CONNECT WITH US  

ಪಂಚರ್

ಸೈಕಲ್‌ ಚಿಹ್ನೆ ¬ಬಗ್ಗೆ ಶೀಘ್ರ ನಿರ್ಧಾರ: ಆಯೋಗ
* ರೀ ಸೈಕಲ್‌ ಮಾಡಿ ಪರವಾಗಿಲ್ಲ!
ಡಿಎಂಕೆಗೆ ಈಗ ಸ್ಟಾಲಿನ್‌ ಬಾಸ್‌. ಕಣ್ಣೀರಿಟ್ಟು ಒಪ್ಪಿದ ಕರುಣಾ ಪುತ್ರ.
* ಕರುಣಾಜನಕ ಸನ್ನಿವೇಶ!
ಎಮ್ಮೆ, ಹಸುಗಳಿಗೂ ¬ಬಂತು "ಆಧಾರ್‌'. ರಾಸುವಿನ ಕಿವಿಗೆ 12 ಅಂಕೆಯುಳ್ಳ ಟ್ಯಾಗ್‌ ಅಳವಡಿಕೆ.
* ಹಸುಗಳಿಗೆ ಬ್ಯಾಂಕ್‌ ಖಾತೆ ತೆರೆಯೋ ಅವಕಾಶ ಇದೆಯಾ!
ಬಿಕ್ಕಟ್ಟಿಗೆ ಮತ್ತೆ ಮುಲಾಯಂ- ಅಖೀಲೇಶ್‌ ತೇಪೆ ಯತ್ನ.
* ಮುಲಾಮು ಹಚ್ಚೋ ಪ್ಲಾನು!
ಸಕ್ಕರೆ ಇದ್ದರೆ ಇರುವೆ ಬರೋದು ಖಚಿತ. ಬಟ್ಟೆ ತೊಡದೇ ಇರುವುದೇ ಮಾಡರ್ನ್ ಸಂಸ್ಕೃತಿಯಾಗಿದೆ: ಅಬು ಅಜ್ಮಿ.
* ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ!
ಮನೆಯಲ್ಲೇ ಗಾಂಜಾ ತೋಟ ಕೃಷಿ ನಡೆಸಿದ್ದ ಹೈದ್ರಾಬಾದಿ.
* ಮನೆಯೇ ಗಾಂಜಾಲಯ!
ಟಿಪ್ಸ್‌ ಕೊಡಲಾಗದಿದ್ದರೆ ಹೋಟೆಲ್‌ಗೆ ಬರಬೇಡಿ: ರಾಷ್ಟ್ರೀಯ ರೆಸ್ಟೋರೆಂಟ್‌ ಸಂಘದ ಅಧ್ಯಕ್ಷ ರಿಯಾಜ್‌ ಅಮ್ಲಾನಿ.
* ಟಿಪ್ಸಲ್ಲೇ ಟಿಪ್‌ಟಾಪಾಗಿ ಬದುಕೋರ ಮಾತು ಇದು!
ಹುಡುಗಿಯರಿಗೆ ಕಿರುಕುಳ ನೀಡಿದ ಹುಡುಗರನ್ನು ಅಟ್ಟಾಡಿಸಿ ಹಿಡಿದ ಡಿಸ್ಕಸ್‌ ಥ್ರೋ ಪಟು ಕೃಷ್ಣಾ ಪೂನಿಯಾ
* ಥ್ರೋ ಮಾತ್ರ ಅಲ್ಲ ಕ್ಯಾಚ್‌ ಹಿಡಿಯಲೂ ಬರುತ್ತೆ.
ಜಾತಿ, ಧರ್ಮ, ಸಮುದಾಯ, ಭಾಷೆಯ ಆಧಾರದಲ್ಲಿ ಮತ ಕೇಳುವುದು ಅಕ್ರಮ.
* ಮತ ಕೇಳ್ಳೋದರಲ್ಲೇ ಮತ ಇದೆಯಲ್ಲ!
ಮುಖ್ಯಮಂತ್ರಿ ಆಗಿ: ಶಶಿಕಲಾಗೆ ತಂಬಿದೊರೈ ಒತ್ತಾಯ.
* ತಂಬಿಗೆ ಜೊತೆಗೆ ಬಕೆಟ್ಟೂ ರೆಡಿ!
ಅಪನಗದೀಕರಣದ ಬಳಿಕ ಜ್ಯೋತಿಷಿಗಳ ಭರ್ಜರಿ ಬಿಸಿನೆಸ್‌!
* ಭಾರತದ ಭವಿಷ್ಯ ಉಜ್ವಲವಾಗಿದೆ!
ಹೆಚ್ಚುವರಿ ಸಮಯ ಕೆಲಸ ಮಾಡಿದ್ದಕ್ಕೆ ಒಟಿ ಕೊಡಿ. ಬ್ಯಾಂಕ್‌ ನೌಕರರ ಮನವಿ.
* ಕೊಡಿ, ಕೊಡಿ. ಆದರೆ ಹಳೇ ನೋಟಲ್ಲೇ ಕೊಡಿ!
ಮತ್ತೆ ಪತ್ನಿಯ ಬುರ್ಖಾ ಇಲ್ಲದ ಚಿತ್ರ ಪ್ರಕಟಿಸಿದ ಶಮಿ: ಟೀಕಾಕಾರರಿಗೆ ತಿರುಗೇಟು
* ಹೊಸ ವರ್ಷದಲ್ಲಿ ಶಮಿ "ಬೋಲ್ಡ್‌' ಬೌಲಿಂಗ್‌
ಸಿದ್ದು ಸಿಎಂ ಆಗಿಯೇ ಇದ್ರೆ ಕಾಂಗ್ರೆಸ್‌ ಸರ್ವನಾಶ: ಪೂಜಾರಿ.
* ಹೈಕಮಾಂಡ್‌ ಕೊಟ್ರೂ ಪೂಜಾರಿ ಕೊಡಲ್ಲ ಅಂತಾಯ್ತು!
ಡಿ.31ಕ್ಕೆ ಮೋದಿ ಅನಿರೀಕ್ಷಿತ ಬಜೆಟ್‌.
* ನಿರೀಕ್ಷಿತವಾಗಿ ಅವರು ಏನಾದ್ರೂ ಮಾಡಿದ್ದು ಉಂಟಾ?
ನಿನ್ನೆಯ ಮೋದಿ ಭಾಷಣದಲ್ಲಿ ಏನೂ ಇಲ್ಲ.
* ಅದೇ ಅಲ್ವಾ ಹೊಸವರ್ಷಕ್ಕೆ ಒಳ್ಳೇ ಗಿಫ್ಟ್ :-)
ಕಾಣಿಕೆ ಪಡೆದು ಶ್ಯಾಮ್‌ ಭಟ್‌ ನೇಮಕ: ಶೆಟ್ಟರ ಆರೋಪ
-ಪೂಜೆ ಮಾಡಿಸ್ಕೊಂಡಿದ್ರಾ..?
ಬಿಕಾಂನಲ್ಲಿ ಗಣಿತ, ಭೌತಶಾಸ್ತ್ರ ಓದಿದ ಶಾಸಕರು
-ಆರ್ಟ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್‌ ಓದಿದವ್ರೂ ಇದ್ದಾರೆ!
ಬಿಎಸ್ಸೆನ್ನೆಲ್‌ನಿಂದಲೂ ರಾಜ್ಯದಲ್ಲಿ 4ಜಿ
-ನಗರ ಸರಹದ್ದು ಕಳೆದ ಮೇಲೆ ಯಾವ್ದೂ ಇಲ್ಲಾ ಜೀ!
ಟ್ವಿಟರ್‌ನಲ್ಲಿ ಪಾಕ್‌ ಸ್ಪಿನ್ನರ್‌ ಸಕ್ಲೇನ್‌ ಕಾಲೆಳೆದ ಸೆಹ್ವಾಗ್‌
-ಶತ್ರು ರಾಷ್ಟ್ರದ ಆಟಗಾರರಿಗೂ ಹೆದರಲ್ಲ ಸೆಹ್ವಾಗ್‌

Pages

Back to Top