CONNECT WITH US  

ಪಂಚರ್

ಹೋಟೆಲ್‌ ಉದ್ಯಮಿಗಳಿಂದ ಕ್ರಿಕೆಟ್‌ ಲೀಗ್‌
* ಬೋಂಡಾ ಮಾಡುವ ಕೈ ಬೌಲಿಂಗೂ ಮಾಡುತ್ತೆ ಅಂದಂಗಾಯ್ತು!
ದೆಹಲಿ ಉಪರಾಜ್ಯಪಾಲರಾಗಿ ಅಜಿಲ್‌ ಬೈಜಾಲ್‌ ಕೇಜ್ರಿವಾಲ್‌ ತೊಡೆ
* ತಟ್ಟೋಕೆ ಶುರುಮಾಡಿದ್ರಂತೆ!
ಪ್ರತ್ಯೇಕತಾವಾದಿ ಮಸರತ್‌ ಆಲಂ ಬಿಡುಗಡೆಗೆ ಆದೇಶ
*ಬಿಡುಗಡೆ ಮಾಡಿದ ಬಳಿಕ ಮಸಲತ್‌ ಮಾಡಿದ್ರೆ ಕಷ್ಟ!
ಈಶ್ವರಪ್ಪ ಬ್ಯುಸಿ, ಅದ್ಕೆ ಬರ ಪ್ರವಾಸಕ್ಕೆ ಕರೆದಿಲ್ಲ: ಬಿಎಸ್‌ವೈ
*ಬರ್ತೀನಿ.. ಅಂತ ಓಡೋಡಿ ಬಂದ್ರೂ, ಬಸ್‌ ನಿಲ್ಸದೇ ಹೋದ್ರು!: ಈಶ್ವರಪ್ಪ!
ಸಂಕ್ರಾಂತಿಯೊಳಗೆ ಸಿ.ಎಂ.ಇಬ್ರಾಹಿಂ ಜೆಡಿಎಸ್‌ಗೆ?
*"ಸಂ' ಕ್ರಾಂತಿ!
ಕೊನೆಗೂ ಸಿಎಂ ಭೇಟಿಗೆ ಸಮಯ ಕೊಟ್ಟ ಪಿಎಂ
* ಸಮಯ ಎಎಂಗೆ ಕೊಟ್ಟಿದ್ದಾರಾ? ಪಿಎಂಗೆ ಕೊಟ್ಟಿದ್ದಾರಾ?
ಪರಂ ಕಿವುಡರ ಶಾಲೆಯ ಹೆಡ್‌ಮೇಷ್ಟ್ರು: ಪ್ರಸಾದ್‌
* ಅವ್ರು ಏನು ಹೇಳಿದ್ರೂ ಅಂತ ಕೇಳಿಲ್ಲ!: ಕಾಂಗ್ರೆಸ್ಸಿಗರು
ಮದುವೆ ಕಾರ್ಯಕ್ಕೆ ರೈಲ್ವೆ ನಿಲ್ದಾಣ ಬಾಡಿಗೆಗೆ?
* ಮದ್ವೆ ಆಗಿ ಓಡಿ ಹೋಗೋಕ್ಕೂ ಬೆಸ್ಟ್‌!
ಮೋದಿ ಬೆಂಬಲಿಸಿ ಉಚಿತ ಟೊಮೆಟೋ ವಿತರಣೆ
* ಮೋದಿ ವಿರೋಧಿಸಿ ಟೊಮೆಟೋ ಎಸೆತ ಅಂತ ವಿರೋಧ ಪಕ್ಷದವ್ರು ಓದ್ಕೊಂಡ್ರಂತೆ
ಪಾಕ್‌-ಆಸೀಸ್‌ ಟೆಸ್ಟ್‌: ನಾಟೌಟ್‌ಗೆ ಔಟೆಂದು ಎಡವಟ್ಟು ಮಾಡಿದ ಥರ್ಡ್‌ ಅಂಪೈರ್‌.
* ಔಟ್‌ ತೀರ್ಪು ಕೊಟ್ಟಾಗ ಬ್ಯಾಟ್ಸ್‌ಮನ್‌ನಕ್ಕಿದ್ದು ಇದೇ ಮೊದಲಂತೆ!
ಕಾಂಗ್ರೆಸ್‌ನಿಂದ ದಾಖಲೆ ಕೇಳಿದ್ದ ಸ್ವಾಮಿ ಅರ್ಜಿ ವಜಾ
* ಅಬ್ಬ.. "ಸ್ವಾಮಿ'ಯೇ ಕಾಪಾಡು!
ಗುಜರಾತಲ್ಲಿ ಜಾನಪದ ಗಾಯಕರ ಮೇಲೆ ನೋಟುಗಳ ಮಳೆ..!
* "ಮಳೆ'ಯಿಂದಾಗಿ ಗಾಯನ ಅರ್ಧಕ್ಕೇ ಸ್ಥಗಿತ ಆಯ್ತಾ ಗೊತ್ತಾಗಿಲ್ಲ!
ಹಣ ಸಕ್ರಮಕ್ಕೆ 700 ಜನರ ಬಳಸಿದ "ಚಾಯ್‌ವಾಲಾ'
* ನೋಟು ನಿಷೇಧದ ಐಡಿಯಾವೂ "ಚಾಯ್‌ ವಾಲಾ'ರದ್ದೇ!
ಶಂಕಿತ ಐಸಿಸ್‌ ಉಗ್ರರಿಂದ ಅಲ್‌ಖೈದಾ ಆ್ಯಪ್‌ ಬಳಕೆ
* ಡಿಜಿಟಲ್‌ ಆಗಿ ಅಂತ ಇಲ್ಲಿ ಕರೆ ಕೊಟ್ಟಿದ್ದು ಅವ್ರಿಗೂ ಕೇಳಿಸ್ತಾ..?
ಪತ್ನಿ ಬುರ್ಖಾ ಧರಿಸಲಿಲ್ಲವೆಂದು ಶಮಿಗೆ ಟೀಕೆ: ತಿರುಗೇಟು
* ಟೀಕಾಕಾರರ ಮೇಲೆ 'ಬೌನ್ಸರ್‌'ಎಸೆದ ಶಮಿ...!
ಧ್ವಜ ಹಾರಿಸೋದಕ್ಕೆ ಮಂತ್ರಿ ಸ್ಥಾನ ಸೀಮಿತ: ಬಸವರಾಜ ರಾಯರೆಡ್ಡಿ
-ಭಿನ್ನಮತದ ಧ್ವಜಾನಾ? ಯಾವ ಧ್ವಜ ಅನ್ನೋದು ಇಂಪಾರ್ಟೆಂಟು
ಡಿಸೆಂಬರ್‌ ನಂತರವೂ ಜನರಿಗೆ ಬೇಕಾದಷ್ಟು ನಗದು ಸಿಗದು.
-ಒಟ್ನಲ್ಲಿ ಜನರು ಇನ್ನು ನಗೋದು ಕಷ್ಟ ಅಂತಾಯ್ತು!
ನಾನು ಎಲ್ಲಿಗೆ ರಾಜ್ಯಪಾಲ ಅಂತ ಗೊತ್ತಿಲ್ಲ: ಡಿಎಚ್‌ಎಸ್‌
-ಎಲ್ಲಾದ್ರೇನು? ಕುರ್ಚಿ ಸಿಕ್ರೆ ಕೂತ್ಕೊಂಡ್‌ಬಿಡಿ!
ಸಚಿವ ಸಂಪುಟದಿಂದ ತೊಗರಿಗೆ ಬೆಂಬಲ ಬೆಲೆ ತೀರ್ಮಾನ.
-ನಿರ್ಧಾರ ಆದ್ರೆ "ತಗೋರಿ' ಅಂತ ಕೊಡಬಹುದು!
ಇಂಗ್ಲೆಂಡ್‌ ವಿರುದ್ಧ 5ನೇ ಟೆಸ್ಟ್‌ ನಲ್ಲಿ ಅದ್ಭುತ ಆಟವಾಡಿದ ಕರುಣ್‌, ಕೆ.ಎಲ್‌.ರಾಹುಲ್‌ಗೆ ಪ್ರಧಾನಿ ಶ್ಲಾಘನೆ.
-ರಣಜಿ ಕ್ವಾರ್ಟರ್‌ ಫೈನಲ್‌ ಆಟ ಗಮನಿಸಲಿಲ್ಲ ಅಂತ ಕಾಣುತ್ತೆ.
ಆಧಾರ್‌ ಪೇಮೆಂಟ್‌ ಆ್ಯಪ್‌ಗೆ ನಾಳೆ ಚಾಲನೆ
* ಪೇಮೆಂಟ್‌ ಮಾಡಿದ್ದಕ್ಕೆ ಆ್ಯಪೇ ಆಧಾರ!
ನೋಟು ರದ್ದತಿ ಭಾರತ ನಗದು ಆರ್ಥಿಕತೆಯ ನಾಶ: ರಾಹುಲ್‌ ಗಾಂಧಿ
* ಇದು ಕಾಂಪ್ಲಿಮೆಂಟೋ ಬೈಗುಳವೋ ಗೊತ್ತಾಗಲಿಲ್ಲ!
ನಿದ್ದೆ ಬಿಟ್ಟು ಟಿವಿ ನೋಡಿ, ರಾಜ್ಯದ ದೇಶದ ಸ್ಥಿತಿ ಗೊತ್ತಾಗುತ್ತದೆ ಎಂದು ಸಿಎಂ ಮೇಲೆ ಹರಿಹಾಯ್ದ ಜನಾರ್ದನ ಪೂಜಾರಿ.
* ಟೀವಿ ನೋಡಿದರೆ ಸಿಎಂ ನಿದ್ದೆ ಮಾಡಿದ್ದೂ ಗೊತ್ತಾಗುತ್ತದೆ!
ಮೊದಲ ದಿನವೇ 29 ಕೋಟಿ ಗಳಿಸಿದ ಅಮೀರ್‌ ಖಾನ್‌ "ದಂಗಲ್‌'
* ಅಮೀರ್‌ ಖಾನ್‌ ಗರೀಬ್‌ ಖಾನ್‌ ಆಗೋದು ತಪ್ಪಿತು!
ಭಾರತೀಯ ಕಬಡ್ಡಿಯಲ್ಲಿ ಭಾರೀ ಒಳಜಗಳ
* ಸರ್ವ ಜಗಳಕ್ಕೂ ಹಣವೇ ಕಾರಣ..!

Pages

Back to Top