CONNECT WITH US  

ಪಂಚರ್

ಎಟಿಎಂ ನಗದು ವಾಪಸಾತಿ ಮಿತಿ 4,500 ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ.
* ನಮ್‌ ಕಾಸು ನಮಗೆ ಕೊಡೋಕೆ ಚೌಕಾಸಿ!
ಮಗ ತಪ್ಪು ಸರಿ ಮಾಡಿಕೊಳ್ಳದೇ ಹೋದರೆ ಆತನ ವಿರುದ್ಧವೇ ಸ್ಪರ್ಧೆ:ಮುಲಾಯಂ ಎಚ್ಚರಿಕೆ
* ಅಧಿಕಾರಕ್ಕೋಸ್ಕರ ಮಕ್ಕಳನ್ನೇ ಮೂಲೆಗುಂಪು ಮಾಡಿದವರಿದ್ದಾರೆ, ನಮ್ಮಲ್ಲಿ!
ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ: ನವಜೋತ್‌ ಸಿಧು
* ಕಾಂಗ್ರೆಸ್‌ ಗಿಡದ ಥರ!
ಟ್ರಂಪ್‌ರನ್ನು ಹಗುರವಾಗಿ ಪರಿಗಣಿಸಬೇಡಿ: ಒಬಾಮಾ
* ಪಾಪ, ಎತ್ತಿ ನೋಡಿ ಹೇಳಿರಬೇಕು!
ಅಭಿಮಾನಿಗಳತ್ತ ಕೈಸನ್ನೆ ಮಾಡಿದ ಕ್ರಿಕೆಟಿಗ ಆರ್‌.ಪಿ.ಸಿಂಗ್‌: ವಿವಾದ
* ಬೌಲಿಂಗ್‌ ಮಾಡಿ ಸುದ್ದಿ ಮಾಡಲಾಗದ್ದನ್ನ ಕೈಸನ್ನೆಯಿಂದ ಮಾಡ್ತಿದ್ದಾರೆ
ಕೇಂದ್ರ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಗಡುವು ವಿಸ್ತರಣೆ
-ಆಸ್ತಿ ಮಾಡಿಕೊಂಡು ಆಮೇಲೆ ವಿವರ ಸಲ್ಲಿಸಲಿ ಅಂತ ಟೈಂ ಕೊಟ್ಟಿರಬೇಕು!
ಅಂತೂ ಸಿಧು ಕಾಂಗ್ರೆಸ್‌ಗೆ
-ಇಲ್ಲೂ ಸಿಕ್ಸರ್‌ ಹೊಡೀತಾರಾ?
ಕಾಶ್ಮೀರದಲ್ಲಿ ಇನ್ನು ಶುಕ್ರವಾರ ಮಾತ್ರ ಬಂದ್‌.
-ಬಹುಶಃ ಕೇಜ್ರಿವಾಲ್‌ ಸಮ, ಬೆಸ ಪ್ರಭಾವ ಇರಬಹುದು.
ಪಾಕಿಸ್ತಾನದಲ್ಲಿದ್ದಾನೆ ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿ
-ಅವನನ್ನು ನಮ್ಮಲ್ಲಿಗೆ ಕಳಿಸಿ. ದಾಳಿಗೆ ಬೇಕು ಅಂದ್ರಂತೆ ಉಗ್ರರು.
ಸೆಲ್ಫಿ ಕೇಳಿದ ಅಭಿಮಾನಿ ಮೊಬೈಲ್‌ ಕಿತ್ತೆಸೆದ ಆರ್‌.ಪಿ.ಸಿಂಗ್‌
-ಆರ್‌.ಪಿ. ಕಣ್ಣಿಗೆ ಮೊಬೈಲ್‌ ಕ್ರಿಕೆಟ್‌ ಚೆಂಡಿನಂತೆ ಕಂಡಿರಬೇಕು...!
ಮುಂಬೈನಲ್ಲಿ ಗುಟ್ಟಾ ಸಂಗೀತ ಕಾರ್ಯಕ್ರಮ.
* ಗುಟ್ಟಾಗಿ ನಡೆಯಲಿದೆ ಅಂತ ಹೇಳಲಿಲ್ಲವಲ್ಲ!
ಜಲ್ಲಿಕಟ್ಟುಗೆ ನನ್ನ ವಿರೋಧವಿಲ್ಲ: ನಟಿ ತ್ರಿಷಾ
*ಪ್ರಾಣಿಗಳ ಬಗ್ಗೆ ಸಿಂಪಥಿ,ಅಭಿಮಾನಿಗಳ ಮೇಲೆ ಪ್ರೀತಿ!
ರಾಮಮಂದಿರ ನಿರ್ಮಾಣ ಭರವಸೆಕೊಟ್ಟರೆ ಹಿಂದೂಗಳ ಅಖಂಡ ಬೆಂಬಲ: ದಾಸ್‌
* ಯಾವೂರ ದಾಸಯ್ಯ ನೀನು ಅಂತ ಕೇಳಿನೋಡಿ!
ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು.
*ಒಂದೇ ಸೀಟಲ್ಲಿ ಇಬ್ಬರು ಕೂತರೆ ಯಾವಾಗ್ಲೂ ಇಕ್ಕಟ್ಟು
ಜೀವ ಬೆದರಿಕೆ ಹಾಕಿದ ಗಂಗೂಲಿ "ಅಭಿಮಾನಿ' ಬಂಧನ
* ಬಂಧಿತನಿಂದ "ಅಭಿಮಾನಿ' ಪದಕ್ಕೆ ಹಾನಿ...!
ಬಡ ನಿರುದ್ಯೋಗಿಗಳಿಗೆ ವರ್ಷಕ್ಕೆ 5000 ಭತ್ಯೆ.
* ಶ್ರೀಮಂತ ನಿರುದ್ಯೋಗಿಗಳೂ ಇರುತ್ತಾರಾ!
ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಬದಲು ಮೋದಿ ಫೋಟೋ.
* ಮೋದಿ ನೂಲು ತೆಗೀತಾರೆ, ನೋಟಿನಿಂದ!
10 ವರ್ಷ ಹಳೆಯ ಡೀಸೆಲ್‌ ವಾಹನ ನಿಷೇಧ ಬೇಡ. ಹಸಿರು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಸುಪ್ರೀಂಗೆ ಕೇಂದ್ರ ಮೊರೆ.
* ತುಂಬ ಹಸಿರಾದರೆ ಕಷ್ಟ
ಪಾಕ್‌ ರಾಷ್ಟ್ರೀಯ ಕಿರಿಯರ ಕ್ರಿಕೆಟ್‌ ತಂಡಕ್ಕೆ ಹೋಟೆಲ್‌ ಮಾಣಿ..!
* ಎದುರಾಳಿಗೆ ಪರೋಟಾ ತಿನ್ನಿಸುತ್ತಾರಾ...?
ಒಂದು ಬದಿ ಪ್ರಿಂಟೇ ಆಗಿರದ 500 ರೂ. ನೋಟು ಪತ್ತೆ
*ಅದರ ಮೌಲ್ಯ 250 ರೂ.ಇರಬಹುದು
ರಿಲಿಯನ್ಸ್‌ನಿಂದ 999 ರೂ.ಗೆ ಮೊಬೈಲ್‌
* ಜಿಯೋ ಥರ ಮೊಬೈಲನ್ನೂ ಫ್ರೀ ಕೊಡಿ ಅಂದ್ರಂತೆ
ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೆ ಕತ್ತರಿ
* ಇದು ಲೋಧಾ ಸರ್ಜಿಕಲ್‌ ಎಫೆಕ್ಟ್..!
ಈ ವರ್ಷ ಜಲ್ಲಿಕಟ್ಟು ಇಲ್ಲ
* ಯಾರೋ ಅದನ್ನ ಜಲ್ಲಿ ಕಲ್ಲು ಇಲ್ಲ ಅಂತ ಕೇಳಿಸ್ಕೊಂಡರಂತೆ.

Pages

Back to Top