಿವರಿಗೆ ಪ್ರಧಾನಿ ಮೋದಿ ಎಚ್ಚರಿಕೆ.
ರೇಖೆ ಹಾಕಿದ ಲಕ್ಷ್ಮಣ ಎಲ್ಲಿ ಅಂತ ಹುಡುಕ್ತಿದ್ದಾರಂತಲ್ಲ ಸಚಿವರು!
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೂ ಕಲ್ಲಿದ್ದಲ ಕಾಟ.
ಮಾಜಿಯಾದರೂ ಮಸಿ ತಪ್ಪದಲ್ಲ!
ಮತಾಂತರ ಗದ್ದಲಕ್ಕೆ ರಾಜ್ಯಸಭೆ ಕಲಾಪ ಬಲಿ.
ಹಿಂದೆ ಅಂತರಪಿಶಾಚಿ ಗಳಿರುತ್ತಿದ್ದವಂತೆ. ಈಗ ಮತಾಂತರ ಪಿಶಾಚಿಗಳಿದ್ದಾವೆ!
ಆಸೀಸ್‌ ಟೆಸ್ಟ್‌ ತಂಡಕ್ಕೆ ಸ್ಟೀವನ್‌ ಸ್ಮಿತ್‌ ಹೊಸ ನಾಯಕ.
ಅವರಾದರೂ ಭಾರತವನ್ನು ಗೆಲ್ಲಿಸುತ್ತಾರಾ?
ಸಲ್ಮಾನ್‌ ಖಾನ್‌ ನನಗೆ ತುಂಬಾ ಬೈತಾರೆ: ಸೋನಾಕ್ಷಿ.
ನಿಮ್‌ ಪುಣ್ಯ. ಅವರಿಗೆ ಬೇಟೆಯಾಡುವ, ಕಾರು ಹತ್ತಿಸುವ ಖಯಾಲಿಯೂ ಇದೆ!
ಮಧ್ಯಪ್ರದೇಶದ ಬಸ್‌ಗಳಲ್ಲಿ ಹೆಣ್ಮಕ್ಕಳ ರಕ್ಷಣೆಗಾಗಿ ಸೇಫಿr ಬಟನ್‌.
ಚುಚ್ಚೋಕೆ ಅಂತ ಇನ್ಮುಂದೆ ಸೇಫಿr ಪಿನ್‌ ಇಟ್ಕೊಬೇಕಿಲ್ಲ :)
ರಾಜ್ಯ ಹೈಕೋರ್ಟ್‌ನಲ್ಲಿ ವಿದ್ಯುತ್‌ ಉತ್ಪಾದನೆ!
ಇನ್ನು ಸರ್ಕಾರಕ್ಕೆ "ಶಾಕ್‌' ಕೊಡೋದು ಸುಲಭ
ಚಾಂಪಿಯನ್ಸ್‌ ಟ್ರೋಫಿ ಹಾಕಿ: ಪಾಕ್‌ ಸೋಲಿಸಿ ಜರ್ಮನಿ ಚಾಂಪಿಯನ್‌
ಗೆದ್ದವರಿಗೆ ಖುಷಿ, ಸೋತವರಿಗೆಮಾಡಿದ್ದುಣ್ಣೋ ಮಾರಾಯ
ಮೊದಲ ದಿನವೇ 14 ಕೋಟಿ ಬಾಚಿದ "ಲಿಂಗ'.
ಕೋಟಿ ಲಿಂಗೇಶ್ವರ!
ತಾಜ್‌ಮಹಲ್‌ ಟಿಕೆಟ್‌ ಬುಕಿಂಗ್‌ ಇನ್ನು ಆನ್‌ ಲೈನ್‌ನಲ್ಲಿ!
ಆನ್‌ ಲೈನಲ್ಲೇ ತಾಜ್‌ ಮಹಲ್‌ ತೋರುಸ್ತಾರೋ ಏನೋಪ್ಪಾ
ಸಲ್ಮಾನ್‌ ಖಾನ್‌ ನನ್ನನ್ನು ತುಂಬಾ ಬೈತಾರೆ-ಅದು ನನಗೆ ಇಷ್ಟವಾಗಲ್ಲ: ಸೋನಾಕ್ಷಿ
ಜಾಸ್ತಿ ಸಿಟ್ಟ್ ಬಂದ್ರೆ ಕಾರ್‌ ಹತ್ತುಸ್ತಾರೆ, ಹುಷಾರು!
ಕ್ರಿಕೆಟ್‌ನಲ್ಲಿ ಆಸೀಸ್‌ ವಿರುದ್ಧ, ಹಾಕಿಯಲ್ಲಿ ಪಾಕಿಸ್ತಾನ ವಿರುದ್ಧ ಶನಿವಾರ ಸೋತ ಭಾರತ.
ಶನಿದೇವರಿಗೆ ಪೂಜೆ ಸಲ್ಲಿಸಲಿಕ್ಕೆ ಮರೆತರೋ ಏನೋ?
* ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ ಇಲ್ಲ.
- ಕರೆಕ್ಟಾಗಿ ಓದ್ಕಳ್ಳಿ. ವಯಸ್ಸು ಜಾಸ್ತಿಯಾಗಲ್ಲ ಅಂತಲ್ಲ, ನಿವೃತ್ತಿ ವಯಸ್ಸು ಏರಿಕೆ ಇಲ್ಲ ಅಂತ!
* ವಿಶ್ವದ ಟಾಪ್‌ 100 ಹಸಿರು ತಾಣಗಳಲ್ಲಿ ಕಾಂಚನ್‌ಜುಂಗಾ
- ಹಸಿರು ತಾಣಾನಾ? ಮತ್ತೆ ಯಾವಾಗ್ಲೂ ಬೆಳ್ಳಗೆ ಕಾಣಿ¤ರತ್ತಲ್ಲ!
* ಅಮೀರ್‌ ಖಾನ್‌ ರಸ್ತೆ ಸುರಕ್ಷತೆ ರಾಯಭಾರಿ.
- ಸಲ್ಮಾನ್‌ ಖಾನ್‌ಗೆ ಹೀಗೊಂದು ಸವಾಲು ಹಾಕಿದ್ರಲ್ಲ!
* ಬೆಳಗಾವಿ: ವಿಧಾನಸೌಧದ ಎದುರು ಮುಂದುವರಿದ ಧರಣಿ.
- ಧರಣಿ ಮಂಡಲ ಮಧ್ಯದೊಳಗೆ ಅಧಿವೇಶನ!
* ಬಾಕ್ಸಿಂಗ್‌ ಕಣದಲ್ಲಿ ದುಬಾರಿ ಚಡ್ಡಿ: ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ
- ಸ್ವಲ್ಪ ಹೆಚ್ಚು ಕಡಿಮೆಯಾಗಿ ಚಡ್ಡಿ ಕಳಚಿಕೊಂಡ್ರೆ, ಅದೂ ಐತಿಹಾಸಿಕವಾಗಬಹುದು ಹುಷಾರ್‌

Pages

Back to Top